Ram Setu: ರಾಮ ಸೇತು ಇಲ್ಲ ಎಂದಿದ್ದ ಕಾಂಗ್ರೆಸ್​​​, ಸೇತುವೆಯ ವಿವರವಾದ ನಕ್ಷೆ ತಯಾರಿಸಿದ ಇಸ್ರೋ ವಿಜ್ಞಾನಿಗಳು

ಶ್ರೀರಾಮನು ಕಾಲದಲ್ಲಿ ನಿರ್ಮಾಣವಾದ ರಾಮ ಸೇತುವೆಯೇ ಇಲ್ಲ ಎನ್ನುವ ಅನೇಕರ ವಾದವಾಗಿದೆ. ಈಗಾಗಲೇ ವಿವಾದಗಳಿಂದಲೇ ಸುದ್ದಿಯಾಗಿದ್ದ ರಾಮಸೇತುವೆ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ಇಸ್ರೋ ವಿಜ್ಞಾನಿಗಳು ರಾಮಸೇತುವಿನ ಅತ್ಯಂತ ವಿವರವಾದ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.

Ram Setu: ರಾಮ ಸೇತು ಇಲ್ಲ ಎಂದಿದ್ದ ಕಾಂಗ್ರೆಸ್​​​, ಸೇತುವೆಯ ವಿವರವಾದ ನಕ್ಷೆ ತಯಾರಿಸಿದ ಇಸ್ರೋ ವಿಜ್ಞಾನಿಗಳು
ರಾಮ ಸೇತುವೆಯ ವಿವರವಾದ ನಕ್ಷೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 09, 2024 | 4:34 PM

ರಾಮ ಸೇತುವೆ ಹೆಸರು ಕೇಳಿದ ಕೂಡಲೇ ಭಕ್ತಿ ಭಾವವು ಉಕ್ಕಿ ಹರಿಯುತ್ತದೆ. ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ಸಮುದ್ರದ ಮಧ್ಯೆ ಸೇತುವೆ ಕಟ್ಟಿ, ಅದರ ಮೂಲಕವೇ ಶ್ರೀರಾಮ ಹಾಗೂ ಸೇನೆ ಲಂಕೆಗೆ ಹೋಗಿತ್ತು ಎನ್ನುವ ಪ್ರತೀತಿ ಇದೆ. ಆದರೆ ರಾಮ ಸೇತು ಬಗ್ಗೆ ಕಾಂಗ್ರೆಸ್​​​ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಬಹಳಷ್ಟು ವಾದ ವಿವಾದಗಳು ನಡೆದಿದ್ದವು. ಯುಪಿಎ ಸರಕಾರ ರಾಮ ಸೇತು ಅನ್ನುವುದಿಲ್ಲ. ಅದು ರಾಮ ಕಟ್ಟಿದ ಸೇತುವೆ ಅನ್ನುವುದಕ್ಕೆ ಪುರಾವೆ ಇಲ್ಲ ಎಂದು ಹೇಳಿತ್ತು. ಇದನ್ನು ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿತ್ತು. ಆದರೆ ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ರಾಮಸೇತುವೆಯ ವಿವರವಾದ ನಕ್ಷೆಯನ್ನು ತಯಾರಿಸಿದ್ದಾರೆ.

ಇದೇ ಮೊದಲ ಬಾರಿಗೆ 29 ಕಿ.ಮೀ. ಉದ್ದದ ಸೇತುವೆಯ ಸಮುದ್ರದಡಿಯ ನಕ್ಷೆಯನ್ನು ಇಷ್ಟೊಂದು ನಿಖರವಾಗಿ ಸಿದ್ಧಪಡಿಸಲಾಗಿದೆಯಂತೆ. ಈ ಸೇತುವೆಯ ಬಗ್ಗೆ ಇರುವ ಈ ವಿವಾದಗಳನ್ನು ಬಗೆಹರಿಸಲು ಈ ನಕ್ಷೆಯಿಂದ ಸಾಧ್ಯ ಎನ್ನಲಾಗಿದೆ. ಅದಲ್ಲದೇ ನಕ್ಷೆಯಲ್ಲಿ ಈ ಸೇತುವೆಯು ಸಮುದ್ರದ ತಳದಿಂದ ಎಂಟು ಮೀ.ನಷ್ಟು ಎತ್ತರದಲ್ಲಿದೆ ತಿಳಿಸಲಾಗಿದೆ. ‘ನಾಸಾದ ಐಸಿಇಸ್ಯಾಟ್ 2 ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ನಕ್ಷೆ ಸಿದ್ಧಪಡಿಸಲಾಗಿದೆ. ಈ ನಕ್ಷೆಯಿಂದ ರಾಮಸೇತು ಮತ್ತು ಈ ಸೇತುವೆಯ ಉಗಮದ ಬಗ್ಗೆ ಇನ್ನಷ್ಟು ತಿಳಿಯಲು ಇದು ನೆರವಾಗಲಿದೆ’ ಎಂದು ಇಸ್ರೊದ ನ್ಯಾಷನಲ್‌ ರಿಮೋಟ್ ಸೆನ್ಸಿಂಗ್ ಸೆಂಟರ್‌ನ ವಿಜ್ಞಾನಿಗಳು ತಿಳಿಸಿದ್ದಾರೆ.

ರಾಮ ಸೇತುವೆ ಇರುವುದೆಲ್ಲಿ?

ಭಾರತ ಮತ್ತು ಶ್ರೀಲಂಕಾದ ಮಧ್ಯೆ ಸಮುದ್ರದಲ್ಲಿ ಸುಮಾರು 36 ಕಿಮೀ ಪ್ರದೇಶದಲ್ಲಿರುವುದೇ ರಾಮಾಯಣ ಕಾಲದ ಈ ರಾಮಸೇತು. ಆಳವಿಲ್ಲದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಚಿಪ್ಪಿನಂಥ ಮರಳುಗಲ್ಲುಗಳನ್ನು ಒಳಗೊಂಡಿದ್ದು, ಕಿರಿದಾದ ಹಾಗೂ ಅರ್ಧ ಮುಳುಗಿರುವ ಒಡ್ದಾಗಿದೆ. ಈ ಪ್ರದೇಶದ ಕೆಲವು ಕಡೆಗಳಲ್ಲಿ ನೀರಿನ ಆಳ 30 ಅಡಿ ಗಳಷ್ಟಿದ್ದು, ಇಲ್ಲಿ ಸಣ್ಣ ಸಣ್ಣ ದ್ವೀಪಗಳನ್ನು ಕಾಣಬಹುದು. ಅದಲ್ಲದೇ ಈ ರಾಮ ಸೇತುವನ್ನು ಆಡಮ್ಸ್ ಸೇತುವೆ ಎಂದು ಕರೆಯಲಾಗುತ್ತದೆ.

ರಾಮ ಸೇತುವೆ ಇಲ್ಲವೆಂದಿದ್ದ ಫಾಲಿ ಎಸ್ ನಾರಿಮನ್

ಕಳೆದ ಕೆಲವು ವರ್ಷಗಳ ಹಿಂದೆ ರಾಮ ಸೇತು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಹೇಳಿಕೆಯಲ್ಲಿ ಹಿರಿಯ ವಕೀಲ ಫಾಲಿ ಎಸ್ ನಾರಿಮನ್, ‘ರಾಮ ಸೇತು ಎಲ್ಲಿದೆ? ಅಲ್ಲಿ ಸೇತುವೆಯೇ ಇಲ್ಲವೆಂದ ಮೇಲೆ, ಅದನ್ನು ನಾಶ ಮಾಡೋದು ಎಲ್ಲಿಂದ? ಇದು ಅತಿಮಾನುಷ ಶಕ್ತಿಯ ನಿರ್ಮಾಣವಾಗಿದ್ದು, ಆತನೇ ಅದನ್ನು ನಾಶಗೊಳಿಸಿರಬಹುದು. ಆ ಕಾರಣದಿಂದಲೇ ಶತಮಾನಗಳಿಂದಲೂ ಈ ಸೇತುವೆಯ ಉಲ್ಲೇಖ ಎಲ್ಲಿಯೂ ಇಲ್ಲ ಎಂದಿದ್ದರು.

ಇದನ್ನೂ ಓದಿ: ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ ನೋಡಿ

ರಾಮ ಸೇತು ಬಗ್ಗೆ ಖಡಕ್ ಉತ್ತರ ನೀಡಿದ್ದ ಕೇಂದ್ರ ಸರ್ಕಾರ

2022 ರಲ್ಲಿ ರಾಜ್ಯ ಸಭೆಯಲ್ಲಿ ರಾಮ ಸೇತುವೆಯ ಬಗ್ಗೆ ಕೇಂದ್ರ ಸರ್ಕಾರವು ಖಡಕ್ ಉತ್ತರವನ್ನು ನೀಡಿತ್ತು. ಹೌದು, ಹರ್ಯಾಣದ ಸ್ವತಂತ್ರ ಸಂಸದ ಕಾರ್ತಿಕೇಯ ಶರ್ಮಾರವರು ರಾಮಸೇತು ಬಗ್ಗೆ ಮಾತನಾಡಿ, ‘ಈ ಹಿಂದಿನ ಸರ್ಕಾರ ರಾಮ ಸೇತು ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಆದರೆ ಈಗಿನ ಸರ್ಕಾರವು ದೇಶದ ಗತಕಾಲದ ಚರಿತ್ರೆಗೆ ಸಾಕ್ಷಿಯಾಗಿರುವ ರಾಮ ಸೇತು ಬಗ್ಗೆ ವೈಜ್ಞಾನಿಕ ಸಂಶೋಧನೆಗೆ ಮುಂದಾಗಿದೆಯೇ’ ಎಂದು ವ್ಯಂಗ್ಯವಾಗಿಯೇ ಪ್ರಶ್ನಿಸಿದ್ದರು.

ಸಂಸದರ ಪ್ರಶ್ನೆಗೆ ಬಾಹ್ಯಾಕಾಶ ಖಾತೆಯ ರಾಜ್ಯ ಸಚಿವ ಜೀತೇಂದ್ರ ಸಿಂಗ್ ಉತ್ತರಿಸಿದ್ದು, ’18 ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸೇತುವೆಯ ಬಗ್ಗೆ ಈಗ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆ ಸೇತುವೆಯು ಸುಮಾರು 56 ಕಿಲೋಮೀಟರ್‌ಗಳಷ್ಟು ಉದ್ದವಾಗಿದ್ದು, ಇದನ್ನು ಕಂಡುಹಿಡಿಯಲು ನಮಗೆ ಕೆಲವು ಮಿತಿಗಳಿವೆ. ಸ್ವಲ್ಪ ಮಟ್ಟಿಗೆ ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ತುಣುಕುಗಳು, ಕೆಲವು ರೀತಿಯ ಸುಣ್ಣದ ಕಲ್ಲುಗಳನ್ನು ಕಂಡುಹಿಡಿಯಲು ಸಾಧ್ಯವಾಗಿದೆ ಎಂದಿದ್ದರು.

ಇದನ್ನು ಅವಶೇಷಗಳು ಅಥವಾ ಸೇತುವೆಯ ಭಾಗಗಳೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಿ ಅಸ್ತಿತ್ವದಲ್ಲಿದ್ದ ರಚನೆಯನ್ನು ನಿಖರವಾಗಿ ಗುರುತಿಸುವುದು ಕಷ್ಟವಾಗಿದೆ ಆದರೆ ಆ ರಚನೆಗಳು ಅಸ್ತಿತ್ವದಲ್ಲಿವೆ ಎಂಬುದಕ್ಕೆ ನೇರ ಅಥವಾ ಪರೋಕ್ಷವಾಗಿ ಇದು ಸೂಚನೆಗಳಿವೆ. ಬಾಹ್ಯಾಕಾಶ ಇಲಾಖೆ ರಾಮಸೇತು ಬಗ್ಗೆ ಈಗಾಗಲೇ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ ಎಂದು ಸಂಸದರೊಂದಿಗೆ ಹೇಳುವುದಕ್ಕೆ ಬಹಳ ಸಂತೋಷವಾಗಿದೆ’ ಎಂದು ಉತ್ತರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು