ಶ್ರೀಹರಿಕೋಟಾ: ಇದೇ ಮೊದಲ ಬಾರಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬ್ರೆಜಿಲ್ ಉಪಗ್ರಹವನ್ನು ಭಾನುವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾನುವಾರ ಬೆಳಿಗ್ಗೆ 10:24ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ51(PSLV-C51) ರಾಕೆಟ್ ಬ್ರೆಜಿಲ್‌ನ ಅಮೆಜಾನಿಯಾ-1( Amazonia-1) ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ. ಪಿಎಸ್‌ಎಲ್‌ವಿ ಸಿ51 ಹೊತ್ತೊಯ್ದಿರುವ ಅಮೆಜಾನಿಯಾ-1 ಉಪಗ್ರಹ ಉಡಾವಣೆಗೆ ಶನಿವಾರ ಕೌಂಟ್ಡೌನ್ ಆರಂಭವಾಗಿತ್ತು . ಇಸ್ರೊ ಪಿಎಸ್‌ಎಲ್‌ವಿ ರಾಕೆಟ್‌ನ 53ನೇ ಮಿಷನ್ ಇದಾಗಿದ್ದು , ಪಿಎಸ್‌ಎಲ್‌ವಿಸಿ51 ರಾಕೆಟ್ ಅಮೆಜಾನಿಯಾ-1 ಉಪಗ್ರಹದ ಜೊತೆಗೆ ಇತರ 18 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.
ಬ್ರೆಜಿಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್‌ನ ಭೂವಲಯ ವೀಕ್ಷಣೆಗಾಗಿ ಬಳಕೆಯಾಗಲಿರುವ ದೂರ ಸಂವೇದಿ ಉಪಗ್ರಹವಾಗಿದೆ ಅಮೆಜಾನಿಯಾ-1. ಈ ಉಪಗ್ರಹವು 637 ಕೆ.ಜಿ. ತೂಕವಿದೆ. ಅಮೆಜಾನ್ ಪ್ರದೇಶದಲ್ಲಿ ಕಾಡು ನಾಶದ ಬಗ್ಗೆ ನಿಗಾವಹಿಸಲು ಹಾಗೂ ಕೃಷಿಗೆ ಸಂಬಂಧಿಸಿದಂತೆ ಪರಿಶೀಲನೆಗಳಿಗೆ ಅಮೆಜಾನಿಯಾ-1 ಉಪಗ್ರಹ ನೆರವಾಗಲಿದೆ ಎಂದು ಇಸ್ರೊ ಹೇಳಿದೆ.
ಚೆನ್ನೈ ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾದ (ಎಸ್‌ಕೆಐ) ಸತೀಶ್ ಧವನ್ ಸ್ಯಾಟ್ (ಎಸ್‌ಡಿ ಸ್ಯಾಟ್), ಭಾರತದ ಶೈಕ್ಷಣಿಕ ಸಂಸ್ಥೆಗಳಿಂದ ಮೂರು ಯೂನಿಟಿಸ್ಯಾಟ್‌ಗಳು (UNITYsats) ಹಾಗೂ ಇಸ್ರೊದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್) 14 ಉಪಗ್ರಹಗಳು ಈ ಮಿಷನ್ನಲ್ಲಿದೆ. ಎಸ್‌ಡಿ ಸ್ಯಾಟ್ ಜೊತೆಗೆ 25,000 ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಈ ಬಾಹ್ಯಾಕಾಶ ನೌಕೆಯ ಮೇಲಿನ ಪ್ಯಾನೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಕೆತ್ತಲಾಗಿದೆ ಹಾಗೂ ಎಸ್‌ಡಿ (secured digital) ಕಾರ್ಡ್‌ನಲ್ಲಿ ಭಗವದ್ಗೀತೆ ಕಳುಹಿಸಲಾಗಿದೆ. ಪ್ರಧಾನಿಯವರ ಆತ್ಮನಿರ್ಭರ್ ಭಾರತ ಅಭಿಯಾನ ಮತ್ತು ಬಾಹ್ಯಾಕಾಶ ಖಾಸಗೀಕರಣಕ್ಕೆ ತೋರುವ ಗೌರವವಾಗಿದೆ ಇದು ಎಂದು ಎಸ್‌ಕೆಐ ಹೇಳಿದೆ.
#PSLVC51 lifts off successfully from Satish Dhawan Space Centre, Sriharikota#ISRO #NSIL #INSPACe #Amazonia1 pic.twitter.com/38WNf5ciIo
— ISRO (@isro) February 28, 2021
ಬ್ರೆಜಿಲಿಯನ್ ನಿರ್ಮಿತ ಮೊದಲ ಉಪಗ್ರಹವನ್ನು ಉಡಾವಣೆ ಮಾಡುತ್ತಿರುವುದು ನಮಗೆ ಹೆಮ್ಮೆಯೆ ವಿಷಯವಾಗಿದೆ ಎಂದು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್)ನ ಮುಖ್ಯಸ್ಥ ಜಿ.ನಾರಾಯಣನ್ ಹೇಳಿದ್ದಾರೆ.
#Amazonia1 successfully separated from fourth stage of #PSLVC51 and injected into orbit#ISRO #NSIL #INSPACe pic.twitter.com/hEzayrCMeq
— ISRO (@isro) February 28, 2021
ಇದು ಎನ್‌ಎಸ್‌ಐಎಲ್‌ನ ಮೊದಲ ವಾಣಿಜ್ಯ ಉದ್ದೇಶಿತ ಯೋಜನೆಯಾಗಿದ್ದು, ಇಸ್ರೊ ವೆಬ್‌ಸೈಟ್, ಯುಟ್ಯೂಬ್ ಚಾನೆಲ್, ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಗಳ ಮೂಲಕ ಉಪಗ್ರಹ ಉಡಾವಣೆ ನೇರ ಪ್ರಸಾರ ಮಾಡಿದೆ.
#WATCH ISRO’s PSLV-C51 carrying Amazonia-1 and 18 other satellites lifts off from Satish Dhawan Space Centre, Sriharikota pic.twitter.com/jtyQUYi1O0
— ANI (@ANI) February 28, 2021
ಈ ಕಾರ್ಯಾಚರಣೆಯಲ್ಲಿ ಭಾರತ ಮತ್ತು ಇಸ್ರೋ, ಬ್ರೆಜಿಲ್ನಿಂದ ಸಂಯೋಜಿಸಲ್ಪಟ್ಟ ಮೊದಲ ಉಪಗ್ರಹವನ್ನು ಉಡಾಯಿಸಲು ಅತ್ಯಂತ ಹೆಮ್ಮೆಪಡುತ್ತದೆ. ಉಪಗ್ರಹವು ಉತ್ತಮ ಸ್ಥಿತಿಯಲ್ಲಿದೆ. ಬ್ರೆಜಿಲ್ ತಂಡಕ್ಕೆ ಅಭಿನಂದನೆಗಳು.
ಏಳು ಉಡಾವಣಾ ಕಾರ್ಯಾಚರಣೆಗಳು, ಆರು ಉಪಗ್ರಹ ಕಾರ್ಯಾಚರಣೆಗಳು ಮತ್ತು ಈ ವರ್ಷದ ಅಂತ್ಯದ ವೇಳೆಗೆ ಮೊದಲ ಮಾನವರಹಿತ ಮಿಷನ್ ಸೇರಿದಂತೆ 14 ಕಾರ್ಯಾಚರಣೆಗಳನ್ನು ನಾವು ಯೋಜಿಸಿದ್ದೇವೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.
ಉಡಾವಣೆಗೆ ಸಾಕ್ಷಿಯಾಗಲು ಹಾಜರಿದ್ದ ಬ್ರೆಜಿಲ್‌ನ ವಿಜ್ಞಾನ, ತಂತ್ರಜ್ಞಾನ ಸಚಿವ ಮಾರ್ಕೋಸ್ ಸೀಸರ್ ಪೊಂಟೆಸ್, ಈ ಉಪಗ್ರಹವು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್ ಮತ್ತು ಬ್ರೆಜಿಲಿಯನ್ ಬಾಹ್ಯಾಕಾಶ ಸಂಸ್ಥೆಯ ಎಂಜಿನಿಯರ್‌ಗಳ ಹಲವಾರು ವರ್ಷಗಳ ಪ್ರಯತ್ನಗಳ ಫಲವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೀರ್ತಿಶನಿಯಿಂದ ದೂರವಿದ್ದ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ
Published On - 12:30 pm, Sun, 28 February 21