ಭಾರತ ಇಂದು 73ನೇ ಗಣರಾಜ್ಯೋತ್ಸವ ಆಚರಿಸುತ್ತಿದೆ. ಎಲ್ಲೆಡೆ ಧ್ವಜಾರೋಹಣ ನಡೆಸಲಾಗುತ್ತಿದೆ. ಅದರಲ್ಲಿ ತುಂಬ ಗಮನ ಸೆಳೆದಿದ್ದು, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯ ಸಿಬ್ಬಂದಿಯ ಧ್ವಜಾರೋಹಣ. ಇವರು ಲಡಾಖ್ ಗಡಿಯಲ್ಲಿರುವ ಸುಮಾರು 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ, ಮೈನಸ್ 35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಧ್ವಜಾರೋಹಣ ಮಾಡಿ, ಗಣರಾಜ್ಯೋತ್ಸವ ಆಚರಣೆ ಮಾಡಿದ್ದಾರೆ. ಹಿಮಾಚ್ಛಾದಿತ ಪ್ರದೇಶದಲ್ಲಿ, ಅಷ್ಟೇ ಬಿಳಿ ಬಣ್ಣದ ಸಮವಸ್ತ್ರ ಧರಿಸಿದ ಯೋಧರು, ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು, ಭಾರತ್ ಮಾತಾ ಕೀ ಜೈ ಎನ್ನುತ್ತ ಸಾಗಿದ್ದಾರೆ. ಈ ವಿಡಿಯೋವನ್ನು ಐಟಿಬಿಪಿ ಟ್ವಿಟರ್ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಅಂದಹಾಗೇ, ಯೋಧರು ಕೇವಲ ಲಡಾಖ್ನಲ್ಲಷ್ಟೇ ಅಲ್ಲ, ಹೀಗೆ ಭಾರತದ ಅತ್ಯಂತ ಎತ್ತರದ ಪ್ರದೇಶಗಳಲ್ಲಿ, ಹಿಮಾಚ್ಛಾದಿತ ಸ್ಥಳಗಳಲ್ಲಿ ಚಳಿಯ ಮಧ್ಯೆ ಗಣರಾಜ್ಯೋತ್ಸವ ಆಚರಣೆ ಮಾಡಿದ್ದಾರೆ. ಅಂದಹಾಗೇ, ಈ ಪ್ರದೇಶಗಳಲ್ಲಿ ದೇಶ ಕಾಯುವವರನ್ನು ಹಿಮವೀರರು ಎಂದೇ ಕರೆಯಲಾಗುತ್ತದೆ.
#WATCH | ‘Himveers of Indo-Tibetan Border Police (ITBP) celebrate #RepublicDay at 15000 feet altitude in -35 degree Celsius temperature at Ladakh borders.
(Source: ITBP) pic.twitter.com/JvHchY99AE
— ANI (@ANI) January 26, 2022
ಹಾಗೇ, ಉತ್ತರಾಖಂಡ್ನ ಔಲಿ ಎಂಬಲ್ಲಿ ಕೂಡ ಮೈನಸ್ 20 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, 11 ಸಾವಿರ ಅಡಿ ಎತ್ತರದಲ್ಲಿ ಐಟಿಬಿಪಿ ಸೈನಿಕರು ಧ್ವಜಾರೋಹಣ ನಡೆಸಿದ್ದಾರೆ. ಇವರು ತ್ರಿವರ್ಣ ಧ್ವಜ ಎತ್ತಿ ಹಿಡಿದು ಅಲ್ಲೇ ಪಥ ಸಂಚಲನ ಮಾಡಿದ ವಿಡಿಯೋ ಕೂಡ ವೈರಲ್ ಆಗಿದೆ.
#WATCH Indo-Tibetan Border Police ‘Himveers’ celebrate the 73rd Republic Day at 11,000 feet in minus 20 degrees Celsius at Auli in Uttarakhand pic.twitter.com/1nhbrOWSp3
— ANI (@ANI) January 26, 2022
ಅಂದಹಾಗೆ, ಇವತ್ತು ಐಟಿಬಿಪಿಯ ಡೇರ್ ಡೆವಿಲ್ ಬೈಕರ್ಗಳು ರಾಜಪಥ್ನಲ್ಲಿ ನಡೆಯಲಿರುವ ಪರೇಡ್ನಲ್ಲಿ 10 ವಿವಿಧ ರೀತಿಯ ರಚನೆಗಳನ್ನು ಪ್ರದರ್ಶನ ಮಾಡಲಿದ್ದಾರೆ. ಇಷ್ಟು ವಿಧದ ಸಾಹಸ ರಚನೆಗಳನ್ನು ಐಟಿಬಿಪಿ ಸಿಬ್ಬಂದಿ ಪ್ರದರ್ಶಿಸುತ್ತಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ. 1962ರಲ್ಲಿ ಐಟಿಬಿಪಿ ರಚನೆಯಾಗಿದೆ.
ಇದನ್ನೂ ಓದಿ: Republic Day 2022: ಕರ್ನಾಟಕದ ಜನತೆಯನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ