ಹೈದರಾಬಾದ್: ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ತಿರುಮಲ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆಯ ಅಂಶವಿರುವ ತುಪ್ಪ ಬಳಸಲಾಗಿತ್ತು ಎಂಬ ಎಂಬ ಆರೋಪದ ಕುರಿತು ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯವು ವಿವರವಾದ ವರದಿ ಸಲ್ಲಿಸುವಂತೆ ಆಂಧ್ರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಈ ವಿವಾದದ ಕುರಿತು ಜಗನ್ ಮೋಹನ್ ರೆಡ್ಡಿ ಮೌನ ಮುರಿದಿದ್ದಾರೆ. ಚಂದ್ರಬಾಬು ನಾಯ್ಡು ಅವರು ದೇವರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವೈಎಸ್‌ಆರ್‌ಸಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಇಂದು ತಿರುಪತಿ ಲಡ್ಡು ವಿಷಯದಲ್ಲಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಪ್ರಸಾದದ ಅರ್ಹತೆಯ ಮಾನದಂಡವು ದಶಕಗಳಿಂದ ಬದಲಾಗಿಲ್ಲ. ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಮನಸ್ಥಿತಿ ಇರುವುದು ಚಂದ್ರಬಾಬು ನಾಯ್ಡುಗೆ ಮಾತ್ರ ಎಂದು ಜಗನ್ ರೆಡ್ಡಿ ಆರೋಪಿಸಿದ್ದಾರೆ. ಜನರ ಗಮನವನ್ನು ತಮ್ಮತ್ತ ಸೆಳೆಯಲು ಅವರು ಈ ರೀತಿ ಆರೋಪ ಮಾಡಿದ್ದಾರೆ ಎಂದು ಜಗನ್ ಮೋಹನ್ ರೆಡ್ಡಿ ಚಂದ್ರಬಾಬು ನಾಯ್ಡು ಅವರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ ಬಳಸಿರುವುದು ನಿಜ; ಟಿಟಿಡಿ ಸ್ಪಷ್ಟನೆ
VIDEO | Tirumala Tirupati laddu controversy: “I am writing a letter to the Chief Justice of India explaining to him as to how Chandrababu Naidu has twisted the facts and why action should be taken against him for having done so,” says former Andhra Pradesh CM and YSRCP president,… pic.twitter.com/VT90cu4zeS
— Press Trust of India (@PTI_News) September 20, 2024
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೇವರನ್ನು ಕೂಡ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಲ್ಲ ವ್ಯಕ್ತಿ ಎಂದು ಜಗನ್ ರೆಡ್ಡಿ ಹೇಳಿದ್ದಾರೆ. ಟಿಡಿಪಿ ಧಾರ್ಮಿಕ ವಿಷಯಗಳಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತುಪ್ಪದಿಂದ ಮಾದರಿಗಳನ್ನು ಸಂಗ್ರಹಿಸುತ್ತದೆ ಮತ್ತು ಉತ್ತಮ ಉತ್ಪನ್ನಗಳನ್ನು ಮಾತ್ರ ಬಳಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ; ಪ್ರಾಣಿಗಳ ಕೊಬ್ಬಿನ ಆರೋಪದ ವಿರುದ್ಧ ಸಿಬಿಐ ತನಿಖೆಗೆ ಆಂಧ್ರ ಕಾಂಗ್ರೆಸ್ ಆಗ್ರಹ
ಪ್ರತಿ 6 ತಿಂಗಳಿಗೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ ಮತ್ತು ದಶಕಗಳಿಂದ ಈ ಅರ್ಹತಾ ಮಾನದಂಡಗಳು ಬದಲಾಗಿಲ್ಲ. ಪೂರೈಕೆದಾರರು NABL ಪ್ರಮಾಣಪತ್ರ ಮತ್ತು ಉತ್ಪನ್ನ ಗುಣಮಟ್ಟದ ಪ್ರಮಾಣಪತ್ರವನ್ನು ಒದಗಿಸಬೇಕು. ಟಿಟಿಡಿ ತುಪ್ಪದಿಂದ ಮಾದರಿಗಳನ್ನು ಸಂಗ್ರಹಿಸುತ್ತದೆ ಮತ್ತು ಪ್ರಮಾಣೀಕರಣವನ್ನು ಹಾದುಹೋಗುವ ಉತ್ಪನ್ನಗಳನ್ನು ಮಾತ್ರ ಬಳಸಲಾಗುತ್ತದೆ. ಟಿಡಿಪಿ ಧಾರ್ಮಿಕ ವಿಷಯಗಳಲ್ಲಿ ರಾಜಕೀಯ ಮಾಡುತ್ತಿದೆ. ನಮ್ಮ ಆಡಳಿತದಲ್ಲಿ ನಾವು 18 ಬಾರಿ ಉತ್ಪನ್ನಗಳನ್ನು ತಿರಸ್ಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ