ಜೈಪುರ: ವೈದ್ಯಕೀಯ ಕ್ಷೇತ್ರದಲ್ಲಿ ವಿಭಿನ್ನವಾದ ಹಾಗೂ ಹಿಂದೆಂದೂ ಕೇಳರಿಯದ ರೋಗರುಜಿನ, ಕಾಯಿಲೆ ಮತ್ತು ಸೋಂಕುಗಳು ಪ್ರತಿನಿತ್ಯವೂ ಕಾಣಸಿಗುತ್ತಲೇ ಇರುತ್ತವೆ. ಅಂತೆಯೇ, ನವಜಾತ ಗಂಡು ಶಿಶುವಿನಲ್ಲಿ ತೀರಾ ಅಪರೂಪರದ ಅನುವಂಶಿಕ ಕಾಯಿಲೆಗಳು ಪತ್ತೆಯಾಗಿರುವ ಘಟನೆ ರಾಜಸ್ಥಾನದ ಜೈಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಹಸುಗೂಸಿನಲ್ಲಿ ಪೊಂಪೆ ಕಾಯಿಲೆ ಹಾಗೂ ಬೆನ್ನು ಮೂಳೆ ಸ್ನಾಯು ಕ್ಷೀಣತೆಯಂಥ (ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ) ಅಪರೂಪದ ಆನುವಂಶಿಕ ಕಾಯಿಲೆಗಳು ಪತ್ತೆಯಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಜೊತೆಗೆ, ನವಜಾತ ಶಿಶುವಿನಲ್ಲಿ ಒಮ್ಮೆಲೆಗೆ ಎರಡು ಅಪರೂಪದ ಆನುವಂಶಿಕ ಕಾಯಿಲೆಗಳು ಪತ್ತೆಯಾಗಿರುವುದು ಇಡೀ ಜಗತ್ತಿನಲ್ಲಿ ಇದೇ ಮೊದಲನೇ ಪ್ರಕರಣ ಎಂಬ ಮಾಹಿತಿ ಸಹ ನೀಡಿದ್ದಾರೆ.
ಪೊಂಪೆ ಕಾಯಿಲೆ ಹಸುಗೂಸಿನ ಚಯಾಪಚಯ ಕ್ರಿಯೆಗೆ ತೊಂದರೆ ಉಂಟುಮಾಡಿದರೆ ಬೆನ್ನು ಮೂಳೆ ಸ್ನಾಯು ಕ್ಷೀಣತೆ ಮಗುವಿನ ನರಮಂಡಲ ವ್ಯವಸ್ಥೆಗೆ ಮಾರಕವಾಗಿದೆ ಎಂದು ತಿಳಿದುಬಂದಿದೆ.
Published On - 1:54 pm, Thu, 10 September 20