ನಟ ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿಗೆ ಜಾಮೀನು ನಿರಾಕರಣೆ

  • Updated On - 1:08 pm, Fri, 11 September 20
ನಟ ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿಗೆ ಜಾಮೀನು ನಿರಾಕರಣೆ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್​ರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಮುಂಬೈನ ಸೆಷನ್ಸ್​ ಕೋರ್ಟ್ ಇಬ್ಬರ ಜಾಮೀನು ಅರ್ಜಿಯನ್ನ ವಜಾಗೊಳಿಸಿದೆ.

ಹಾಗಾಗಿ, ರಿಯಾ ಚಕ್ರವರ್ತಿ ಸೆಪ್ಟಂಬರ್ 22ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗುತ್ತದೆ ಎಂದು ತಿಳಿದುಬಂದಿದೆ. ಸದ್ಯ ನಟಿ ರಿಯಾ ಚಕ್ರವರ್ತಿ ಮುಂಬೈನ ಬೈಕುಲಾ ಜೈಲಿನಲ್ಲಿದ್ದಾರೆ. ಇದಲ್ಲದೆ, ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಇತರೆ ಆರೋಪಿಗಳಾದ ಅಬ್ದುಲ್​ ಬಸಿತ್​, ದಿಪೇಶ್​ ಸಾವಂತ್​, ಜೈದ್​ ವಿಲಾತ್ರಾ ಹಾಗೂ ಸ್ಯಾಮ್ಯುಯೆಲ್​ ಮಿರಾಂಡಾರಿಗೆ ಸಹ ಕೋರ್ಟ್ ಜಾಮೀನು ನಿರಾಕರಿಸಿದೆ.

NCB ತನಿಖಾ ಸಂಸ್ಥೆಯು ಸುಶಾಂತ್​ ಸಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್​ ನಂಟಿನ ಆರೋಪದಡಿ ಇವರೆಲ್ಲರನ್ನು ಅರೆಸ್ಟ್​ ಮಾಡಿತ್ತು.

Click on your DTH Provider to Add TV9 Kannada