ತೆರಿಗೆ ವಂಚನೆ: ಸಂಗೀತ ಮಾಂತ್ರಿಕ AR ರಹಮಾನ್ ವಿರುದ್ಧ IT ದೂರು

ತೆರಿಗೆ ವಂಚನೆ: ಸಂಗೀತ ಮಾಂತ್ರಿಕ AR ರಹಮಾನ್ ವಿರುದ್ಧ IT ದೂರು

ಸಂಗೀತ ಮಾಂತ್ರಿಕ ಎ ಆರ್ ರಹಮಾನ್ ವಿರುದ್ಧ ಆದಾಯ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ.

ಆದಾಯ ತೆರಿಗೆ ತಪ್ಪಿಸಲು ಎ ಆರ್ ರಹಮಾನ್ ತಮ್ಮ ಎ ಆರ್ ರಹಮಾನ್ ಫೌಂಡೇಶನ್‌ಗೆ ರೂಪಾಯಿ 3.47 ಕೋಟಿಯನ್ನು ರವಾನಿಸಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದೆ.

2011 ರಲ್ಲಿ ರಿಂಗ್‌ಟೋನ್‌ಗಳನ್ನು ರಚಿಸುವುದಕ್ಕಾಗಿ ಯುಕೆ ಮೂಲದ ಮೊಬೈಲ್ ಫೋನ್ ಕಂಪನಿಯಿಂದ ರಹಮಾನ್ ಹಣವನ್ನು ಪಡೆದಿದ್ದು, ತನ್ನ ಸಂಭಾವನೆಯನ್ನು ನೇರವಾಗಿ ತನ್ನ ಪ್ರತಿಷ್ಠಾನಕ್ಕೆ ಪಾವತಿಸುವಂತೆ ಕಂಪನಿಗೆ ಸೂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಆ ಸಮಯದಲ್ಲಿ ಚಾರಿಟಬಲ್ ಟ್ರಸ್ಟ್‌ಗೆ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ಪರವಾನಗಿ ಇರಲಿಲ್ಲ. ಹಾಗಾಗಿ 3.47 ಕೋಟಿ ರೂಪಾಯಿ ತೆರಿಗೆ ವಿಧಿಸಬಹುದಾದ ಆದಾಯವಾಗಿದ್ದು, ಅದನ್ನು ವಿದೇಶಿ ಕೊಡುಗೆಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಈ ವರ್ಷದ ಫೆಬ್ರವರಿಯಲ್ಲಿ, ಕೇಂದ್ರ ಸರ್ಕಾರ ಎ ಆರ್ ರಹಮಾನ್ ಫೌಂಡೇಶನ್‌ಗೆ ಎಫ್‌ಸಿಆರ್‌ಎ ಪರವಾನಗಿಯನ್ನು ನೀಡಿದ್ದು, ಟ್ರಸ್ಟ್​ ಅನ್ನು ಎಫ್‌ಸಿಆರ್‌ಎ ಅಡಿಯಲ್ಲಿ “ಸಾಂಸ್ಕೃತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ” ನೋಂದಾಯಿಸಲಾಗಿದೆ ಎಂಬುದು ಕಂಡು ಬಂದಿದೆ.

Click on your DTH Provider to Add TV9 Kannada