ಅಧಿಕೃತವಾಗಿ ಭಾರತೀಯ ವಾಯು ಸೇನೆ ಸೇರಲಿರುವ ರಫೇಲ್‌ ಯುದ್ದ ವಿಮಾನ

  • Publish Date - 11:03 pm, Wed, 9 September 20
ಅಧಿಕೃತವಾಗಿ ಭಾರತೀಯ ವಾಯು ಸೇನೆ ಸೇರಲಿರುವ ರಫೇಲ್‌ ಯುದ್ದ ವಿಮಾನ
ರಫೇಲ್​ ವಿಮಾನ

ನವದೆಹಲಿ: ಭಾರತ ಭಾರೀ ನಿರೀಕ್ಷೆಯಿಂದ ಖರೀಧಿಸಿರುವ ರಪೇಲ್‌ ಯುದ್ದವಿಮಾನಗಳು ಗುರುವಾರ ಅಧಿಕೃತವಾಗಿ ಭಾರತೀಯ ವಾಯು ಸೇನೆಯನ್ನು ಸೇರಿಸಿಕೊಳ್ಳಲಿವೆ.

ಈ ಸಂಬಂಧ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗುರುವಾರ ಅಂದ್ರೆ ಸೆಪ್ಟೆಂಬರ್‌ 10ರಂದು ಬೆಳಿಗ್ಗೆ 10ಗಂಟೆಗೆ ರಫೇಲ್‌ ಯುದ್ಧವಿಮಾನಗಳನ್ನು ಭಾರತೀಯ ವಾಯು ಸೇನೆಯ ಬತ್ತಳಿಕೆಗೆ ಅಂಬಾಲಾದಲ್ಲಿರುವ ವಾಯು ನೆಲೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಯುದ್ದ ವಿಮಾನ ಭಾರತೀಯ 17ನೇ ಸ್ಕ್ವಾಡ್ರನ್‌ನ ಗೋಲ್ಡನ್‌ ಌರೋಸ್‌ ವಿಭಾಗದ ಪ್ರಮುಖ ಅಂಗವಾಗಲಿದೆ. ಭಾರತ ಭಾರೀ ಮಹತ್ವಾಕಾಂಕ್ಷೆಯೊಂದಿಗೆ ಸಾಕಷ್ಟು ವಿವಾದದ ನಡುವೆಯೂ ರಫೇಲ್‌ ಯುದ್ದ ವಿಮಾನಗಳನ್ನು ಖರೀಧಿಸಿದೆ.

ಇದು ಸುಮಾರು ಎರಡು ದಶಕಗಳ ನಂತರ ಭಾರತ ಖರೀಧಿಸಿದ ಯುದ್ದ ವಿಮಾನವಾಗಿದ್ದು, ಈ ಯುದ್ದ ವಿಮಾನಗಳ ಮೇಲೆ ಭಾರತ ಭಾರೀ ಭರವಸೆ ಹಾಗೂ ನಿರೀಕ್ಷೆ ಇಟ್ಟುಕೊಂಡಿದೆ.

Click on your DTH Provider to Add TV9 Kannada