
ಜೈಸಲ್ಮೇರ್, ಜೂನ್ 30: ರಾಜಸ್ಥಾನದ ಜೈಸಲ್ಮೇರ್ ಸಮೀಪವಿರುವ ಭಾರತ-ಪಾಕಿಸ್ತಾನ ಗಡಿ ಬಳಿ ಜೋಡಿ ಶವ ಪತ್ತೆಯಾಗಿದೆ. ಅದರಲ್ಲಿ ಒಬ್ಬಳು ಅಪ್ರಾಪ್ತೆ. ಸುಮಾರು 6-7 ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ರಾಜಸ್ಥಾನ(Rajasthan)ದ ಜೈಸಲ್ಮೇರ್ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿಯ ಮರಳು ದಿಬ್ಬಗಳಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಇಬ್ಬರೂ ಪಾಕಿಸ್ತಾನಿ ನಾಗರಿಕರು ಎಂದು ತಿಳಿದುಬಂದಿದೆ. ಅವರು ಹಸಿವು, ಬಾಯಾರಿಕೆಯಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಆದರೆ ಭಾರತವನ್ನು ತಲುಪಿದ್ದು ಏಕೆ ಮತ್ತು ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಹಾಗೆಯೇ ಸಾವಿನ ಹಿಂದೆ ಯಾರದ್ದಾದರೂ ಪಿತೂರಿ ಇರಬಹುದು ಎಂದು ಅಂದಾಜಿಸಲಾಗಿದೆ. ಜೈಸಲ್ಮೇರ್ ಬಳಿಯ ಭಾರತ-ಪಾಕಿಸ್ತಾನ ಗಡಿಯ ಬಳಿಯ ತನೋಟ್ ಮತ್ತು ಸಾಧೇವಾಲಾ ಪ್ರದೇಶದ ಅಂತಾರಾಷ್ಟ್ರೀಯ ಗಡಿಯ ಒಳಗೆ 10 ರಿಂದ 12 ಕಿ.ಮೀ. ದೂರದಲ್ಲಿದೆ. ಶನಿವಾರ ಸಂಜೆ ಸ್ಥಳೀಯರು ಶವವನ್ನು ನೋಡಿ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನಿ ಮೊಬೈಲ್ ಸಿಮ್ ಮತ್ತು ಪಾಕಿಸ್ತಾನ ಗುರುತಿನ ಚೀಟಿಗಳು ಪತ್ತೆಯಾಗಿವೆ., ಇದು ಇಬ್ಬರೂ ಪಾಕಿಸ್ತಾನಿ ನಾಗರಿಕರು ಎಂದು ಖಚಿತಪಡಿಸುತ್ತದೆ. ಇಬ್ಬರ ವಯಸ್ಸು 20 ವರ್ಷಕ್ಕಿಂತ ಕಡಿಮೆ ಎಂದು ಹೇಳಲಾಗುತ್ತದೆ.
ಮತ್ತಷ್ಟು ಓದಿ: ಲುಧಿಯಾನಾ: ಪ್ಲಾಸ್ಟಿಕ್ ಡ್ರಮ್ನಲ್ಲಿ ಕೊಳೆತ ಶವ ಪತ್ತೆ
ಮೇಲ್ನೋಟಕ್ಕೆ ಇಬ್ಬರೂ ಹಸಿವು ಮತ್ತು ಬಾಯಾರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಬ್ಬರೂ ಹಿಂದೂ ಆಗಿದ್ದು, ಪಾಕಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಂದ ಬೇಸತ್ತು ಭಾರತಕ್ಕೆ ಬಂದಿರಬೇಕು ಎಂದು ಊಹಿಸಲಾಗುತ್ತಿದೆ. ಇಬ್ಬರೂ ಇಲ್ಲಿಗೆ ಹೇಗೆ ಬಂದರು ಎಂಬುದು ಬಹಿರಂಗಗೊಂಡಿಲ್ಲ. ಪೊಲೀಸರು ಮತ್ತು ಬಿಎಸ್‌ಎಫ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಪ್ರಸ್ತುತ ಎರಡೂ ಶವಗಳನ್ನು ರಾಮಗಢ ಶವಾಗಾರದಲ್ಲಿ ಇರಿಸಿದ್ದಾರೆ. ಈಗ ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ಬಹಿರಂಗಗೊಳ್ಳಲಿದೆ. ಇಬ್ಬರೂ ಪಾಕಿಸ್ತಾನದಿಂದ ಬಂದವರೇ ಅಥವಾ ಈಗಾಗಲೇ ಭಾರತದಲ್ಲಿದ್ದರೇ ಎಂಬುದು ಸಹ ಬಹಿರಂಗಗೊಂಡಿಲ್ಲ.
ಆ ಯುವಕನ ಹೆಸರು ರವಿ ಕುಮಾರ್ ಆತನಿಗೆ 18 ವರ್ಷ, ಹುಡುಗಿಗೆ 15 ವರ್ಷ ಇಬ್ಬರೂ ಪ್ರೇಮಿಗಳಿರಬಹುದು ಎಂದು ಊಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ಕಾರಣ ಹಸಿವು ಮತ್ತು ಬಾಯಾರಿಕೆಯೇ ಅಥವಾ ಇನ್ನೇನಾದರೂ ಆಗಿರಬಹುದೇ ಎಂಬುದು ತಿಳಿದುಬರುತ್ತದೆ.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ