ಮನೋಜಿತ್ ಅತ್ಯಾಚಾರವೆಸಗೋ ಮುನ್ನವೇ ಆತನ ಕಂಡ್ರೆ ವಿದ್ಯಾರ್ಥಿನಿಯರು ನಡುಗ್ತಿದ್ರು ಏಕೆ?
ಮನೋಜಿತ್ ಮಿಶ್ರಾ ಅತ್ಯಾಚಾರ ವೆಸಗುವ ಮುನ್ನವೇ ಆತನನ್ನು ಕಂಡರೆ ಹೆಣ್ಣುಮಕ್ಕಳೆಲ್ಲಾ ನಡುಗುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಆತ ಸೈಕೋನಂತೆ ವರ್ತಿಸುತ್ತಿದ್ದ, ಮನೋಜಿತ್ ಸೈಕೋನಂತೆ ವರ್ತಿಸುತ್ತಿದ್ದ, ಆ ವಿದ್ಯಾರ್ಥಿನಿ ಬಳಿ ಮೊದಲೇ ಮದುವೆ ಪ್ರಸ್ತಾಪ ಮಾಡಿದ್ದ. ಇಷ್ಟೇ ಅಲ್ಲ ಹುಡುಗಿಯರ ಅಶ್ಲೀಲ ವಿಡಿಯೋಗಳು ಹಾಗೂ ಫೋಟೊಗಳನ್ನು ಸ್ನೇಹಿತರಿಗೆ ಕಳುಹಿಸುವುದು, ಲೈಂಗಿಕ ದೌರ್ಜನ್ಯ ಎಸಗುವುದು ಮತ್ತು ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದು ಆತನ ಕೆಟ್ಟ ಅಭ್ಯಾಸವಾಗಿತ್ತು.

ಕೋಲ್ಕತ್ತಾ, ಜೂನ್ 30: ದಕ್ಷಿಣ ಕೋಲ್ಕತ್ತಾದ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಮನೋಜಿತ್ ಮಿಶ್ರಾ ಹಾಗೂ ಇನ್ನೂ ಇಬ್ಬರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಅತ್ಯಾಚಾರಕ್ಕೂ ಮುನ್ನವೇ ಮನೋಜಿತ್ ಕಂಡರೆ ವಿದ್ಯಾರ್ಥಿನಿಯರು ನಡುಗುತ್ತಿದ್ರಂತೆ.
ಮನೋಜಿತ್ ಸೈಕೋನಂತೆ ವರ್ತಿಸುತ್ತಿದ್ದ, ಆ ವಿದ್ಯಾರ್ಥಿನಿ ಬಳಿ ಮೊದಲೇ ಮದುವೆ ಪ್ರಸ್ತಾಪ ಮಾಡಿದ್ದ. ಆಕೆ ಒಪ್ಪಿರಲಿಲ್ಲ, ಇಷ್ಟೇ ಅಲ್ಲ ಹುಡುಗಿಯರ ಅಶ್ಲೀಲ ವಿಡಿಯೋಗಳು ಹಾಗೂ ಫೋಟೊಗಳನ್ನು ಸ್ನೇಹಿತರಿಗೆ ಕಳುಹಿಸುವುದು, ಲೈಂಗಿಕ ದೌರ್ಜನ್ಯ ಎಸಗುವುದು ಮತ್ತು ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದು ಆತನ ಕೆಟ್ಟ ಅಭ್ಯಾಸವಾಗಿತ್ತು.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಮನೋಜಿತ್ ಮಿಶ್ರಾ ಕಾನೂನು ಕಾಲೇಜಿನಲ್ಲಿ ಮ್ಯಾಂಗೋ ಎಂದೇ ಪರಿಚಿತನಾಗಿದ್ದ. ಮನೋಜಿತ್ ವಿರುದ್ಧ ಕಿರುಕುಳ, ಹಲ್ಲೆ ಮತ್ತು ಬ್ಲ್ಯಾಕ್‌ಮೇಲಿಂಗ್ ದೂರುಗಳು ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರಿಗೆ ತಲುಪಿವೆ. ಪಕ್ಷಕ್ಕೂ ಮಾಹಿತಿ ನೀಡಲಾಯಿತು, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ಓದಿ: ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲೆ ಕಾಲೇಜಿನ ಆವರಣದೊಳಗೆ ಸಾಮೂಹಿಕ ಅತ್ಯಾಚಾರ
ಮನೋಜಿತ್ ರಾಜಕೀಯ ಸಂಪರ್ಕಗಳು ಆತನ ನಿಜವಾದ ಶಕ್ತಿಯಾಗಿತ್ತು.ಆತ 2007 ರಲ್ಲಿ ಕಾಲೇಜಿಗೆ ಸೇರಿದ್ದ ಮತ್ತು ನಂತರ 2017 ರಲ್ಲಿ ಮರು-ದಾಖಲಾಗದ್ದ, ಆದರೆ ಎರಡೂ ಬಾರಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲಿಲ್ಲ.
2021 ರಲ್ಲಿ ತೃಣಮೂಲ ವಿದ್ಯಾರ್ಥಿ ಪರಿಷತ್ತಿನ (TMCP) ಕಾಲೇಜು ಘಟಕದಿಂದ ಹೊರಹಾಕಲಾಯಿತು, ಆದರೆ 2022 ರಲ್ಲಿ ಆಡಳಿತ ಮಂಡಳಿಯಿಂದ ನೇಮಕಾತಿ ಪತ್ರದೊಂದಿಗೆ ಗುತ್ತಿಗೆ ಸಿಬ್ಬಂದಿಯಾಗಿ ಕಾಲೇಜಿಗೆ ಮರಳಿದ್ದ.ಅದೇ ವರ್ಷ ಔಪಚಾರಿಕವಾಗಿ ಪದವಿ ಪೂರ್ಣಗೊಳಿಸಿ ಮತ್ತು ಅಲಿಪುರ ನ್ಯಾಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಲು ಪ್ರಾರಂಭಿಸಿದ್ದ.
2017 ರಲ್ಲಿ ಕಾಲೇಜಿನ ಅಧಿಕೃತ ಟಿಎಂಸಿಪಿ ಘಟಕವನ್ನು ವಿಸರ್ಜಿಸಿದ ನಂತರವೂ ಮನೋಜಿತ್ ಪ್ರಭಾವ ಕಡಿಮೆಯಾಗಿರಲಿಲ್ಲ. ಆತ ಯಾವುದೇ ಅಧಿಕೃತ ಹುದ್ದೆಯಿಲ್ಲದೆ ಕಾಲೇಜಿನಲ್ಲಿ ಸರ್ವಾಧಿಕಾರಿ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತದೆ.
ಕೋಲ್ಕತ್ತಾದ ಕಾಲಿಘಾಟ್ ಪ್ರದೇಶದಲ್ಲಿ ವಾಸಿಸುವ ಮನೋಜಿತ್ ತನ್ನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ. ಆತನ ತಂದೆ ರಾಬಿನ್ ಮಿಶ್ರಾ ಐದು ವರ್ಷಗಳ ಹಿಂದೆ ಆತನೊಂದಿಗಿನ ಸಂಬಂಧವನ್ನು ಮುರಿದುಕೊಂಡು ಬೇರೆಡೆ ವಾಸಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ