ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಗೋಷ್‌ಬಗ್ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ, ಸರಪಂಚ್‌ನನ್ನು ಹತ್ಯೆ ಮಾಡಿದ್ದಾರೆ. ವರದಿಗಳ ಪ್ರಕಾರ, ಸರಪಂಚ್‌ನನ್ನು ದಿವಂಗತ ಮೊಹಮ್ಮದ್ ಸಾದಿಕ್ ಅವರ ಮಗ ಮಂಜೂರ್ ಅಹ್ಮದ್ ಬಾಂಗ್ರೂ ಎಂದು ಗುರುತಿಸಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.
ಕಳೆದ ಮಾರ್ಚ್‌ನಲ್ಲಿ ಸರಪಂಚ್‌ಗಳಾದ ಶಬೀರ್ ಅಹ್ಮದ್ ಮಿರ್, ಸಮೀರ್ ಅಹ್ಮದ್ ಭಟ್ ಮತ್ತು ಮೊಹಮ್ಮದ್ ಯಾಕೂಬ್ ದಾರ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸರಪಂಚ್‌ನ ಹತ್ಯೆಯಲ್ಲಿ ಭಾಗಿಯಾಗಿರುವ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಮಾಡ್ಯೂಲ್ ಅನ್ನು ಭೇದಿಸಿದ ನಂತರ ಮೂವರು ಉಗ್ರಗಾಮಿ ಸಹಚರರನ್ನು ಸಹ ಬಂಧಿಸಲಾಗಿದೆ.
ಇಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗೋಶ್‌ಬುಗ್ ಪಟ್ಟನ್ ಪ್ರದೇಶದಲ್ಲಿ ಸರಪಂಚ್ ಮಂಜೂರ್ ಅಹ್ಮದ್ ಬಂಗ್ರೂ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂಡಿದ್ದಾರೆ. ಸರಪಂಚ್‌ಗೆ ಬುಲೆಟ್ನಿಂದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
#Terrorists fired upon & #killed one Manzoor Ahmad Bangroo (an Independent #Sarpanch) at Goshbugh area of Pattan, #Baramulla. Area has been cordoned off & search to track the involved #terrorists is in progress. Further details shall follow.@JmuKmrPolice
— Kashmir Zone Police (@KashmirPolice) April 15, 2022
ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಭಯೋತ್ಪಾದಕರನ್ನು ಹಿಡಿಯಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Terrorists Encounter: ಕಾಶ್ಮೀರದಲ್ಲಿ ಜ. 1ರಿಂದ 7 ಪಾಕಿಸ್ತಾನಿ ಉಗ್ರರು ಸೇರಿ 14 ಭಯೋತ್ಪಾದಕರ ಎನ್ಕೌಂಟರ್