ಶ್ರೀನಗರ, ಜುಲೈ 30: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಯೋಧರೊಬ್ಬರು ನಾಪತ್ತೆಯಾಗಿದ್ದಾರೆ. ರೈಫಲ್‌ಮ್ಯಾನ್ ಜಾವೇದ್ ಅಹ್ಮದ್ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ಗೆ ಸೇರಿದ್ದು, ಕೆಲವು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ದರು. ಶನಿವಾರ ಸಂಜೆ 6.30ರ ಸುಮಾರಿಗೆ ಅವರು ಮಾರುಕಟ್ಟೆಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಹೊರಟಿದ್ದರು. ಅವರು ಆಲ್ಟೋ ಕಾರನ್ನು ಓಡಿಸುತ್ತಿದ್ದರು, ರಾತ್ರಿ 9 ಗಂಟೆಯಾದರೂ ವಾಪಸ್ ಬಾರದೇ ಇದ್ದಾಗ ಕುಟುಂಬದವರು ಹುಡುಕಾಡಿದ್ದಾರೆ. ಮಾರುಕಟ್ಟೆಯ ಬಳಿ ಕಾರು ಪತ್ತೆಯಾಗಿದ್ದು, ವರದಿಗಳ ಪ್ರಕಾರ ಅದರಲ್ಲಿ ರಕ್ತದ ಕಲೆಗಳಿವೆ.
ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವು ಶಂಕಿತರನ್ನು ಬಂಧಿಸಿದ್ದಾರೆ. 25ರ ಹರೆಯದ ಯೋಧನಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.
ಯೋಧನ ಕುಟುಂಬ ಸದಸ್ಯರು ಆತನನ್ನು ಉಗ್ರರು ಅಪಹರಿಸಿದ್ದಾರೆ ಎಂದು ಶಂಕಿಸಿದ್ದು, ಆತನನ್ನು ಬಿಡುಗಡೆ ಮಾಡುವಂತೆ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.
ಮತ್ತಷ್ಟು ಓದಿ: ಗುಂಡೇಟು ಬಿದ್ದರೂ ಉಗ್ರರ ಜೊತೆ ಕಾದಾಡಿದ ಭಾರತೀಯ ಸೇನೆಯ ಶ್ವಾನ; ವೈರಲ್ ವಿಡಿಯೋ ಇಲ್ಲಿದೆ
“ದಯವಿಟ್ಟು ನಮ್ಮನ್ನು ಕ್ಷಮಿಸಿ, ನನ್ನ ಮಗನನ್ನು ಬಿಡುಗಡೆ ಮಾಡಿ, ನನ್ನ ಮಗ ಜಾವೇದ್‌ನನ್ನು ಬಿಡುಗಡೆ ಮಾಡಿ, ನಾನು ಅವರನ್ನು ಸೈನ್ಯದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ, ಆದರೆ ದಯವಿಟ್ಟು ಅವನನ್ನು ಬಿಡುಗಡೆ ಮಾಡಿ ಎಂದು ಯೋಧನ ತಾಯಿ ಬೇಡಿಕೊಂಡಿದ್ದಾರೆ. ಈ ಹಿಂದೆಯೂ ಈ ಪ್ರದೇಶದಲ್ಲಿ ರಜೆಯ ಮೇಲೆ ಮನೆಯಲ್ಲಿದ್ದ ಹಲವಾರು ಸೈನಿಕರನ್ನು ಉಗ್ರರು ಅಪಹರಿಸಿ ಹತ್ಯೆಗೈದಿದ್ದರು.
VIDEO | Security forces launch a search operation for a missing Army soldier in Jammu and Kashmir’s Kulgam. pic.twitter.com/fvTyO0PhzS
— Press Trust of India (@PTI_News) July 30, 2023
ಅಪಹರಣಕ್ಕೊಳಗಾದ ಯೋಧನ ಪತ್ತೆಗೆ ಭಾರತೀಯ ಸೇನೆ ಮತ್ತು ಪೊಲೀಸರು ಭಾರೀ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರದೇಶವನ್ನು ಸುತ್ತುವರಿದಿದೆ.
ಜಾವೇದ್ ತನ್ನ ಕಾರನ್ನು ಚೋವಲ್ಗಾಮ್‌ಗೆ ದಿನಸಿ ವಸ್ತುಗಳನ್ನು ಖರೀದಿಸಲು ಹೋಗಿದ್ದರು. ಕಾರಿನಲ್ಲಿ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ಕಾರು ಬಾಗಿಲು ಹಾಕಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:44 am, Sun, 30 July 23