AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Crime: 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ, ಹತ್ಯೆ, ನಾಪತ್ತೆಯಾಗಿ ಒಂದು ದಿನದ ಬಳಿಕ ಗೋಣಿಚೀಲದಲ್ಲಿ ಶವ ಪತ್ತೆ

ವಲಸೆ ಕಾರ್ಮಿಕನೊಬ್ಬ 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿ, ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

Kerala Crime: 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ, ಹತ್ಯೆ, ನಾಪತ್ತೆಯಾಗಿ ಒಂದು ದಿನದ ಬಳಿಕ ಗೋಣಿಚೀಲದಲ್ಲಿ ಶವ ಪತ್ತೆ
ಬಾಲಕಿ ಹತ್ಯೆImage Credit source: Onmanorama
ನಯನಾ ರಾಜೀವ್
|

Updated on:Jul 30, 2023 | 12:00 PM

Share

ವಲಸೆ ಕಾರ್ಮಿಕನೊಬ್ಬ 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿ, ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಆರೋಪಿಯು ಬಾಲಕಿಯ ಶವವನ್ನು ಗೋಣಿಚೀಲದಲ್ಲಿ ತುಂಬಿ ಎಸೆದುಬಂದಿದ್ದ, ಒಂದು ದಿನದ ಬಳಿಕ ಶವ ಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಿಹಾರ ಮೂಲದ ದಂಪತಿಯ ಮಗಳು ಸಂಜೆ ವೇಳೆಗೆ ನಾಪತ್ತೆಯಾಗಿದ್ದಳು, ಈ ಆರೋಪಿಯು ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯದಲ್ಲಿ ಬಿಹಾರ ಮೂಲದ ಅಸ್ಪಾಕ್ ಅಸ್ಲಾಂ ಎಂಬಾತ ಬಾಲಕಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಬಳಿಕ ರಾತ್ರಿ 9.30ರ ವೇಳೆಗೆ ಆತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತ ನಶೆಯಲ್ಲಿದ್ದ ಹಾಗಾಗಿ ಸ್ವಲ್ಪ ಸಮಯದ ಬಳಿಕ ಮತ್ತೆ ವಿಚಾರಿಸಲಾಯಿತು.

ಆರೋಪಿ ಭಾನುವಾರ ಬೆಳಗ್ಗೆ ಅಪರಾಧ ಒಪ್ಪಿಕೊಂಡು ಮಗುವನ್ನು ಎಲ್ಲಿಗೆ ಕರೆದೊಯ್ದಿದ್ದೇನೆ ಎಂದು ತೋರಿಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಆರೋಪಿಯು ಬಾಲಕಿಯ ಕಟ್ಟಡದಲ್ಲಿಯೇ ವಾಸವಿದ್ದು, ಜ್ಯೂಸ್ ಕೊಡಿಸುವುದಾಗಿ ಭರವಸೆ ನೀಡಿ ಆಕೆಯನ್ನು ಕರೆದುಕೊಂಡು ಹೋಗಿದ್ದ, ಅಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆಸಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ.

ಮತ್ತಷ್ಟು ಓದಿ: Devanahalli News: ಮದುವೆಯಾಗಿ ಇಬ್ಬರು ಮಕ್ಕಳಿದ್ರೂ ಪರ ಪುರುಷನ ಮೇಲೆ ಮೋಹ; ಗಂಡನಿಂದ ಪತ್ನಿಯ ಬರ್ಬರ ಹತ್ಯೆ

ಮಗುವನ್ನು ಹತ್ಯೆ ಮಾಡಿ ಬಳಿಕ ದೇಹವನ್ನು ಮುಚ್ಚಲು ಕಸ ಹಾಗೂ ಗೋಣಿಚೀಲವನ್ನು ಬಳಕೆ ಮಾಡಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ವಲಸೆ ಕಾರ್ಮಿಕನನ್ನು ಬಂಧಿಸಲಾಯಿತು ಆದರೆ ಆತ ಕುಡಿದ ಅಮಲಿನಲ್ಲಿದ್ದ ಕಾರಣ ವಿಚಾರಣೆ ವಿಳಂಬವಾಯಿತು.

ಸ್ಥಳೀಯರು ಕೂಡ ಸಮೀಪದ ಮಾರುಕಟ್ಟೆ ಪ್ರದೇಶದಲ್ಲಿ ಬಾಲಕಿಯನ್ನು ಆತನೊಂದಿಗೆ ನೋಡಿ ಮಾಹಿತಿ ನೀಡಿದ್ದರು. ಮೃತ ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:59 am, Sun, 30 July 23