Devanahalli News: ಮದುವೆಯಾಗಿ ಇಬ್ಬರು ಮಕ್ಕಳಿದ್ರೂ ಪರ ಪುರುಷನ ಮೇಲೆ ಮೋಹ; ಗಂಡನಿಂದ ಪತ್ನಿಯ ಬರ್ಬರ ಹತ್ಯೆ

ಅವರಿಬ್ಬರದ್ದು ಒಂದು ದಶಕಕ್ಕೂ ಹೆಚ್ಚಿನ ಕಾಲದ ದಾಂಪತ್ಯ ಜೀವನ. ಇದಕ್ಕೆ ಇಬ್ಬರು ಮಕ್ಕಳು ಸಹ ಸಾಕ್ಷಿಯಾಗಿದ್ದು, ಇತರರಿಗೆ ಅವರು ಆದರ್ಶ ದಂಪತಿಗಳಾಗಬೇಕಿದ್ರು. ಆದ್ರೆ, ಪತ್ನಿ ಆಡಿದ ಅದೊಂದು ಪರಸಂಗದ ಪಲ್ಲಂಗದಾಟಕ್ಕೆ ಬೇಸತ್ತ ಗಂಡ ಮದುವೆಯಾದ 12 ವರ್ಷಕ್ಕೆ ಮನೆ ಮಂದಿಯೆಲ್ಲರೂ ಇರುವಾಗಲೇ ಪತ್ನಿಗೆ ಪರಲೋಕದ ದಾರಿ ತೋರಿಸಿದ್ದಾನೆ.

Devanahalli News: ಮದುವೆಯಾಗಿ ಇಬ್ಬರು ಮಕ್ಕಳಿದ್ರೂ ಪರ ಪುರುಷನ ಮೇಲೆ ಮೋಹ; ಗಂಡನಿಂದ ಪತ್ನಿಯ ಬರ್ಬರ ಹತ್ಯೆ
ಆರೋಪಿ ಪತಿ, ಮೃತ ಪತ್ನಿ
Follow us
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 29, 2023 | 7:43 AM

ಬೆಂಗಳೂರು ಗ್ರಾಮಾಂತರ, ಜು.29: ಜಿಲ್ಲೆಯ ದೇವನಹಳ್ಳಿ(Devanahalli) ತಾಲೂಕಿನ ದೊಡ್ಡಸಣ್ಣೆ ಎನ್ನುವ ಗ್ರಾಮ. ಇದು ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣ ಸೇರಿದಂತೆ ದೇವನಹಳ್ಳಿಗೆ ಹೊಂದಿಕೊಂಡಿರುವ ಕಾರಣ ಸಾಕಷ್ಟು ಜನರು ಈ ಗ್ರಾಮದಲ್ಲಿ ಬಾಡಿಗೆ ಮನೆ ಹಾಗೂ ಕೊಠಡಿಗಳನ್ನ ಮಾಡಿ ಹೊರಗಿನಿಂದ ಕೆಲಸ ಹರಸಿ ಬರುವವರಿಗೆ ಬಾಡಿಗೆಗೆ ನೀಡಿದ್ದಾರೆ. ಇದೇ ಗ್ರಾಮದ ಮುನಿಆಂಜಿನಪ್ಪ ಎನ್ನುವವ ಸಹ ಇದೇ ಗ್ರಾಮದಲ್ಲಿ ರಜನಿ ಎಂಬುವವರನ್ನ ಮದುವೆಯಾಗಿ ಅತ್ತೆಯ ಮನೆಯಲ್ಲೆ ಉಳಿದುಕೊಂಡಿದ್ದ. ಜೊತೆಗೆ ಅತ್ತೆಯ ಮನೆಯ ಮೇಲೆಯೆ ಒಂದೆರಡು ರೂಂಗಳನ್ನ ಸಹ ನಿರ್ಮಾಣ ಮಾಡಿದ್ದು, ಅದನ್ನ ಕೆಲಸ ಹರಸಿ ಬಂದಿದ್ದ ಕೆಲ ಯುವಕರಿಗೆ ಬಾಡಿಗೆಗೆ ನೀಡಿದ್ದ. ಇನ್ನು ಇವರಿಗೆ ಆರತಿಗೊಂದು ಕೀರ್ತಿಗೊಂದು ಎಂಬಂತೆ ಇಬ್ಬರು ಮಕ್ಕಳು ಸಹ ಆಗಿದ್ರು. ಇನ್ನೂ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಅಂದುಕೊಳ್ಳುತ್ತಿರುವಾಗಲೆ ಶುಕ್ರವಾರ ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದ್ದು, ಪತಿಯೇ ಪತ್ನಿಯನ್ನ ಹತ್ಯೆ ಮಾಡಿದ್ದ. ಈ ಘಟನೆಯಿಂದ ಇಡೀ ಗ್ರಾಮವೇ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು.

ಹೌದು ಮನೆಯಲ್ಲಿ ಅತ್ತೆ ಮಾವ ಮಕ್ಕಳು ಮತ್ತು ಬಾವಮೈದನ ಜೊತೆಯಲ್ಲೆ ಊಟ ಮಾಡಿ ಮಲಗುವುದಕ್ಕೆಂದು ಬೆಡ್ ರೂಂ ಗೆ ಹೋಗಿದ್ದ ಮುನಿಆಂಜಿನಪ್ಪ ಮತ್ತು ರಜನಿ ದಂಪತಿಯ ಕೊಠಡಿಯಿಂದ ಒಂದು ಕ್ಷಣ ಜೋರಾದ ಕೂಗಾಟ ಚೀರಾಟ ಕೇಳಿ ಬಂದಿದೆ. ಹೀಗಾಗಿ ಮನೆಯಲ್ಲಿದ್ದ ಅತ್ತೆ ಮಾವ ಹಾಗೂ ಬಾವಮೈದ ಗಾಬರಿಗೊಂಡು, ರೂಮ್​ನ ಬಾಗಿಲು ಮುರಿದ ಮನೆಯವರು ಹಾಗೂ ಅಕ್ಕ ಪಕ್ಕದವರು ಒಳ ನುಗ್ಗಿದ್ದಾರೆ. ಈ ವೇಳೆ ಕೊಠಡಿಯೊಳಗೆ ಹೋಗಿದ್ದ ರಜನಿ ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದು, ಗಂಡ ಕೈಯಲ್ಲಿ ಕಬ್ಬಿಣದ ಕತ್ತರಿ ಹಿಡಿದು ಕೊಲೆಗಾರನಾಗಿ ನಿಂತಿದ್ದ.

ಇದನ್ನೂ ಓದಿ:ಮದ್ಯದ ಪಾರ್ಟಿ ಬಳಿಕ ಕೊಲೆ? ಜನನಿಬಿಡ ಪ್ರದೇಶದಲ್ಲಿ ನಿರ್ಮಾಣ ಕಟ್ಟಡದಲ್ಲಿ ವಿವಸ್ತ್ರಗೊಳಿಸಿ ಕೈಕಾಲು ಕಟ್ಟಿ ವ್ಯಕ್ತಿಯ ಹತ್ಯೆ

ಇನ್ನು ಮಗಳು ಸಾವು ಬದುಕಿನ ನಡುವೆ ನರಳಾಡುತ್ತಿದ್ದನ್ನ ಕಂಡ ಮನೆವರು ಕೂಡಲೆ ಕಾರಿನಲ್ಲಿ ಆಕೆಯನ್ನ ದೇವನಹಳ್ಳಿಯ ಖಾಸಗಿ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಅಷ್ಟರಲ್ಲೆ ತೀವ್ರ ರಕ್ತ ಸ್ರಾವದಿಂದ ಬಳಲಿದ ರಜನಿ ನೋಡ ನೋಡುತ್ತಿದ್ದಂತೆ ಮನೆಯವರ ಕಣ್ಮುಂದೆಯೇ ಕೊನೆಯುಸಿರೆಳೆದಿದ್ದಾಳೆ.

ಬಳಿಕ ಗ್ರಾಮಸ್ಥರು ದೇವನಹಳ್ಳಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಹೀಗಾಗಿ ದೇವನಹಳ್ಳಿ ಪೊಲೀಸರು ಕೂಡಲೆ ಸ್ಥಳಕ್ಕೆ ದೌಡಾಯಿಸಿ ಬಂದಿದ್ದು, ಮನೆಯಲ್ಲಿದ್ದ ರಕ್ತ ಸಿಕ್ತವಾದ ಕತ್ತರಿ ಹಾಗೂ ಕೊಲೆ ಮಾಡಿದ್ದ ಗಂಡ ಮುನಿ ಆಂಜಿನಪ್ಪನನ್ನ ವಶಕ್ಕೆ ಪಡೆದು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದಾರೆ. ಇನ್ನು ದುಃಖದ ಮಡುವಿನಲ್ಲಿದ್ದ ರಜನಿಯ ಪೋಷಕರು ಅಳಿಯ ಜೈಲು ಪಾಲಾಗಿದ್ರೆ, ಮಗಳು ದುರಂತ ಅಂತ್ಯ ಕಂಡಳಲ್ಲ ಎನ್ನುವ ನೋವಿನಲ್ಲೆ ಮೃತದೇಹವನ್ನ ಮನೆಗೆ ತಂದು ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಆರೋಪಿಯನ್ನ ವಿಚಾರಿಸಿದ ಪೊಲೀಸರಿಗೆ ಬೆಳಕಿಗೆ ಬಂದಿದ್ದು ಪತ್ನಿಯ ಅಕ್ರಮ ಸಂಬಂಧದ ವಿಚಾರ

ಕೊಲೆಯಾದ ರಜನಿಗೆ 12 ವರ್ಷಗಳಿಂದೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ತಿಂದು ಉಂಡು ಮಲಗೋದಕ್ಕೆ ಸೇರಿದಂತೆ ಯಾವುದಕ್ಕೂ ಕಡಿಮೆಯಿಲ್ಲದೆ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗಿತ್ತು. ಅಲ್ಲದೆ ಗಂಡ ಮುನಿ ಆಂಜಿನಪ್ಪ ಬೆಳಗಾದ್ರೆ, ಮನೆಯಿಂದ ತೋಟಕ್ಕೆ ತೆರಳಿ ಕೃಷಿ ಕೆಲಸದಲ್ಲಿ ನಿರತನಾಗುತ್ತಿದ್ದ. ಸಂಜೆ ಮನೆಗೆ ವಾಪಸ್ ಆಗುತ್ತಿದ್ದಂತೆ. ಮನೆಯಲ್ಲಿಯೇ ಇರುತ್ತಿದ್ದ ಪತ್ನಿ ರಜನಿ, ಮನೆಯ ಮೇಲಿದ್ದ ಕೊಠಡಿಯಲ್ಲಿ ಬಾಡಿಗೆಗೆ ಬಂದಿದ್ದವರ ಜೊತೆ ಸಲುಗೆಯಿಂದಿದ್ದು, ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಳಂತೆ. ಬಳಿಕ ಇದೆ ಮುಂದೆ ರಜನಿಗೆ ಬಾಡಿಗೆ ಕೊಠಡಿಯಲ್ಲಿದ್ದ ಯುವಕನ ಜೊತೆ ಅನೈತಿಕ ಸಂಬಂದಕ್ಕೂ ತಿರುಗಿದೆ. ಹೀಗಾಗಿ ಸಾಕಷ್ಟು ಭಾರಿ ಪತ್ನಿಗೆ ಬುದ್ದಿವಾದ ಹೇಳಿದ್ರು, ಕೇಳದ ಹಿನ್ನೆಲೆಯಲ್ಲಿ ಬಾಡಿಗೆಗಿದ್ದ ಯುವಕನಿಗೆ ಕೊಠಡಿ ಖಾಲಿ ಮಾಡಿಸಿದ್ದರಂತೆ.

ಇದನ್ನೂ ಓದಿDakshina Kannada: ಚಿನ್ನಕ್ಕಾಗಿ ಅಜ್ಜ-ಅಜ್ಜಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಂಗಳೂರಿನಲ್ಲಿ ಸಿಕ್ಕಿಬಿದ್ದ

ಈ ಕುರಿತು ರಾಜಿ ಪಂಚಾಯತಿ ಮಾಡಿದ ನಂತರವು ರಜನಿ ಅನೈತಿಕ ಸಂಬಂಧ ಹೊಂದಿದ್ದ ಯುವಕನ ಜೊತೆ ಮನೆ ಬಿಟ್ಟು ಹೋಗಿದ್ದು, ನಂತರ ಎಲ್ಲರೂ ಸೇರಿ ಇಬ್ಬರಿಗೂ ಬುದ್ದಿವಾದ ಹೇಳಿ ಮನೆಯಲ್ಲಿರಿಸಿದ್ದರಂತೆ. ಹೀಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದ ಗಂಡ ಮುನಿ ಆಂಜಿನಪ್ಪ ಮುಂದೆಯಾದರೂ ಸರಿ ಹೋಗುತ್ತಾಳೆ ಅಂದುಕೊಂಡಿದ್ದು, ಸ್ವಲ್ಪ ದಿನದ ಮಟ್ಟಿಗೆ ಸುಮ್ಮನಿದ್ದದನ್ನ ಕಂಡು ಎಲ್ಲ ಸರಿಹೋಗಿದೆ ಎಂದು ಕೊಂಡಿದ್ದಾನೆ. ಆದ್ರೆ, ಗಂಡ ಇಲ್ಲದಿದ್ದಾಗ ಪತ್ನಿ ಪೋನ್​ನಲ್ಲಿ ನಿರಂತರವಾಗಿ ಬ್ಯುಸಿಯಾಗಿದ್ದಳಂತೆ. ಈ ಕುರಿತು ಅಂದು ಊಟ ಮಾಡಿ ರೂಮ್​ಗೆ ಹೋದ ಇಬ್ಬರ ನಡುವೆ ಜಗಳವಾಗಿ ರೊಚಿಗೆದ್ದ ಗಂಡ ಪಕ್ಕದಲ್ಲಿದ್ದ ಕಬ್ಬಿಣದ ಕತ್ತರಿಯನ್ನ ಕೈಗೆತ್ತಿಕೊಂಡು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ರಜನಿಗೆ ಹೊಟ್ಟೆ ಕೈ ಭುಜ ಸೇರಿದಂತೆ ಸಿಕ್ಕ ಸಿಕ್ಕ ಕಡೆಯಲೆಲ್ಲ ಕತ್ತರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.

ಇನ್ನು ಗಂಡ ಮಕ್ಕಳಿದ್ದರೂ ಪರ ಪುರುಷನ ಜೊತೆ ಸಂಬಂಧವಿಟ್ಟುಕೊಂಡಿದಕ್ಕೆ ಪತ್ನಿ ದುರಂತ ಅಂತ್ಯ ಕಂಡರೆ, ಕೊಲೆ ಮಾಡಿದ ಕಾರಣಕ್ಕೆ ಗಂಡ ಸೆರೆಮನೆ ಸೇರಿದ್ದಾನೆ. ಈ ನಡುವೆ ಅಪ್ಪ ಅಮ್ಮನ ಪ್ರೀತಿಯಲ್ಲಿ ಬೆಳೆಯ ಬೇಕಿದ್ದ ಮಕ್ಕಳು ಮಾತ್ರ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನ ದೂರ ಮಾಡಿಕೊಂಡು ತಬ್ಬಲಿಗಳಾಗಿದ್ದು ಮಾತ್ರ ನಿಜಕ್ಕೂ ದುರಂತ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ