ಜಮ್ಮು ಕಾಶ್ಮೀರದ ಉಧಮ್ಪುರ್ ಜಿಲ್ಲೆಯಲ್ಲಿ ಇಬ್ಬರು ಪೊಲೀಸರು ಶವವಾಗಿ ಪತ್ತೆಯಾಗಿದ್ದಾರೆ. ದೇಹದ ತುಂಬೆಲ್ಲಾ ಗುಂಡುಗಳಿಂದಾದ ಗುರುತುಗಳಿರುವುದು ಕಂಡುಬಮದಿದೆ. ಬೆಳಗ್ಗೆ 6.30 ರ ಸುಮಾರಿಗೆ ಜಿಲ್ಲಾ ಕೇಂದ್ರದ ಕಾಳಿ ಮಾತಾ ದೇವಸ್ಥಾನದ ಹೊರಗೆ ಪೊಲೀಸ್ ವ್ಯಾನ್‌ನೊಳಗೆ ಪೊಲೀಸರ ದೇಹಗಳು ಬಿದ್ದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಎಸ್‌ಎಸ್‌ಪಿ ಉಧಂಪುರ ಅಮೋದ್ ನಾಗ್‌ಪುರೆ ಮಾತನಾಡಿ, ಸೋಪೋರ್‌ನಿಂದ ತಲ್ವಾರದಲ್ಲಿರುವ ತರಬೇತಿ ಕೇಂದ್ರದ ಕಡೆಗೆ ಹೋಗುತ್ತಿದ್ದರು, ಬೆಳಗ್ಗೆ 6.30ಕ್ಕೆ ಈ ಘಟನೆ ನಡೆದಿದೆ ಎಂದಿದ್ದಾರೆ. ಎಕೆ-47 ರೈಫಲ್ನಿಂದ ಗುಂಡು ಹಾರಿರುವುದು ತಿಳಿದುಬಂದಿದೆ.
#WATCH | J&K: SSP Udhampur Amod Nagpure says, “The incident happened at 6.30 am. They were going from Sopore towards the training centre in Talwara. Police officers have reached the spot. As per the initial investigation, it has been proven that AK-47 rifle was used in the… https://t.co/Tynt5gjWQo pic.twitter.com/YEpwEG0ZYT
— ANI (@ANI) December 8, 2024
ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ, ಅವರನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾರ್ಯವಿಧಾನಗಳಿಗಾಗಿ ಜಿಎಂಸಿ ಉಧಂಪುರಕ್ಕೆ ಕರೆದೊಯ್ಯಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ