AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮೆ ಹಣಕ್ಕಾಗಿ ಭಿಕ್ಷುಕನ ಕೊಂದು, ದೇಹದ ಬಳಿ ತನ್ನ ಐಡಿ ಇಟ್ಟ ವ್ಯಕ್ತಿ

ವ್ಯಕ್ತಿಯೊಬ್ಬ ವಿಮೆ ಹಣ ಪಡೆಯಲು ಭಿಕ್ಷುಕನನ್ನು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭಿಕ್ಷುಕನನ್ನು ವ್ಯಕ್ತಿಯೊಬ್ಬ ಟ್ರಕ್​ನಿಂದ ಗುದ್ದಿಸಿ ಹತ್ಯೆ ಮಾಡಿದ್ದಾನೆ. ತಾನೇ ಸತ್ತಿದ್ದೇನೆಂದು ಬಿಂಬಿಸಲು ಶವದ ಪಕ್ಕದಲ್ಲಿ ತನ್ನ ಗುರುತಿನ ಚೀಟಿಯನ್ನು ಇಟ್ಟಿದ್ದ.

ವಿಮೆ ಹಣಕ್ಕಾಗಿ ಭಿಕ್ಷುಕನ ಕೊಂದು, ದೇಹದ ಬಳಿ ತನ್ನ ಐಡಿ ಇಟ್ಟ ವ್ಯಕ್ತಿ
ಭಿಕ್ಷುಕ-ಸಾಂದರ್ಭಿಕ ಚಿತ್ರImage Credit source: Times Of India
ನಯನಾ ರಾಜೀವ್
|

Updated on: Dec 08, 2024 | 8:20 AM

Share

ವ್ಯಕ್ತಿಯೊಬ್ಬ ವಿಮೆ ಹಣ ಪಡೆಯಲು ಭಿಕ್ಷುಕನನ್ನು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭಿಕ್ಷುಕನನ್ನು ವ್ಯಕ್ತಿಯೊಬ್ಬ ಟ್ರಕ್​ನಿಂದ ಗುದ್ದಿಸಿ ಹತ್ಯೆ ಮಾಡಿದ್ದಾನೆ. ತಾನೇ ಸತ್ತಿದ್ದೇನೆಂದು ಬಿಂಬಿಸಲು ಶವದ ಪಕ್ಕದಲ್ಲಿ ತನ್ನ ಗುರುತಿನ ಚೀಟಿಯನ್ನು ಇಟ್ಟಿದ್ದ.

ಬನ್ಸ್ವಾರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ನರೇಂದ್ರ ಸಿಂಗ್ ರಾವತ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ತುಂಬಾ ಸಾಲ ಮಾಡಿದ್ದು, ಆರ್ಥಿಕ ಸಂಕಷ್ಟದಿಂದ ಪಾರಾಗಲು ಯೋಜನೆ ರೂಪಿಸಿದ್ದರು. ಡಿಸೆಂಬರ್ 1 ರಂದು, ಪೊಲೀಸರಿಗೆ ಜರ್ಬಡಿ ಗ್ರಾಮದ ಬಳಿ ವಿಕೃತ ಶವ ಪತ್ತೆಯಾಗಿತ್ತು. ಹತ್ತಿರದಲ್ಲಿ ಪತ್ತೆಯಾದ ಬ್ಯಾಗ್‌ನಲ್ಲಿ ನರೇಂದ್ರ ಸಿಂಗ್‌ಗೆ ಸೇರಿದ ಗುರುತಿನ ದಾಖಲೆಗಳಿತ್ತು.

ದಾಖಲೆಗಳ ಆಧಾರದ ಮೇಲೆ, ಪೊಲೀಸರು ರಾವತ್ ಅವರ ಕುಟುಂಬವನ್ನು ಪತ್ತೆಹಚ್ಚಿ ಸಂಪರ್ಕಿಸಿದರು, ಆದರೆ ಕುಟುಂಬದವರು ಇದು ತಮ್ಮ ಮನೆಯವರ ದೇಹವಲ್ಲ ಎಂದು ಹೇಳಿದರು. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಪೊಲೀಸರು ಅಂತಿಮವಾಗಿ ನರೇಂದ್ರ ಸಿಂಗ್, ಭೈರುಲಾಲ್ ಎಂಬ ವ್ಯಕ್ತಿ ಮತ್ತು ಇಬ್ರಾಹಿಂ ಎಂಬ ಟ್ರಕ್ ಡ್ರೈವರ್ ಇಬ್ಬರೂ ಸೇರಿ ಮಾಡಿರುವ ಪಿತೂರಿಯನ್ನು ಬಯಲಿಗೆಳೆದಿದ್ದಾರೆ.

ಮತ್ತಷ್ಟು ಓದಿ: ಟಾಯ್ಲೆಟ್​ನಲ್ಲಿ ಫ್ಲಶ್ ಮಾಡಿಲ್ಲವೆಂದು ಶುರುವಾದ ಮನೆ ಬಾಡಿಗೆದಾರರ ಜಗಳ ಕೊಲೆಯಲ್ಲಿ ಅಂತ್ಯ!

ವಿಚಾರಣೆ ವೇಳೆ, ಭೈರುಲಾಲ್ ಮೃತ ವ್ಯಕ್ತಿ ನರೇಂದ್ರ ಸಿಂಗ್ ಅಲ್ಲ, ತೂಫಾನ್ ಸಿಂಗ್ ಎಂಬ ನಿರಾಶ್ರಿತ ವ್ಯಕ್ತಿ ಮತ್ತು ಭಿಕ್ಷುಕ ಎಂದು ಒಪ್ಪಿಕೊಂಡರು. ನ.30ರಂದು ಮೂವರೂ ಆರೋಪಿಗಳು ತೂಫಾನ್ ಸಿಂಗ್‌ಗೆ ಗುಜರಾತ್‌ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ, ಪ್ರಜ್ಞೆ ತಪ್ಪುವವರೆಗೂ ಮದ್ಯ ಕುಡಿಸಿ, ನಂತರ ಆತನನ್ನು ಹೆದ್ದಾರಿಯಲ್ಲಿ ನಿಲ್ಲಿಸಿದ್ದರು.

ಇಬ್ರಾಹಿಂ ತೂಫಾನ್‌ನ ದೇಹದ ಮೇಲೆ ಟ್ರಕ್ ಹತ್ತಿಸಿದ್ದ ತಕ್ಷಣವೇ ಆತ ಸಾವನ್ನಪ್ಪಿದ್ದ. ಆಗ ನರೇಂದ್ರ ಸಿಂಗ್ ಶವದ ಬಳಿ ತನ್ನದೇ ಗುರುತಿನ ದಾಖಲೆಗಳನ್ನು ಇಟ್ಟು ತಲೆಮರೆಸಿಕೊಂಡಿದ್ದ.

ಭೈರುಲಾಲ್ ಮತ್ತು ಇಬ್ರಾಹಿಂ ಅವರನ್ನು ಕೊಲೆ ಮತ್ತು ಪಿತೂರಿಯ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ, ಆದರೆ ನರೇಂದ್ರ ಸಿಂಗ್ ತಲೆಮರೆಸಿಕೊಂಡಿದ್ದಾನೆ. ನರೇಂದ್ರ ಸಿಂಗ್ ಅವರನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದ್ದು, ಪೊಲೀಸರು ಪ್ರಕರಣದ ಇತರ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ