ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಜಮ್ಮು ಕಾಶ್ಮೀರದ 11 ಸರ್ಕಾರಿ ನೌಕರರು ವಜಾ

ಈ 11 ಸರ್ಕಾರಿ ನೌಕರರು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಇವರ ಪೈಕಿ ಅನಂತ್​ನಾಗ್​ನ ಇಬ್ಬರು ಶಿಕ್ಷಕರು, ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ ಎಂದು ಹೇಳಲಾಗಿದೆ.

ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಜಮ್ಮು ಕಾಶ್ಮೀರದ 11 ಸರ್ಕಾರಿ ನೌಕರರು ವಜಾ
ಸೈಯದ್ ಸಲಾವುದ್ದೀನ್
Edited By:

Updated on: Jul 10, 2021 | 7:53 PM

ಶ್ರೀನಗರ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಜಮ್ಮು ಕಾಶ್ಮೀರದ 11 ಸರ್ಕಾರಿ ನೌಕರರನ್ನು ವಜಾಗೊಳಿಸಲಾಗಿದೆ. ಹಿಜ್ಬುಲ್ ಸಂಘಟನೆ ಮುಖ್ಯಸ್ಥ ಸೈಯದ್ ಸಲಾವುದ್ದೀನ್​ನ ಮಕ್ಕಳಿಬ್ಬರನ್ನು ಸೇರಿ ಒಟ್ಟು 11 ನೌಕರರನ್ನು ವಜಾಗೊಳಿಸಲಾಗಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ 11 ಜನರನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ 11 ಸರ್ಕಾರಿ ನೌಕರರು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಇವರ ಪೈಕಿ ಅನಂತ್​ನಾಗ್​ನ ಇಬ್ಬರು ಶಿಕ್ಷಕರು, ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ವಜಾಗೊಂಡವರಲ್ಲಿ ನಾಲ್ವರು ಸಿಬ್ಬಂದಿ ಶಿಕ್ಷಣ ಇಲಾಖೆ, ಕೃಷಿ, ಕೌಶಲ ಅಭಿವೃದ್ಧಿ, ವಿದ್ಯುತ್ ಇಲಾಖೆ ಮತ್ತು ಆರೋಗ್ಯ ಇಲಾಖೆಗಳಿಗೂ ಸೇರಿದ ಸಿಬ್ಬಂದಿಯೂ ಸೇರಿದ್ದಾರೆ. ವಜಾಗೊಂಡ 11 ಸಿಬ್ಬಂದಿ ಪೈಕಿ ನಾಲ್ವರು ಅನಂತ್​ನಾಗ್ ಜಿಲ್ಲೆಯವರು, 3 ಬದ್ಗಾಮ್ , ಶ್ರೀನಗರ, ಪುಲ್ವಾಮಾ, ಬಾರಾಮುಲ್ಲಾ, ಕುಪ್ವಾರಾ ಪ್ರಾಂತ್ಯಗಳ ತಲಾ ಓರ್ವ ಸಿಬ್ಬಂದಿ ಸೇರಿದ್ದಾರೆ.

 

ಇದನ್ನೂ ಓದಿ: 

ಟಾಟಾ ಮೋಟಾರ್ಸ್- ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಪಾಲುದಾರಿಕೆಯಲ್ಲಿ ಆಕರ್ಷಕ ಸಾಲ ಯೋಜನೆ

ಆಯುರ್ವೇದ ಕ್ಷೇತ್ರದ ದಿಗ್ಗಜ ವೈದ್ಯ, ಶತಾಯುಷಿ ಪಿ.ಕೆ.ವಾರಿಯರ್​ ಇನ್ನಿಲ್ಲ; ದೇಶದ ಹಲವು ವಿವಿಐಪಿಗಳಿಗೆ ಚಿಕಿತ್ಸೆ ನೀಡಿದ್ದರು

(Jammu Kashmir govt sacked11 employees for anti India activities)