ದೆಹಲಿ: ಜೆಇಇ ಮುಖ್ಯ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದು, ಜುಲೈ 20ರಿಂದ ಜುಲೈ 25ರವರೆಗೆ ಹಾಗೂ ಜುಲೈ 27ರಿಂದ ಆಗಸ್ಟ್ 2ರವರೆಗೆ ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ. ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. ಪರೀಕ್ಷೆಗಳಿಗೆ ಹಾಜರಾಗಲು ಅರ್ಜಿ ನಮೂನೆಗಳು ಇಂದಿನಿಂದಲೇ (ಜುಲೈ 6) ದೊರೆಯಲಿವೆ ಎಂದು ಅವರು ವಿದ್ಯಾರ್ಥಿಗಳ ಜತೆಗೆ ನಡೆಸಿದ ನೇರ ಸಂವಾದದ ಸಮಯದಲ್ಲಿ ಮಾಹಿತಿ ನೀಡಿದರು. ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕೊವಿಡ್ ತಡೆ ಮತ್ತು ಅಗತ್ಯ ಕಟ್ಟುನಿಟ್ಟಿನ ಕ್ರಮಗಳ ಜತೆಗೆ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸಹ ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದರು.
20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಜೆಇಇ 2021ರ ಮುಖ್ಯಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ 12 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದಾರೆ. ಇನ್ನೂ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕಾಯುತ್ತಿದ್ದಾರೆ.
#JEEMains2021 to be conducted from July 20th to 25th and July 27th to August 2nd, 2021. pic.twitter.com/hjpBEqjFc9
— ANI (@ANI) July 6, 2021
JEE Main exam Session 3 will be conducted from 20th July to 25th July. The fourth session of JEE exams will be held from 27th July to August 2nd: Union Education Minister Ramesh Pokhriyal Nishank
(File photo) pic.twitter.com/Fowv57mklO
— ANI (@ANI) July 6, 2021
ಜೆಇಇ ಮೊದಲ ಹಂತದ ಪರೀಕ್ಷೆ ಫೆಬ್ರವರಿ ತಿಂಗಳಲ್ಲಿಯೂ, ಎರಡನೇ ಹಂತದ ಪರೀಕ್ಷೆ ಮಾರ್ಚ್ ತಿಂಗಳಲಲ್ಇಯೂ ನಡೆಸಲಾಗಿತ್ತು. ಆದರೆ ಕೊವಿಡ್ ಸೋಂಕು ಹೆಚ್ಚಾದ ಕಾರಣ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ:
2nd PUC Results 2021: ದ್ವಿತೀಯ ಪಿಯುಸಿ ಅಂಕ ನಿಗದಿ ಹೇಗೆ? ವಿದ್ಯಾರ್ಥಿಗಳೇ, ತಪ್ಪದೇ ಈ ಸುದ್ದಿ ಓದಿ
SSLC Exams 2021: ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡುವಂತೆ ಕೋರಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ
(JEE Exam 2021 Date announced July 20 to 25 and July 27 to August 2)
Published On - 7:47 pm, Tue, 6 July 21