ಪೊಲೀಸರಿಂದ ತಪ್ಪಿಸಿಕೊಳ್ಳಲು 6 ಸೈಬರ್ ಅಪರಾಧಿಗಳು ನದಿಗೆ ಹಾರಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿರುವ ಆರು ಮಂದಿಯನ್ನು ಇತ್ತೀಚೆಗೆ ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಗಮನಾರ್ಹವಾಗಿ, ಅಧಿಕಾರಿಗಳು ಬಂಧಿಸಲು ಶಂಕಿತರನ್ನು ಬೆನ್ನಟ್ಟುವಾಗ ನದಿಯನ್ನು ದಾಟಬೇಕಾಯಿತು.
ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸ್ ತಂಡವು ಸಾಮಾನ್ಯ ಬಟ್ಟೆಗಳನ್ನು ಧರಿಸಿ, ಬರಾಕರ್ ನದಿಯ ದಡದಲ್ಲಿ ಸೈಬರ್ ಅಪರಾಧಿಗಳಿಗೆ ಬಲೆ ಬೀಸಿತ್ತು. ಅವರು ಪೊಲೀಸ್ ಅಧಿಕಾರಿಗಳು ಎಂದು ತಿಳಿಯುತ್ತಿದ್ದಂತೆ ಕ್ರಿಮಿನಲ್ಗಳು ನದಿಗೆ ಹಾರಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಅಧಿಕಾರಿಗಳು ಅವರನ್ನು ಬೆನ್ನಟ್ಟಿ ಎಲ್ಲ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ವಿವಿಧ ಪ್ರದೇಶಗಳಲ್ಲಿ ಆಯಕಟ್ಟಿನ ದಾಳಿ ನಡೆಸಿದ ನಂತರ ಬಂಧಿಸಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿಗಳಿಂದ 8,29,600 ರೂಪಾಯಿ ನಗದು, 12 ಮೊಬೈಲ್ ಫೋನ್‌ಗಳು, 21 ಎಟಿಎಂ ಕಾರ್ಡ್‌ಗಳು, 18 ಸಿಮ್ ಕಾರ್ಡ್‌ಗಳು, 12 ಪಾಸ್‌ಬುಕ್‌ಗಳು, ಆರು ಚೆಕ್‌ಬುಕ್‌ಗಳು, ನಾಲ್ಕು ಪ್ಯಾನ್ ಕಾರ್ಡ್‌ಗಳು ಮತ್ತು ಎರಡು ಆಧಾರ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಾರ್ಖಂಡ್‌ನ ಗಿರಿದಿಹ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಂಧಿತ ಸೈಬರ್ ಅಪರಾಧಿಗಳು ಆ್ಯಪ್‌ಗಳ ಮೂಲಕ ನಗ್ನ ವೀಡಿಯೊ ಕರೆಗಳನ್ನು ಮಾಡುವ ಮೂಲಕ ವಂಚನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ತಮ್ಮ ಸಂತ್ರಸ್ತರನ್ನು ಬ್ಲ್ಯಾಕ್‌ಮೇಲ್ ಮಾಡಲು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: 11 ತಿಂಗಳಲ್ಲಿ 16 ಸಾವಿರ ಸೈಬರ್ ಪ್ರಕರಣಗಳು ದಾಖಲು! ಈ ವರ್ಷ ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ ಸಾಧ್ಯತೆ
ಪೌಷ್ಟಿಕಾಂಶ ಟ್ರ್ಯಾಕರ್ ಆ್ಯಪ್ ಮೂಲಕ ಹೆರಿಗೆ ಸೌಲಭ್ಯಗಳ ಸುಳ್ಳು ಭರವಸೆ ನೀಡಿ ವಂಚಿಸುತ್ತಿದ್ದರು. ಮಕ್ಕಳ ಕಳ್ಳತನ ವದಂತಿ, ಸೇರಿದಂತೆ ಹಲವು ಸುದ್ದಿಗಳನ್ನು ಈ ಶಂಕಿತ ಕ್ರಿಮಿನಲ್ಗಳು ಹಬ್ಬಿಸುತ್ತಿದ್ದರು, ಈ ನಡುವೆ ಸ್ಥಳೀಯರಿಂದಲೂ ಪೊಲೀಸರು ಸವಾಲನ್ನು ಎದುರಿಸಬೇಕಾಯಿತು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಪೊಲೀಸರು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ