ಮಯಾವತಿ ಉತ್ತರಾಧಿಕಾರಿಯಾಗಿ ನೇಮಕವಾದ ಆಕಾಶ್ ಆನಂದ್ ಯಾರು? ಇಲ್ಲಿದೆ ವಿವರ

Who is Akash Anand: ಬಿಎಸ್‌ಪಿ ಪಕ್ಷದ ತಮ್ಮ ಉತ್ತರಾಧಿಕಾರಿ ಆಕಾಶ್ ಆನಂದ್ ಎಂದು ಮಾಯಾವತಿ ಘೋಷಿಸಿದ್ದಾರೆ. ಇಂದು(ಡಿಸೆಂಬರ್ 10) ನಡೆದ ಸಭೆಯಲ್ಲಿ ಮಾಯಾವತಿ ಅವರು ಪಕ್ಷದ ಎಲ್ಲಾ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ರಾಜ್ಯಗಳ ಪ್ರಮುಖರನ್ನು ಆಹ್ವಾನಿಸಿ ಮಹತ್ವದ ಘೋಷಣೆ ಮಾಡಿದ್ದಾರೆ. ಹಾಗಾದ್ರೆ, ಮಯಾವತಿ ಉತ್ತರಾಧಿಕಾರಿ ಆಕಾಶ್ ಆನಂದ್ ಯಾರು? ಎನ್ನುವ ವಿವರ ಇಲ್ಲಿದೆ.

ಮಯಾವತಿ ಉತ್ತರಾಧಿಕಾರಿಯಾಗಿ ನೇಮಕವಾದ ಆಕಾಶ್ ಆನಂದ್ ಯಾರು? ಇಲ್ಲಿದೆ ವಿವರ
ಮಾಯಾವತಿ-ಆಕಾಶ್ ಆನಂದ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Dec 10, 2023 | 5:49 PM

ನವದೆಹಲಿ, (ಡಿಸೆಂಬರ್ 10): ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ(Mayawati) ಅವರು ಆಕಾಶ್ ಆನಂದ್ (Akash Anand)ಅವರನ್ನು ತಮ್ಮ ಉತ್ತರಾಧಿಕಾರಿ (successor)ಎಂದು ಘೋಷಿಸಿದ್ದಾರೆ.‌ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ಇಂದು(ಡಿಸೆಂಬರ್ 10) ನಡೆದ ಪಕ್ಷದ ಸಭೆಯಲ್ಲಿ ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಇಂದು ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಾಲ್ಕು ರಾಜ್ಯಗಳ ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಕಾರ್ಯತಂತ್ರವನ್ನು ನಿರ್ಧರಿಸಲಾಗಿದೆ. ಇದೇ ವೇಳೆ ಲೋಕಸಭೆ ಚುನಾವಣೆಗೆ ಹೆಚ್ಚಯ ಸ್ಥಾನಗಳನ್ನು ಗೆಲ್ಲುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: ಬಿಎಸ್​ಪಿಗೆ ತನ್ನ ಸೋದರಳಿಯನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ ಮಾಯಾವತಿ

ಯಾರು ಈ ಆಕಾಶ್ ಆನಂದ್?

ಮಾಯಾವತಿ ಅವರ ಸೋದರಳಿಯ ಆಕಾಶ್ ಆನಂದ್ ಲಂಡನ್‌ನಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಓದಿದ್ದಾರೆ. ಆಕಾಶ್ ರಾಜಕೀಯ ಪ್ರವೇಶಿಸಿದ್ದು 2017ರಲ್ಲಿ , ಸಹರಾನ್‌ಪುರ ಸಮಾವೇಶದಲ್ಲಿ ಮೊದಲ ಬಾರಿಗೆ ಮಾಯಾವತಿಯೊಂದಿಗೆ ಆಕಾಶ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು‌. ಮಾಯಾವತಿ ಅವರು 2017 ರಲ್ಲಿ ದೊಡ್ಡ ಸಮಾವೇಶ ನಡೆಸುವ ಮೂಲಕ ಆಕಾಶ್ ಆನಂದ್ ಅವರನ್ನು ರಾಜಕೀಯಕ್ಕೆ ಕರೆತರುವುದಾಗಿ ಘೋಷಿಸಿದ್ದರು. ಈ ಹಿಂದೆ ಆಕಾಶ್ ಅವರು ಬಿಎಸ್ಪಿ ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಅಲ್ಲದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ಆಕಾಶ್ ಆನಂದ್ ಮಾಯಾವತಿಯ ಬಹುತೇಕ ಎಲ್ಲಾ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಮಾಯಾವತಿ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.

ಬಹುಜನ ಸಮಾಜ ಪಕ್ಷವು ತನ್ನ ಕಳೆದುಹೋದ ಜನಪ್ರಿಯತೆಯನ್ನು ಮರಳಿ ಪಡೆಯಲು ಮತ್ತೊಮ್ಮೆ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ. ಪಕ್ಷದಲ್ಲಿ ನಿಷ್ಕ್ರಿಯ ನಾಯಕರನ್ನು ಬದಲಾವಣೆ ಮಾಡುವ ಚಿಂತನೆ ನಡೆಯುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಅತ್ಯಧಿಕ‌ ಸ್ಥಾನಗಳನ್ನು ಗೆಲ್ಲಲು ಯೋಜನೆ‌ ಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ