Jharkhand: ಮಗ ಪ್ರೀತಿ ಮಾಡಿದ್ದ ಯುವತಿಯನ್ನು ಅರೆ ಬೆತ್ತಲೆಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪೋಷಕರು

ಮಗ ಪ್ರೀತಿ ಮಾಡಿದ್ದಾನೆಂಬ ಕೋಪದಲ್ಲಿ ಆತನ ಪೋಷಕರು ಯುವತಿಯನ್ನು ಅರೆ ಬೆತ್ತಲೆಗೊಳಿಸಿ ಥಳಿಸಿರುವ ಅಮಾನವೀಯ ಘಟನೆ ಜಾರ್ಖಂಡ್​ನ ಗಿರಿದಿಹ್​ನಲ್ಲಿ ನಡೆದಿದೆ.

Jharkhand: ಮಗ ಪ್ರೀತಿ ಮಾಡಿದ್ದ ಯುವತಿಯನ್ನು ಅರೆ ಬೆತ್ತಲೆಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪೋಷಕರು
Image Credit source: India Today

Updated on: Jul 28, 2023 | 8:07 AM

ಮಗ ಪ್ರೀತಿ(Love) ಮಾಡಿದ್ದಾನೆಂಬ ಕೋಪದಲ್ಲಿ ಆತನ ಪೋಷಕರು ಯುವತಿಯನ್ನು ಅರೆ ಬೆತ್ತಲೆಗೊಳಿಸಿ ಥಳಿಸಿರುವ ಅಮಾನವೀಯ ಘಟನೆ ಜಾರ್ಖಂಡ್​ನ ಗಿರಿದಿಹ್​ನಲ್ಲಿ ನಡೆದಿದೆ. ಬಳಿಕ ಮಹಿಳೆಯನ್ನು ಪೊಲೀಸರು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಪ್ರಿಯಕರ, ಆತನ ತಂದೆ, ತಾಯಿ ಮತ್ತು ಮಲತಾಯಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವತಿಗೆ ಓರ್ವ ವ್ಯಕ್ತಿ ಜತೆ ಪ್ರೇಮವಿತ್ತು ಇದು ಆತನ ಮನೆಯವರೆಗೆ ಗೊತ್ತಾಗಿತ್ತು, ಯುವಕನ ಬಳಿ ರಾತ್ರಿ ತಮ್ಮ ಮನೆಗೆ ಕರೆ ಮಾಡಿ ಯುವತಿಯನ್ನು ಕರೆಸಿಕೊಳ್ಳುವಂತೆ ಹೇಳಿದ್ದರು. ಆತನ ತಂದೆ ಹಾಗೂ ತಾಯಿ ಹಾಗೂ ಮಲತಾಯಿ ಎಲ್ಲರೂ ಸೇರಿ ಯುವತಿಗೆ ಬುದ್ಧಿ ಕಲಿಸಬೇಕೆಂದುಕೊಂಡಿದ್ದರು.

ಮತ್ತಷ್ಟು ಓದಿ: ಮದ್ಯದ ಪಾರ್ಟಿ ಬಳಿಕ ಕೊಲೆ? ಜನನಿಬಿಡ ಪ್ರದೇಶದಲ್ಲಿ ನಿರ್ಮಾಣ ಕಟ್ಟಡದಲ್ಲಿ ವಿವಸ್ತ್ರಗೊಳಿಸಿ ಕೈಕಾಲು ಕಟ್ಟಿ ವ್ಯಕ್ತಿಯ ಹತ್ಯೆ

ಆಕೆ ಮನೆಗೆ ತಲುಪುತ್ತಿದ್ದಂತೆ, ನಾಲ್ವರು ಅವಳನ್ನು ಹತ್ತಿರದ ಕಾಡಿಗೆ ಕರೆದೊಯ್ದು ಅಲ್ಲಿ ಆಕೆಯನ್ನು ಥಳಿಸಿ ಬಟ್ಟೆಗಳನ್ನು ಹರಿದು ಹಾಕಿದರು. ನಂತರ ಆಕೆಯನ್ನು ಮರಕ್ಕೆ ಕಟ್ಟಿಹಾಕಿದರು.

ಆಕೆ ಸತ್ತಿದ್ದಾಳೆ ಎಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದರು. ನಂತರ ಪೊಲೀಸರು ಆಕೆಯನ್ನು ರಕ್ಷಣೆ ಮಾಡಿದಾಗ ಆಕೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಆಕೆಯ ಹೇಳಿಕೆಯ ಆಧಾರದ ಮೇಲೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ