AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ

ಇರಾನ್‌ನ ಡ್ರೋನ್ ದಾಳಿಯ ಪ್ರತಿಕ್ರಿಯೆಯಾಗಿ ಅಮೆರಿಕವು ಇರಾನ್‌ನ ರಾಡಾರ್ ಮತ್ತು ಡ್ರೋನ್ ತಾಣಗಳ ಮೇಲೆ 'ಆತ್ಮರಕ್ಷಣಾ ದಾಳಿ' ನಡೆಸಿದೆ. ನಿಖರ ಕಾರ್ಯಾಚರಣೆಯಲ್ಲಿ ಅಮೆರಿಕನ್ ಸೈನಿಕರಿಗೆ ಹಾನಿಯಾಗಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ, ಚಿನ್ನದ ಬೆಲೆ ಕುಸಿತ ಕಂಡಿದೆ. ಕುವೈತ್ ಗಡಿ ಭದ್ರತೆ ಬಲಪಡಿಸಿದ್ದು, ಟ್ರಂಪ್ ಅವರ ಕದನ ವಿರಾಮ ನಿರ್ಧಾರ ಮತ್ತು ಅಂತರರಾಷ್ಟ್ರೀಯ ರಾಜತಾಂತ್ರಿಕ ಪ್ರಯತ್ನಗಳ ಮೇಲೆ ಜಾಗತಿಕ ನಿಗ ಇದೆ.

ಇರಾನ್ ಮೇಲೆ ಮತ್ತೆ  ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ
ಅಮೆರಿಕ ದಾಳಿ-ಸಾಂದರ್ಭಿಕ ಚಿತ್ರ Image Credit source: Aljazeera
ನಯನಾ ರಾಜೀವ್
|

Updated on:Jun 01, 2026 | 10:11 AM

Share

ವಾಷಿಂಗ್ಟನ್, ಜೂನ್ 1: ಅಮೆರಿಕದ ‘MQ-1’ ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿದ ಬೆನ್ನಲ್ಲೇ, ಅಮೆರಿಕ(America)ಸೇನೆಯು ಇರಾನ್‌ನ ರಾಡಾರ್ ಮತ್ತು ಡ್ರೋನ್ ತಾಣಗಳ ಮೇಲೆ ಶಕ್ತಿಶಾಲಿ ‘ಆತ್ಮರಕ್ಷಣಾ ದಾಳಿ’ ನಡೆಸಿದೆ. ಈ ಕಾರ್ಯಾಚರಣೆಯು ಅತ್ಯಂತ ಯೋಜಿತ ಹಾಗೂ ನಿಖರವಾಗಿದ್ದು, ಯಾವುದೇ ಅಮೇರಿಕದ ಮಿಲಿಟರಿ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಪ್ರಕಟಿಸಿದೆ.

ನಿಖರ ಕಾರ್ಯಾಚರಣೆ ಮತ್ತು ಭದ್ರತೆ ಇರಾನ್‌ನ ಗೋರುಕ್ ಮತ್ತು ಕೆಶ್ಮ್ ದ್ವೀಪಗಳಲ್ಲಿನ ರಾಡಾರ್ ವ್ಯವಸ್ಥೆಗಳು ಹಾಗೂ ಡ್ರೋನ್ ಕಮಾಂಡ್-ಅಂಡ್-ಕಂಟ್ರೋಲ್ ಸೈಟ್‌ಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಯುದ್ಧ ವಿಮಾನಗಳು ದಾಳಿ ನಡೆಸಿವೆ. ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳಿಗೆ ನೇರ ಬೆದರಿಕೆಯೊಡ್ಡಿದ್ದ ಇರಾನಿನ ವಾಯು ರಕ್ಷಣಾ ವ್ಯವಸ್ಥೆಗಳು, ಒಂದು ನೆಲದ ನಿಯಂತ್ರಣ ಕೇಂದ್ರ ಮತ್ತು ಎರಡು ಏಕಮುಖ ದಾಳಿ ಡ್ರೋನ್‌ಗಳನ್ನು ಅಮೆರಿಕ ಪಡೆಗಳು ಯಶಸ್ವಿಯಾಗಿ ನಾಶಪಡಿಸಿವೆ. ಪ್ರಾದೇಶಿಕ ನೀರಿನಲ್ಲಿ ಶಾಂತಿ ಕಾಪಾಡಲು ಮತ್ತು ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಅಮೆರಿಕ ಬದ್ಧವಾಗಿದೆ ಎಂದು CENTCOM ಪುನರುಚ್ಚರಿಸಿದೆ.

ಜಾಗತಿಕ ಮಾರುಕಟ್ಟೆ ಮತ್ತು ರಾಜತಾಂತ್ರಿಕತೆ ಈ ಪ್ರಾದೇಶಿಕ ಉದ್ವಿಗ್ನತೆಯ ನಡುವೆಯೂ, ಒಳಬರುವ ಡ್ರೋನ್ ಮತ್ತು ಕ್ಷಿಪಣಿಗಳನ್ನು ಎದುರಿಸಲು ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಮೂಲಕ ಗಡಿ ಭದ್ರತೆಯನ್ನು ಬಲಪಡಿಸಿದೆ.

ಮತ್ತಷ್ಟು ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಜೂನ್ 1-4ಕ್ಕೆ ಭಾರತದಲ್ಲಿರಲಿದ್ದಾರೆ ಟ್ರಂಪ್ ಆಪ್ತ ಸಲಹೆಗಾರರು

ಮತ್ತೊಂದೆಡೆ, ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವನ್ನು ವಿಸ್ತರಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳಲಿರುವ ಅಂತಿಮ ನಿರ್ಧಾರದ ಕಡೆಗೆ ಜಾಗತಿಕ ಹೂಡಿಕೆದಾರರು ಕುತೂಹಲದಿಂದ ಎದುರುನೋಡುತ್ತಿದ್ದಾರೆ. ಈ ರಾಜತಾಂತ್ರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಬಲವಾದ ಡಾಲರ್ ಮತ್ತು ಏರುತ್ತಿರುವ ತೈಲ ಬೆಲೆಗಳ ಒತ್ತಡದಿಂದಾಗಿ ಸೋಮವಾರ ಚಿನ್ನದ ಬೆಲೆಯಲ್ಲಿ ಸಲ್ಪ ಕುಸಿತ ಕಂಡುಬಂದಿದೆ. ಪ್ರಾದೇಶಿಕ ಬಿಕ್ಕಟ್ಟನ್ನು ಶಮನಗೊಳಿಸಲು ಜರ್ಮನಿ, ಕತಾರ್ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:57 am, Mon, 1 June 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ