ಜಾರ್ಖಂಡ್‌ನ ರಾಂಚಿಯ ರಿಮ್ಸ್‌ನಲ್ಲಿ ಸೋಮವಾರ ಮಹಿಳೆಯೊಬ್ಬರು ಐದು ಮಕ್ಕಳಿಗೆ ಜನ್ಮ ನೀಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸದ್ಯ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಎಲ್ಲಾ ಐದು ಶಿಶುಗಳು ಆರೋಗ್ಯಕರ ಸ್ಥಿತಿಯಲ್ಲಿವೆ ಮತ್ತು ನಿಯೋನಾಟಲ್ ತೀವ್ರ ನಿಗಾ ಘಟಕದಲ್ಲಿ (NICU) ವೀಕ್ಷಣೆಗಾಗಿ ಇರಿಸಲಾಗಿದೆ.
RIMS ರಾಂಚಿ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹೀಗೆ ಬರೆದಿದ್ದಾರೆ, ಚತಾರ್‌ನ ಮಹಿಳೆಯೊಬ್ಬರು RIMS ನಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಿಶುಗಳು NICU ನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. . ಡಾ. ಶಶಿಬಾಲಾ ಸಿಂಗ್ ಅವರ ನೇತೃತ್ವದಲ್ಲಿ ಯಶಸ್ವಿ ಹೆರಿಗೆಯನ್ನು ನಡೆಸಲಾಯಿತು ಎಂದಿದ್ದಾರೆ.
ಮತ್ತಷ್ಟು ಓದಿ: Health Tips: ನವಜಾತ ಶಿಶುಗಳ ಆರೈಕೆಗೆ ಸಂಬಂಧಿಸಿದ ಸತ್ಯ, ಮಿಥ್ಯ ಅಂಶಗಳಾವುವು?
ನವಜಾತ ಶಿಶುಗಳು ಕಡಿಮೆ ತೂಕವನ್ನು ಹೊಂದಿದ್ದು, ಸದ್ಯಕ್ಕೆ NICU ನಲ್ಲಿ ಇರಿಸಲಾಗಿದೆ. ವೈದ್ಯರ ತಂಡವು ತಾಯಿ ಮತ್ತು ಶಿಶುಗಳ ಮೇಲೆ ನಿಗಾ ಇರಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ