Health Tips: ನವಜಾತ ಶಿಶುಗಳ ಆರೈಕೆಗೆ ಸಂಬಂಧಿಸಿದ ಸತ್ಯ, ಮಿಥ್ಯ ಅಂಶಗಳಾವುವು?

ನವಜಾತ ಶಿಶುವಿನ ಆರೈಕೆಯು ಮಗುವಿನ ಪಾಲನೆಯ ಪ್ರಮುಖ ಅಂಶವಾಗಿದೆ. ಇಲ್ಲಿ ಮಗುವಿನ ಆರೈಕೆಯ ಕುರಿತು ಕೆಲವೊಂದು ಸತ್ಯ ಹಾಗೂ ಮಿಥ್ಯಗಳ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣಾ.

Health Tips: ನವಜಾತ ಶಿಶುಗಳ ಆರೈಕೆಗೆ ಸಂಬಂಧಿಸಿದ ಸತ್ಯ, ಮಿಥ್ಯ ಅಂಶಗಳಾವುವು?
ಸಾಂದರ್ಭಿಕ ಚಿತ್ರ
Follow us
|

Updated on:Mar 20, 2023 | 5:54 PM

ನವಜಾತ ಶಿಶುವಿನ ಆರೈಕೆಯು ಪಾಲನೆಯ ಪ್ರಮುಖ ಅಂಶವಾಗಿದೆ. ಆದರೆ ಭಾರತದಲ್ಲಿ ಹಲವಾರು ಮಿಥ್ಯಗಳು ಮತ್ತು ತಪ್ಪು ಗ್ರಹಿಕೆಗಳು ಅದರ ಸುತ್ತಲೂ ಇವೆ. ನವಜಾತ ಶಿಶುಗಳ ಅತ್ಯುತ್ತಮವಾದ ಆರೈಕೆಯನ್ನು ಮಾಡಲು ಈ ತಪ್ಪುಗ್ರಹಿಕೆಗಳನ್ನು ಹೊರಹಾಕುವುದು ಮುಖ್ಯವಾಗಿದೆ. ಹುಟ್ಟಿನಿಂದ ಒಂದು ವರ್ಷದವರೆಗೆ ಮಗುವಿನ ಆರೋಗ್ಯಕ್ಕೆ ನಿರ್ಣಾಯಾಕ ಅವಧಿಯಾಗಿರುವುದರಿಂದ ಪ್ರತಿ ಹಂತದಲ್ಲೂ ಮಗುವಿಗೆ ಆರೋಗ್ಯಕರ ಮತ್ತು ಪೌಷ್ಠಿಕ ಆಹಾರಗಳನ್ನು ನೀಡುವುದು ಮುಖ್ಯವಾಗಿದೆ. ಈ ಹಂತದಲ್ಲಿ ಆಹಾರಗಳ ಸರಿಯಾದ ಕ್ರಮಗಳನ್ನು ಪಾಲಿಸುವುದು ಮುಖ್ಯ ಎಂದು ಸ್ತ್ರೀರೋಗ ತಜ್ಞೆ ಹಾಗೂ ಬಂಜೆತನ ತಜ್ಞೆ ಡಾ. ರಚನಾ ವರ್ಮಾ ಹೇಳುತ್ತಾರೆ.

ಮಿಥ್ಯ: ಹುಟ್ಟಿದ ತಕ್ಷಣ ನವಜಾತ ಶಿಶುವನ್ನು ಸ್ನಾನ ಮಾಡಿಸಬೇಕು

ಸತ್ಯ: ಜನನದ ನಂತರ ತಕ್ಷಣವೇ ನವಜಾತ ಶಿಶುವನ್ನು ಸ್ನಾನ ಮಾಡಿಸುವುದು ಅನಿವಾರ್ಯವಲ್ಲ. ವಾಸ್ತವವಾಗಿ ಮಗುವಿನ ಮೊದಲ ಸ್ನಾನವನ್ನು ಕೆಲವು ದಿನಗಳವರೆಗೆ ವಿಳಂಬಗೊಳಿಸುವುದು ಮಗುವಿನ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಒಣಚರ್ಮವನ್ನು ತಡೆಯಲು ಸಹಾಯ ಮಾಡುತ್ತದೆ.

ಮಿಥ್ಯ: ನವಜಾತ ಶಿಶುಗಳ ಕಣ್ಣಿಗೆ ಕಾಜಲ್ ಅನ್ವಯಿಸಬೇಕು

ಸತ್ಯ: ಮಗುವಿನ ಕಣ್ಣಿಗೆ ಕಾಜಲ್ ಹಚ್ಚಲು ಶಿಫಾರಸ್ಸು ಮಾಡಲಾಗುವುದಿಲ್ಲ. ಏಕೆಂದರೆ ಇದು ಕಣ್ಣಿನ ಸೋಂಕುಗಳು ಮತ್ತು ಇತರ ತೊಡಕುಗಳಿಗೆ ಕಾರಣವಾಗಬುದು.

ಮಿಥ್ಯ: ಸಾಸಿವೆ ಎಣ್ಣೆಯಿಂದ ಮಗುವಿಗೆ ಮಸಾಜ್ ಮಾಡಬೇಕು.

ಸತ್ಯ: ಮಜಾಜ್ ಮಗುವಿಗೆ ಪ್ರಯೋಜನಕಾರಿಯಾಗಿದ್ದರೂ, ಸಾಸಿವೆ ಎಣ್ಣೆಯನ್ನು ಬಳಸುವುದನ್ನು ಶಿಫಾರಸು ಮಾಡುವುದಿಲ್ಲ ಏಕೆಂದರೆ ಇದು ಚರ್ಮದ ಕಿರಿಕಿರಿ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಮಿಥ್ಯ: ತಾಯಿಗೆ ಶೀತ ಅಥವಾ ಜ್ವರ ಇದ್ದರೆ ನೀವು ಮಗುವಿಗೆ ಹಾಲುಣಿಸುವುದನ್ನು ತಪ್ಪಿಸಬೇಕು

ಸತ್ಯ: ಎದೆ ಹಾಲುಣಿಸುವುದು ಸುರಕ್ಷಿತವಾಗಿದೆ ಮತ್ತು ತಾಯಿಗೆ ಶೀತ, ಜ್ವರ ಇದ್ದರೂ ಮಗುವಿಗೆ ಹಾಲುಣಿಸಬಹುದು ಎಂದು ಶಿಫಾರಸು ಮಾಡಲಾಗುತ್ತದೆ. ವಾಸ್ತವವಾಗಿ ಎದೆ ಹಾಲು ನಿಮ್ಮ ಮಗುವನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕವನ್ನು ಹೊಂದಿರುತ್ತದೆ.

ಮಿಥ್ಯ: ಮೊದಲ ಕೆಲವು ತಿಂಗಳುಗಳು ನಿಮ್ಮ ಮಗುವನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: Health Tips : ಸ್ಟಾರ್ ಹಣ್ಣಿನಿಂದ ಆರೋಗ್ಯ ವೃದ್ಧಿ

ಮಿಥ್ಯ: ನಿಮ್ಮ ಮಗುವಿಗೆ ನೀವು ಕಟ್ಟುನಿಟ್ಟಾದ ವೇಳಾಪಟ್ಟಿಯಲ್ಲಿ ಆಹಾರವನ್ನು ನೀಡಬೇಕು.

ಸತ್ಯ: ನವಜಾತ ಶಿಶುಗಳಿಗೆ ಬೇಡಿಕೆಯ ಮೇರೆಗೆ ಆಹಾರವನ್ನು ಶಿಫಾರಸ್ಸು ಮಾಡಲಾಗುತ್ತದೆ. ಏಕೆಂದರೆ ಇದು ಸಾಕಷ್ಟು ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಮಿಥ್ಯ: ಡೈಪರ್‌ಗಳು ತುರಿಕೆಗೆ ಕಾರಣವಾಗುವುದರಿಂದ ಡೈಪರ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು.

ಸತ್ಯ: ನವಜಾತ ಶಿಶುಗಳಿಗೆ ಡೈಪರ್ ಸುರಕ್ಷಿತವಾಗಿದೆ ಮತ್ತು ಅನುಕೂಲಕರವಾಗಿದೆ, ಆದರೆ ಅವುಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ಹಾಗೂ ಡೈಪರ್ ಕ್ರೀಮ್‌ಗಳನ್ನು ಕೂಡ ಬಳಸಬೇಕು.

ಮಿಥ್ಯ: ಮೂಗು ಮತ್ತು ಕಿವಿಗೆ ಎಣ್ಣೆಯನ್ನು ಹಾಕುವ ಮೂಲಕ ಸೋಂಕುಗಳನ್ನು ತಡೆಗಟ್ಟಬಹುದು ಎಂದು ಅನೇಕರು ನಂಬುತ್ತಾರೆ.

ಸತ್ಯ: ಈ ಅಭ್ಯಾಸವು ತುಂಬಾ ಅಸುರಕ್ಷಿತವಾಗಿದೆ ಮತ್ತು ತೈಲವು ಶ್ವಾಸಕೋಶಕ್ಕೆ ಪ್ರವೇಶಿಸಿದರೆ ಸೋಂಕುಗಳು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.

Published On - 5:54 pm, Mon, 20 March 23