Farooq Abdullah Dance: ಪಂಜಾಬ್ ಸಿಎಂ ಮೊಮ್ಮಗಳ ವಿವಾಹದಲ್ಲಿ ಫಾರೂಕ್ ಅಬ್ದುಲ್ಲಾ ಸಖತ್ ಡ್ಯಾನ್ಸ್, ವಿಡಿಯೋ ವೈರಲ್
Farooq Abdullah Dance | ಅಮರೀಂದರ್ ಸಿಂಗ್ ಅವರ ಮೊಮ್ಮಗಳಾದ ಸೆಹೆರೀಂದರ್ ಕೌರ್ ಅವರು ದೆಹಲಿ ಉದ್ಯಮಿ ಆದಿತ್ಯ ನಾರಂಗ್ ಜೊತೆ ವಿವಾಹವಾದರು. ಕಳೆದ ಭಾನುವಾರದಂದು ಚಂಡೀಗಢದಲ್ಲಿರುವ ರಾಜಕಾರಣಿಯೊಬ್ಬರ ಫಾರ್ಮ್ಹೌಸ್ನಲ್ಲಿ ಈ ಮದುವೆ ಸಮಾರಂಭ ನೆರವೇರಿತು. ಈ ವೇಳೆ, ತಮ್ಮ ರಾಜಕೀಯ ಜಂಜಾಟವನ್ನು ಪಕ್ಕಕ್ಕಿಟ್ಟು ಫಾರೂಕ್ ಅಬ್ದುಲ್ಲಾ ಮತ್ತು ಅಮರೀಂದರ್ ಸಿಂಗ್ ಅವರಿಬ್ಬರೂ ವಿಶೇಷ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.
ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಪಂಜಾಬ್ ಹಾಲಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಮೊಮ್ಮಗಳ ವಿವಾಹ ಮಹೋತ್ಸವದಲ್ಲಿ ಬಾಲಿವುಡ್ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಮೊಮ್ಮಗಳ ಮದುವೆ ಖುಷಿಯಲ್ಲಿದ್ದ ಕ್ಯಾಪ್ಟನ್ ಅಮರೀಂದರ್ ಸಹ ಫಾರೂಕ್ ಅಬ್ದುಲ್ಲಾ ಜೊತೆ ಹೆಜ್ಜೆ ಹಾಕಿದ್ದಾರೆ.
ಅಮರೀಂದರ್ ಸಿಂಗ್ ಅವರ ಮೊಮ್ಮಗಳಾದ ಸೆಹೆರೀಂದರ್ ಕೌರ್ ಅವರು ದೆಹಲಿ ಉದ್ಯಮಿ ಆದಿತ್ಯ ನಾರಂಗ್ ಜೊತೆ ವಿವಾಹವಾದರು. ಕಳೆದ ಭಾನುವಾರದಂದು ಚಂಡೀಗಢದಲ್ಲಿರುವ ರಾಜಕಾರಣಿಯೊಬ್ಬರ ಫಾರ್ಮ್ಹೌಸ್ನಲ್ಲಿ ಈ ಮದುವೆ ಸಮಾರಂಭ ನೆರವೇರಿತು. ಈ ವೇಳೆ, ತಮ್ಮ ರಾಜಕೀಯ ಜಂಜಾಟವನ್ನು ಪಕ್ಕಕ್ಕಿಟ್ಟು ಫಾರೂಕ್ ಅಬ್ದುಲ್ಲಾ ಮತ್ತು ಅಮರೀಂದರ್ ಸಿಂಗ್ ಅವರಿಬ್ಬರೂ ವಿಶೇಷ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.
ಅರ್ಧ ಶತಮಾಣಕ್ಕೂ ಹಿಂದಿನ ಬಾಲಿವುಡ್ನ ಬ್ರಹ್ಮಚಾರಿ ಸಿನಿಮಾದ ಸೂಪರ್ ಡ್ಯೂಪರ್ ಹಿಟ್ ಸಾಂಗ್ ‘ಆಜ್ ಕಲ್ ತೆರೆ ಮೇರೆ ಪ್ಯಾರ್ ಕೆ ಚರ್ಚೆ..’ ಹಾಡಿಗೆ 83 ವರ್ಷದ ಹಿರಿಯ ರಾಜಕಾರಣಿ, ಸಂಸದ ಫಾರೂಕ್ ಅಬ್ದುಲ್ಲಾ ಅವರು ಚಿತ್ರದ ಹೀರೋ ಶಮ್ಮಿ ಕಪೂರ್ ಅವರನ್ನೇ ಆವಾಹನೆ ಮಾಡಿಕೊಂಡವರಂತೆ ಫಾರೂಕ್ ಹಾಡನ್ನು ಗುನಗುತ್ತಾ ತಮ್ಮ ಕೈ-ಕಾಲು ಆಡಿಸಿದ್ದಾರೆ. ಮಧ್ಯೆ ಮಧ್ಯೆ ವಧುವಿನ ತಾತ, ರಾಜಕೀಯದಲ್ಲಿ ತಮ್ಮ ಆತ್ಮೀಯನೆನಿಸಿಕೊಂಡಿರುವ ಅಮರೀಂದರ್ರನ್ನು ತಮ್ಮೊಟ್ಟಿಗೆ ಹೆಜ್ಜೆ ಹಾಕಲು ಪ್ರೇರೇಪಿಸುತ್ತಾರೆ. ಮದುವೆ ಆಮಂತ್ರಿತರು ಎಂಜಾಯ್ ಮಾಡಿದ್ದಾರೆ. ಆ ಮದುವೆ ಮನೆಯಲ್ಲಿ ಫಾರೂಕ್ ಹೀಗೆ ಹಾಡಿಗೆ ಹೆಜ್ಜೆ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗಿದೆ.
ಸಾಮಾಜಿಕ ಕಾರ್ಯಕರ್ತ ನಾಸೀರ್ ಖುಹಾಮಿ, ಮತ್ತಿತರ ನಾಯಕರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಯಸ್ಸು ಎಂಬುದು ಒಂದು ಸಂಖ್ಯೆಯಷ್ಟೇ! ಅದರಾಚೆಗೂ ಭಾವ-ಭಾವನೆಗಳು ಅಸಂಖ್ಯಾತ. ಇದು ಸಂಸದ ಫಾರೂಕ್ ಅಬ್ದುಲ್ಲಾ ಅವರ ವಿಷಯದಲ್ಲಿ ಇದು ನೂರಕ್ಕೆ ನೂರು ಸತ್ಯ ಎಂದು ಇನ್ನೂ ಅನೇಕ ಮಂದಿ ನೆಟ್ಟಿಗರು ವಿಡಿಯೋ ಹಂಚಿಕೊಂಡು, ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.
Punjab CM @capt_amarinder dancing with MP Farooq Abdullah at Gandaughter's wedding. "Ajjkal Tere Mere Pyaar kei Charche hai":) @OmarAbdullah @RT_MediaAdvPbCM @rohanduaTOI @FromGursimran @ghazalimohammad @tehseenp @nagma_morarji @sushant_says @MattLaemon @HasibaAmin @SaralPatel pic.twitter.com/JmAjY36wA9
— Nasir Khuehami (ناصر کہویہامی) (@NasirKhuehami) March 4, 2021