ರಾಜಸ್ತಾನ(Rajasthan)ದ ಜೋಧ್ಪುರ ಜಿಲ್ಲೆಯ ಹೊಲವೊಂದರಲ್ಲಿ ಪಾಕಿಸ್ತಾನ(Pakistan)ದಿಂದ ವಲಸೆ(Migration) ಬಂದಿದ್ದ ಹಿಂದೂ ಕುಟುಂಬದ 11 ಸದಸ್ಯರು ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಆತ್ಮಹತ್ಯೆಗಿದ್ದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕೌಟುಂಬಿಕ ಕಲಹದಿಂದ 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.
2020ರ ಆಗಸ್ಟ್ 9 ರಂದು ಜೋಧ್ಪುರದ ದೇಚು ತಹಸಿಲ್ನ ಲೋಡ್ಟಾ ಗ್ರಾಮದ ಜಮೀನಿನಲ್ಲಿ ಒಂದೇ ಕುಟುಂಬದ 11 ಮಂದಿ ಸದಸ್ಯರು ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಇತರ ಕೆಲವು ಕುಟುಂಬ ಸದಸ್ಯರು ಮತ್ತು ಸಮುದಾಯದ ಕೆಲವು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಓದಿ: Magadi: ಕುರಿಗಳನ್ನು ತೊಳೆಯಲು ಹೋಗಿದ್ದವರು ಕೆರೆ ಪಾಲು: ಒಂದೇ ಕುಟುಂಬದ ಮೂವರು ದುರ್ಮರಣ
ಮೃತರನ್ನು ಬುಧರಾಮ್ ಭೀಲ್ (75) ಎಂದು ಗುರುತಿಸಲಾಗಿದೆ; ಅವರ ಪತ್ನಿ ಅಂತರಾ ದೇವಿ (70); ಮಗ ರವಿ (31); ಪುತ್ರಿಯರಾದ ಪ್ರಿಯಾ (25) ಮತ್ತು ಸುಮನ್ (22); ಮೊಮ್ಮಕ್ಕಳಾದ ಮುಕ್ದಾಶ್ (17) ಮತ್ತು ನೈನ್ (12); ಲಕ್ಷ್ಮಿ (40) ಮತ್ತು ಕುಟುಂಬದ ಉಳಿದಿರುವ ಸದಸ್ಯ ಕೇವಲ್ ರಾಮ್ ಅವರ ಮೂವರು ಅಪ್ರಾಪ್ತ ಪುತ್ರರು. ಕೇವಲ್ ರಾಮ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ಗುಡಿಸಿಲಿನಲ್ಲಿ ಪೊಲೀಸರಿಗೆ ಕೆಲವು ರಾಸಾಯನಿಕದ ಬಾಟಲಿಗಳು ಸಿಕ್ಕಿದ್ದವು, ಮೃತಪಟ್ಟವರೆಲ್ಲರಿಗೂ ಯಾವುದೋ ವಿಷಕಾರಿ ಪದಾರ್ಥವನ್ನು ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅವರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದುಗಳಾಗಿದ್ದು, ಭಿಲ್ ಸಮುದಾಯಕ್ಕೆ ಸೇರಿದವರಾಗಿದ್ದರು.
ಪಾಕಿಸ್ತಾನದ ಹಿಂದೂ ವಲಸಿಗರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಸೀಮಂತ್ ಲೋಕ ಸಂಘಟನೆಯ ಮುಖ್ಯಸ್ಥ ಹಿಂದೂ ಸಿಂಗ್ ಸೋಧಾ, ಆತ್ಮಹತ್ಯೆಯ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದರು.ಭಾರತದಲ್ಲಿ ಈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಕಿಡಿಕಾರಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Sun, 23 April 23