Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ಏಕ ಡೋಸ್ ಕೊರೊನಾ​ ಲಸಿಕೆ ಅಕ್ಟೋಬರ್​ನಿಂದ ದೇಶದಲ್ಲಿ ಲಭ್ಯ; ಅಭಿಯಾನಕ್ಕೆ ಮತ್ತಷ್ಟು ಬಲ

ಭಾರತದ ಜಗತ್ತಿನ ಅತಿದೊಡ್ಡ ಕೊರೊನಾ ಲಸಿಕೆ ಉತ್ಪಾದಕ ದೇಶವಾಗಿದೆ.  ಭಾರತದ ಜನಸಂಖ್ಯೆಗೆ ಅನುಗುಣವಾಗಿ ಕೊರೊನಾ ಲಸಿಕೆ ಕೊರತೆ ಉಂಟಾಗಿದ್ದರಿಂದ ಮಾರ್ಚ್​ ತಿಂಗಳಿಂದ ಲಸಿಕೆ ರಫ್ತನ್ನು ನಿಲ್ಲಿಸಿತ್ತು.

ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ಏಕ ಡೋಸ್ ಕೊರೊನಾ​ ಲಸಿಕೆ ಅಕ್ಟೋಬರ್​ನಿಂದ ದೇಶದಲ್ಲಿ ಲಭ್ಯ; ಅಭಿಯಾನಕ್ಕೆ ಮತ್ತಷ್ಟು ಬಲ
ಜಾನ್ಸನ್​ ಆ್ಯಂಡ್ ಜಾನ್ಸನ್​ ಕೊವಿಡ್​ 19 ಲಸಿಕೆ
Follow us
TV9 Web
| Updated By: Lakshmi Hegde

Updated on: Sep 21, 2021 | 11:23 AM

ದೆಹಲಿ: ಭಾರತದಲ್ಲಿ ಅಕ್ಟೋಬರ್​​ ತಿಂಗಳಿಂದ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ಬಲಬರಲಿದೆ. ಅಮೆರಿಕ ಮೂಲದ ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿ(Johnson & Johnson)ಯ ಸಿಂಗಲ್​ ಡೋಸ್ (ಏಕ ಡೋಸ್​)​ ಲಸಿಕೆಯ ಬಳಕೆ ದೇಶದಲ್ಲಿ ಅಕ್ಟೋಬರ್​ ತಿಂಗಳಿಂದ ಶುರುವಾಗಲಿದೆ ಎಂದು ರಾಯಿಟರ್ಸ್​ ಸುದ್ದಿ ಮಾಧ್ಯಮ ವರದಿ ಮಾಡಿದೆ. ಭಾರತದಲ್ಲೀಗ ಬಳಕೆಯಾಗುತ್ತಿರುವ ಕೊವಿಶೀಲ್ಡ್​, ಕೊವ್ಯಾಕ್ಸಿನ್​, ಸ್ಪುಟ್ನಿಕ್​ ವಿ ಲಸಿಕೆಗಳೆಲ್ಲ ಎರಡು ಡೋಸ್​​ಗಳ ಲಸಿಕೆಗಳಾಗಿದ್ದು, ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿ (Johnson & Johnson Covid 19 Vaccine)ಯ ಲಸಿಕೆ ಬಳಕೆ ಶುರುವಾದರೆ ಒಂದೇ ಡೋಸ್​​ನಲ್ಲಿಯೇ ಮುಗಿದುಹೋಗುತ್ತದೆ.

ಕೊವಿಡ್​ 19 ಲಸಿಕೆಯನ್ನು ಸರಿಯಾಗಿ ಪ್ಯಾಕ್​ ಮಾಡಿ, ಭಾರತಕ್ಕೆ ರವಾನಿಸಲಾಗುವುದು. ಮೊದಲ ಬಾರಿಗೆ ಸುಮಾರು 43.5 ಮಿಲಿಯನ್​ ಡೋಸ್​ಗಳನ್ನು ಕಳಿಸಲಾಗುವುದು.  ಅಕ್ಟೋಬರ್​ ಹೊತ್ತಿಗೆ 30 ಕೋಟಿ ಡೋಸ್​ ಕೊರೊನಾ ಲಸಿಕೆ ಉತ್ಪಾದನೆ ಗುರಿ ಹೊಂದಿರುವ ಭಾರತಕ್ಕೆ ಇದರಿಂದ ಖಂಡಿತ ಸಹಾಯವಾಗುತ್ತದೆ ಎಂದು ಜಾನ್ಸನ್​ ಆ್ಯಂಡ್ ಜಾನ್ಸನ್​ ಹೇಳಿದೆ.

ಭಾರತದ ಜಗತ್ತಿನ ಅತಿದೊಡ್ಡ ಕೊರೊನಾ ಲಸಿಕೆ ಉತ್ಪಾದಕ ದೇಶವಾಗಿದೆ.  ಭಾರತದ ಜನಸಂಖ್ಯೆಗೆ ಅನುಗುಣವಾಗಿ ಕೊರೊನಾ ಲಸಿಕೆ ಕೊರತೆ ಉಂಟಾಗಿದ್ದರಿಂದ ಮಾರ್ಚ್​ ತಿಂಗಳಿಂದ ಲಸಿಕೆ ರಫ್ತನ್ನು ನಿಲ್ಲಿಸಿತ್ತು. ಆದರೀಗ ಮತ್ತೆ ಅಕ್ಟೋಬರ್​ನಿಂದ ಅದನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಮಾಹಿತಿ ನೀಡಿದ್ದಾರೆ.  ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ಕೊವಿಡ್​ 19 ಲಸಿಕೆ ಒಂದೇ ಡೋಸ್​​ನದ್ದಾಗಿದೆ. ಇದನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಡ್ರಗ್ಸ್​ ಕಂಟ್ರೋಲರ್​ ಆಫ್​ ಇಂಡಿಯಾ (ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ) ಕಳೆದ ತಿಂಗಳು (ಆಗಸ್ಟ್​​) ಅನುಮೋದನೆ ನೀಡಿತ್ತು.  ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯು ಭಾರತದಲ್ಲಿ ಬಯೋಲಾಜಿಕಲ್​ ಇ ಸಂಸ್ಥೆ ಮೂಲಕ ಲಸಿಕೆ ಉತ್ಪಾದನೆ ಮಾಡಲಿದೆ.

ಆಗಸ್ಟ್ 5ರಂದು ಜಾನ್ಸನ್ ಆ್ಯಂಡ್ ಜಾನ್ಸನ್ ಪ್ರೈವೇಟ್ ಲಿಮಿಟೆಡ್ ತನ್ನ ಸಿಂಗಲ್ ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ (EUA) ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಈ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿಯಾಗಿದೆ  ಎಂಬುದು ಪ್ರಯೋಗಗಳಿಂದ ಸಾಬೀತಾಗಿದೆ.

ಇದನ್ನೂ ಓದಿ: Bomb threats: ಇಂಗ್ಲೆಂಡ್​ನಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ

(Johnson and Johnson Covid 19 Vaccine doses likely to arrive India in October)

ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ