ಭಾರತದಲ್ಲಿ ಬಳಕೆಯಾಗಲಿದೆಯಾ ಜಾನ್ಸನ್​ ಆ್ಯಂಡ್​ ಜಾನ್ಸನ್​ ಲಸಿಕೆ; ಅನುಮೋದನೆಗೆ ಅರ್ಜಿ ಸಲ್ಲಿಸಿದ ಕಂಪನಿ

Johnson & Johnson Covid 19 Vaccine: ಈ ಹಿಂದೆ ಕಂಪನಿ ತನ್ನ ಲಸಿಕೆಯನ್ನು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲು ಅವಕಾಶ ನೀಡಬೇಕು ಎಂದು ಡಿಸಿಜಿಐಗೆ ಮನವಿ ಮಾಡಿತ್ತು. ನಂತರ ಅದನ್ನು ವಾಪಸ್​ ಪಡೆದಿತ್ತು.

ಭಾರತದಲ್ಲಿ ಬಳಕೆಯಾಗಲಿದೆಯಾ ಜಾನ್ಸನ್​ ಆ್ಯಂಡ್​ ಜಾನ್ಸನ್​ ಲಸಿಕೆ; ಅನುಮೋದನೆಗೆ ಅರ್ಜಿ ಸಲ್ಲಿಸಿದ ಕಂಪನಿ
ಜಾನ್ಸನ್​ ಆ್ಯಂಡ್​ ಜಾನ್ಸನ್​ ಕೊವಿಡ್ 19
Edited By:

Updated on: Aug 06, 2021 | 3:33 PM

134 ವರ್ಷದಷ್ಟು ಹಳೆಯ, ಅಮೆರಿಕನ್​ ಫಾರ್ಮಾ ಸಮೂಹ ಸಂಸ್ಥೆ ಕೊವಿಡ್​ 19 ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದು ಗೊತ್ತೇ ಇದೆ. ಇದೀಗ ತಾನು ಅಭಿವೃದ್ಧಿ ಪಡಿಸಿದ ಒಂದೇ ಡೋಸ್​ನ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಬೇಕು ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (Central Drug Standard Control Organisation)ಗೆ ಅರ್ಜಿ ಸಲ್ಲಿಸಿದೆ. ಈ ಹಿಂದೆ ಕಂಪನಿ ತನ್ನ ಲಸಿಕೆಯನ್ನು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲು ಅವಕಾಶ ನೀಡಬೇಕು ಎಂದು ಡಿಸಿಜಿಐಗೆ ಮನವಿ ಮಾಡಿತ್ತು. ಆದರೆ, ಪ್ರತಿಷ್ಠಿತ ಮತ್ತು ಮಾನ್ಯತೆ ಪಡೆದ ಲಸಿಕೆಗಳನ್ನು ನೇರವಾಗಿ ಬಳಕೆಗೆ ಅನುಮೋದನೆ ಕೇಳಿ ಅರ್ಜಿ ಸಲ್ಲಿಸಿ ಎಂದು ಕೇಂದ್ರ ಸರ್ಕಾರ ಹೇಳಿದ್ದರಿಂದ, ಜಾನ್ಸನ್​ ಆ್ಯಂಡ್ ಜಾನ್ಸನ್​ ಪ್ರಯೋಗಕ್ಕೆ ಅವಕಾಶ ಕೇಳಿ, ಸಲ್ಲಿಸಿದ್ದ ಅರ್ಜಿಯನ್ನು ಕೆಲವೇ ದಿನಗಳ ಹಿಂದೆ ಹಿಂಪಡೆದಿತ್ತು.

ಈ ಬಗ್ಗೆ ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿ ಹೇಳಿಕೆ ಬಿಡುಗಡೆ ಮಾಡಿದ್ದು, ಬಯೋಲಾಜಿಕಲ್ ಇ ಲಿಮಿಟೆಡ್​​ ಸಹಯೋಗದೊಂದಿಗೆ ಭಾರತ ಸೇರಿ, ಪ್ರಪಂಚದಾದ್ಯಂತ ನಮ್ಮ ಲಸಿಕೆಯನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. ಬಯಾಲಜಿಕಲ್​ ಇ ಸಂಸ್ಥೆ ನಮ್ಮ ಜಾಗತಿಕ ಪೂರೈಕೆ ಸರಪಳಿ ಜಾಲದ ಒಂದು ಪ್ರಮುಖ ಭಾಗವಾಗಿದೆ ಎಂದೂ ಹೇಳಿಕೊಂಡಿದೆ. ಭಾರತದಲ್ಲಿ ಸದ್ಯ ಕೊವಿಶೀಲ್ಡ್​, ಕೊವ್ಯಾಕ್ಸಿನ್​, ಸ್ಪುಟ್ನಿಕ್​ ವಿ, ಮಾಡೆರ್ನಾ ಲಸಿಕೆಗಳು ಬಳಕೆಯಾಗುತ್ತಿವೆ. ಇದೀಗ ಒಮ್ಮೆ ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ಲಸಿಕೆಗೂ ಅನುಮೋದನೆ ಸಿಕ್ಕರೆ ಮತ್ತೊಂದು ಲಸಿಕೆ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು

Tokyo Olympics: ‘ಈ ಪದಕ ನಿಮಗಾಗಿ ಅಪ್ಪಾ’ ಪಿ ಆರ್ ಶ್ರೀಜೇಶ್ ಭಾವನಾತ್ಮಕ ಟ್ವೀಟ್

Johnson & Johnson applies for approval of its Covid 19 vaccine in India

Published On - 3:02 pm, Fri, 6 August 21

Web contact

TV9 Kannada

Read More
Follow Us