Tokyo Olympics: ‘ಈ ಪದಕ ನಿಮಗಾಗಿ ಅಪ್ಪಾ’ ಪಿ ಆರ್ ಶ್ರೀಜೇಶ್ ಭಾವನಾತ್ಮಕ ಟ್ವೀಟ್

ಈ ಪದಕ ನಿನಗಾಗಿಯೇ ಅಪ್ಪ ಎಂದು ಪಿ.ಆರ್​ ಶ್ರೀಜೇಶ್ ಭಾವನಾತ್ಕವಾಗಿ ಟ್ವೀಟ್ ಮಾಡಿದ್ದಾರೆ. ಅವರ ಆಟದಲ್ಲಿ ಗೆದ್ದಾಗ ಮನೆಯವರೆಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುತ್ತಿರುವದನ್ನು ವಿಡಿಯೋದಲ್ಲಿ ನೋಡಬಹುದು. 25 ಸೆಕೆಂಡುಗಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tokyo Olympics: ‘ಈ ಪದಕ ನಿಮಗಾಗಿ ಅಪ್ಪಾ’ ಪಿ ಆರ್ ಶ್ರೀಜೇಶ್ ಭಾವನಾತ್ಮಕ ಟ್ವೀಟ್
Follow us
TV9 Web
| Updated By: shruti hegde

Updated on:Aug 06, 2021 | 3:27 PM

ಭಾರತ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚು ಗೆಲ್ಲಲು ಗೋಲ್​ಕೀಪರ್​ ಪಿ.ಆರ್ ಶ್ರೀಜೇಶ್ ಅವರ ಶ್ರಮ ಪ್ರಮುಖವಾದ್ದು. ಸ್ಪರ್ಧೆಯಲ್ಲಿ ಕನಿಷ್ಠ 25ಕ್ಕೂ ಹೆಚ್ಚು ಪೆನಾಲ್ಟಿಕಾರ್ನರ್​ಗಳನ್ನು ತಡೆದು ಸ್ಪರ್ಧೆಯಲ್ಲಿ ಗೆಲ್ಲಲು ಪ್ರಮುಖ ಪಾತ್ರವಹಿಸಿದರು. ಪಂದ್ಯ ಮುಗಿಯುತ್ತಿದ್ದಂತೆಯೇ ಗೋಲು ಪೆಟ್ಟಿಗೆಗೆ ನಮಸ್ಕರಿಸಿ, ನನ್ನ ಜೀವನದಲ್ಲಿ ಅತಿ ದೊಡ್ಡ ಕ್ಷಣವಿದು ಎಂದು ಕೆಲ ಹೊತ್ತು ಭಾವುಕರಾದರು. ಇದೀಗ ಅವರು ಟ್ವೀಟ್ ಮಾಡಿದ್ದು ಈ ಪದಕ ನಿಮಗಾಗಿಯೇ ಅಪ್ಪ ಎಂದು ಭಾವನಾತ್ಮಕ ನುಡಿಗಳನ್ನಾಡಿದ್ದಾರೆ.

ಈ ಟ್ವೀಟ್ ನನ್ನ ತಂದೆ ಅವರಿಗೆ. ಅವರೇ ನನ್ನ ನಾಯಕ ಎಂದು ಶ್ರೀಜೇಶ್ ಬರೆದುಕೊಂಡಿದ್ದಾರೆ. ಅವರ ವಿಜಯವನ್ನು ತಂದೆಗೆ ಅರ್ಪಿಸುವ ಮೂಲಕ ಟ್ವೀಟ್ ಮಾಡಿದ್ದಾರೆ. ಈ ಪದಕ ನಿನಗಾಗಿಯೇ ಅಪ್ಪ ಎಂದು ಭಾವನಾತ್ನವಾಗಿ ಟ್ವೀಟ್ ಮಾಡಿದ್ದಾರೆ. ಅವರ ಆಟದಲ್ಲಿ ಗೆದ್ದಾಗ ಮನೆಯವರೆಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುತ್ತಿರುವದನ್ನು ವಿಡಿಯೋದಲ್ಲಿ ನೋಡಬಹುದು. 25 ಸೆಕೆಂಡುಗಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಿ.ಆರ್ ಶ್ರೀಜೇಶ್ ಅವರ ತಂದೆ ಎದ್ದು ನಿಂತು ಕೈಗಳನ್ನು ಮುಗಿದು ಪ್ರಾರ್ಥಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜತೆಗೆ ಅವರ ಕುಟುಂಬದ ಸದಸ್ಯರೆಲ್ಲರೂ ಎದ್ದು ನಿಂತು ಶ್ರೀಜೇಶ್ ಅವರ ವಿಜಯವನ್ನು ಸಂಭ್ರಮಿಸಿದ್ದಾರೆ. ಈ ಪದಕ ನಿನಗಾಗಿಯೇ ಅಪ್ಪ.. ನನ್ನ ಹಿರೋ ಎಂಬ ಶೀರ್ಷಿಕೆಯೊಂದಿಗೆ ಶ್ರೀಜೇಶ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:

Tokyo Olympics 2020: ಈ ಗೆಲುವಿನೊಂದಿಗೆ ಭಾರತ ಹಾಕಿ ತಂಡದ ‘ಹೊಸ ಯುಗ’ ಆರಂಭ

Tokyo Olympics: ನಿಮ್ಮನ್ನು ಬೆಂಬಲಿಸುತ್ತಿರುವುದಕ್ಕೆ ಹೆಮ್ಮೆಪಡುತ್ತೇವೆ; ಭಾರತದ ಹಾಕಿಗೆ ಮರುಜೀವ ಕೊಟ್ಟ ನವೀನ್ ಪಟ್ನಾಯಕ್

Published On - 3:24 pm, Fri, 6 August 21