ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪ ಹೊತ್ತು, ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿರುವ ಪತ್ರಕರ್ತೆ ರಾಣಾ ಅಯೂಬ್ (Rana Ayyub)ರನ್ನು ಲಂಡನ್ಗೆ ಹೋಗದಂತೆ ತಡೆಯಲಾಗಿದೆ. ರಾಣಾ ಅವರು ಲಂಡನ್ನಲ್ಲಿ ನಡೆಯಲಿರುವ ಇಂಟರ್ನ್ಯಾಶನಲ್ ಸೆಂಟರ್ ಫಾರ್ ಜರ್ನಲಿಸ್ಟ್ಸ್ (ICJ) ಕಾರ್ಯಕ್ರಮದಲ್ಲಿ ಭಾಷಣ ಮಾಡಲು ತೆರಳುವವರಿದ್ದರು. ಹೀಗಾಗಿ ಮಾರ್ಚ್ 29ರಂದು ಮುಂಬೈ ಏರ್ಪೋರ್ಟ್ಗೆ ಬಂದಿದ್ದರು. ಆದರೆ ಅವರು ಫ್ಲೈಟ್ ಹತ್ತಲು ಕೆಲವೇ ಹೊತ್ತಿರುವಾಗ ಇ.ಡಿ. ಅವರಿಗೆ ಸಮನ್ಸ್ ಕಳಿಸಿದೆ. ಈ ಬಗ್ಗೆ ರಾಣಾ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ನಾನು ಲಂಡನ್ಗೆ ಯಾಕಾಗಿ ಹೋಗುತ್ತೇನೆ ಎಂಬುದನ್ನು ಮುಂಚಿತವಾಗಿಯೇ ಬಹಿರಂಗಪಡಿಸಿದ್ದೆ. ಹೀಗಿದ್ದಾಗ್ಯೂ ನಾನು ಏರ್ಪೋರ್ಟ್ಗೆ ಬಂದ ಮೇಲೆ ಇ.ಡಿ. ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಮಾರ್ಚ್ 29ರಂದು International Center for Journalists ಟ್ವಿಟರ್ ಅಕೌಂಟ್ನಲ್ಲಿ ರಾಣಾ ಅಯೂಬ್ ಫೋಟೊ ಹಾಕಿ, ಮಹಿಳಾ ಪತ್ರಕರ್ತರ ಮೇಲೆ ಆನ್ಲೈನ್ ಮೂಲಕವೂ ದೌರ್ಜನ್ಯ ಎಂಬ ವಿಚಾರದ ಬಗ್ಗೆ ಮಾತನಾಡಲು ನಾವು ರಾಣಾ ಅಯೂಬ್ರನ್ನು ಯುಕೆಗೆ ಕರೆಸುತ್ತಿದ್ದೇವೆ ಎಂದು ಹೇಳಿತ್ತು. ಅದಕ್ಕಾಗಿ ಹೊರಟಿದ್ದ ತಮ್ಮನ್ನು ಮುಂಬೈ ಏರ್ಪೋರ್ಟ್ನಲ್ಲಿ ತಡೆಯುತ್ತಿದ್ದಂತೆ ಇದೇ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡ ರಾಣಾ, ಲಂಡನ್ಗೆ ಹೊರಟಿದ್ದ ನನ್ನನ್ನು ಮುಂಬೈ ಏರ್ಪೋರ್ಟ್ನಲ್ಲಿ ತಡೆಯಲಾಯಿತು. ನಾನು ಲಂಡನ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಕಳೆದ ಒಂದು ವಾರದ ಹಿಂದೆಯೇ ತಿಳಿಸಿದ್ದೇನೆ. ಆದರೆ ಇ.ಡಿ.ಯವರು ಏನೂ ಹೇಳಲಿಲ್ಲ. ಆದರೆ ನಾನು ಮುಂಬೈ ಏರ್ಪೋರ್ಟ್ಗೆ ಬಂದಮೇಲೆ ನನ್ನನ್ನು ತಡೆಯಲಾಯಿತು ಮತ್ತು ಅರೆಕ್ಷಣದಲ್ಲಿ ನನ್ನ ಇನ್ಬಾಕ್ಸ್ಗೆ ಇ.ಡಿ.ಯಿಂದ ಸಮನ್ಸ್ ಬಂತು ಎಂದು ತಿಳಿಸಿದ್ದಾರೆ.
I was stopped today at Mumbai immigration from travelling to deliver this address & onwards to @journalismfest to deliver d keynote speech on Indian democracy. I had made this announcement public over weeks, yet the ED summon very curiously arrived in my inbox after i was stopped https://t.co/BGNm8pcjlD
— Rana Ayyub (@RanaAyyub) March 29, 2022
ಇನ್ನು ಇ.ಡಿ.ಅಧಿಕಾರಿಗಳು ರಾಣಾ ಅಯೂಬ್ರಿಗೆ ಏಪ್ರಿಲ್ 1ರಂದು ವಿಚಾಚರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ರಾಣಾ ವಿರುದ್ಧ ಕಳೆದ ಸೆಪ್ಟೆಂಬರ್ನಲ್ಲಿ ಉತ್ತರ ಪ್ರದೇಶ ಘಾಜಿಯಾಬಾದ್ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಹಿಂದು ಐಟಿ ಸೆಲ್ ಎಂಬ ಎನ್ಜಿಒದ ಸಂಸ್ಥಾಪಕರು, ಘಾಜಿಯಾಬಾದ್ನ ಇಂದಿರಾಪುರಂ ನಿವಾಸಿಯಾಗಿರುವ ವಿಕಾಸ್ ಸಾಂಕೃತ್ಯಾಯನ್ ಎಂಬುವರು ರಾಣಾ ವಿರುದ್ಧ ದೂರು ನೀಡಿದ್ದರು. 2020-2021ರ ಅವಧಿಯಲ್ಲಿ ರಾಣಾ ದತ್ತಿ ಉದ್ದೇಶಗಳ ಕಾರಣ ನೀಡಿ ಆನ್ಲೈನ್ ಮೂಲಕ ಸುಮಾರು 2.69 ಕೋಟಿ ರೂಪಾಯಿಯನ್ನು ಆನ್ಲೈನ್ ವೇದಿಕೆ ಕೆಟ್ಟೋ ಮೂಲಕ ಸಂಗ್ರಹಿಸಿದ್ದಾರೆ. ಇದರಲ್ಲಿ ಕೆಲವು ಘಟಕಗಳ ಹೆಸರಲ್ಲಿ ನಕಲಿ ಬಿಲ್ಗಳನ್ನು ಸಿದ್ಧಪಡಿಸಿದ್ದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವನ್ನು ಇ.ಡಿ.ಕೈಗೆತ್ತಿಕೊಂಡಿದ್ದು, ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: Devon Conway: ‘ನಿಮ್ಮ ನಾಯಕತ್ವದಲ್ಲಿ ನಾನು ಆಡಬೇಕು’; ಕಿವೀಸ್ ಆಟಗಾರನ ಕೋರಿಕೆಗೆ ಧೋನಿ ಉತ್ತರ ಏನಿತ್ತು?
ಗಾಜಿಯಾಬಾದ್ ಪ್ರಕರಣ: ಪತ್ರಕರ್ತೆ ರಾಣಾ ಅಯೂಬ್ಗೆ ಬಾಂಬೆ ಹೈಕೋರ್ಟ್ನಿಂದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು