ಗಾಜಿಯಾಬಾದ್ ಪ್ರಕರಣ: ಪತ್ರಕರ್ತೆ ರಾಣಾ ಅಯೂಬ್​ಗೆ ಬಾಂಬೆ ಹೈಕೋರ್ಟ್​ನಿಂದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು

Ghaziabad Incident: ನ್ಯಾಯಮೂರ್ತಿ ಪಿ.ಡಿ ನಾಯಕ್ ಅವರ ಏಕ ಸದಸ್ಯ ಪೀಠವು ರಾಣಾ ಅಯೂಬ್‌ಗೆ ನಾಲ್ಕು ವಾರಗಳ ಅವಧಿಗೆ ರಕ್ಷಣೆ ನೀಡಬಹುದು ಎಂದು ಆದೇಶಿಸಿದ್ದು ಸೂಕ್ತ ಪರಿಹಾರಗಳನ್ನು ಪಡೆಯಲು ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸಲು ಆಕೆಗೆ ಸಾಧ್ಯವಾಗುವಂತೆ ಮಾಡಿದೆ.

ಗಾಜಿಯಾಬಾದ್ ಪ್ರಕರಣ: ಪತ್ರಕರ್ತೆ ರಾಣಾ ಅಯೂಬ್​ಗೆ ಬಾಂಬೆ ಹೈಕೋರ್ಟ್​ನಿಂದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು
ರಾಣಾ ಅಯೂಬ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 21, 2021 | 7:38 PM

ಮುಂಬೈ : ಗಾಜಿಯಾಬಾಬ್​ನಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ನಡೆದ ಹಲ್ಲೆ ಕುರಿತು ಟ್ವೀಟ್ ಮಾಡಿರುವ ಬಗ್ಗೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಬಾಂಬೆ ಹೈಕೋರ್ಟ್ ಸೋಮವಾರ ಪತ್ರಕರ್ತೆ ರಾಣಾ ಅಯೂಬ್‌ಗೆ 4 ವಾರಗಳ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದೆ.ನ್ಯಾಯಮೂರ್ತಿ ಪಿ.ಡಿ ನಾಯಕ್ ಅವರ ಏಕ ಸದಸ್ಯ ಪೀಠವು ಅಯೂಬ್‌ಗೆ ನಾಲ್ಕು ವಾರಗಳ ಅವಧಿಗೆ ರಕ್ಷಣೆ ನೀಡಬಹುದು ಎಂದು ಆದೇಶಿಸಿದ್ದು ಸೂಕ್ತ ಪರಿಹಾರಗಳನ್ನು ಪಡೆಯಲು ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸಲು ಆಕೆಗೆ ಸಾಧ್ಯವಾಗುವಂತೆ ಮಾಡಿದೆ. ನಾಲ್ಕು ವಾರಗಳ ಅವಧಿಯಲ್ಲಿ ಬಂಧನದ ಸಂದರ್ಭದಲ್ಲಿ, ಅರ್ಜಿದಾರರನ್ನು ಒಂದು ಅಥವಾ ಹೆಚ್ಚಿನ ಜಾಮೀನುಗಳೊಂದಿಗೆ 25 ಸಾವಿರ ಪಿಆರ್ ಬಾಂಡ್ ಅನ್ನು ಕಾರ್ಯಗತಗೊಳಿಸಿದ ನಂತರ ಬಿಡುಗಡೆ ಮಾಡಲಾಗುವುದು “ಎಂದು ನ್ಯಾಯಪೀಠ ಆದೇಶಿಸಿತು.

ಅಯೂಬ್ ಪರ ಹಾಜರಾದ ಹಿರಿಯ ವಕೀಲ ಮಿಹಿರ್ ದೇಸಾಯಿ, ಈಕೆ ಜಾಗತಿಕವಾಗಿ ಹೆಸರಾಂತ ಪತ್ರಕರ್ತೆಯಾಗಿದ್ದು, ಅವರು ತಮ್ಮ ಕೆಲಸಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಘಟನೆಯ ಸುದ್ದಿ ವರದಿಗಳ ಆಧಾರದ ಮೇಲೆ ಮಾತ್ರ ಅವರು ಟ್ವೀಟ್ ಮಾಡಿದ್ದಾರೆ ಎಂದು ವಾದಿಸಿದರು.

ಘಟನೆಯ ಬಗ್ಗೆ ಟೀಕೆಗಳು ಕೇಳಿ ಬಂದಾಗ ಅಯೂಬ್ ಟ್ವೀಟ್ ಅನ್ನು ಅಳಿಸಿದ್ದಾರೆ. ಅಯೂಬ್ ಇತ್ತೀಚೆಗೆ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಆದ್ದರಿಂದ ಉತ್ತರಪ್ರದೇಶದಲ್ಲಿರುವ ವಿಚಾರಣೆಯ ನ್ಯಾಯಾಲಯಗಳನ್ನು ಸಂಪರ್ಕಿಸಲು 3-4 ವಾರಗಳ ಸಮಯ ಬೇಕಾಗುತ್ತದೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಎಲ್ಲಾ ಅಪರಾಧಗಳಿಗೆ 3 ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ದೇಸಾಯಿ ಗಮನಸೆಳೆದರು.

ಅರ್ಜಿದಾರನು ನ್ಯಾಯವ್ಯಾಪ್ತಿಯ ನ್ಯಾಯಾಲಯವನ್ನು ಸಂಪರ್ಕಿಸಲು ಮಾತ್ರ ರಕ್ಷಣೆ ಕೋರಿರುವುದರಿಂದ, ಅರ್ಹತೆಗಳ ಮೇಲೆ ಅರ್ಜಿಯ ತೀರ್ಪು ಅನಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹಿನ್ನೆಲೆ ಏನು? ಮೈಕ್ರೋಬ್ಲಾಗಿಂಗ್ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ವಿಟರ್ ಸೇರಿದಂತೆ ಉತ್ತರಪ್ರದೇಶ ಪೊಲೀಸರು ರಾಣಾ ಅಯೂಬ್ ಮತ್ತು ಇತರ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ ಎರಡು ದಿನಗಳ ನಂತರ ಜೂನ್ 18 ರಂದು ಅಯೂಬ್ ನ್ಯಾಯಾಲಯವನ್ನು ಸಂಪರ್ಕಿಸಿದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆಗಳಿಗೆ ಪ್ರಚೋದನೆ), 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ), 505 (ಸಾರ್ವಜನಿಕ ಕಿಡಿಗೇಡಿತನವನ್ನು ಉಂಟುಮಾಡುವ ಹೇಳಿಕೆಗಳು) ಮತ್ತು 120 ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಎಫ್‌ಐಆರ್ ನೋಂದಾಯಿಸಲಾಗಿದೆ.

ಇದು ಟ್ವಿಟರ್ ಇಂಕ್ ಮತ್ತು ಟ್ವಿಟರ್ ಕಮ್ಯುನಿಕೇಷನ್ಸ್ ಪ್ರೈ. ಲಿಮಿಟೆಡ್ ಟ್ವೀಟ್ಗಳನ್ನು ತೆಗೆದುಹಾಕುವಲ್ಲಿ ವಿಫಲವಾಗಿದೆ ಮತ್ತು ವಿಡಿಯೊ ವೈರಲ್ ಆಗಲು ಅವಕಾಶ ನೀಡಿದೆ ಎಂದು ಆರೋಪಿಸಲಾಗಿದೆ. ವಯಸ್ಸಾದ ಮುಸ್ಲಿಂ ವ್ಯಕ್ತಿಯೊಬ್ಬರು ಆರೋಪಿಗಳು ನನ್ನ ಗಡ್ಡವನ್ನು ಕತ್ತರಿಸಿದ್ದಾರೆ.ಅವರು ನನ್ನಲ್ಲಿ “ವಂದೇ ಮಾತರಂ” ಮತ್ತು “ಜೈ ಶ್ರೀ ರಾಮ್” ಎಂದು ಕೂಗಲು ಒತ್ತಾಯಿಸಿದರು ಎಂದು ವಿಡಿಯೊವೊಂದರಲ್ಲಿ ಆರೋಪಿಸಿದ ಬೆನ್ನಲ್ಲೇ ಎಫ್ಐಆರ್ ದಾಖಲಾಗಿತ್ತು.

ಇದಾದ ನಂತರ ಸಂತ್ರಸ್ತ ವೃದ್ಧನ ಆರೋಪ ತಳ್ಳಿ ಹಾಕಿದ ಉತ್ತರ ಪ್ರದೇಶ ಪೊಲೀಸರು ಈ ಘಟನೆಯಲ್ಲಿ ಯಾವುದೇ “ಕೋಮು ಕೋನ” ಇಲ್ಲ ಎಂದು ಹೇಳಿದರು.ಸಂತ್ರಸ್ತ ವೃದ್ಧ ಸೂಫಿ ಅಬ್ದುಲ್ ಸಮದ್ ಮೇಲೆ ಮಂದಿ ಹಲ್ಲೆ ಮಾಡಿದ್ದಾರೆ. ಏಕೆಂದರೆ ಸಮದ್ ಮಾರಾಟ ಮಾಡಿದ ತಬೀಜ್ (ತಾಯತ) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಲ್ಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿರುವ ಇತರ ಆರೋಪಿಗಳು ನ್ಯೂಸ್ ವೆಬ್‌ಸೈಟ್ ದಿ ವೈರ್ , ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್, ಕಾಂಗ್ರೆಸ್ ರಾಜಕಾರಣಿಗಳಾದ ಶಾಮಾ ಮೊಹಮ್ಮದ್, ಸಲ್ಮಾನ್ ನಿಜಾಮಿ ಮತ್ತು ಮಸ್ಕೂರ್ ಉಸ್ಮಾನಿ.

ಎಫ್‌ಐಆರ್​​ನಲ್ಲಿ ಏನಿದೆ? ಹಿರಿಯ ವ್ಯಕ್ತಿಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಕೆಲವು ಜನರು ಪ್ರಸಾರ ಮಾಡಿದ್ದಾರೆ ಎಂದು ಎಫ್‌ಐಆರ್ ಹೇಳುತ್ತದೆ, ಇದರಲ್ಲಿ ಅಬ್ದುಲ್ ಸಮದ್ ಎಂಬ ವೃದ್ಧನನ್ನು ಹೊಡೆಯುವುದನ್ನು ಕಾಣಬಹುದು ಮತ್ತು ಅವನ ಗಡ್ಡವನ್ನು ಬಲವಂತವಾಗಿ ಕತ್ತರಿಸುತ್ತಿರುವುದು  ಇದೆ. ಸಮದ್ ಅವರಲ್ಲಿ ಬಲವಂತ ಮಾಡಿ “ಜೈ ಶ್ರೀ ರಾಮ್” ಮತ್ತು “ವಂದೇ ಮಾತರಂ” ಎಂದು ಕೂಗುವಂತೆ ಹೇಳಲಾಗಿದೆ.

ಇದಲ್ಲದ ಆಪಾದಿತರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ಗಳಲ್ಲಿ ಘಟನೆಯ ವಿಡಿಯೊವನ್ನು ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಪ್ರಸಾರ ಮಾಡಿದರು ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಕೋಮು ದ್ವೇಷವನ್ನು ಉಂಟುಮಾಡುವ ಉದ್ದೇಶದಿಂದ ಅವರು ವಿಡಿಯೊವನ್ನು ಕೋಮು ಕೋನವನ್ನು ನೀಡಿದರು ಎಂದು ಎಫ್‌ಐಆರ್ ಆರೋಪಿಸಿದೆ.

ವಿಡಿಯೊಗಳನ್ನು ಹಂಚಿಕೊಳ್ಳುವಾಗ ವ್ಯಕ್ತಪಡಿಸಿದ ಅಭಿಪ್ರಾಯಗಳು ವೈಯಕ್ತಿಕ ಅಭಿಪ್ರಾಯಗಳಲ್ಲ, ಬದಲಿಗೆ ಅವುಗಳನ್ನು ಸ್ಪಷ್ಟ ಉದ್ದೇಶದಿಂದ ಹಂಚಿಕೊಳ್ಳಲಾಗಿದೆ ಎಂದು ಎಫ್‌ಐಆರ್ ಹೇಳುತ್ತದೆ. ವಿಡಿಯೊ ಹಂಚಿಕೆಯು ಕ್ರಿಮಿನಲ್ ಪಿತೂರಿಯನ್ನು ಸೂಚಿಸುತ್ತದೆ. ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕೋಮು ದ್ವೇಷವನ್ನು ಪ್ರಚೋದಿಸುವ ಉದ್ದೇಶ ಹೊಂದಿದ್ದರು.

ಇದಲ್ಲದೆ, ಗಾಜಿಯಾಬಾದ್ ಪೊಲೀಸರು ಕೈಗೊಂಡ ಪ್ರಾಥಮಿಕ ತನಿಖೆಯ ಮೇರೆಗೆ, ವೃದ್ಧನನ್ನು ಥಳಿಸುವ ವಿಡಿಯೊದಲ್ಲಿರುವ ಜನರು ಅಬ್ದುಲ್ ಸಮದ್ ಅವರಿಗೆ ತಿಳಿದಿದ್ದಾರೆ. ಸಮದ್ ಮಾರಿದ ತಬೀಜ್ (ತಾಯಿತ) ಅದು ಕೆಲಸ ಮಾಡಲಿಲ್ಲ ಎಂದು ಹೇಳಿಕೊಂಡು ಕೆಲವರು ಹೊಡೆದಿದ್ದಾರೆ ಎಂದು ಎಫ್‌ಐಆರ್ನಲ್ಲಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಗಾಜಿಯಾಬಾದ್ ಪೊಲೀಸರು ಈ ಎಲ್ಲ ಸಂಗತಿಗಳನ್ನು ಸ್ಪಷ್ಟಪಡಿಸುವ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಆದಾಗ್ಯೂ, ಇದು ಕೆಲವು ಜನರು ಮತ್ತು ವೃದ್ಧ ಸಮದ್ ನಡುವಿನ ವೈಯಕ್ತಿಕ ವಿವಾದ ಎಂದು ಸ್ಪಷ್ಟಪಡಿಸಿದರೂ, ಆರೋಪಿಗಳು, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಕೋಮು ದ್ವೇಷವನ್ನು ಪ್ರಚೋದಿಸುತ್ತಲೇ ಇದ್ದರು. ಈ ಕಾರಣದಿಂದಾಗಿ, ಕೋಮು ಕೋನದೊಂದಿಗೆ ನಕಲಿ ಸುದ್ದಿ ದೊಡ್ಡ ಪ್ರಮಾಣದಲ್ಲಿ ಹರಡಿತು.

ನಕಲಿ ಸುದ್ದಿಗಳು ಉತ್ತರ ಪ್ರದೇಶದ ಜನರ ಮತ್ತು ಆರೋಪಿ ವ್ಯಕ್ತಿಯ ಮನಸ್ಸಿನಲ್ಲಿ ಭಯದ ಭಾವನೆಯನ್ನು ಹುಟ್ಟುಹಾಕಿದೆ ಎಂದು ಎಫ್ಐಆರ್ ಆರೋಪಿಸಿದೆ, ಉದ್ದೇಶಪೂರ್ವಕವಾಗಿ ನಕಲಿ ಸುದ್ದಿಗಳನ್ನು ಹರಡಿದೆ ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಶಾಲಿ ಉಪಸ್ಥಿತಿಯನ್ನು ಹೊಂದಿರುವುದರಿಂದ ಅವರಿಗೆ ಜವಾಬ್ದಾರಿಯೂ ಇದೆ .

ಸೋಶಿಯಲ್ ಮೀಡಿಯಾದಲ್ಲಿ ನಕಲಿ ಮತ್ತು ದಾರಿತಪ್ಪಿಸುವ ಸುದ್ದಿಗಳನ್ನು ಹೊರಹಾಕಲು ಪ್ರಯತ್ನಿಸಿದ್ದು ಇದೇ ಮೊದಲಲ್ಲ ಮತ್ತು ಅವರೆಲ್ಲರೂ ವಿಡಿಯೊದ ಸತ್ಯವನ್ನು ಪರಿಶೀಲಿಸದೆ ವಿಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಎಫ್ಐಆರ್ ಹೇಳಿದೆ.

ಇದನ್ನೂ ಓದಿ:  ಗಾಜಿಯಾಬಾದ್​ನಲ್ಲಿ ಹಿರಿಯ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ: 50 ಟ್ವೀಟ್​ಗಳನ್ನು ನಿರ್ಬಂಧಿಸಿದ ಟ್ವಿಟರ್ ಇಂಡಿಯಾ

ಇದನ್ನೂ ಓದಿ:  ಗಾಜಿಯಾಬಾದ್​ನಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಪೊಲೀಸರ ವಾದ ತಳ್ಳಿದ ಸಂತ್ರಸ್ತ ಅಬ್ದುಲ್ ಸಮದ್ ಕುಟುಂಬ

(Tweet on the Ghaziabad incident Bombay High Court on granted 4 weeks transit anticipatory bail to journalist Rana Ayyub)

Published On - 7:35 pm, Mon, 21 June 21

ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!