Population control: ಹೆಚ್ಚು ಜನಸಂಖ್ಯೆಯ ಉತ್ತರ ಪ್ರದೇಶದಲ್ಲಿ ಕಡಿಮೆ ಮಕ್ಕಳ ಹೊಂದಿದವರಿಗೆ ಮಾತ್ರವೇ ಸರ್ಕಾರಿ ಸೌಲಭ್ಯ ಪ್ರಾಪ್ತಿ!

ಉತ್ತರ ಪ್ರದೇಶ ಕಾನೂನು ಆಯೋಗವು ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಹಾಲಿ ಜಾರಿಯಲ್ಲಿರುವ ನೀತಿಗಳನ್ನು ಅಧ್ಯಯನ ನಡೆಸುತ್ತಿದೆ. ಜೊತೆಗೆ ಚೀನಾ, ಕೆನಡಾದ ಜನಸಂಖ್ಯಾ ನೀತಿಯ ಬಗ್ಗೆಯೂ ಅಧ್ಯಯನ ನಡೆಸಲಿದೆ. ನಾವು ಏನೇ ಮಾಡಿದರೂ, ಸಂವಿಧಾನದ ವ್ಯಾಪ್ತಿಯಲ್ಲಿ ಮಾಡಲಿದ್ದೇವೆ ಅಂದಿದ್ದಾರೆ ಆದಿತ್ಯನಾಥ್ ಮಿತ್ತಲ್ .

Population control: ಹೆಚ್ಚು ಜನಸಂಖ್ಯೆಯ ಉತ್ತರ ಪ್ರದೇಶದಲ್ಲಿ ಕಡಿಮೆ ಮಕ್ಕಳ ಹೊಂದಿದವರಿಗೆ ಮಾತ್ರವೇ ಸರ್ಕಾರಿ ಸೌಲಭ್ಯ ಪ್ರಾಪ್ತಿ!
ಹೆಚ್ಚು ಜನಸಂಖ್ಯೆಯ ಉತ್ತರ ಪ್ರದೇಶದಲ್ಲಿ ಕಡಿಮೆ ಮಕ್ಕಳ ಹೊಂದಿದವರಿಗೆ ಮಾತ್ರವೇ ಸರ್ಕಾರದ ಸೌಲಭ್ಯಗಳು ಪ್ರಾಪ್ತಿ! ಇಬ್ಬರು ಮಕ್ಕಳ ಹೊಂದುವುದಕ್ಕೆ ಪೋತ್ಸಾಹ
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Jun 21, 2021 | 6:47 PM

ಇತ್ತೀಚೆಗೆ ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಿದ್ದರು. ಈಗ ಉತ್ತರ ಪ್ರದೇಶ ರಾಜ್ಯ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಉತ್ತರ ಪ್ರದೇಶದ ಕಾನೂನು ಆಯೋಗವು ಕಡಿಮೆ ಮಕ್ಕಳನ್ನು ಹೊಂದಿದವರಿಗೆ ಮಾತ್ರವೇ ಸರ್ಕಾರದ ಸೌಲಭ್ಯ ಸಿಗುವಂತೆ ಕಾನೂನು ಜಾರಿಗೆ ಕರಡು ರೂಪಿಸುವ ಕಾರ್ಯ ಆರಂಭಿಸಿದೆ. ಕಡಿಮೆ ಮಕ್ಕಳನ್ನು ಪಡೆಯುವವರಿಗೆ ಪೋತ್ಸಾಹ ನೀಡುವುದು ಉತ್ತರ ಪ್ರದೇಶ ಕಾನೂನು ಆಯೋಗದ ಉದ್ದೇಶ.

ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಅತಿ ಹೆಚ್ಚು ಲೋಕಸಭಾ ಸದಸ್ಯರನ್ನು ಕಳಿಸುವ ರಾಜ್ಯ ಕೂಡ ಉತ್ತರ ಪ್ರದೇಶ. ಭೌಗೋಳಿಕವಾಗಿಯೂ ದೇಶದಲ್ಲಿ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶ. ಯುಪಿ ರಾಜ್ಯದಲ್ಲಿ 2022ರ ವೇಳೆಗೆ ಜನಸಂಖ್ಯೆ 23.76 ಕೋಟಿಗೇರುವ ಅಂದಾಜಿದೆ. ಆದರೇ, ಈಗ ಯುಪಿ ತನ್ನ ಜನಸಂಖ್ಯೆಯನ್ನು ನಿಯಂತ್ರಿಸಲು ಮುಂದಾಗಿದೆ.

ಹೀಗಾಗಿ ಕಡಿಮೆ ಮಕ್ಕಳನ್ನು ಹೊಂದುವುದನ್ನು ಪೋತ್ಸಾಹಿಸಲು ಕಾನೂನು ಜಾರಿಗೆ ತರಲು ಉತ್ತರ ಪ್ರದೇಶ ಕಾನೂನು ಆಯೋಗ ಕರಡು ರೂಪಿಸುತ್ತಿದೆ. ಇಬ್ಬರು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದವರಿಗೆ ಮಾತ್ರವೇ ಸರ್ಕಾರದ ಸೌಲಭ್ಯಗಳು ಲಭ್ಯವಾಗುವಂತೆ ಕಾನೂನು ರೂಪಿಸಲು ಉತ್ತರ ಪ್ರದೇಶ ಕಾನೂನು ಆಯೋಗ ನಿರ್ಧರಿಸಿದೆ ಎಂದು ಉತ್ತರ ಪ್ರದೇಶ ಕಾನೂನು ಆಯೋಗದ ಅಧ್ಯಕ್ಷ ಆದಿತ್ಯನಾಥ ಮಿತ್ತಲ್ ಹೇಳಿದ್ದಾರೆ. ಮುಂದಿನ 2 ತಿಂಗಳಲ್ಲಿ ಕಾನೂನು ಜಾರಿಗೆ ಅಗತ್ಯವಾದ ಮಸೂದೆಯ ಕರಡು ರೂಪಿಸುವುದಾಗಿ ಆದಿತ್ಯನಾಥ್ ಮಿತ್ತಲ್ ಹೇಳಿದ್ದಾರೆ.

ಇಬ್ಬರು ಮಕ್ಕಳನ್ನು ಹೊಂದುವುದಕ್ಕೆ ಮಾತ್ರ ಪೋತ್ಸಾಹ:

Population control uttar pradesh also to bring in 2 child policy to government facilities 2

ಇಬ್ಬರು ಮಕ್ಕಳನ್ನು ಹೊಂದುವುದಕ್ಕೆ ಮಾತ್ರ ಪೋತ್ಸಾಹ: ಈ ಬಗ್ಗೆ ಸಾರ್ವಜನಿಕರ ಸಲಹೆ, ಅಭಿಪ್ರಾಯ ಸಂಗ್ರಹ

ಈ ಬಗ್ಗೆ ಸಾರ್ವಜನಿಕರ ಸಲಹೆ, ಅಭಿಪ್ರಾಯ ಪಡೆಯಲಿದೆ. ಇಬ್ಬರು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದವರಿಗೆ ಮಾತ್ರವೇ, ಸರ್ಕಾರದ ಸೌಲಭ್ಯಗಳಾದ ಕೆಲ ಯೋಜನೆಗಳ ಸಬ್ಸಿಡಿ, ರೇಷನ್ ವಿತರಣೆ, ರಾಜ್ಯ ಸರ್ಕಾರದ ಉದ್ಯೋಗ, ರಾಜ್ಯ ಸರ್ಕಾರದ ಅಗ್ಗದ ಮನೆ ಸೌಲಭ್ಯಗಳು ಸಿಗುವಂತೆ ಮಾಡಲು ಕಾನೂನು ಜಾರಿಗೆ ಕರಡು ರೂಪಿಸುವ ಕಾರ್ಯವನ್ನು ಉತ್ತರ ಪ್ರದೇಶ ಕಾನೂನು ಆಯೋಗ ಆರಂಭಿಸಿದೆ. ಯಾವಾಗನಿಂದ ಕಾಯಿದೆ ಜಾರಿಯಾಗುತ್ತೆ ಎಂಬುದನ್ನು ಜನರಿಗೆ ತಿಳಿಸಲಾಗುತ್ತೆ. ಕಾನೂನು ಪೂರ್ವಾನ್ವಯವಾಗುವಂತೆ ಜಾರಿ ಮಾಡಲ್ಲ.

ಇನ್ನೂ ಮುಂದೆಯಷ್ಟೇ ಕಾಯಿದೆ ಜಾರಿಗೊಳಿಸಿ, ದಿನಾಂಕ ನಿಗದಿಪಡಿಸಿ, ಅಂದಿನಿಂದ ಮುಂದೆ ಎರಡು ಮಕ್ಕಳನ್ನು ಪಡೆಯುವವರಿಗೆ ಮಾತ್ರ ರಾಜ್ಯ ಸರ್ಕಾರದಿಂದ ಸೌಲಭ್ಯಗಳನ್ನು ನೀಡುವ ಮೂಲಕ ಪೋತ್ಸಾಹ ನೀಡಲಾಗುತ್ತೆ. ಕಟ್ ಆಫ್ ದಿನಾಂಕ ನಿಗದಿಪಡಿಸುವಾಗ 9 ತಿಂಗಳ ಪ್ರಗ್ನೆನ್ಸಿ ಅವಧಿಯನ್ನು ಪರಿಗಣಿಸಲಾಗುತ್ತೆ ಎಂದು ಆದಿತ್ಯನಾಥ್ ಮಿತ್ತಲ್ ಹೇಳಿದ್ದಾರೆ. ಹೊಸ ಕಾಯಿದೆಯು ಯಾರಿಗೂ ಶಿಕ್ಷೆಯಲ್ಲ. ಆದರೆ, ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಲು ತೀರ್ಮಾನಿಸುವವರು, ಸರ್ಕಾರದ ಸೌಲಭ್ಯಗಳನ್ನು ಪಡೆಯಲಾಗಲ್ಲ ಅಷ್ಟೇ ಎಂದು ಆದಿತ್ಯನಾಥ್ ಮಿತ್ತಲ್ ಹೇಳಿದ್ದಾರೆ. (ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9) ಉತ್ತರ ಪ್ರದೇಶ ಕಾನೂನು ಆಯೋಗವು ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಹಾಲಿ ಜಾರಿಯಲ್ಲಿರುವ ನೀತಿಗಳನ್ನು ಅಧ್ಯಯನ ನಡೆಸುತ್ತಿದೆ. ಜೊತೆಗೆ ಚೀನಾ, ಕೆನಡಾದ ಜನಸಂಖ್ಯಾ ನೀತಿಯ ಬಗ್ಗೆಯೂ ಅಧ್ಯಯನ ನಡೆಸಲಿದೆ. ನಾವು ಏನೇ ಮಾಡಿದರೂ, ಸಂವಿಧಾನದ ವ್ಯಾಪ್ತಿಯಲ್ಲಿ ಮಾಡಲಿದ್ದೇವೆ. ಶಿಕ್ಷಣವು ಪ್ರಜೆಗಳ ಮೂಲಭೂತ ಹಕ್ಕು. ಹೀಗಾಗಿ 2 ಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದವರ ಮಕ್ಕಳು, ಶಾಲೆಗೆ ದಾಖಲಾಗಲು ಯಾವುದೇ ನಿರ್ಬಂಧ ಇರಲ್ಲ ಎಂದಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ 2015-16ರ ಪ್ರಕಾರ, ಉತ್ತರ ಪ್ರದೇಶದ ಮಹಿಳೆಯರ ಸಂತಾನೋತ್ಪತ್ತಿ ಪ್ರಮಾಣ ಪ್ರತಿ ಮಹಿಳೆಗೆ 2.74 ಮಕ್ಕಳು. ಆದರೆ, ರಾಷ್ಟ್ರೀಯ ಸಂತಾನೋತ್ಪತ್ತಿ ಪ್ರಮಾಣ ಪ್ರತಿ ಮಹಿಳೆಗೆ 2.2 ಮಕ್ಕಳು. ಆದರೆ, ಯುಪಿ ಪಕ್ಕದ ಬಿಹಾರದಲ್ಲಿ ಸಂತಾನೋತ್ಪತ್ತಿ ಪ್ರಮಾಣ ಪ್ರತಿ ಮಹಿಳೆಗೆ 3.41 ಮಕ್ಕಳು. ಉತ್ತರ ಪ್ರದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ 2 ಮಕ್ಕಳ ನೀತಿಯು 1976ರ ಜನಸಂಖ್ಯಾ ನೀತಿಗಿಂತ ಭಿನ್ನವಾಗಿದೆ. ಉತ್ತರ ಪ್ರದೇಶ ಕಾನೂನು ಆಯೋಗವು 2 ಮಕ್ಕಳ ನೀತಿಯ ಬಗ್ಗೆ ಕಾನೂನಿನ ಕರಡು ರೂಪಿಸಿ ರಾಜ್ಯ ಸರ್ಕಾರಕ್ಕೆ ಕಳಿಸಲಿದೆ. ಆದಾದ ಬಳಿಕ ರಾಜ್ಯ ಸರ್ಕಾರವು ಯಾವ ವರ್ಗವನ್ನು ಕಾಯ್ದೆ ವ್ಯಾಪ್ತಿಗೆ ಸೇರಿಸಬೇಕು, ಯಾವ ವರ್ಗದ ಜನರನ್ನು ಕಾಯ್ದೆ ವ್ಯಾಪ್ತಿಯಿಂದ ಕೈ ಬಿಡಬೇಕೆಂದು ತೀರ್ಮಾನ ಕೈಗೊಳ್ಳಲಿದೆ.

ಉತ್ತರ ಪ್ರದೇಶದಲ್ಲಿ 2 ಮಕ್ಕಳನ್ನು ಹೊಂದುವ ನೀತಿ ಜಾರಿಗೆ ತರುವ ಬಗ್ಗೆ ಬಿಜೆಪಿ ರಾಜ್ಯ ಸರ್ಕಾರ ಗಂಭೀರವಾಗಿದೆ. ರಾಜಕೀಯ ಮಾಡುವವರು ಮಾಡಲಿ. ನಮಗೆ ನಮ್ಮ ರಾಷ್ಟ್ರವೇ ಮೊದಲು. ಜನಸಂಖ್ಯೆ ಹೆಚ್ಚಳವೇ ಹೊರೆಯಾಗಬಾರದು ಎಂದು ಬಿಜೆಪಿ ವಕ್ತಾರೆ ಅನಿಲಾ ಸಿಂಗ್ ಹೇಳಿದ್ದಾರೆ.

ಇನ್ನೂ ಯುಪಿ ಕಾನೂನು ಆಯೋಗದ ಹೆಜ್ಜೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ, ಹಮ್ ದೋ, ಹಾಮರೇ ದೋ ಎಂದು ಹೇಳಿದ ಮೇಲೆ ದೇಶದಲ್ಲಿ ಈಗಾಗಲೇ ಜನಸಂಖ್ಯೆ ಕಡಿಮೆಯಾಗುತ್ತಿದೆ. ಎರಡು ಬಿಜೆಪಿ ರಾಜ್ಯಗಳು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿವೆ. ಇದನ್ನು ಹೇಗೆ ಜಾರಿ ಮಾಡ್ತಾರೆ ಎನ್ನುವುದನ್ನ ಕಾದು ನೋಡಬೇಕು. ಬಿಜೆಪಿ ಸರ್ಕಾರಗಳು ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಕಾಯಿದೆ ಜಾರಿಗೆ ತರುತ್ತಾವೆ. ನಾನು ಸಮಸ್ಯೆ ಎಂದು ಹೇಳುತ್ತಿಲ್ಲ. 2 ಮಕ್ಕಳನ್ನು ಮಾತ್ರ ಹೊಂದಬೇಕೆಂದು ಕಡ್ಡಾಯ ಮಾಡಿದರೇ, ಅದರಿಂದ ಸಮಸ್ಯೆಯಾಗುತ್ತೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.

(Population control uttar pradesh also to bring in 2 child policy to government facilities)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್