ಕೈಲಾಶ್​ ಸಿಂಗ್​ ಸೇರಿ ಇನ್ನೂ ಕೆಲವು ಸದಸ್ಯರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಿದ ಅಖಿಲೇಶ್ ಯಾದವ್​

ಉತ್ತರ ಪ್ರದೇಶದಲ್ಲಿ ಈ ಬಾರಿ ಸರ್ಕಾರ ರಚನೆ ಮಾಡಲೇಬೇಕು ಎಂಬ ಆಸೆಯಲ್ಲಿದ್ದ ಸಮಾಜವಾದಿ ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಸೋಲು ಕಂಡಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದೆ.

ಕೈಲಾಶ್​ ಸಿಂಗ್​ ಸೇರಿ ಇನ್ನೂ ಕೆಲವು ಸದಸ್ಯರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಿದ ಅಖಿಲೇಶ್ ಯಾದವ್​
ಅಖಿಲೇಶ್​ ಯಾದವ್​
TV9kannada Web Team

| Edited By: Lakshmi Hegde

Mar 30, 2022 | 12:39 PM

ಲಖನೌ: ಸಮಾಜವಾದಿ ಪಕ್ಷದ (Samajwadi Party) ಮಾಜಿ ಎಂಎಲ್​ಸಿ ಕೈಲಾಶ್​ ಸಿಂಗ್ (Kailash Singh)​,  ಘಾಜಿಪುರ್​ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಜಯ್ ಯಾದವ್​ ಸೇರಿ ಇನ್ನಿತರ ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್​ ಈ ನಿರ್ಧಾರ ಕೈಗೊಂಡಿದ್ದಾರೆ. ಘಾಜಿಪುರದಲ್ಲಿ ನಡೆದ ಎಂಎಲ್​ಸಿ ಚುನಾವಣೆ ವೇಳೆ ಇವರೆಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಉಚ್ಚಾಟನೆ ಮಾಡಲಾಗಿದೆ. 

ಅಖಿಲೇಶ್ ಯಾದವ್​ ಮಂಗಳವಾರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಎಸ್​ಪಿಯ ಮೈತ್ರಿ ಪಕ್ಷಗಳಾದ ಅಪ್ನಾ ದಳ್​ (ಕೆ), ಸುಹೆಲ್​ದೇವ್ ಭಾರತೀಯ ಸಮಾಜ ಪಾರ್ಟಿ (ಎಸ್​ಬಿಎಸ್​ಪಿ) ಮತ್ತು ರಾಷ್ಟ್ರೀಯ ಲೋಕ ದಳ್​ (ಆರ್​ಎಲ್​ಡಿ)ಯ ಮುಖಂಡರೂ ಪಾಲ್ಗೊಂಡಿದ್ದರು.  ಆದರೆ ಅಖಿಲೇಶ್​ ಯಾದವ್​ ಅವರ ಹತ್ತಿರದ ಸಂಬಂಧಿ, ಶಾಸಕ ಶಿವಪಾಲ್​ ಯಾದವ್​  (ಪ್ರಗತಿಶೀಲ ಸಮಾಜವಾದಿ ಪಾರ್ಟಿ ನಾಯಕ) ಅವರೇ ಭಾಗವಹಿಸಿರಲಿಲ್ಲ. ಅಷ್ಟೇ ಅಲ್ಲ, ಅಪ್ನಾ ದಳ್​​ ನಾಯಕಿ ಪಲ್ಲವಿ ಪಟೇಲ್ ಕೂಡ ಇರಲಿಲ್ಲ.  ಇನ್ನುಳಿದಂತೆ ಸುಹೆಲ್​ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ಓಂ ಪ್ರಕಾಶ್​ ರಾಜ್​ಭಾರ್​ ಮತ್ತು ಆರ್​ಎಲ್​​ಡಿ ಶಾಸಕಾಂಗ ಪಕ್ಷದ ನಾಯಕ ರಾಜ್​ಪಾಲ್​ ಬಲಿಯಾನ್​ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್​ಎಲ್​ಡಿ ನಾಯಕ ರಾಜ್​ಪಾಲ್​ ಬಲಿಯಾನ್​, ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸಭೆಯಲ್ಲಿ ಪರಾಮರ್ಶೆ ಮಾಡಲಾಯಿತು ಎಂದು ತಿಳಿಸಿದ್ದಾರೆ. ಶಿವಪಾಲ್​ ಯಾದವ್​ ಅವರ ಗೈರಿನ ಬಗ್ಗೆ ಪ್ರಶ್ನಿಸಿದ್ದಕ್ಕೆ, ಬೇರೆನೋ ಕಾರಣದಿಂದ ಅವರು ಬರದೆ ಇರಬಹುದು. ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಬಾರಿ ಸರ್ಕಾರ ರಚನೆ ಮಾಡಲೇಬೇಕು ಎಂಬ ಆಸೆಯಲ್ಲಿದ್ದ ಸಮಾಜವಾದಿ ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಸೋಲು ಕಂಡಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ 255 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೆ, ಸಮಾಜವಾದಿ ಪಕ್ಷ ಕೇವಲ 111 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೆ, ಸಮಾಜವಾದಿ ಪಾರ್ಟಿ ಪ್ರಬಲ ವಿರೋಧ ಪಕ್ಷವಾಗಿದೆ.

ಇದನ್ನೂ ಓದಿ: ಮುತ್ತು ಕೊಟ್ಟ ಪತ್ರಕರ್ತನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​; ಆಸ್ಕರ್​ ಗಲಾಟೆ ಬಳಿಕ ಮತ್ತೊಂದು ವಿಡಿಯೋ ವೈರಲ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada