Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುತ್ತು ಕೊಟ್ಟ ಪತ್ರಕರ್ತನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​; ಆಸ್ಕರ್​ ಗಲಾಟೆ ಬಳಿಕ ಮತ್ತೊಂದು ವಿಡಿಯೋ ವೈರಲ್​

Will Smith Viral Video: ವಿಲ್​ ಸ್ಮಿತ್​ ಅವರನ್ನು ತಬ್ಬಿಕೊಂಡ ಆ ಪತ್ರಕರ್ತ ನಂತರದಲ್ಲಿ ಮುತ್ತು ಕೊಡಲು ಶುರು ಮಾಡಿದ್ದ. ಕೆನ್ನೆಗೆ ಕಿಸ್​ ಮಾಡಿದ ಬಳಿಕ ತುಟಿಗೂ ಮುತ್ತಿಡಲು ಪ್ರಯತ್ನಿಸಿದ್ದ.

ಮುತ್ತು ಕೊಟ್ಟ ಪತ್ರಕರ್ತನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​; ಆಸ್ಕರ್​ ಗಲಾಟೆ ಬಳಿಕ ಮತ್ತೊಂದು ವಿಡಿಯೋ ವೈರಲ್​
ವಿಲ್ ಸ್ಮಿತ್
Follow us
TV9 Web
| Updated By: ಮದನ್​ ಕುಮಾರ್​

Updated on:Mar 30, 2022 | 12:07 PM

ನಟ ವಿಲ್​ ಸ್ಮಿತ್ (Will Smith) ಅವರು ಏಕಾಏಕಿ ಎಲ್ಲರ ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ. ಸಿನಿಮಾದಲ್ಲಿ ಪ್ರೇಕ್ಷಕರನ್ನು ಮನರಂಜಿಸುವ ಅವರು ಸಾರ್ವಜನಿಕ ಜೀವನದಲ್ಲಿ ಯಾಕೋ ಕಿರಿಕ್​ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ‘ಅತ್ಯುತ್ತಮ ನಟ’ ಆಸ್ಕರ್​ ಪ್ರಶಸ್ತಿ ಸಿಕ್ಕಿದೆ. ಅದಕ್ಕಾಗಿ ಅವರು ಖುಷಿಪಡುವುದಕ್ಕಿಂತಲೂ ಹೆಚ್ಚಾಗಿ ವಿವಾದದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಮಿತ್ ಪತ್ನಿ ಜೋಡಾ ಪಿಂಕೆಟ್​ ಸ್ಮಿತ್ (Jada Pinkett Smith)​ ಬಗ್ಗೆ ಹಾಸ್ಯ ನಟ ಕ್ರಿಸ್​ ರಾಕ್​ ಅವರು ಕಾಮಿಡಿ ಮಾಡಿದರು. ಅದರಿಂದ ಕೋಪಗೊಂಡ ವಿಲ್​ ಸ್ಮಿತ್​ ಅವರು ನೇರವಾಗಿ ವೇದಿಕೆಗೆ ತೆರಳಿ ಕ್ರಿಸ್​ ರಾಕ್​ (Chris Rock) ಅವರ ಕೆನ್ನೆಗೆ ಬಾರಿಸಿದರು. ಈ ವಿಡಿಯೋ ವಿಶ್ವಾದ್ಯಂತ ವೈರಲ್​ ಆಗಿದೆ. ಈ ರೀತಿ ಹಲ್ಲೆ ಮಾಡಿದ್ದಕ್ಕಾಗಿ ವಿಲ್​ ಸ್ಮಿತ್​ ಅವರು ಅನೇಕರಿಂದ ಟೀಕೆಗೆ ಒಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಈ ಹಿಂದೆ ಅವರು ಪತ್ರಕರ್ತನ ಕೆನ್ನೆಗೆ ಹೊಡೆದಿದ್ದ ವಿಚಾರ ಈಗ ಮತ್ತೆ ಸದ್ದು ಮಾಡುತ್ತಿದೆ.

2012ರಲ್ಲಿ ‘ಮೆನ್​ ಇನ್​ ಬ್ಲ್ಯಾಕ್​ 3’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದ ಪ್ರೀಮಿಯರ್​ ಪ್ರದರ್ಶನದ ಸಂದರ್ಭದಲ್ಲಿ ನಡೆದ ಘಟನೆ ಇದು. ವಿಲ್​ ಸ್ಮಿತ್​ ಅವರು ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಉಕ್ರೇನ್​ ಮೂಲದ ಓರ್ವ​ ರಿಪೋರ್ಟರ್​ ಮಿತಿ ಮೀರಿ ನಡೆದುಕೊಂಡಿದ್ದ. ಮೊದಲಿಗೆ ವಿಲ್​ ಸ್ಮಿತ್​ ಅವರನ್ನು ತಬ್ಬಿಕೊಂಡ ಆ ಪತ್ರಕರ್ತ ನಂತರದಲ್ಲಿ ಮುತ್ತು ಕೊಡಲು ಶುರು ಮಾಡಿದ. ಕೆನ್ನೆಗೆ ಕಿಸ್​ ಮಾಡಿದ ಬಳಿಕ ತುಟಿಗೂ ಮುತ್ತಿಡಲು ಪ್ರಯತ್ನಿಸಿದ. ಆಗ ವಿಲ್​ ಸ್ಮಿತ್​ ಅವರ ತಾಳ್ಮೆ ಕೆಟ್ಟಿತು. ಕೂಡಲೇ ಪತ್ರಕರ್ತನ ಕೆನ್ನೆಗೆ ಅವರು ಬಾರಿಸಿದರು. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ.

ಪದೇ ಪದೇ ಈ ರೀತಿ ಮಾಡುತ್ತಿರುವುದಕ್ಕೆ ವಿಲ್​ ಸ್ಮಿತ್​ ಅವರನ್ನು ಜನರು ಟೀಕಿಸಿದ್ದಾರೆ. ಆದರೆ ಕೆಲವರು ಸ್ಮಿತ್​ ಪರವಾಗಿ ಮಾತನಾಡಿದ್ದಾರೆ. ಈ ಎರಡೂ ಸಂದರ್ಭಗಳು ಬೇರೆ ಬೇರೆ ಆಗಿವೆ. ಎರಡನ್ನೂ ಒಂದೇ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ವಿಲ್​ ಸ್ಮಿತ್​ ವರ್ತನೆ ಬಗ್ಗೆ ತಾಯಿ ಪ್ರತಿಕ್ರಿಯೆ:

ವಿಲ್​ ಸ್ಮಿತ್​ ಕುರಿತು ಅವರ ತಾಯಿ ಕೆರೋಲಿನ್​ ಸ್ಮಿತ್​ ಅವರು ಹೊಂದಿರುವ ಭಾವನೆಯೇ ಬೇರೆ. ‘ಆತ ತುಂಬ ಸ್ನೇಹಜೀವಿ. ಎಲ್ಲರ ಜೊತೆ ಬೆರೆಯುತ್ತಾನೆ. ಅವನು ಈ ರೀತಿ ವರ್ತಿಸಿದ್ದನ್ನು ನಾನು ಕಂಡಿದ್ದು ಇದೇ ಮೊದಲು. ಅವನ ಜೀವನದಲ್ಲೇ ಇದು ಮೊದಲ ಬಾರಿ ಆಗಿರುವುದು. ಈ ಘಟನೆಯಿಂದ ನನಗೆ ಅಚ್ಚರಿ ಆಗಿದೆ. ಅವನು ಎಂದೂ ಕೂಡ ಈ ರೀತಿ ಮಾಡಿರಲಿಲ್ಲ’ ಎಂದು ಕೆರೋಲಿನ್​ ಸ್ಮಿತ್​ ಹೇಳಿದ್ದಾರೆ.

ಆಸ್ಕರ್​ ವೇದಿಕೆಯಲ್ಲಿ ನಡೆದ ಘಟನೆಯ ಕುರಿತು ಜೇಡಾ ಪಿಂಕೆಟ್​ ಸ್ಮಿತ್​ ಅವರು ಯಾವುದೇ ನೇರ ಪ್ರತಿಕ್ರಿಯೆ ನೀಡಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸೂಚ್ಯವಾಗಿ ಕೆಲವು ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ‘ಇದು ಚೇತರಿಸಿಕೊಳ್ಳುವ ಕಾಲ. ಅದಕ್ಕಾಗಿಯೇ ನಾನು ಇಲ್ಲಿದ್ದೇನೆ’ ಎಂಬ ಸಾಲನ್ನು ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:

Oscars 2022 Winners: ವಿಲ್​ ಸ್ಮಿತ್​ಗೆ ಅತ್ಯುತ್ತಮ ನಟ ಆಸ್ಕರ್​ ಪ್ರಶಸ್ತಿ; ‘ಕೋಡಾ’ ಅತ್ಯುತ್ತಮ ಸಿನಿಮಾ

ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

Published On - 11:59 am, Wed, 30 March 22

ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ