ಭುವನೇಶ್ವರ: ನಡುರಸ್ತೆಯಲ್ಲೇ ಬೈದು ಹೊಡೆದಾಡಿಕೊಂಡ ಯುವಕ, ಯುವತಿ; ವಿಡಿಯೊ ವೈರಲ್

ಕೋಪಗೊಂಡ ಹುಡುಗಿ ಜಗಳ ಶೂಟ್ ಮಾಡುತ್ತಿದ್ದ ಯುವಕನನ್ನು ಕೂಡಾ ಪ್ರಶ್ನಿಸಿದಳು. ಜೋರಾಗಿ ಜಗಳವಾಡಿದ ಆಕೆ ಕೆಟ್ಟದಾಗಿ ಬೈದು ಆ ಯುವಕನಿಗೆ ಹೊಡೆದಿದ್ದಾಳೆ, ಹುಡುಗನೂ ಆಕೆಗೆ ತಿರುಗಿ ಹೊಡೆದಿದ್ದಾನೆ.

ಭುವನೇಶ್ವರ: ನಡುರಸ್ತೆಯಲ್ಲೇ ಬೈದು ಹೊಡೆದಾಡಿಕೊಂಡ ಯುವಕ, ಯುವತಿ; ವಿಡಿಯೊ ವೈರಲ್
ರಸ್ತೆಯಲ್ಲಿ ಜಗಳ
TV9kannada Web Team

| Edited By: Rashmi Kallakatta

Mar 30, 2022 | 1:43 PM


ಭುವನೇಶ್ವರ: ಭುವನೇಶ್ವರದ (Bhubaneswar ) ಐಜಿ ಪಾರ್ಕ್ ಬಳಿಯ ರಸ್ತೆಯೊಂದರಲ್ಲಿ ಯುವತಿಯೊಬ್ಬಳು ಯುವಕನೊಂದಿಗೆ ಜಗಳವಾಡುತ್ತಿರುವ ವಿಡಿಯೊ ವೈರಲ್ (Viral)  ಆಗಿದೆ. ವಿಡಿಯೊದಲ್ಲಿ ಹುಡುಗಿ ರಸ್ತೆಬದಿಯಲ್ಲಿ ಪರಿಚಯವಿದ್ದ ಯುವಕನೊಂದಿಗೆ ಬೈದು ಜಗಳವಾಡುತ್ತಾಳೆ. ಬಳಿಕ ಸ್ಕೂಟಿಯಲ್ಲಿ ಕುಳಿತಿದ್ದ ಯುವಕನನ್ನು ಥಳಿಸಲು, ನಿಂದಿಸಲು ಆರಂಭಿಸಿದ್ದಾಳೆ. ಅವನ ಮೇಲೆ ಕಲ್ಲನ್ನೂ ಎಸೆದಿದ್ದಾಳೆ. ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಕೆಲವು ವೀಕ್ಷಕರು ಘಟನೆಯನ್ನು ಚಿತ್ರೀಕರಿಸಲು ಪ್ರಯತ್ನಿಸಿದರು. ಆದರೆ, ಮಾಧ್ಯಮದವರನ್ನೂ ಹುಡುಗಿ ನಿಂದಿಸಿದ್ದಾಳೆ. ನಂತರ, ಕೆಲವು ಸಾರ್ವಜನಿಕರು ಆಕೆಯ ಕೃತ್ಯವನ್ನು ಪ್ರತಿಭಟಿಸಿದಾಗ, ಆಕೆ ಕೋಪಗೊಂಡು ಮತ್ತಷ್ಟು ಬೈದಿದ್ದಾಳೆ. ಕೋಪಗೊಂಡ ಹುಡುಗಿ ಜಗಳ ಶೂಟ್ ಮಾಡುತ್ತಿದ್ದ ಯುವಕನನ್ನು ಕೂಡಾ ಪ್ರಶ್ನಿಸಿದಳು. ಜೋರಾಗಿ ಜಗಳವಾಡಿದ ಆಕೆ ಕೆಟ್ಟದಾಗಿ ಬೈದು ಆ ಯುವಕನಿಗೆ ಹೊಡೆದಿದ್ದಾಳೆ, ಹುಡುಗನೂ ಆಕೆಗೆ ತಿರುಗಿ ಹೊಡೆದಿದ್ದಾನೆ. ನಂತರ, ರಾಜಧಾನಿಯ ಪೊಲೀಸ್ ಠಾಣೆಯ ಪೊಲೀಸರ ತಂಡವು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಮೂವರನ್ನು ವಶಕ್ಕೆ ತೆಗೆದುಕೊಂಡಿತು. ಯುವತಿ ಹಾಗೂ ಯುವಕನ ನಡುವಿನ ಜಗಳಕ್ಕೆ ಪ್ರೇಮ ಪ್ರಕರಣಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕೆ ನ್ಯೂಸ್  ಒಡಿಶಾಅಪ್ಲೋಡ್ ಮಾಡಿರುವ  ಈ ವಿಡಿಯೊಗೆ 5ಸಾವಿರಕ್ಕಿಂತ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. 178 ಮಂದಿ ಕಾಮೆಂಟ್ ಮಾಡಿದ್ದು 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಕೈಲಾಶ್​ ಸಿಂಗ್​ ಸೇರಿ ಇನ್ನೂ ಕೆಲವು ಸದಸ್ಯರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಿದ ಅಖಿಲೇಶ್ ಯಾದವ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada