AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರಿ ವ್ಯಕ್ತಿಗೆ ಕೊಠಡಿ ನಿರಾಕರಿಸಿದ ದೆಹಲಿ ಹೋಟೆಲ್, ನಿಮಗೆ ರೂಮ್ ಕೊಡದಂತೆ ಪೊಲೀಸರು ಹೇಳಿದ್ದಾರೆ ಎಂದ ಹೋಟೆಲ್ ಸಿಬ್ಬಂದಿ; ವಿಡಿಯೊ ವೈರಲ್

ಹೋಟೆಲ್ ರೂಮ್ ನೀಡಲು ನಿರಾಕರಿಸುತ್ತಿರುವುದೇಕೆ ಎಂದು ಆ ವ್ಯಕ್ತಿ ಕೇಳಿದಾಗ ಕೇಂದ್ರಾಡಳಿತ ಪ್ರದೇಶದವರು ರೂಮ್ ಕಾಯ್ದಿರಿಸಿದ್ದರೆ ಅದನ್ನು ರದ್ದುಗೊಳಿಸುವಂತೆ ಹೋಟೆಲ್‌ಗಳಿಗೆ ಪೊಲೀಸರು ನಿರ್ದೇಶನ ನೀಡಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ಉತ್ತರಿಸಿದ್ದಾರೆ.

ಕಾಶ್ಮೀರಿ ವ್ಯಕ್ತಿಗೆ ಕೊಠಡಿ ನಿರಾಕರಿಸಿದ ದೆಹಲಿ ಹೋಟೆಲ್, ನಿಮಗೆ ರೂಮ್ ಕೊಡದಂತೆ ಪೊಲೀಸರು ಹೇಳಿದ್ದಾರೆ ಎಂದ ಹೋಟೆಲ್ ಸಿಬ್ಬಂದಿ; ವಿಡಿಯೊ ವೈರಲ್
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Mar 24, 2022 | 4:46 PM

Share

ಜಮ್ಮು ಮತ್ತು ಕಾಶ್ಮೀರ(Jammu and Kashmir)ವ್ಯಕ್ತಿಯೊಬ್ಬರಿಗೆ ದೆಹಲಿಯ ಹೋಟೆಲ್‌ನಲ್ಲಿ ಕೊಠಡಿ ನೀಡಲು ಹೋಟೆಲ್ ಸಿಬ್ಬಂದಿ ನಿರಾಕರಿಸುತ್ತಿರುವ ವಿಡಿಯೊ ವೈರಲ್ (viral video) ಆಗಿದೆ. ಹೋಟೆಲ್ ರೂಮ್ ನೀಡಲು ನಿರಾಕರಿಸುತ್ತಿರುವುದೇಕೆ ಎಂದು ಆ ವ್ಯಕ್ತಿ ಕೇಳಿದಾಗ ಕೇಂದ್ರಾಡಳಿತ ಪ್ರದೇಶದವರು ರೂಮ್ ಕಾಯ್ದಿರಿಸಿದ್ದರೆ ಅದನ್ನು ರದ್ದುಗೊಳಿಸುವಂತೆ ಹೋಟೆಲ್‌ಗಳಿಗೆ ಪೊಲೀಸರು ನಿರ್ದೇಶನ ನೀಡಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ಉತ್ತರಿಸಿದ್ದಾರೆ. ಆದರೆ ಈ ರೀತಿಯ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಎಂದು ದೆಹಲಿ ಪೊಲೀಸರು ಬುಧವಾರ ಸ್ಪಷ್ಟನೆ ನೀಡಿದ್ದಾರೆ. “ಒಂದು ಉದ್ದೇಶಿತ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ಜಮ್ಮು ಮತ್ತು ಕಾಶ್ಮೀರ ಐಡಿಯ ಕಾರಣದಿಂದಾಗಿ ಹೋಟೆಲ್ ಕೊಠಡಿ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ . ರದ್ದತಿಗೆ ಕಾರಣವನ್ನು ಪೊಲೀಸರ ನಿರ್ದೇಶನ ಎಂದು ಹೇಳಲಾಗಿದೆ. ಆದರೆ ಅಂತಹ ಯಾವುದೇ ನಿರ್ದೇಶನವನ್ನು ನೀಡಲಾಗಿಲ್ಲ ಉದ್ದೇಶಪೂರ್ವಕವಾಗಿ ತಪ್ಪಾಗಿ ನಿರೂಪಣೆ ಮಾಡಿದರೆ ದಂಡದ ಕ್ರಮಕ್ಕೆ ಗುರಿಯಾಗಬಹುದು ಎಂದು ದೆಹಲಿ ಪೊಲೀಸರು (Delhi Police) ಬುಧವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.  ದಿನಾಂಕವಿಲ್ಲದ ಈ ವಿಡಿಯೊದಲ್ಲಿ, ಹೋಟೆಲ್ ಅಗ್ರಿಗೇಟರ್ ಓಯೋ ರೂಮ್‌ಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಹೋಟೆಲ್‌ನ ಸ್ವಾಗತಕಾರರು, ಕಾಶ್ಮೀರಿ ವ್ಯಕ್ತಿಯೊಬ್ಬರು ತಮ್ಮ ಮಾನ್ಯ ಗುರುತಿನ ಪುರಾವೆಗಳನ್ನು ತೋರಿಸಿದ ನಂತರವೂ ಚೆಕ್-ಇನ್ ಮಾಡಲು ಅನುಮತಿಸಲು ನಿರಾಕರಿಸಿದರು. ಜಮ್ಮು ಮತ್ತು ಕಾಶ್ಮೀರದ ಜನರು ಮಾಡಿದ ಕಾಯ್ದಿರಿಸುವಿಕೆ ಸ್ವೀಕರಿಸದಂತೆ ದೆಹಲಿ ಪೊಲೀಸರು ಹೋಟೆಲ್‌ಗೆ ನಿರ್ದೇಶಿಸಿದ್ದಾರೆ ಎಂದು ಸ್ವಾಗತಕಾರರು ಹೇಳಿದ್ದಾರೆ.

ಕೆಲವು ನೆಟಿಜನ್‌ಗಳು ಈ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನಿರೂಪಿಸುವ ಮೂಲಕ ದೆಹಲಿ ಪೊಲೀಸರ ಘನತೆಯನ್ನು ಅಪಖ್ಯಾತಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ದಂಡ ವಿಧಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ ಅವರು ವಿಡಿಯೊವನ್ನು ಹಂಚಿಕೊಂಡ ಕೂಡಲೇ, ಓಯೋ ರೂಮ್ಸ್ ತನ್ನ ಟ್‌ ಪ್ಲಾಟ್‌ಫಾರ್ಮ್‌ನಿಂದ ಹೋಟೆಲ್ ಅನ್ನು ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಘೋಷಿಸಿತು.

“ಈ ಘಟನೆ ಬಗ್ಗೆ ನಾವು ದಿಗ್ಭ್ರಮೆಗೊಂಡಿದ್ದೇವೆ. ನಾವು ತಕ್ಷಣ ನಮ್ಮ ಪ್ಲಾಟ್‌ಫಾರ್ಮ್‌ನಿಂದ ಹೋಟೆಲ್ ಅನ್ನು ತೆಗೆದುಕೊಂಡಿದ್ದೇವೆ” ಎಂದು ಓಯೋ ರೂಮ್ಸ್ ಟ್ವೀಟ್ ಮಾಡಿದೆ. ನಮ್ಮ ಕೋಣೆಗಳು ಮತ್ತು ನಮ್ಮ ಹೃದಯಗಳು ಯಾವಾಗಲೂ ಎಲ್ಲರಿಗೂ ತೆರೆದಿರುತ್ತವೆ. ಇದು ನಾವು ಎಂದಿಗೂ ರಾಜಿ ಮಾಡಿಕೊಳ್ಳುವ ವಿಷಯವಲ್ಲ. ಚೆಕ್-ಇನ್ ಅನ್ನು ನಿರಾಕರಿಸಲು ಹೋಟೆಲ್ ಮೇಲೆ ಏನು ಒತ್ತಾಯವಿತ್ತು ಎಂಬುದನ್ನು ನಾವು ಖಂಡಿತವಾಗಿ ಪರಿಶೀಲಿಸುತ್ತೇವೆ. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ.

ಈ ಘಟನೆಯು “ದಿ ಕಾಶ್ಮೀರ್ ಫೈಲ್ಸ್ ” ದಿಂದ ಸಂಭವಿಸಿದೆ ಎಂದು ಖುಹಮಿ ಹೇಳಿದ್ದಾರೆ. “ಭೂಮಿಯ ಮೇಲೆ ಕಾಶ್ಮೀರ್ ಫೈಲ್ಸ್ ಪರಿಣಾಮ. ಐಡಿ ಮತ್ತು ಇತರ ದಾಖಲೆಗಳನ್ನು ಒದಗಿಸಿದ್ದರೂ ದೆಹಲಿ ಹೋಟೆಲ್ ಕಾಶ್ಮೀರಿ ವ್ಯಕ್ತಿಗೆ ವಸತಿ ನಿರಾಕರಿಸಿದೆ. ಕಾಶ್ಮೀರಿಯಾಗಿರುವುದು ಅಪರಾಧ” ಎಂದು ಟ್ವೀಟ್ ಮಾಡಿದ್ದಾರೆ.

ಕಾಶ್ಮೀರ ಫೈಲ್ಸ್ 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾದ ಘಟನೆಗಳ ಕುರಿತು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ಚಲನಚಿತ್ರವಾಗಿದೆ. ಚಿತ್ರವು ವಿವಾದಕ್ಕೆ ಒಳಗಾಯಿತು ಮತ್ತು ಘಟನೆಗಳ ಏಕಪಕ್ಷೀಯ ನಿರೂಪಣೆಯನ್ನು ಪ್ರಸ್ತುತಪಡಿಸಿದ್ದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಈ ಚಲನಚಿತ್ರವನ್ನು ಹಲವಾರು ಕೇಂದ್ರ ಮಂತ್ರಿಗಳು ಅನುಮೋದಿಸಿದ್ದಾರೆ ಮತ್ತು ಬಹುತೇಕ ಎಲ್ಲಾ ಬಿಜೆಪಿ ಆಡಳಿತದ ರಾಜ್ಯಗಳು ತೆರಿಗೆ ಮುಕ್ತ ಸ್ಥಾನಮಾನವನ್ನು ನೀಡಿವೆ, ಕೆಲವು ಸರ್ಕಾರಿ ನೌಕರರಿಗೆ ಅದನ್ನು ವೀಕ್ಷಿಸಲು ರಜೆಯನ್ನು ಸಹ ನೀಡಲಾಗಿದೆ.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್‌’ ಸಿನಿಮಾಗೆ ತೊಂದರೆಯಿಲ್ಲ: ಶಿವರಾಜ್​ಕುಮಾರ್​ ಹೇಳಿಕೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ