ಕಳಪೆ ಉತ್ಪನ್ನಕ್ಕೆ ಹೊಳಪು ಕೊಡುವ ಕೆಲಸ ಮಾಡ್ತಿದ್ದೀರಾ ಎಂದು ಖರ್ಗೆಯನ್ನು ಪ್ರಶ್ನಿಸಿದ ನಡ್ಡಾ

|

Updated on: Sep 19, 2024 | 12:45 PM

‘‘ಯಶಸ್ಸು ಸಾಧಿಸುವ ಉತ್ಸಾಹದಲ್ಲಿ ಕಳಪೆ ಉತ್ಪನ್ನಕ್ಕೆ ಹೊಳಪು ಕೊಡುವ ಪ್ರಯತ್ನ ಮಾಡಬೇಡಿ’’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಇತ್ತೀಚಿಗಿನ ಅಮೆರಿಕ​ ಪ್ರವಾಸದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೀಡಿದ ಕೆಲವು ಹೇಳಿಕೆಗಳ ವಿರುದ್ಧ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರತಿಕ್ರಿಯಿಸಿದ್ದಾರೆ.

ಕಳಪೆ ಉತ್ಪನ್ನಕ್ಕೆ ಹೊಳಪು ಕೊಡುವ ಕೆಲಸ ಮಾಡ್ತಿದ್ದೀರಾ ಎಂದು ಖರ್ಗೆಯನ್ನು ಪ್ರಶ್ನಿಸಿದ ನಡ್ಡಾ
ಜೆಪಿ ನಡ್ಡಾ, ಖರ್ಗೆ
Follow us on

‘‘ಯಶಸ್ಸು ಸಾಧಿಸುವ ಉತ್ಸಾಹದಲ್ಲಿ ಕಳಪೆ ಉತ್ಪನ್ನಕ್ಕೆ ಹೊಳಪು ಕೊಡುವ ಪ್ರಯತ್ನ ಮಾಡಬೇಡಿ’’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಇತ್ತೀಚಿಗಿನ ಅಮೆರಿಕ​ ಪ್ರವಾಸದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೀಡಿದ ಕೆಲವು ಹೇಳಿಕೆಗಳ ವಿರುದ್ಧ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರತಿಕ್ರಿಯಿಸಿದ್ದಾರೆ.

ಜೆಪಿ ನಡ್ಡಾ ರಾಹುಲ್​ ಗಾಂಧಿಯನ್ನು ಕಳಪೆ ಉತ್ಪನ್ನ ಎಂದು ಕರೆದಿದ್ದಾರೆ, ಯಶಸ್ಸನ್ನು ಸಾಧಿಸುವ ಪ್ರಯತ್ನದಲ್ಲಿ ಕಾಂಗ್ರೆಸ್​ ಪಕ್ಷವು ತಮ್ಮ ವಿಫಲ ನಾಯಕನನ್ನು ಮರುಬ್ರಾಂಡ್ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ತನ್ನ ರಾಜಕುಮಾರನ ಒತ್ತಡದಲ್ಲಿ ಕಾಪಿ ಆ್ಯಂಡ್ ಪೇಸ್ಟ್ ಪಕ್ಷವಾಗಿದೆ ಎಂದು ನಡ್ಡಾ ಆರೋಪಿಸಿದರು.
ರಾಹುಲ್ ಗಾಂಧಿ ಮಾತನ್ನು ನಿರ್ಲಕ್ಷಿಸಿದ್ದೀರಿ,  ಅಥವಾ ನೀವು ಮರೆತಿದ್ದೀರಿ ಎಂದು ನಡ್ಡಾ ಪತ್ರದಲ್ಲಿ ಬರೆದಿದ್ದಾರೆ.

ಇದರಿಂದಾಗಿ ಎಲ್ಲ ವಿಷಯಗಳನ್ನು ನಿಮ್ಮ ಗಮನಕ್ಕೆ ತರುವುದು ಅನಿವಾರ್ಯವಾಗಿದೆ. ಈಗ ನಾನು ಎಲ್ಲಾ ವಿಷಯಗಳನ್ನು ಬಹಿರಂಗಪಡಿಸುತ್ತೇನೆ. ರಾಹುಲ್ ಮೊದಲು ಹೇಳಿದ್ದು ಪ್ರಧಾನಿ ಮೋದಿಯನ್ನು ಸೋಲಿಸಿ ಎಂದು. ರಾಹುಲ್ ಗಾಂಧಿ ಯಾವಾಗಲೂ ಪ್ರಧಾನಿ ಮೋದಿಯನ್ನು ನಿಂದಿಸುತ್ತಲೇ ಇರುತ್ತಾರೆ ಎಂದು ನಡ್ಡಾ ಬರೆದಿದ್ದಾರೆ. ತುಂಬಿದ ಸಂಸತ್ತಿನಲ್ಲಿ ಅವರು ಪ್ರಧಾನಿಯನ್ನು ಸೋಲಿಸುವ ಬಗ್ಗೆ ಮಾತನಾಡಿದರು. ಅದು ಇಡೀ ದೇಶಕ್ಕೆ ಗೊತ್ತು. ನಿಮಗೆ ಏನು ನೆನಪಿಲ್ಲ, ಹಾಗಾದರೆ ನೀವು ಅವರನ್ನು ಏಕೆ ಸಮರ್ಥಿಸುತ್ತೀರಿ? ನಿಮ್ಮ ಒತ್ತಾಯ ಏನು? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಕೇಂದ್ರ ಸಚಿವ ರವನೀತ್ ಬಿಟ್ಟು ಮತ್ತು ಇತರ ಎನ್‌ಡಿಎ ನಾಯಕರು ಮಾಡಿದ ವಿವಾದಾತ್ಮಕ ಹೇಳಿಕೆಗಳ ನಂತರ ರಾಜಕೀಯ ವಾತಾವರಣ ಬಿಸಿಯಾಗಿದೆ. ಕೆಲ ದಿನಗಳ ಹಿಂದೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ರಾಹುಲ್ ಗಾಂಧಿಗೆ ಬಿಜೆಪಿ ನಾಯಕರು ಬಳಸುತ್ತಿರುವ ಪದಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಕಳವಳ ವ್ಯಕ್ತಪಡಿಸಿದ್ದರು.

ಇದೀಗ ಪತ್ರಕ್ಕೆ ಉತ್ತರ ನೀಡಿರುವ ಬಿಜೆಪಿ ಅಧ್ಯಕ್ಷ, ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಸೋನಿಯಾ ಗಾಂಧಿ ಕೂಡ ಪ್ರಧಾನಿ ಮೋದಿಯನ್ನು ಸಾವಿನ ವ್ಯಾಪಾರಿ ಎಂದು ಕರೆದಿದ್ದರು ಎಂದು  ಹೇಳಿದ್ದಾರೆ.

ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಜೆಪಿ ನಡ್ಡಾ ಅವರು ತಮ್ಮ ಪತ್ರದಲ್ಲಿ ಪ್ರತಿಪಕ್ಷದ ನಾಯಕರು ಪ್ರಧಾನಿ ಮತ್ತು ಒಬಿಸಿ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಬರೆದಿದ್ದಾರೆ.

ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದಂತೆ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಘೋಷಿಸಿದ್ದಾರೆ.
ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರ ಹೇಳಿಕೆಯನ್ನು ಮಾರಣಾಂತಿಕ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:45 pm, Thu, 19 September 24