ಸೋಲುಗಳು ಜೀವನದ ಒಂದು ಭಾಗ, ಇಂಥ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ದೇನೆ: ಕೆ.ಅಣ್ಣಾಮಲೈ ಟ್ವೀಟ್
ನಾನು ಗೆಲುವಿನ ರೇಖೆಯನ್ನು ದಾಟುವುದಕ್ಕೆ ಆಗಿಲ್ಲ. ಅರವಕುರುಚಿ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. 68 ಸಾವಿರ ಮತ ನೀಡಿದ ಮತದಾರರಿಗೆ ಧನ್ಯವಾದಗಳೆಂದು ಅರವಕುರುಚಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ತಮಿಳುನಾಡಿನ ಅರವಕುರುಚಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣಾಮಲೈ, ಸೋಲುಗಳು ಜೀವನದ ಒಂದು ಭಾಗ. ಇಂಥಹ ಸೋಲುಗಳನ್ನ ಜೀವನದಲ್ಲಿ ನಾನು ಬಹಳ ನೋಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ನಾನು ಗೆಲುವಿನ ರೇಖೆಯನ್ನು ದಾಟುವುದಕ್ಕೆ ಆಗಿಲ್ಲ. ಅರವಕುರುಚಿ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. 68 ಸಾವಿರ ಮತ ನೀಡಿದ ಮತದಾರರಿಗೆ ಧನ್ಯವಾದಗಳೆಂದು ಅರವಕುರುಚಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ರಾಜಕೀಯ ವ್ಯವಸ್ಥೆಯನ್ನು ಬದಲಿಸುತ್ತೇನೆ ಎಂದಿದ್ದ ಅಣ್ಣಾಮಲೈ ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬದಲಿಸುತ್ತೇನೆ ಎಂದು ಹೇಳಿದ್ದ ಅಣ್ಣಾಮಲೈಗೆ ಮತದಾರರು ಕೈ ಹಿಡಿಯಲಿಲ್ಲ. ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಗಂ ಎಂದೇ ಖ್ಯಾತಿ ಗಳಿಸಿದ್ದ ಅಣ್ಣಾಮಲೈ ಐಪಿಎಸ್ ತೊರೆದು ರಾಜಕೀಯಕ್ಕೆ ಬಂದರು. ತಮಿಳು ನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇದೀಗ ಸೋಲನ್ನು ಕಂಡಿದ್ದು, ಸದ್ಯ ಕಂಡ ಕನಸ್ಸು ಕನಸಾಗಿ ಉಳಿದಿದೆ.
Losses are part of life. Have seen many & today is one such day. Wanted to but couldn’t cross the finish line!
Sincerely thank all the 68000+ voters for voting for BJP in Aravakurichi.
Time to dust up, keep working hard & involve totally in @BJP4India work more vigorously!
— K.Annamalai (@annamalai_k) May 2, 2021
ಇದನ್ನೂ ಓದಿ
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲು: ಟೀಂ ಗೆದ್ದು ಕ್ಯಾಪ್ಟನ್ ಸೋತಂತೆ ಆಗಿದೆ ಟಿಎಂಸಿ ಸ್ಥಿತಿ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಸದೆಬಡಿದ ಮಂಗಳಾ ಅಂಗಡಿ
(k Annamalai says losses are part of life in twitter)
Published On - 8:28 am, Mon, 3 May 21