ಭೂಕಬಳಿಕೆ ಆರೋಪ: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆಸಿಆರ್​ ಸೋದರಳಿಯ ಕನ್ನ ರಾವ್ ಬಂಧನ

|

Updated on: Apr 03, 2024 | 8:28 AM

ಭೂಕಬಳಿಕೆ ಪ್ರಕರಣದಲ್ಲಿ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸೋದರಳಿಯ ಕನ್ನ ರಾವ್​(Kanna Rao) ಅವರನ್ನು ಬಂಧಿಸಲಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತೆಲಂಗಾಣದಲ್ಲಿ ರಾಜಕೀಯ ರಂಗೇರಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಆರ್‌ಎಸ್‌ಗೆ ಸಂಕಷ್ಟ ಎದುರಾಗಿದೆ.

ಭೂಕಬಳಿಕೆ ಆರೋಪ: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆಸಿಆರ್​ ಸೋದರಳಿಯ ಕನ್ನ ರಾವ್ ಬಂಧನ
ಕನ್ನ ರಾವ್
Follow us on

ಭೂಕಬಳಿಕೆ ಪ್ರಕರಣದಲ್ಲಿ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸೋದರಳಿಯ ಕನ್ನ ರಾವ್​(Kanna Rao) ಅವರನ್ನು ಬಂಧಿಸಲಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತೆಲಂಗಾಣದಲ್ಲಿ ರಾಜಕೀಯ ರಂಗೇರಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಆರ್‌ಎಸ್‌ಗೆ ಸಂಕಷ್ಟ ಎದುರಾಗಿದೆ.

ಒಂದೆಡೆ ಪಕ್ಷದ ಪ್ರಮುಖ ನಾಯಕರೆಲ್ಲ ಕಾಂಗ್ರೆಸ್ ಹಾದಿ ತುಳಿಯುತ್ತಿದ್ದರೆ, ಮತ್ತೊಂದೆಡೆ ಈಗಾಗಲೇ ದೆಹಲಿ ಮದ್ಯ ಹಗರಣದಲ್ಲಿ ಎಂಎಲ್​ಸಿ ಕಲ್ವಕುಂಟ್ಲ ಕವಿತಾ ಅವರನ್ನು ಇಡಿ ಬಂಧಿಸಿದೆ. ಭೂಕಬಳಿಕೆ ಆರೋಪದಲ್ಲಿ ಪೊಲೀಸರು ಈಗಾಗಲೇ ನೋಟಿಸ್ ನೀಡಿದ್ದರು. ಹೈದರಾಬಾದ್​ನ ಹೊರವಲಯದಲ್ಲಿರುವ ಎರಡು ಎಕರೆ ಜಾಗವನ್ನು ಕನ್ನರಾವ್ ಕಬಳಿಸಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಉದ್ಯಮಿ ಕನ್ನರಾವ್ ಸೇರಿದಂತೆ ಎಂಟು ಮಂದಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಓಎಸ್​ಆರ್​ ಪ್ರಾಜೆಕ್ಟ್ಸ್ ಎಂಬ ಖಾಸಗಿ ಕಂಪನಿ ಹಾಗೂ ಆರೋಪಿಗಳ ನಡುವೆ ಈ ವಿವಾದಿತ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇದೆ.

ಮತ್ತಷ್ಟು ಓದಿ: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್​ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮಾರ್ಚ್​ 3ರಂದು ಕನ್ನ ಹಾಗೂ ಇತರರ ವಿರುದ್ಧ ಅಕ್ರಮ ಪ್ರವೇಶ, ಅಪರಾಧ ಪಿತೂರಿ, ಕೊಲೆ ಯತ್ನ ಹಾಗೂ ದೊಂಬಿ ಪ್ರಕರಣ ದಾಖಲಾಗಿತ್ತು.

ಆರಂಭದಲ್ಲಿ ಕನ್ನ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಹೈಕೋರ್ಟ್​ ತಿರಸ್ಕರಿಸಿತ್ತು.
ದೂರುದಾರ ಬಂದೋಜು ಶ್ರೀನಿವಾಸ್ ಸಿಎಂ ರೇವಂತ್ ರೆಡ್ಡಿ ಸಂಬಂಧಿ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಿಚಾರಿಸಿದಾಗ ಆರೋಪಿಗಳು ತನಗೆ ಹಾಗೂ ಕುಟುಂಬದವರನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ