ವಿದ್ಯುತ್ ಕಂಬಕ್ಕೆ ತನ್ನ ದೇಹವನ್ನು ಉಜ್ಜುತ್ತಿದ್ದಾಗ ತಂತಿ ತಗುಲಿ ಕಾಡಾನೆ ಸಾವು

|

Updated on: Mar 25, 2023 | 5:33 PM

ಅರಣ್ಯ ವ್ಯಾಪ್ತಿಯ ಖಾಸಗಿ ಜಮೀನಿನೊಂದರಲ್ಲಿ ಕಾಡಾನೆಗೆ ವಿದ್ಯುತ್ ತಂತಿಯ ತಗುಲಿ ಸಾವನ್ನಪ್ಪಿರುವ ಘಟನೆ ಕೊಯಮತ್ತೂರು ವಿಭಾಗದ ಪೆರಿಯಾನಾಯ್ಕನ್‌ಪಾಳ್ಯಂ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯುತ್ ಕಂಬಕ್ಕೆ ತನ್ನ ದೇಹವನ್ನು ಉಜ್ಜುತ್ತಿದ್ದಾಗ ತಂತಿ ತಗುಲಿ ಕಾಡಾನೆ ಸಾವು
ಸಾಂದರ್ಭಿಕ ಚಿತ್ರ
Follow us on

ಕೊಯಮತ್ತೂರು: ಇಂದು ಮುಂಜಾನೆ (ಮಾ.25) ಅರಣ್ಯ ವ್ಯಾಪ್ತಿಯ ಖಾಸಗಿ ಜಮೀನಿನೊಂದರಲ್ಲಿ ಕಾಡಾನೆಗೆ ವಿದ್ಯುತ್ ತಂತಿಯ ತಗುಲಿ ಸಾವನ್ನಪ್ಪಿರುವ ಘಟನೆ ಕೊಯಮತ್ತೂರು (Coimbatore) ವಿಭಾಗದ ಪೆರಿಯಾನಾಯ್ಕನ್‌ಪಾಳ್ಯಂ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಜಮೀನಿನಲ್ಲಿ ಶನಿವಾರ ಮುಂಜಾನೆ ವಿದ್ಯುತ್ ತಂತಿಯು ಕಾಡಾನೆಯೊಂದು ಮೇಲೆ ಬಿದ್ದ ಪರಿಣಾಮ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಡಗಾಂ ಮೀಸಲು ಅರಣ್ಯ ಪ್ರದೇಶದ ಪಟ್ಟಾ ಜಮೀನಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಆನೆಯು ತನ್ನ ದೇಹವನ್ನು ಉಜ್ಜುತ್ತಿದ್ದಾಗ ಆಕಸ್ಮಿಕವಾಗಿ ಅದರ ಮೇಲೆ ಬಿದ್ದಿದೆ ಗಂಡು ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಅವರು ತಿಳಿಸಿದ್ದಾರೆ. ಈ ಅರಣ್ಯ ಇಲಾಖೆ ಸಿಬ್ಬಂದಿ ವಿದ್ಯುತ್‌ ಇಲಾಖೆಗೆ ಮಾಹಿತಿ ನೀಡಿದ್ದು, ಕೂಡಲೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Coimbatore Blast: ಕೊಯಮತ್ತೂರು ಕಾರು ಸ್ಫೋಟ ಪ್ರಕರಣಕ್ಕೆ ಉಗ್ರರ ನಂಟು; ಐವರು ಆರೋಪಿಗಳ ಬಂಧನ

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಅಧಿಕಾರಿಗಳು ಆನೆಯ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Published On - 5:33 pm, Sat, 25 March 23