ರಾಜ್ಯಸಭೆವರೆಗೂ ಬಂತು ಬಾಲಿವುಡ್‌ ಜಗಳ! ಜಯಾ-ಕಂಗನಾ ನಡುವೆ ಟಾಕ್ವಾರ್

ರಾಜ್ಯಸಭೆವರೆಗೂ ಬಂತು ಬಾಲಿವುಡ್‌ ಜಗಳ! ಜಯಾ-ಕಂಗನಾ ನಡುವೆ ಟಾಕ್ವಾರ್

ಮುಂಬೈ ವಿಚಾರವಾಗಿ ಟ್ವೀಟ್ ಮಾಡಿದ್ದ ನಟಿ ಕಂಗನಾ ವಿರುದ್ಧ ಶಿವಸೇನೆ ಕಿಡಿಕಾರಿತ್ತು. ಕಂಗನಾ ಹಾಗೂ ಶಿವಸೇನೆ ವಿರುದ್ಧ ದೊಡ್ಡ ವಾಕ್ಸಮರವೇ ನಡೆದಿತ್ತು. ಇದೀಗ ಕಂಗನಾ ವಿರುದ್ಧ ಪರೋಕ್ಷವಾಗಿ ಮತ್ತೊಂದು ಅಟ್ಯಾಕ್ ನಡೆದಿದೆ. ಅದು ಬೇರೆಲ್ಲೂ ಅಲ್ಲ ರಾಜ್ಯಸಭೆಯಲ್ಲಿ. ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಡ್ರಗ್ಸ್ ನಶೆ! ಸ್ಯಾಂಡಲ್‌ವುಡ್‌ನಲ್ಲೂ ನಶೆಯ ಘಾಟು, ಬಾಲಿವುಡ್‌ನಲ್ಲೂ ಡ್ರಗ್ಸ್‌ನ ನಂಟು, ಇದೀಗ ಆ ಡ್ರಗ್ಸ್ ನಶೆಯ ಅಮಲು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ದೊಡ್ಡ ಗದ್ದಲವೇ ಶುರುಮಾಡಿದೆ. ಸಂಸತ್ ಕಲಾಪ ಆರಂಭವಾದ ಮೊದಲ ದಿನ ಬಿಜೆಪಿ ಸಂಸದ, […]

Ayesha Banu

|

Sep 16, 2020 | 7:17 AM

ಮುಂಬೈ ವಿಚಾರವಾಗಿ ಟ್ವೀಟ್ ಮಾಡಿದ್ದ ನಟಿ ಕಂಗನಾ ವಿರುದ್ಧ ಶಿವಸೇನೆ ಕಿಡಿಕಾರಿತ್ತು. ಕಂಗನಾ ಹಾಗೂ ಶಿವಸೇನೆ ವಿರುದ್ಧ ದೊಡ್ಡ ವಾಕ್ಸಮರವೇ ನಡೆದಿತ್ತು. ಇದೀಗ ಕಂಗನಾ ವಿರುದ್ಧ ಪರೋಕ್ಷವಾಗಿ ಮತ್ತೊಂದು ಅಟ್ಯಾಕ್ ನಡೆದಿದೆ. ಅದು ಬೇರೆಲ್ಲೂ ಅಲ್ಲ ರಾಜ್ಯಸಭೆಯಲ್ಲಿ.

ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಡ್ರಗ್ಸ್ ನಶೆ! ಸ್ಯಾಂಡಲ್‌ವುಡ್‌ನಲ್ಲೂ ನಶೆಯ ಘಾಟು, ಬಾಲಿವುಡ್‌ನಲ್ಲೂ ಡ್ರಗ್ಸ್‌ನ ನಂಟು, ಇದೀಗ ಆ ಡ್ರಗ್ಸ್ ನಶೆಯ ಅಮಲು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ದೊಡ್ಡ ಗದ್ದಲವೇ ಶುರುಮಾಡಿದೆ.

ಸಂಸತ್ ಕಲಾಪ ಆರಂಭವಾದ ಮೊದಲ ದಿನ ಬಿಜೆಪಿ ಸಂಸದ, ಬಾಲಿವುಡ್‌ ನಟ ರವಿಕಿಶನ್‌ ಬಾಲಿವುಡ್‌ನಲ್ಲಿರುವ ಡ್ರಗ್ಸ್ ದಂಧೆ ವಿಚಾರ ಎತ್ತಿದ್ರು. ಬಾಲಿವುಡ್‌ನ ನಟ, ನಟಿಯರು ಡ್ರಗ್ಸ್ ಸೇವನೆ ಮಾಡ್ತಿರೋದು ಬೆಳಕಿಗೆ ಬಂದಿದೆ. ಇದು ನಿರ್ಮೂಲನೆಯಾಗಬೇಕು ಎಂದಿದ್ರು.

ಇದಕ್ಕು ಮುನ್ನ ಕೆಲ ದಿನಗಳ ಹಿಂದೆ ನಟಿ ಕಂಗನಾ ಬಾಲಿವುಡ್ ಡ್ರಗ್ಸ್‌ನಿಂದ ಚರಂಡಿಯಂತಾಗಿದೆ, ಪ್ರಧಾನಿ ಮೋದಿಯವ್ರು ಸ್ವಚ್ಛ ಭಾರತ್ ಯೋಜನೆಯಡಿ ಕ್ಲೀನ್ ಮಾಡ್ಬೇಕು ಎಂದಿದ್ರು. ಬಾಲಿವುಡ್ ನಟ ರವಿಕಿಶನ್ ಹಾಗೂ ನಟಿ ಕಂಗನಾ ಹೇಳಿಕೆಗಳು ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್‌ ಕಣ್ಣು ಕೆಂಪಾಗಿಸಿವೆ. ಇದೇ ವಿಚಾರವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಜಯಾ ಬಚ್ಚನ್, ಪರೋಕ್ಷವಾಗಿ ರವಿಕಿಶನ್, ನಟಿ ಕಂಗನಾ ರಣಾವತ್ ವಿರುದ್ಧ ಕಿಡಿಕಾರಿದ್ರು. ಬಾಲಿವುಡ್‌ನಲ್ಲಿ ಬೆಳೆದವ್ರು, ಬಾಲಿವುಡ್‌ಗೆ ಕೆಟ್ಟ ಹೆಸರು ತರ್ತಿದ್ದಾರೆ. ಹಾಗಾದ್ರೆ ನಿಮಗೆ ಅನ್ನ ತಿನ್ನಿಸುವ ಕೈಯನ್ನೇ ಕಡಿಯುತ್ತೀರಾ ಎಂದು ಜಯಾ ಬಚ್ಚನ್ ಪ್ರಶ್ನಿಸಿದ್ದಾರೆ.

ಬಾಲಿವುಡ್‌ಗೆ ಸೇರಿದ ಲೋಕಸಭೆ ಸದಸ್ಯರೊಬ್ಬರು ಬಾಲಿವುಡ್‌ನಲ್ಲಿ ಡ್ರಗ್ಸ್ ದಂಧೆ ಇದೆ ಎಂದು ಇಡೀ ಬಾಲಿವುಡ್‌ಗೆ ಕಳಂಕ ಹಚ್ಚಲು ಯತ್ನಿಸಿದ್ದಾರೆ. ಇದನ್ನು ಸರ್ಕಾರ ತಡೆಯಬೇಕು. ಮತ್ತೊಬ್ಬರು ಬಾಲಿವುಡ್ ಚರಂಡಿ ಎಂದಿದ್ದಾರೆ. ಕೆಲವರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಮಾತ್ರಕ್ಕೆ ಇಡೀ ಬಾಲಿವುಡ್‌ ಇಮೇಜ್‌ ಹಾಳು ಮಾಡಲು ಸಾಧ್ಯವಿಲ್ಲ. ಬಾಲಿವುಡ್ ಇಂಡಸ್ಟ್ರಿಯಿಂದ ಬಂದಿರುವ ಲೋಕಸಭಾ ಸದಸ್ಯರೊಬ್ಬರು ಇಂಡಸ್ಟ್ರಿ ಬಗ್ಗೆ ಮಾತನಾಡಿದಾಗ ನನಗೆ ನಿಜಕ್ಕೂ ಮುಜುಗರ, ನಾಚಿಕೆ ಆಯಿತು ಎಂದು ಜಯಾ ಬಚ್ಚನ್ ಹೇಳಿದ್ರು.

ಜಯಾ ಬಚ್ಚನ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ ರವಿಕಿಶನ್, ನನ್ನ ಹೇಳಿಕೆಯನ್ನು ಜಯಾ ಬಚ್ಚನ್ ಬೆಂಬಲಿಸುತ್ತಾರೆಂದು ನಿರೀಕ್ಷಿಸಿದ್ದೆ. ಆದ್ರೆ ಜಯಾ ಬಚ್ಚನ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.

ಇನ್ನು ಜಯಾ ಬಚ್ಚನ್ ಮಾತಿಗೆ ಕೋಪಗೊಂಡಿರುವ ನಟಿ ಕಂಗನಾ ರಾಣವತ್, ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿದ್ದಾರೆ. ಟ್ವೀಟರ್‌ ಮೂಲಕ ಜಯಾ ಬಚ್ಚನ್‌ಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಜಯಾ ಜೀ ಸಹಾನುಭೂತಿ ತೋರಿ: ಜಯಾ ಜೀ, ನನ್ನ ಸ್ಥಾನದಲ್ಲಿ ನಿಮ್ಮ ಮಗಳು ಶ್ವೇತಾ ನಂದಾ ಇದ್ದು ಅವರನ್ನು ಎಳೆದಾಡಿ, ಹಲ್ಲೆ ಮಾಡಿ ಕಿರುಕುಳ ನೀಡಿದ್ರೆ ಇದೇ ರೀತಿ ಹೇಳುತ್ತಿದ್ರಾ? ನಿಮ್ಮ ಮಗ ಅಭಿಷೇಕ್ ಬಚ್ಚನ್ ಬೆದರಿಕೆ, ನಿರಂತರ ಕಿರುಕುಳದಿಂದ ಬೇಸತ್ತು ಕೊನೆಗೊಂದು ದಿನ ನೇಣು ಹಾಕಿಕೊಂಡ್ರೆ ಇದೇ ರೀತಿ ಮಾತನಾಡುತ್ತಿದ್ರಾ? ನಮ್ಮ ಬಗ್ಗೆಯೂ ಸ್ಪಲ್ಪ ಸಹಾನುಭೂತಿ ತೋರಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಹೀಗೆ ಟ್ವಿಟ್ಟರ್‌ನಲ್ಲಿ ಜಯಾ ಬಚ್ಚನ್ ಹೇಳಿಕೆಗೆ ಕಂಗನಾ ರಾಣವತ್ ತಿರುಗೇಟು ನೀಡಿದ್ದಾರೆ. ಈ ಮೊದಲು ಬಾಲಿವುಡ್‌ನ ಡ್ರಗ್ಸ್, ನಟ ಸುಶಾಂತ್ ಸಾವಿನ ಬಗ್ಗೆ ಬಿಗ್ ಬಿ ಅಮಿತಾಬ್‌ ಮಾತನಾಡದೇ ಮೌನವಾಗಿರುವುದಕ್ಕೂ ಕಂಗನಾ ಕಿಡಿಕಾರಿದ್ದರು. ಈಗ ಅಮಿತಾಬ್‌ ಪತ್ನಿ ಜಯಾ ವಿರುದ್ಧವೂ ಕಂಗನಾ ನೇರಾನೇರ ಫೀಲ್ಡಿಗಿಳಿದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada