ಆಕೆಗೆ ಅತ್ಯಾಚಾರದ ಅನುಭವವಿದೆ ಎಂದ ಪಂಜಾಬ್ ನಾಯಕನಿಗೆ ಕಂಗನಾ ರಣಾವತ್ ಖಡಕ್ ತಿರುಗೇಟು

ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂದು ನೀವು ಅವಳನ್ನು (ಕಂಗನಾ ರಣಾವತ್) ಕೇಳಬಹುದು, ಇದರಿಂದ ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂಬುದು ಜನರಿಗೆ ವಿವರಣೆ ಸಿಗಬಹುದು. ಆಕೆಗೆ ಅತ್ಯಾಚಾರದ ಸಾಕಷ್ಟು ಅನುಭವವಿದೆ" ಎಂದು ಮಾನ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಆಕೆಗೆ ಅತ್ಯಾಚಾರದ ಅನುಭವವಿದೆ ಎಂದ ಪಂಜಾಬ್ ನಾಯಕನಿಗೆ ಕಂಗನಾ ರಣಾವತ್ ಖಡಕ್ ತಿರುಗೇಟು
ಕಂಗನಾ ರಣಾವತ್
Follow us
|

Updated on: Aug 29, 2024 | 8:30 PM

ದೆಹಲಿ ಆಗಸ್ಟ್ 29: ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಪಂಜಾಬ್ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ (Simranjit Singh Mann) ನನ್ನ ವಿರುದ್ಧ ದಾಳಿ ಮಾಡುವಾಗ “ಅತ್ಯಾಚಾರವನ್ನು ಕ್ಷುಲ್ಲಕಗೊಳಿಸಿದ್ದಾರೆ” ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, ಆಕ್ರೋಶ ವ್ಯಕ್ತಪಡಿಸಿದ ಕಂಗನಾ “ಈ ದೇಶವು ಅತ್ಯಾಚಾರವನ್ನು ಕ್ಷುಲ್ಲಕಗೊಳಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ತೋರುತ್ತದೆ, ಇಂದು ಈ ಹಿರಿಯ ರಾಜಕಾರಣಿ ಅತ್ಯಾಚಾರವನ್ನು ಬೈಸಿಕಲ್ ಸವಾರಿಗೆ ಹೋಲಿಸಿದ್ದಾರೆ. “ಅತ್ಯಾಚಾರ ಮತ್ತು ಮೋಜಿಗಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಈ ಪಿತೃಪ್ರಭುತ್ವದ ರಾಷ್ಟ್ರದ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆಯೆಂದರೆ, ಮಹಿಳೆಯು ಉನ್ನತ ಮಟ್ಟದ ಚಲನಚಿತ್ರ ನಿರ್ಮಾಪಕಿ ಅಥವಾ ರಾಜಕಾರಣಿಯಾಗಿದ್ದರೂ ಸಹ ಅವಳನ್ನು ಕೀಟಲೆ ಮಾಡಲು ಅಥವಾ ಅಪಹಾಸ್ಯ ಮಾಡಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ” ಎಂದಿದ್ದಾರೆ ಕಂಗನಾ.

ವಿವಾದದ ಕಿಡಿ ಹೊತ್ತಿಸಿದ ಪಂಜಾಬ್ ನಾಯಕ

ಶಿರೋಮಣಿ ಅಕಾಲಿದಳ (ಅಮೃತಸರ) ಅಧ್ಯಕ್ಷ ಮಾನ್, ಕಂಗನಾ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. “ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂದು ನೀವು ಅವಳನ್ನು (ಕಂಗನಾ ರಣಾವತ್) ಕೇಳಬಹುದು, ಇದರಿಂದ ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂಬುದು ಜನರಿಗೆ ವಿವರಣೆ ಸಿಗಬಹುದು. ಆಕೆಗೆ ಅತ್ಯಾಚಾರದ ಸಾಕಷ್ಟು ಅನುಭವವಿದೆ” ಎಂದು ಮಾನ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಮಾಜಿ IPS ಅಧಿಕಾರಿ ಮತ್ತು ಖಲಿಸ್ತಾನ್ ಪ್ರತಿಪಾದಕ ಮಾನ್ ಅಕ್ಟೋಬರ್ 1 ರಂದು ಹರಿಯಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಕಾರ್ಯಕ್ರಮಕ್ಕಾಗಿ ಕರ್ನಾಲ್‌ನಲ್ಲಿದ್ದರು. ಭಾರತದ ಪ್ರಬಲ ನಾಯಕತ್ವ ಇಲ್ಲದಿದ್ದರೆ ರೈತರ ಪ್ರತಿಭಟನೆಯ ಸಂದರ್ಭದಲ್ಲಿ “ಬಾಂಗ್ಲಾದೇಶದಂತಹ ಪರಿಸ್ಥಿತಿ” ಭುಗಿಲೇಳುತ್ತಿತ್ತು ಎಂದಿದ್ದರು ಕಂಗನಾ. ಆಂದೋಲನದ ಸಮಯದಲ್ಲಿ “ದೇಹಗಳು ನೇತಾಡುತ್ತಿವೆ ಮತ್ತು ಅತ್ಯಾಚಾರಗಳು ನಡೆಯುತ್ತಿವೆ ಎಂದು ಆರೋಪಿಸಿದ ಕಂಗನಾ, ಚೀನಾ ಮತ್ತು ಯುಎಸ್‌ನಂತಹ ವಿದೇಶಿ ಶಕ್ತಿಗಳು ಚಳುವಳಿಯಲ್ಲಿ ತೊಡಗಿಸಿಕೊಂಡಿವೆ ಎಂದು ಕಂಗನಾ ಹೇಳಿದ್ದಕ್ಕೆ ಮಾನ್ ಈ ರೀತಿ ಪ್ರತಿಕ್ರಿಯಿಸಿದ್ದರು.

ಕ್ಷಿಪ್ರವಾಗಿ ವರ್ತಿಸಿದ ಬಿಜೆಪಿ ಆಕೆಯ ಹೇಳಿಕೆಯಿಂದ ದೂರ ಉಳಿದಿದೆ. ಭವಿಷ್ಯದಲ್ಲಿ ಈ ರೀತಿಯ ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ಕಂಗನಾ ರಣಾವತ್ ಅವರಿಗೆ ನಿರ್ದೇಶನ ನೀಡಿದೆ ಎಂದು ಆಡಳಿತ ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ