ಕನ್ಹಯ್ಯ ಕುಮಾರ್ ನವಜೋತ್ ಸಿಧುನಂತೆ, ಅವರು ಕಾಂಗ್ರೆಸ್​​ನ್ನು ನಾಶ ಮಾಡುತ್ತಾರೆ: ಆರ್​​ಜೆಡಿ

TV9 Digital Desk

| Edited By: Rashmi Kallakatta

Updated on: Oct 01, 2021 | 6:39 PM

Kanhaiya Kumar: ಕಾಂಗ್ರೆಸ್ ದೊಡ್ಡ ಹಡಗು ಅದನ್ನು ಉಳಿಸಬೇಕಾಗಿದೆ ಎಂದು ಕನ್ಹಯ್ಯ ಮಾತನ್ನು ಉಲ್ಲೇಖಿಸಿದ ತಿವಾರಿ "ಅವರು ಪಕ್ಷವನ್ನು ಮತ್ತಷ್ಟು ನಾಶ ಮಾಡುವ ಇನ್ನೊಬ್ಬ ನವಜೋತ್ ಸಿಂಗ್ ಸಿಧುವಿನಂತಿದ್ದಾರೆ" ಎಂದು ಹೇಳಿದರು.

ಕನ್ಹಯ್ಯ ಕುಮಾರ್ ನವಜೋತ್ ಸಿಧುನಂತೆ, ಅವರು ಕಾಂಗ್ರೆಸ್​​ನ್ನು ನಾಶ ಮಾಡುತ್ತಾರೆ: ಆರ್​​ಜೆಡಿ
ಕನ್ಹಯ್ಯ ಕುಮಾರ್

Follow us on

ಮುಜಾಫರ್ ನಗರ(ಬಿಹಾರ): ಬಿಹಾರದ ಪ್ರಮುಖ ವಿರೋಧ ಪಕ್ಷವಾದ ಆರ್​​​ಜೆಡಿ (RJD) ಕನ್ಹಯ್ಯ ಕುಮಾರ್ (Kanhaiya Kumar) ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದನ್ನು ಗೇಲಿ ಮಾಡಿದೆ. ಜೆಎನ್‌ಯುನ ಮಾಜಿ ವಿದ್ಯಾರ್ಥಿಯು “ಇನ್ನೊಬ್ಬ ನವಜೋತ್ ಸಿಂಗ್ ಸಿಧು” ನಂತೆ ಇದ್ದಾರೆ, ಅವರು ಹಳೆಯ ಪಕ್ಷವನ್ನು “ನಾಶಪಡಿಸುತ್ತಾರೆ”. ಎಂದು ಆರ್​​ಜೆಡಿ ವಾಗ್ದಾಳಿ ಮಾಡಿದೆ. ಕಾಂಗ್ರೆಸ್ ಮುಳುಗುವ ಹಡಗು ಎಂದಿದ್ದನ್ನು ವ್ಯಂಗ್ಯವಾಡಿದ ಹಿರಿಯ ಆರ್‌ಜೆಡಿ ನಾಯಕ ಶಿವಾನಂದ್ ತಿವಾರಿ (Shivanand Tiwari) ಅವರು ಕನ್ಹಯ್ಯ ಕುಮಾರ್ ಅವರ ಸೇರ್ಪಡೆಯಿಂದ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಹೇಳಿದರು. ಕಾಂಗ್ರೆಸ್ ದೊಡ್ಡ ಹಡಗು ಅದನ್ನು ಉಳಿಸಬೇಕಾಗಿದೆ ಎಂದು ಕನ್ಹಯ್ಯ ಮಾತನ್ನು ಉಲ್ಲೇಖಿಸಿದ ತಿವಾರಿ “ಅವರು ಪಕ್ಷವನ್ನು ಮತ್ತಷ್ಟು ನಾಶ ಮಾಡುವ ಇನ್ನೊಬ್ಬ ನವಜೋತ್ ಸಿಂಗ್ ಸಿಧುವಿನಂತಿದ್ದಾರೆ” ಎಂದು ಹೇಳಿದರು. “ಕನ್ಹಯ್ಯ ಕುಮಾರ್ ಅವರ ಸೇರ್ಪಡೆಯಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅವರು ಪಕ್ಷವನ್ನು ಉಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಳುಗುವ ಹಡಗು ಮತ್ತು ಅದಕ್ಕೆ ಭವಿಷ್ಯವಿಲ್ಲ” ಎಂದು ಆರ್​​ಜೆಡಿ ನಾಯಕ ಸುದ್ದಿಗಾರರಿಗೆ ತಿಳಿಸಿದರು.

ತೇಜಸ್ವಿ ಯಾದವ್ ನೇತೃತ್ವದ ಪಕ್ಷವನ್ನು ಸಂಪರ್ಕಿಸದೆ ಕುಮಾರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಕ್ಕೆ ಪಕ್ಷವು ಅತೃಪ್ತಿ ಹೊಂದಿದೆ ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಆರ್‌ಜೆಡಿ ನೇತೃತ್ವದ ವಿರೋಧ ಮೈತ್ರಿಕೂಟದ ಮಹಾಘಟಬಂಧನ್‌ನ ಒಂದು ಭಾಗವಾಗಿದ್ದು ಅದು 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಹೋರಾಡಿದೆ. ಬಿಹಾರ ಕಾಂಗ್ರೆಸ್ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಕನ್ಹಯ್ಯ ಕುಮಾರ್ ಕಾಂಗ್ರೆಸ್ ಪಕ್ಷದ ಆಶಾಕಿರಣವಾಗಿದ್ದಾರೆ ಅಂತ ರಾಜಕೀಯ ವಿಶ್ಲೇಷಕರು ಹೇಳುತ್ತಿರುವುದರಲ್ಲಿ ಹುರುಳಿದೆಯೇ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada