Kargil Earthquake: ಕಾರ್ಗಿಲ್ನಲ್ಲಿ 4.7 ತೀವ್ರತೆಯ ಭೂಕಂಪ
ಕಾರ್ಗಿಲ್ನಲ್ಲಿ ಭೂಕಂಪ(Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಭೂಕಂಪ ಸಂಭವಿಸಿದೆ.
ಕಾರ್ಗಿಲ್ನಲ್ಲಿ ಭೂಕಂಪ(Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಲಡಾಖ್‌ನ ಉತ್ತರಕ್ಕೆ 401 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯದಲ್ಲಿ 24 ಗಂಟೆಗಳಲ್ಲಿ ಐದು ಭೂಕಂಪಗಳು ಸಂಭವಿಸಿತ್ತು.
ಜೂನ್ 17ರಂದು ಶನಿವಾರ ಮಧ್ಯಾಹ್ನ 2.03ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 3.0 ತೀವ್ರತೆಯ ಭೂಕಂಪದ ನಂತರ ಮತ್ತೆ ಕಂಪನದ ಅನುಭವವಾಗಿತ್ತು.
ಮಧ್ಯಾಹ್ನ 2.03 ಗಂಟೆಗೆ ಸಂಭವಿಸಿದ 3.0 ತೀವ್ರತೆಯ ಕಂಪನದ ಕೇಂದ್ರಬಿಂದು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಗುಡ್ಡಗಾಡು ಜಿಲ್ಲೆಯಲ್ಲಿತ್ತು.
ಮತ್ತಷ್ಟು ಓದಿ: Assam Earthquake: ಅಸ್ಸಾಂನಲ್ಲಿ ಭೂಕಂಪ, 4.8 ತೀವ್ರತೆ ದಾಖಲು
ಭೂಕಂಪದ ಆಳವು 33.31 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 75.19 ಡಿಗ್ರಿ ಪೂರ್ವ ರೇಖಾಂಶದಲ್ಲಿ 5 ಕಿ.ಮೀ ಆಳದಲ್ಲಿತ್ತು. ಎರಡನೇ ಭೂ ಕಂಪನವು ರಾತ್ರಿ 9.44 ರ ಸುಮಾರಿಗೆ ಲೇಹ್, ಲಡ್ಡಾಖ್‌ನ ಈಶಾನ್ಯಕ್ಕೆ 4.5 ರ ತೀವ್ರತೆಯೊಂದಿಗೆ 271 ಕಿ.ಮೀ ದೂರದಲ್ಲಿ ಸಂಭವಿಸಿತ್ತು.
ಇನ್ನು ಭಾನುವಾರ ಬೆಳಗಿನ ಜಾವ 4.1 ತೀವ್ರತೆಯ ಭೂಕಂಪವು ಲಡಾಖ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 295 ಕಿಮೀ ದೂರದಲ್ಲಿರುವ ಭಾರತ – ಚೀನಾ ಗಡಿಯ ಸಮೀಪದಲ್ಲಿ ಅದರ ಕೇಂದ್ರಬಿಂದುದೊಂದಿಗೆ ಮತ್ತೆ ಪ್ರದೇಶಕ್ಕೆ ಆವರಿಸಿದೆ.
ಐದನೇ ಭೂಕಂಪ ಜಮ್ಮು ಮತ್ತು ಕಾಶ್ಮೀರದ ಕತ್ರಾ ಬಳಿ ಕಂಡುಬಂದಿತ್ತು. ಕತ್ರಾದಿಂದ 80 ಕಿ.ಮೀ ಪೂರ್ವಕ್ಕೆ ಬೆಳಗಿನ ಜಾವ 3.50ರ ಸುಮಾರಿಗೆ 11 ಕಿ.ಮೀ ಆಳದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ