
ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಹಿನ್ನೆಲೆಯಲ್ಲಿ 1999ರ ಯುದ್ಧದಲ್ಲಿ ಪಾಕಿಸ್ತಾನದೊಂದಿಗೆ ಹೋರಾಡಿದ ಸೈನಿಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಗೌರವ ಸಲ್ಲಿಸಿದ್ದಾರೆ. ಈ ದಿನವನ್ನು ಸೇನಾ ಪಡೆಗಳ ಅಸಾಧಾರಣ ಶೌರ್ಯದ ಸಂಕೇತ ಎಂದು ಅವರು ಕರೆದಿದ್ದಾರೆ. ನಿನ್ನೆಯಷ್ಟೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ದ್ರೌಪದಿ ಮುರ್ಮು, “ಭಾರತ ಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ವೀರ ಸೈನಿಕರಿಗೆ ನಾನು ನಮಸ್ಕರಿಸುತ್ತೇನೆ” ಎಂದು ಹೇಳಿದ್ದಾರೆ.
ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಭಾರತದ ಎಲ್ಲಾ ದೇಶವಾಸಿಗಳು ಋಣಿಯಾಗಿರುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ, ಶಕ್ತಿ ಮತ್ತು ನಿರ್ಣಯದ ಸಂಕೇತವಾಗಿದೆ. ಭಾರತಮಾತೆಯನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಯೋಧರಿಗೆ ನಾನು ನಮಿಸುತ್ತೇನೆ. ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ದೇಶವಾಸಿಗಳೆಲ್ಲರೂ ಸದಾ ಋಣಿಗಳಾಗಿರುತ್ತಾರೆ. ಜೈ ಹಿಂದ್! ಎಂದು ದ್ರೌಪದಿ ಮುರ್ಮು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
कारगिल विजय दिवस हमारे सशस्त्र बलों की असाधारण वीरता, पराक्रम और दृढ़ संकल्प का प्रतीक है। भारत माता की रक्षा के लिए अपने प्राण न्योछावर करने वाले सभी वीर सैनिकों को मैं नमन करती हूं। सभी देशवासी, उनके और उनके परिवारजनों के प्रति सदैव ऋणी रहेंगे। जय हिन्द!
— President of India (@rashtrapatibhvn) July 26, 2022
ಕಾರ್ಗಿಲ್ ವಿಜಯ್ ದಿವಸ್ ‘ಹೆಮ್ಮೆ ಮತ್ತು ವೈಭವದ ಸಂಕೇತ’. ದೇಶದ ಎಲ್ಲ ವೀರ ಪುತ್ರರಿಗೆ ನಾನು ವಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ತಾಯಿ ಭಾರತಾಂಬೆಯ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯವನ್ನು ಸಾಧಿಸಿದ ದೇಶದ ಎಲ್ಲಾ ವೀರ ಪುತ್ರರಿಗೆ ನನ್ನ ವಂದನೆಗಳು. ಜೈ ಹಿಂದ್! ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
कारगिल विजय दिवस मां भारती की आन-बान और शान का प्रतीक है। इस अवसर पर मातृभूमि की रक्षा में पराक्रम की पराकाष्ठा करने वाले देश के सभी साहसी सपूतों को मेरा शत-शत नमन। जय हिंद! pic.twitter.com/wIHyTrNPMU
— Narendra Modi (@narendramodi) July 26, 2022
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ಭಾರತೀಯ ಸೇನೆಯು ಜಮ್ಮುವಿನ ಬಲಿದಾನ್ ಸ್ತಂಭದಲ್ಲಿ ಪುಷ್ಪಾರ್ಚನೆ ಸಮಾರಂಭವನ್ನು ನಡೆಸಲಾಯಿತು.
ಇದನ್ನೂ ಓದಿ: Kargil Vijay Diwas 2022: ಭಾರತ-ಪಾಕಿಸ್ತಾನ ಕಾರ್ಗಿಲ್ ಯುದ್ಧ; ಅಂದು ಏನಾಯ್ತು? ಅದಕ್ಕೆ ಕಾರಣ ಏನು ಗೊತ್ತಾ?
– Dr. Murugesh R Nirani (@murugesh_nirani) 26 July 2022
1999ರ ಮೇ 8 ಮತ್ತು ಜುಲೈ 26ರ ನಡುವೆ ಚಳಿಗಾಲದಲ್ಲಿ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ಪಾಕಿಸ್ತಾನದ ಒಳನುಗ್ಗುವವರ ವಿರುದ್ಧ ನಡೆದ ಯುದ್ಧದ ನೆನಪಿಗಾಗಿ ಕಾರ್ಗಿಲ್ ವಿಜಯ್ ದಿವಸವನ್ನು ಪ್ರತಿ ವರ್ಷ ಜುಲೈ 26ರಂದು ಆಚರಿಸಲಾಗುತ್ತದೆ. ಎಲ್ಲಾ ಮಿಲಿಟರಿ ಮತ್ತು ನಾಗರಿಕ ಚಳುವಳಿಗಳ ಮೇಲೆ ಪ್ರಾಬಲ್ಯ ಸಾಧಿಸುವ ಗುರಿಯೊಂದಿಗೆ ಲಡಾಖ್ ಪ್ರದೇಶದ ಕಾರ್ಗಿಲ್‌ನ ದ್ರಾಸ್ ಮತ್ತು ಬಟಾಲಿಕ್ ಸೆಕ್ಟರ್‌ಗಳಲ್ಲಿ NH 1A ಮೇಲಿರುವ ಕೋಟೆಯ ರಕ್ಷಣೆಯನ್ನು ಆಕ್ರಮಿಸಿಕೊಂಡಿದೆ.
– H D Kumaraswamy (@h_d_kumaraswamy) 26 July 2022
ಪ್ರತಿ ವರ್ಷ, ಈ ದಿನದಂದು ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಪ್ರಧಾನ ಮಂತ್ರಿ ಗೌರವ ಸಲ್ಲಿಸುತ್ತಾರೆ. ದೇಶಕ್ಕೆ ಭಾರತೀಯ ಸೇನೆಯ ಕೊಡುಗೆಯನ್ನು ಕೊಂಡಾಡಲು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತದೆ. ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 23ನೇ ವಾರ್ಷಿಕೋತ್ಸವವನ್ನು ನಡೆಸುವುದರೊಂದಿಗೆ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಜುಲೈ 24ರಿಂದ ಜುಲೈ 26ರವರೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Published On - 9:58 am, Tue, 26 July 22