- Kannada News Photo gallery Kargil Vijay Diwas 2022 India-Pakistan Kargil War of 1999 Do you know what happened that day
Kargil Vijay Diwas 2022: ಭಾರತ-ಪಾಕಿಸ್ತಾನ ಕಾರ್ಗಿಲ್ ಯುದ್ಧ; ಅಂದು ಏನಾಯ್ತು? ಅದಕ್ಕೆ ಕಾರಣ ಏನು ಗೊತ್ತಾ?
ಕಾರ್ಗಿಲ್ ಪ್ರದೇಶಕ್ಕೆ ಒಳನುಸುಳಿದ ಪಾಕಿಸ್ತಾನದ ಸೈನಿಕರೊಂದಿಗೆ ಯುದ್ಧ ಮಾಡಿ ಅವರನ್ನು ಹಿಮ್ಮೆಟ್ಟಿದ ಭಾರತ ಪ್ರತಿವರ್ಷ ಜು.26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಿದೆ. ಅಷ್ಟಕ್ಕೂ ಅಂದು ಆಗಿದ್ದೇನು? ಅದಕ್ಕೆ ಕಾರಣಗಳೇನು? ಇಲ್ಲಿದೆ ಮಾಹಿತಿ.
Updated on:Jul 26, 2022 | 8:12 AM

Kargil Vijay Diwas 2022 India-Pakistan Kargil War of 1999 Do you know what happened that day

Kargil Vijay Diwas 2022 India-Pakistan Kargil War of 1999 Do you know what happened that day

ಅದಾಗ್ಯೂ, ಪಾಕಿಸ್ತಾನ 1998-1999 ರ ಚಳಿಗಾಲದಲ್ಲಿ ತನ್ನ ಸೈನಿಕರಿಗೆ ಯುದ್ಧಕ್ಕೆ ಸಜ್ಜುಗೊಳಿಸಲು ರಹಸ್ಯ ತರಬೇತಿ ನೀಡುತ್ತಿತ್ತು. ಅದರಂತೆ ತನ್ನ ದುರುದ್ದೇಶವನ್ನು ಈಡೇರಿಸಲು ಪಾಕ್ ತನ್ನ ಸೈನಿಕರನ್ನು ಭಾರತದ ನಿಯಂತ್ರಣ ರೇಖೆ (LOC) ಒಳಗೆ ಕಳುಹಿಸಿತು. ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕವನ್ನು ಕಡಿದುಹಾಕುವುದು ಪಾಕಿಸ್ತಾನದ ಆಕ್ರಮಣದ ಗುರಿಯಾಗಿತ್ತು.

ಪಾಕಿಸ್ತಾನವು ಸಿಯಾಚಿನ್ ಹಿಮನದಿಯಿಂದ ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಭಾರತವು ಕಾಶ್ಮೀರ ವಿವಾದದ ಇತ್ಯರ್ಥಕ್ಕೆ ಮಾತುಕತೆ ನಡೆಸುವಂತೆ ಒತ್ತಾಯಿಸುತ್ತದೆ. ಈ ಪ್ರದೇಶದಲ್ಲಿನ ಯಾವುದೇ ಉದ್ವಿಗ್ನತೆಯು ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯಗೊಳಿಸುತ್ತದೆ ಮತ್ತು ತ್ವರಿತ ಪರಿಹಾರವನ್ನು ಪಡೆಯಲು ಸಹಾಯಕವಾಗಲಿದೆ ಎಂದು ಪಾಕಿಸ್ತಾನ ನಂಬಿತ್ತು. ಇದರೊಂದಿಗೆ ಕಾಶ್ಮೀರದಲ್ಲಿ ದಶಕಗಳ ಕಾಲದ ದಂಗೆಯನ್ನು ಹೆಚ್ಚಿಸುವ ಇನ್ನೊಂದು ಗುರಿಯನ್ನು ಕೂಡ ಹೊಂದಿತ್ತು.

ಆರಂಭದಲ್ಲಿ ಪಾಕ್ ಒಳನುಸುಳುವಿಕೆಯ ಸ್ವರೂಪದ ಬಗ್ಗೆ ಭಾರತದ ಪಡೆಗಳಿಗೆ ತಿಳಿದಿರಲಿಲ್ಲ. ನುಸುಳುಕೋರರು ಜಿಹಾದಿಗಳು ಎಂದು ಭಾವಿಸಿದ್ದರು. ಅಲ್ಲದೆ ಕೆಲವೇ ದಿನಗಳಲ್ಲಿ ಅವರನ್ನು ಹೊರಹಾಕುವುದಾಗಿ ಘೋಷಿಸಲಾಯಿತು. ಅದಾಗ್ಯೂ, ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಹೇಳಿಕೆಗಳು ಯುದ್ಧದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸ್ಪಷ್ಟವಾಗಿ ಸೂಚಿಸಿದವು. ಈ ವೇಳೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಭಾರತ, ಗಡಿನಿಯಂತ್ರಣ ರೇಖೆಯುದ್ದಕ್ಕೂ ಸೈನ್ಯವನ್ನು ಕಳುಹಿಸಿತು. ಪಾಕ್ ಪ್ರವೇಶದಿಂದ ಸುಮಾರು 130 ಕಿಮೀ - 200 ಕಿಮೀ ನಡುವಿನ ಪ್ರದೇಶವನ್ನು ಆಕ್ರಮಿಸಿಕೊಂಡಿತು. ಭಾರತ ಸರ್ಕಾರವು 20,000 ಸೈನಿಕರನ್ನು ಆಪರೇಷನ್ ವಿಜಯ್ ಹೆಸರಿನಲ್ಲಿ ಕಾರ್ಗಿಲ್ಗೆ ಕಳುಹಿಸಿತು.

ಅಂತಿಮವಾಗಿ ಪಾಕಿಸ್ತಾನದ ಸೇನಾ ಪಡೆಗಳನ್ನು ಆಕ್ರಮಿತ ಪ್ರದೇಶಗಳಿಂದ ಹೊರಹಾಕುವ ಮೂಲಕ 1999ರ ಜುಲೈ 26ರಂದು ಯುದ್ಧವು ಅಧಿಕೃತವಾಗಿ ಕೊನೆಗೊಂಡಿತು. ಇದರ ನೆನಪಿಗಾಗಿ ಹಾಗೂ ಯುದ್ಧದಲ್ಲಿ ಭಾಗಿಯಾದ ಭಾರತದ ಸೈನಿಕರನ್ನು ಗೌರವಿಸುವ ಹಾಗೂ ಹುತಾತ್ಮರಾದ 527 ಭಾರತೀಯ ವೀರ ಯೋಧರಿಗೆ ನಮನ ಸಲ್ಲಿಸಲು ಜು.26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತಿದೆ.
Published On - 8:08 am, Tue, 26 July 22




