ಶತ್ರು ರಾಷ್ಟ್ರವಾದ ಪಾಕಿಸ್ತಾನದ ಪಿತೂರಿಗೆ ತಕ್ಕ ಉತ್ತರ ಕೊಟ್ಟ ದಿನವೇ ಈ ಕಾರ್ಗಿಲ್ ವಿಜಯ ದಿವಸ. 1999ರ ಮೇ ಹಾಗೂ ಜುಲೈ ತಿಂಗಳಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತವು ವಿಜಯಿಯಾಗಿತ್ತು. ಈ ಯುದ್ಧದ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ. ಆದರೆ ಅಂದು ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ದಿಟ್ಟ ನಿರ್ಧಾರವನ್ನು ನಾವು ನೆನಪಿಸಿಕೊಳ್ಳಲೇಬೇಕು. ಅಂದು ಮಾಜಿ ಪ್ರಧಾನಿ ವಾಜೀಪೆಯಿ ತೆಗೆದುಕೊಂಡ ನಿರ್ಧಾರದಿಂದಾಗಿ ಕಾರ್ಗಿಲ್ ಪ್ರದೇಶವು ನಮ್ಮಲ್ಲಿಯೇ ಉಳಿಯಲು ಸಾಧ್ಯವಾಯಿತು.
ಕಾರ್ಗಿಲ್ ಯುದ್ಧ ನಡೆದ ವರ್ಷದಲ್ಲಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರವು ಅಧಿಕಾರದಲ್ಲಿತ್ತು. ಈ ಯುದ್ಧ ನಡೆಯುವುದಕ್ಕೂ ಮುನ್ನ ಎರಡೂ ದೇಶಗಳ ಗಡಿಯಲ್ಲಿ ಯಾವುದೇ ಶಸ್ತಾಸ್ತ್ರ ಯುದ್ಧ ನಡೆಯದಂತೆ ಶಿಮ್ಲಾ ಒಪ್ಪಂದಕ್ಕೆ ಭಾರತ ಹಾಗೂ ಪಾಕ್ ಸಹಿ ಹಾಕಿತ್ತು. ಆದರೆ ಪಾಕ್ ತನ್ನ ನರಿ ಬುದ್ದಿಯನ್ನು ತೋರಿಸಿಯೇ ಬಿಟ್ಟಿತು. ಭಾರತದ ವಿರುದ್ಧ ಒಳಸಂಚು ರೂಪಿಸಿದ ಪಾಕಿಸ್ತಾನ ತನ್ನ ಸೈನ್ಯವನ್ನು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಕಾರ್ಗಿಲ್ ಪ್ರದೇಶಕ್ಕೆ ಬಂದಿತ್ತು. ಈ ಬಗ್ಗೆ ಸ್ಥಳೀಯರು ಭಾರತದ ಸೈನಕ್ಕೆ ಮಾಹಿತಿ ನೀಡುತ್ತಿದ್ದಂತೆ, ಇತ್ತ ಪಾಕ್ ಸೈನ್ಯವು ಯುದ್ಧಕ್ಕೆ ಸಿದ್ಧವಾಗಿತ್ತು.
ಯುದ್ಧದ ಪರಿಸ್ಥಿತಿಯು ಬಂದೋದಾಗಿದಾಗ ವಾಜಪೇಯಿ ನೇತೃತ್ವದ ಸರ್ಕಾರವು ಪಾಕ್ ಗೆ ಯುದ್ಧದಿಂದ ಹಿಂದೆ ಸರಿಯುವಂತೆ ಎಚ್ಚರಿಕೆಯನ್ನು ನೀಡಿತು. ಆ ಸಂದರ್ಭದಲ್ಲಿ ಪ್ರಧಾನಿ ವಾಜಪೇಯಿಯವರೇ “ನಾವು ಅವರನ್ನು ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಹೊರಹಾಕುತ್ತೇವೆ” ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದರು. ಕೊನೆಗೆ ಈ ಯುದ್ಧಕ್ಕೆ ಸಿದ್ದರೆನ್ನುವಂತೆಯೇ ಇದ್ದ ಪಾಕ್ ಗೆ ಬುದ್ದಿ ಕಲಿಸಲು ಭಾರತೀಯ ಸೈನ್ಯವನ್ನು ಕಳಿಸಲಾಯಿತು. 1999ರಲ್ಲಿ ಅನೀರಿಕ್ಷಿತ ಕಾರ್ಗಿಲ್ ಯುದ್ಧ ಘೋಷಣೆಯಾದಾಗ “ಅಪರೇಶನ್ ವಿಜಯ್” ಮೂಲಕ ಶತ್ರು ಪಡೆಗಳನ್ನು ಹಿಮ್ಮೆಟಿಸಿ, ಆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿತು.
ಸೈನವನ್ನು ಕಳುಹಿಸಿದ ಭಾರತ ಹಾಗೂ ಪಾಕಿಸ್ತಾನದ ನಡುವೆ ಭೀಕರ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಷ್, ಅಮೆರಿಕಾದ ಆಗಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರನ್ನು ಸಂಪರ್ಕಿಸಿದ್ದರು. ಭಾರತ ಹಾಗೂ ಪಾಕ್ ನಡುವೆ ನಡೆಯುತ್ತಿರುವ ಈ ಯುದ್ಧವನ್ನು ಕೊನೆಗೊಳಿಸಲು ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಈ ಮನವಿಗೆ ಒಪ್ಪಿದ ಬಿಲ್ ಕ್ಲಿಂಟನ್, ವಾಜಪೇಯಿಯವರು ದೂರವಾಣಿಯ ಮೂಲಕ ಮಾತುಕತೆ ನಡೆಸಿದರು. ಈ ವೇಳೆಯಲ್ಲಿ ‘ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ವಾಜಪೇಯಿ ಖಡಕ್ ಆಗಿಯೇ ಉತ್ತರ ನೀಡಿದ್ದರು.
ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸಿ ಭಾರತೀಯ ಸೈನ್ಯದ ಗೆಲುವನ್ನು ಸ್ಮರಿಸಿ
ಅಂದಿನ ಪ್ರಧಾನಿ ವಾಜಪೇಯಿಯವರು ಯುದ್ಧ ಕೊನೆಗೊಳ್ಳುವ ಮುನ್ನವೇ ಭಾರತದ ಯಶಸ್ಸನ್ನು ಘೋಷಿಸಿಯೇ ಬಿಟ್ಟಿದ್ದರು. ಅಂದು ಜುಲೈ 14, ಹರಿಯಾಣದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅಟಲ್ ಬಿಹಾರಿ ವಾಜಪೇಯಿ, ಪಾಕಿಸ್ತಾನದ ಮೇಲಿನ ಭಾರತದ ಯಶಸ್ಸನ್ನು ಯುದ್ಧ ಕೊನೆಗೊಳ್ಳುವ ಮೊದಲೇ ಘೋಷಿಸಿಯೇ ಬಿಟ್ಟಿದ್ದರು. ಆದರೆ ಯುದ್ಧವು ಜುಲೈ 26 ರಂದು ಕೊನೆಗೊಂಡಿತು. ಕೊನೆಗೂ ಪಾಕ್ ಗೆ ತಕ್ಕ ಉತ್ತರವನ್ನು ನೀಡುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಭಾರತವು ಗೆಲುವನ್ನು ಸಾಧಿಸಿತು. ಆದರೆ ಈ ಯುದ್ಧದ ಸಂದರ್ಭದಲ್ಲಿ ಬಹುಮತವನ್ನು ಕಳೆದುಕೊಂಡು ಹಂಗಾಮಿ ಪ್ರಧಾನಿಯಾಗಿ ಮುಂದುವರೆದಿದ್ದ ವಾಜಪೇಯಿಯವರು ಆ ಸಂದರ್ಭದಲ್ಲಿ ತೆಗೆದುಕೊಂಡಿದ್ದ ನಿರ್ಧಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Thu, 25 July 24