ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲಎಂದು ಹೈಕೋರ್ಟ್ ಪೂರ್ಣ ಪೀಠದಿಂದ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ (Hijab Row) ಧರಿಸುವುದು ಕಡ್ಡಾಯವಲ್ಲ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರವನ್ನು ಒಳಗೊಂಡ ಪೂರ್ಣ ಪೀಠ. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ. ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಉಡುಪಿ ಕಾಲೇಜಿಗೆ ನಿರ್ದೇಶನ ನೀಡುವ ಅಗತ್ಯವಿಲ್ಲ. ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ, ರಿಟ್ ಅರ್ಜಿಗಳನ್ನು ಹೈಕೋರ್ಟ್ ಪೂರ್ಣ ಪೀಠ ವಜಾಗೊಳಿಸಿದೆ. ಉಡುಪಿಯಿಂದ ಶುರುವಾಗಿದ್ದ ಹಿಜಾಬ್ ಗಲಾಟೆ ಇಡೀ ವಿಶ್ವಕ್ಕೆ ವ್ಯಾಪಿಸಿತ್ತು. ಮುಸ್ಲಿಂ ಸಮುದಾಯದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು, ನಾವು ಧರಿಸಿಯೇ ಶಾಲೆ- ಕಾಲೇಜಿಗೆ ಬರುತ್ತೇವೆ ಎಂದು ಪ್ರತಿಭಟನೆ ನಡೆಸಿದ್ದರು. ಜೊತೆಗೆ ಹಿಜಾಬ್ ಧರಿಸುವವರೆಗೆ ಕೇಸರಿ ಶಾಲು ಧರಿಸುತ್ತೇವೆ ಅಂತ ಹಲವು ಹಿಂದೂ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದರು. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರವರ ಪೂರ್ಣ ಪೀಠ ತೀರ್ಮಾನ ಕೈಗೊಂಡಿದ್ದು, ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ. ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ ಅಂತ ಕೋರ್ಟ್ ತಿಳಿಸಿದೆ.
ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲಿಸಬೇಕು. ಯಾವುದೇ ಧರ್ಮದವರಾಗಿರಲಿ ಎಲ್ಲರೂ ಪಾಲಿಸಬೇಕು ಎಂದು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
Karnataka High Court gave its judgment today (on #Hijab) & it should be welcomed. The dress code of school/college must be followed by everyone of any religion: Defence Minister Rajnath Singh, in Delhi pic.twitter.com/C8pogU4Teh
— ANI (@ANI) March 15, 2022
ಹಿಜಾಬ್ ಆದೇಶ ಕುರಿತು ದೆಹಲಿಯಲ್ಲಿ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದು ಹೈಕೋರ್ಟ್ ಆದೇಶ ಏನಿದೆ ಅದನ್ನು ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ. ನಮ್ಮ ಪಕ್ಷದ ನಿಲುವು ಹೈಕೋರ್ಟ್ ಆದೇಶದ ಪರವಾಗಿದೆ. ರಾಜಕೀಯ ಲಾಭ-ನಷ್ಟದ ಬಗ್ಗೆ ನಾವು ಯೋಚನೆ ಮಾಡಲ್ಲ. ರಾಜ್ಯದಲ್ಲಿ ಶಾಂತಿ ಇರಬೇಕು, ಕಲಿಕೆಗೆ ತೊಂದ್ರೆ ಆಗಬಾರದು. ಹಿಜಾಬ್ ವಿಚಾರದಲ್ಲಿ ಸರ್ಕಾರ ವಿಫಲವಾಯ್ತು ಅನಿಸುತ್ತದೆ. ಈ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಬಿಡಬಾರದಿತ್ತು ಎಂದು ಸರ್ಕಾರದ ಕ್ರಮಕ್ಕೆ ಮಾಜಿ ಪ್ರಧಾನಿ H.D.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ನ ತ್ರಿಸದಸ್ಯ ಪೀಠ ಇವತ್ತು(ಮಾರ್ಚ್ 15) ಮಹತ್ವದ ತೀರ್ಪು ಪ್ರಕಟಿಸಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದ್ರೆ ಈ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿನಿ ನಿಬಾ ನಾಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಂಗಳೂರಿನಲ್ಲಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ಕುರಿತ ತೀರ್ಪು ಅಸಮಾಧಾನಕರವಾಗಿದೆ. ಈ ತೀರ್ಪು ಸಂವಿಧಾನ ನಮಗೆ ಕೊಟ್ಟ ಹಕ್ಕನ್ನು ಮೊಟಕುಗೊಳಿಸಿದೆ. ವಿದ್ಯಾರ್ಥಿನಿಯರ ಹಿತ ಕಡೆಗಣಿಸಿ ಸರ್ಕಾರ ಸಂಘಪರಿವಾರದ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈ ತೀರ್ಪು ನಮ್ಮ ಸಂವಿಧಾನದ ಹಕ್ಕನ್ನು ಕಸಿದು ಕೊಂಡಿದೆ. ಸಂಘಪರಿವಾರ ಮಹಿಳಾ ಮತ್ತು ಪ್ರತಿಗಾಮಿ ಕೂಟವಾಗಿದೆ. ನಮ್ಮ ಸಾಕ್ಷರತೆ ಪ್ರಮಾಣ ಇಳಿಸಲು ಸಂಘಪರಿವಾರ ಹಿಜಾವ್ ವಿವಾದ ಎಬ್ಬಿಸಿದೆ. ಈ ತೀರ್ಪು ಮುಸ್ಲಿಂ ಸಮುದಾಯಕ್ಕೆ ತುಂಬಾ ನೋವುಂಟು ಮಾಡಿದೆ. ಆದರೆ ಈ ತೀರ್ಪು ಸಂಘ ಪರಿವಾರಕ್ಕೆ ಮಾತ್ರ ಖುಷಿ ಕೊಟ್ಟಿದೆ. ಈ ತೀರ್ಪಿಗಾಗಿ ಕಾದಿದ್ದ ಹೆಣ್ಮಕ್ಕಳಿಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಆ ಹೆಣ್ಮಕ್ಕಳ ಪರವಾಗಿ ನಮ್ಮ ಸಂಘಟನೆ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಧಾರ್ಮಿಕ ಸ್ವಾತಂತ್ರ್ಯದ ಜೊತೆ ಶಿಕ್ಷಣ ಪಡೆಯಿರಿ ಅಂತ ನಾವು ಅವರಿಗೆ ಹೇಳ್ತೇವೆ. ಅವರು ಮುಂದೆಯೂ ಕಾನೂನು ಹೋರಾಟ ಮಾಡಲು ನಾವು ಬೆಂಬಲಿಸ್ತೇವೆ. ಧಾರ್ಮಿಕ ಸ್ವಾತಂತ್ರ್ಯದ ಜೊತೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟರೆ ಅವರು ಬರೆಯಲಿ. ಪರೀಕ್ಷೆ ಬರೆಯಲು ಅವಕಾಶ ಸಿಗದೇ ಅವರು ಹೊರಗೆ ಬಂದ್ರೆ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರು ಪ್ರತಿಭಟಿಸದೇ ಇದ್ರೆ ಮುಂದೆ ಬೇರೆ ಹಕ್ಕನ್ನ ಕಸಿದುಕೊಳ್ಳಬಹುದು. ಈ ಮೂವರು ನ್ಯಾಯಮೂರ್ತಿಗಳ ತೀರ್ಪು ಸಂವಿಧಾನಿಕ ಹಕ್ಕಿನ ವಿರುದ್ದವಾಗಿದೆ. ಇವತ್ತಿನ ಈ ತೀರ್ಪು ಫ್ಯಾಶಿಸ್ಟ್ ಪರ ನೀಡಿದ ತೀರ್ಪಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಾರವಾರ: ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆ ಕೆಲ ಮುಸ್ಲಿಂ ವರ್ತಕರು ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಯಲ್ಲಿರುವ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಹಳೆ ಬಸ್ ನಿಲ್ದಾಣದಿಂದ ಚೌಕ್ ಬಜಾರ್ ವರೆಗೆ ಇರುವ ಬಹುತೇಕ ಮುಸ್ಲಿಂ ವರ್ತಕರಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠದಿಂದ ಮಹತ್ವದ ತೀರ್ಪು ಹೊರ ಬಿದ್ದಿದೆ. ಕುರಾನ್‌ನಲ್ಲಿ ಹಿಜಾಬ್ ಧರಿಸುವುದು ಕಡ್ಡಾಯಪಡಿಸಿಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠದ ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿದೆ. ಹೈಕೋರ್ಟ್ ತೀರ್ಪಿನಲ್ಲಿ ಕುರಾನ್ನ ಅಂಶಗಳ ಉಲ್ಲೇಖ ಮಾಡಿದೆ. ಹಿಜಾಬ್ ಬಗ್ಗೆ ಕುರಾನ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಕುರಾನ್ನ 256ನೇ ವಚನ ಧರ್ಮದಲ್ಲಿ ಒತ್ತಾಯ ಬೇಡವೆಂದು ಹೇಳಿದೆ. ಧರ್ಮ ನಂಬಿಕೆ ಹಾಗೂ ಇಚ್ಛೆಯ ಮೇಲೆ ನಿಂತಿದೆ. ಬಲವಂತದಿಂದ ಹೇರಿದರೆ ಅರ್ಥಹೀನವೆಂದು ಹೇಳಿದೆ. ಕುರಾನ್‌ನಲ್ಲಿ ಹಿಜಾಬ್ ಧರಿಸುವುದು ಕಡ್ಡಾಯವೆಂದು ಹೇಳಿಲ್ಲ. ಸುರಾದಲ್ಲಿ ಹಿಜಾಬ್ ಅಪೇಕ್ಷಿತ ಆದರೆ ಕಡ್ಡಾಯವಲ್ಲ ಎಂದಿದೆ. ಹೀಗಾಗಿಯೇ ಹಿಜಾಬ್ ಧರಿಸದಿರುವುದಕ್ಕೆ ದಂಡನೆ ವಿಧಿಸಿಲ್ಲ. ಹಿಜಾಬ್ ಆಗಿನ ಕಾಲಘಟ್ಟದಲ್ಲಿ ಇಸ್ಲಾಂಗೆ ಸೀಮಿತವಾಗಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಗಾಗಿ ಹಿಜಾಬ್ ಬಳಸಲಾಗಿತ್ತು. ಇದು ಧರ್ಮಕ್ಕಿಂತ ಆಗ ಸಂಸ್ಕೃತಿಯ ಭಾಗವಾಗಿತ್ತು. ಇಸ್ಲಾಂ ಪ್ರಾರಂಭದ ವೇಳೆ ಮಹಿಳೆಯ ಸ್ಥಿತಿ ಹೀನವಾಗಿತ್ತು. ಹೀಗಾಗಿ ಹಿಜಾಬ್ ಧರಿಸಲು ಆಗ ಸೂಚಿಸಲಾಗಿತ್ತು. ಈಗಲೂ ಅದೇ ಪರಿಸ್ಥಿತಿ ಇದೆಯೇ? ಹೀಗೆಂದು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು. ಹೀಗೆಂದು ಮುಸ್ಲಿಂ ವಿದ್ವಾಂಸ ಯೂಸುಫ್ ಅಲಿ ವಿಶ್ಲೇಷಿಸಿದ್ದಾರೆ. ಧರ್ಮದಲ್ಲಿ ಹೇಳಿರುವುದೆಲ್ಲಾ ಕಡ್ಡಾಯವೆಂದು ಭಾವಿಸಬೇಕಿಲ್ಲ. 1400 ವರ್ಷ ಹಳೆಯ ತ್ರಿವಳಿ ತಲಾಖ್ ರದ್ದುಪಡಿಸಲಾಗಿದೆ. ಸುರಾದಲ್ಲಿರುವುದನ್ನು ವಿಶ್ಲೇಷಿಸಿ ಪ್ರಮಾಣಪತ್ರ ಸಲ್ಲಿಸಿಲ್ಲ. ಯಾವುದೇ ಮೌಲ್ವಿಯ ಪ್ರಮಾಣಪತ್ರ ಸಲ್ಲಿಸಿಲ್ಲ. ಹೀಗಾಗಿ ಹಿಜಾಬ್ ಇಸ್ಲಾಂನಲ್ಲಿ ಅತ್ಯಗತ್ಯ ಆಚರಣೆಯಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಬೆಳಗಾವಿ: ಈ ತೀರ್ಪು ಒಂದೇ ಧರ್ಮದ ವಿರುದ್ಧವೇನೂ ಅಲ್ಲ. ತರಗತಿಯಲ್ಲಿ ಎಲ್ಲ ಧರ್ಮದ ಬಣ್ಣ, ವಸ್ತ್ರಗಳನ್ನು ನಿಷೇಧ ಮಾಡಿದ್ದಾರೆ. ಕೋರ್ಟ್ ಆದೇಶವನ್ನು ಎಲ್ಲರೂ ಸ್ವಾಗತಿಸುತ್ತೇವೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮೊದಲು ಬಹುತೇಕರು ತರಗತಿಯಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ. ಆದರೆ ಬಿಜೆಪಿಯವರೇ ಈ ಬಗ್ಗೆ ರಾಜ್ಯದಲ್ಲಿ ಗೊಂದಲ ಉಂಟು ಮಾಡಿದರು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ವೈಯಕ್ತಿಕವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದು. ಈ ಹಿಂದೇ ರಾಮ ಜನ್ಮಭೂಮಿ ವಿವಾದಲ್ಲೂ ಹಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲ ಸಮುದಾಯ ಒಪ್ಪಿಕೊಂಡವು. ವೈಯಕ್ತಿಕವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವವರಿಗೆ ನಾವು ಬೇಡ ಎನ್ನಲು ಆಗಲ್ಲ ಎಂದರು.
ಉಡುಪಿ: ನಾವು ಕಾಂಪ್ರಮೈಸ್ ಆಗಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ನಾವು ಹೈಕೋರ್ಟ್ ಗೆ ಹಿಜಬ್ ಗಾಗಿ ಹೋದೆವು. ನಮ್ಮ ನಿರೀಕ್ಷೆ ವಿರುದ್ಧ ತೀರ್ಪು ಬಂದಿದೆ. ಸರಕಾರದ ವಸ್ತ್ರಸಂಹಿತೆ ಆದೇಶವನ್ನು ತೀರ್ಪಲ್ಲೇ ಪ್ರಕಟಿಸಲಾಗಿದೆ ಎಂದು ಉಡುಪಿಯಲ್ಲಿ ಆಲಿಯಾ ಅಸಾದಿ ಹೇಳಿದ್ದಾಳೆ. ಸರಕಾರದ ಮಧ್ಯಂತರ ಆದೇಶದ ಮೂಲಕ ಕೋರ್ಟ್ ಮೇಲೆ ಪ್ರೆಶರ್ ಹಾಕಲಾಗಿದೆ. ರಾಜ್ಯ ಸರಕಾರ ಕೋರ್ಟ್ ತೀರ್ಪಿನ ಮೇಲೆ ಹಸ್ತಕ್ಷೇಪ ಮಾಡಿದೆ. ರಾಜ್ಯ ಸರಕಾರದಿಂದ ಕೋರ್ಟ್ ಮೇಲೆ ಒತ್ತಡ ಇದೆ. ಒತ್ತಡ ಇದ್ದದ್ದಕ್ಕೆ ಇಂದು ಹಿಜಬ್ ವಿರುದ್ಧ ತೀರ್ಪು ಬಂದಿದೆ ಎಂದಿದ್ದಾಳೆ.
ಉಡುಪಿ: ನಮ್ಮ ಹಿಜಬ್ ಹಕ್ಕಿಗಾಗಿ ಮುಂದಿನ ಹೋರಾಟ ಮಾಡುತ್ತೇವೆ. ನಮ್ಮ ಸಂವಿಧಾನ ಹಕ್ಕಿಗಾಗಿ ಹೋರಾಡುತ್ತೇವೆ. ನಾವು ನಮ್ಮ ಕುರಾನ್ ಫಾಲೋ ಮಾಡುತ್ತೇವೆ. ನಾವು ಸರಕಾರ, ಆದೇಶ ಅನುಸರಿಸಬೇಕಾಗಿಲ್ಲ. ಹಿಜಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ಬೇಕು. ನಾವು ಎರಡು ತಿಂಗಳು ಮನೆಯಲ್ಲೇ ತಯಾರು ಮಾಡುತ್ತಿದ್ದೇವೆ. ನಾವು ಹಿಜಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ. ನಮಗೆ ಇಂದು ಅನ್ಯಾಯವಾಗಿದೆ. ನಾವು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ನಮ್ಮ ದೇಶದಲ್ಲೇ ನಮಗೆ ಅನ್ಯಾಯ ಆಗಿದೆ ಎಂದು ಅನ್ನಿಸುತ್ತಿದೆ ಎಂದು ಉಡುಪಿಯಲ್ಲಿ ವಿದ್ಯಾರ್ಥಿನಿ ಅಲ್ಮಾಸ್ ಹೇಳಿಕೆ ನೀಡಿದ್ದಾಳೆ.
ಉಡುಪಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ, ಸರ್ಕಾರ, ಆಡಳಿತ ಮಂಡಳಿ ಅವಕಾಶ ನೀಡಿದರೆ ಬರೆಯುತ್ತೇವೆ. ಕಾಲೇಜಿಗೆ ಗೈರಾಗಿದ್ದರೂ ಪರೀಕ್ಷೆಗೆ ಸ್ವತಃ ಸಿದ್ಧತೆ ನಡೆಸಿದ್ದೇವೆ. ಕುರಾನ್‌ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ ಎಂದು ಹೇಳಿದ್ದಾರೆ. ಹಿಜಾಬ್ ಉಲ್ಲೇಖವಿರುವ ಬಗ್ಗೆ ವಕೀಲರು ಹೇಳಿದ್ದಾರೆ. ಆಗ ವಕೀಲರ ವಾದವನ್ನು ಒಪ್ಪಿದ್ದಾರೆ. ಆದ್ರೆ ಈಗ ತೀರ್ಪು ಹೀಗೆ ಬಂದಿದೆ, ಏಕೆಂದು ನಮಗೆ ಗೊತ್ತಿಲ್ಲ. ನಮ್ಮ ಹಕ್ಕು ಪಡೆಯುವವರೆಗೂ ಹೋರಾಟ ಮಾಡುತ್ತೇವೆ. ಹಿಜಾಬ್ ಇಲ್ಲದೆ ನಾವು ಕಾಲೇಜಿಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉಡುಪಿ: ನಮಗೆ ನ್ಯಾಯಾಲಯದ ಮೇಲೆ ಬಹಳ ನಿರೀಕ್ಷೆ ಇತ್ತು. ವ್ಯವಸ್ಥೆ ಮೇಲೆ ಬಹಳ ಭರವಸೆ ಇತ್ತು. ಧರ್ಮದಲ್ಲಿ ನಮಗೆ ಹಿಜಬ್ ಅವಕಾಶ ಇತ್ತು. ಎಲ್ಲಾ ಮುಸ್ಲಿಂ ಮಹಿಳೆಯರು ತಲೆ ಮತ್ತು ಎದೆ ಮುಚ್ಚುವ ಅವಕಾಶ ಇದೆ. ಹೈಕೋರ್ಟ್ ನಲ್ಲಿ ತೀರ್ಪು ನಮ್ಮ ವಿರುದ್ಧ ಬಂದಿದೆ. ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಐವರು ಮುಸ್ಲಿಂ ವಿದ್ಯಾರ್ಥಿನಿಯರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ನಮಗೆ ನಮ್ಮ ಹಕ್ಕು ಸಿಕ್ಕಿಲ್ಲ. ನಮಗೆ ಹಿಜಾಬ್ ಬೇಕು, ಹೀಗಾಗಿ ಕೋರ್ಟ್ ಮೆಟ್ಟಿಲೇರಿದ್ದೆವು. ಹಿಜಾಬ್‌ಗಾಗಿ ನಾವು ಕಾನೂನು ರೀತಿ ಎಲ್ಲ ಪ್ರಯತ್ನ ಮಾಡ್ತೇವೆ. ಕುರಾನ್‌ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ. ನಾವು ಹಿಜಾಬ್ ತೆಗೆಯುವುದಿಲ್ಲ. ಆದ್ರೆ ನಮಗೆ ಶಿಕ್ಷಣ ಬೇಕು. ಹಿಜಾಬ್ ನಿರಾಕರಣೆಯಿಂದ ಶಿಕ್ಷಣ ವಂಚಿತರಾಗಿದ್ದಾರೆ. ಎಷ್ಟು ವಿದ್ಯಾರ್ಥಿನಿಯರು ಶಿಕ್ಷಣ ವಂಚಿತರಾಗಿದ್ದಾರೆ. ನಮಗೆ ನಮ್ಮ ಧರ್ಮ, ಶಿಕ್ಷಣ ಎರಡೂ ಮುಖ್ಯವಾದದ್ದು. ಪರೀಕ್ಷೆ ಬರೆಯಲು ನಾವು ಸಿದ್ಧರಿದ್ದೇವೆ ಆದರೆ ಹಿಜಾಬ್ ತೆಗೆಯಲ್ಲ.
ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸಬೇಕು. ಹೈಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲಿಸಬೇಕು ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಶಾಲಾ ಕಾಲೇಜಿನಲ್ಲಿ ಅಶಾಂತಿ ಬಗ್ಗೆ ನಿಲುವಳಿ ಮಂಡಿಸಿದ್ದೆವು. ಕಾಕತಾಳೀಯ ಎಂಬಂತೆ ಇಂದು ಕೋರ್ಟ್ ತೀರ್ಪು ಬಂದಿದೆ. ತ್ರಿಸದಸ್ಯ ಪೀಠದ ಆದೇಶವನ್ನು ಕಾಪಾಡುವುದು ಕರ್ತವ್ಯ. ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದರು.
ಬೆಳಗಾವಿ: ಇನ್ನಾದರೂ ಕಾಂಗ್ರೆಸ್‌ಗೆ ಬುದ್ದಿ ಬರಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಕಾನೂನು ಗೊತ್ತಿದ್ರೂ ಹಿಜಾಬ್ ಪರ ನಿಂತು ಕರ್ನಾಟಕದಲ್ಲಿ ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ ಎಸ್‌ಎಫ್‌ಎ ಕೆಲ ವಿದ್ಯಾರ್ಥಿ ಸಂಘಟನೆಗಳ ಜೊತೆ ಕಾಂಗ್ರೆಸ್ ಸಹ ಒಂದು. ಆದರೆ ಇವತ್ತು ಹೈಕೋರ್ಟ್ ಇಂದು ತನ್ನ ನಿರ್ಣಯ ಹೇಳಿದ್ದಿದೆ. ಹಿಜಾಬ್ ಪ್ರಕರಣ ಮಾಡೋರಿಗೆ ನೇರ ಸಂದೇಶ ಹೋಗಿದೆ. ಅದಕ್ಕಿಂತ ಹೆಚ್ಚು ಕಾಂಗ್ರೆಸ್ ನವರಿಗೆ ಸಂದೇಶ ಹೋಗಿದೆ. ಒಂದು ಸಮಾಜ ಎತ್ತಿ ಕಾನೂನು ವಿರುದ್ಧವಾಗಿ ತಲೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡ್ತಿದ್ರು. ಹಿಜಾಬ್ ಪ್ರಕರಣ ಪ್ರಾರಂಭವಾದಾಗಿನಿಂದ ಹಿಂದೂತ್ವ ಸಂಘಟನೆ, ಹಿಂದೂಗಳ ಬಗ್ಗೆ ಅನಾಚಾರ ಮಾಡುವ ಕೆಲಸ ಕಾಂಗ್ರೆಸ್ ಪ್ರಾರಂಭ ಮಾಡಿದ್ರು. ಅದಕ್ಕೆ ಇವತ್ತು ಹೈಕೋರ್ಟ್ ಉತ್ತರ ಕೊಟ್ಟಿದೆ. ಸರ್ಕಾರ ಇರಬಹುದು ಸಮಾಜ ಇರಬಹುದು ಅದು ಸರಿ ಇದೆ ಅನ್ನುವ ನಿರ್ಣಯ ಹೈಕೋರ್ಟ್ ಇಟ್ಟಿದೆ. ಇನ್ನಾದರೂ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಹಿಜಾಬ್… ಹಿಜಾಬ್… ಅಂತಾ ಒದರೋರ ಜೊತೆ ಕಾಂಗ್ರೆಸ್ ಸಹ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.
ಹಿಜಾಬ್ ತೀರ್ಪು ಅಸಂವಿಧಾನಕ ತೀರ್ಪಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಇಂಡಿಯಾ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಹೇಳಿಕೆನೀಡಿದ್ದಾರೆ.
೬ ವಿದ್ಯಾರ್ಥಿನಿಯರ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವು. ವಿದ್ಯಾರ್ಥಿನಿಯರ ಪರ ನಮ್ಮ ಹೋರಾಟ ಮುಂದುವರೆಯಲಿದೆ. ಈ ಹೋರಾಟ ಹೇಗೆ ಮುಂದುವರೆಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಇಸ್ಲಾಂನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ, ಕುರಾನ್ ನಲ್ಲಿ ಮಹಿಳೆ ತನ್ನ ಕೂದಲನ್ನು ಮುಚ್ಚಿಕೊಳ್ಳಬೇಕೇಂದು. ಆರ್ಕಟಿಕ್ ೧೫ರ ಉಲ್ಲಂಘನೆ ಆಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ: ಹೈಕೋರ್ಟ್ ತೀರ್ಪು ಬಂದ ಹಿನ್ನಲೆ, ಶಿವಮೊಗ್ಗದ ರಾಗಿಗುಡ್ಡದ ಬಡಾವಣೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಸೂಕ್ಷ್ಮ ಪ್ರದೇಶ ಆಗಿರುವ ರಾಗಿಗುಡ್ಡ, ಸ್ಥಳದಲ್ಲಿ ಒಂದು ಡಿ.ಆರ್. ತುಕಡಿ ಮತ್ತು ಓರ್ವ ಪಿಎಸ್ ಐ. ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಶಿವಮೊಗ್ಗ: ಹಿಜಾಬ್ ಕುರಿತು ಹೈಕೋರ್ಟ್ ನ ಆದೇಶ ಹಿನ್ನಲೆ, ಶಿವಮೊಗ್ಗದಲ್ಲಿ ಹಿಜಾಜ್ ಗಾಗಿ ವಿದ್ಯಾರ್ಥಿನಿಯರ ಪಟ್ಟು ಮುಂದುವರೆದಿದೆ. ಹೈಕೋರ್ಟ್ ಆದೇಶದಿಂದ ನಮಗೆ ನೋವು ಆಗಿದೆ. ಈ ಆದೇಶ ವಿರುದ್ಧ ನಾವು ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ. ಇಷ್ಟು ದಿನ ನಮ್ಮ ಹೋರಾಟ ವ್ಯರ್ಥ ಆಗಿದೆ. ಸಂವಿಧಾನ ಬದ್ಧ ಹಕ್ಕು ನಾವು ಬೇಡಿಕೆ ಇಟ್ಟಿದ್ದೇವು. ಹಿಜಾಬ್ ನಮ್ಮ ಧರ್ಮದಲ್ಲಿ ಕಡ್ಡಾಯವಾಗಿ ಹಾಕಿಕೊಳ್ಳಬೇಕೆಂದು ಇದೆ. ಹಿಜಾಬ್ ಇಲ್ಲದೇ ಕಾಲೇಜ್ ಗೆ ಹೋಗುವುದಿಲ್ಲ. ಹಿಜಾಬ್ ಗೆ ಸರಕಾರ ಅವಕಾಶ ನೀಡಬೇಕು. ಮೋದಿ ಸರಕಾರದ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ: ಹೈಕೋರ್ಟ್ ಉತ್ತಮ ತೀರ್ಪನ್ನು ಕೊಟ್ಟಿದೆ. ನಾವು ಅದನ್ನ ಸ್ವಾಗತ ಮಾಡುತ್ತೇವೆ. ಹಿಜಾಬ್ ಇಟ್ಟುಕೊಂಡು ಶಿಕ್ಷಣ ಕ್ಷೇತ್ರದ ವಾತಾವರಣ ಕಲುಶಿತಗೊಳಿಸೊ ಪ್ರಯತ್ನ ನಡೆದಿತ್ತು ಎಂದು ಹಾಸನದಲ್ಲಿ ಬಿಜೆಪಿ ರಾಜ್ಯ ಉಪಾದ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸೋ ಯತ್ನ ದುಷ್ಟ ಶಕ್ತಿಗಳದ್ದಾಗಿತ್ತು. ಈ ತೀರ್ಪು ಎಲ್ಲರಿಗು ಚಾಟಿ ಬೀಸಿದಂತೆ ಆಗಿದೆ. ಈ ತೀರ್ಪುನ್ನು ಇನ್ನಾದ್ರು ಅರ್ಥ ಮಾಡಿಕೊಂಡು ಈ ರೀತಿ ದುಸ್ಸಾಹಸಕ್ಕೆ ಕೈ ಹಾಕೋದನ್ನ ದುಷ್ಟ ಶಕ್ತಿಗಳು ಕೈ ಬಿಡಬೇಕು. ಇಂದು ಹೈಕೋರ್ಟ್ ತ್ರಿಸದಸ್ಯ ಪೀಠ ಎಲ್ಲರ ವಾದ ಕೇಳಿ ತೀರ್ಪು ನೀಡಿದೆ. ಇದನ್ನ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಕೋರ್ಟ್ ಗೆ ಹೋದರೂ ಕೂಡ ಹೈಕೋರ್ಟ್ ತೀರ್ಪಿನಂತೆ ನಮಗೆ ಜಯ ಸಿಗೋ ವಿಶ್ವಾಸ ಇದೆ ಎಂದು ಹೇಳಿದರು.
ಉಡುಪಿ: ಹೈಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ. ಆದ್ರೆ ಹೈಕೋರ್ಟ್ ತೀರ್ಪು ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ಮುಂದೆ ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತು ವಾದ ಮಂಡಿಸುತ್ತೇವೆ. ಹಿಜಾಬ್ ನಮ್ಮ ಧಾರ್ಮಿಕ ಹಕ್ಕು. ಪರೀಕ್ಷೆಯನ್ನು ಹಿಜಾಬ್ ತೆಗೆದು ಬರೆಯುದಕ್ಕೆ ನಮ್ಮ ಅಡ್ಡಿ ಇಲ್ಲ. ಈ ಬಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡುತ್ತೇವೆ. ಆದ್ರೆ ಹಿಜಾಬ್ ತೆಗದು ಪರೀಕ್ಷೆ ಬರೆಯುವುದು ಅವರಿಗೆ ಬಿಟ್ಟ ವಿಚಾರ. ನಾವು ಪರೀಕ್ಷೆ ವಿಷಯದಲ್ಲಿ ಬಲವಂತ ಮಾಡುದಿಲ್ಲ. ಸುಪ್ರೀಂ ಕೊರ್ಟ್ ಗೆ ಮೇಲ್ವನವಿ ಸಲ್ಲಿಸುವ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಚರ್ಚೆ ಮಾಡಲಾಗುವುದು. ಸಂವಿಧಾನ ಧರ್ಮ ಮತ್ತು ಶಿಕ್ಷಣ ಎರಡಕ್ಕೂ ಅವಕಾಶ ಕೊಟ್ಟಿದ್ದೆ. ನಮ್ಮಗೆ ಶಿಕ್ಷಣ ಹಾಗೂ ಧರ್ಮದ ಆಚರಣೆ ಎರಡು ಕೂಡ ಮುಖ್ಯ. ಧಾರ್ಮಿಕ ಹಕ್ಕಿಗಾಗಿ ಹೋರಾಟ ಮುಂದುವರಿಸುತ್ತೇವೆ. ನಮ್ಮಕಡೆಯಿಂದ ಪರೀಕ್ಷೆಗೆ ಅಟೆಂಡ್ ಅಗುವಂತೆ ಮನವರಿಕೆ ಮಾಡುವ ಪ್ರಯತ್ನ ನಡೆಸುತ್ತೇವೆ. ಆದ್ರೆ ಧಾರ್ಮಿಕ ಹಕ್ಕಿನ ಹೋರಾಟ ಮುಂದುವರಿಸುತ್ತೇವೆ ಎಂದು ಮುಸ್ಲಿಂ ಒಕ್ಕೂಟದ ಮುಖಂಡ ಹುಸೇನ್ ಕೋಡಿ ಬೆಂಗ್ರೆ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ: ನಾವು ಕಾಲೇಜುವರೆಗೂ ಹಿಜಾಬ್ ಹಾಗೂ ಬುರ್ಕಾ ಧರಿಸಿ ಬರುತ್ತೇವೆ. ಆದರೆ ಕ್ಲಾಸ್ ಒಳಗೆ ಬುರ್ಕಾ ಹಿಜಾಬ್ ತೆಗೆದು ಕೂರುತ್ತೇವೆ. ಆದರೆ ನಮಗೆ ಈಗ ಹಿಜಾಬ್ ಬುರ್ಕಾ ತೆಗೆಯೋದಕ್ಕೆ ಪ್ರತ್ಯೇಕ ಕೊಠಡಿ ನೀಡಬೇಕು. ಇಷ್ಟು ದಿನ ಕೊಟ್ಟಿದ್ದರು ಈಗ ಇನ್ನೂ ಕೊಟ್ಟಿಲ್ಲ. ಕಂಪೌಂಡ್ ಹೊರಗಡೆಯೇ ಹಿಜಾಬ್ ತೆಗೆದು ಬರಬೇಕು ಅಂದರೆ ಹೇಗೆ. ನಾವು ಹಿಜಾಬ್ ಬುರ್ಕಾ ತೆಗೆಯೋದಿಲ್ಲ. ಹೊರಗಡೆಯೇ ನಿಲ್ಲುತ್ತೇವೆ ಆದರೆ ತೆಗೆಯೋದಿಲ್ಲ. ಕೋರ್ಟ್ ಆದೇಶ ಗೌರವಿಸುತ್ತೇವೆ. ಆದರೆ ನಮಗೆ ಕಾಲೇಜಿನಲ್ಲಿ ಹಿಜಾಬ್ ಬುರ್ಕಾ ತೆಗೆಯಲು ಪ್ರತ್ಯೇಕ ಕೊಠಡಿ ನೀಡಿ ಎಂದು ಟಿರ್ವಿ ಗೆ ಶಾಹಿರ್ ಹಾಗೂ ಅಸ್ಮಿನ್ ಎಂಬ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ: ನಾವು ಹಿಜಾಬ್ ಧರಿಸಿಯೇ ತರಗತಿಗೆ ಬರುತ್ತೇವೆ. ಬಾಗಲಕೋಟೆಯಲ್ಲಿ ಪಿ.ಯು ಕಾಲೇಜ್ ವಿದ್ಯಾರ್ಥಿನಿ ತಸ್ಮಿಯಾ ಹೇಳಿಕೆ ನೀಡಿದ್ದಾಳೆ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿ ತಸ್ಮಿಯಾ. ನಿಮಗೆ ಶಿಕ್ಷಣ ಮುಖ್ಯನಾ ಹಿಜಾಬ್ ಮುಖ್ಯನಾ ಅಂತ ಕೇಳ್ತಾರೆ. ತಂದೆ-ತಾಯಿ ಡೈವೋರ್ಸ್ ಆದಾಗ, ತಂದೆ ಬೇಕಾ? ತಾಯಿ ಬೇಕಾ ಅಂತ ಕೇಳಿದ್ರೆ ನಾವು ಏನು ಹೇಳಬೇಕು. ನಮಗೆ ಅದೇ ತರಾ ಶಿಕ್ಷಣ ಮತ್ತು ಹಿಜಾಬ್ ಒಂದೇ. ನಮಗೆ ಶಿಕ್ಷಣ ಮತ್ತು ಹಿಜಾಬ್ ಎರಡು ಬೇಕು ಅಷ್ಟೇ. ನಾವು ಹಿಜಾಬ್ ಹಾಕಿ ಕೂತ್ಕೋತೀವಿ ಅಷ್ಟೇ. ಇನ್ನು ಮುಂದೆ ತಲೆ ಮೇಲು ಹಾಕಿಕೊಂಡು ಕೂತ್ಕೋತೆವೆ. ನಾವು ಹೇಳೋದನ್ನು ಕೋರ್ಟ್ ಗೆ ತಲುಪಿಸಿ ಎಂದು ಹೇಳಿದ್ದಾಳೆ.
ಹಿಜಾಬ್ ವಿಚಾರವಾಗಿ ಹೈಕೋರ್ಟ್ ನಲ್ಲಿ ಮಹತ್ವದ ತೀರ್ಪು ಹಿನ್ನಲೆ, ವಿಧಾನ ಸೌಧದ ಮೊಗಸಾಲೆಯಲ್ಲಿ ಅಲ್ಪಸಂಖ್ಯಾತ ನಾಯಕರಿಂದ ಅನೌಪಚಾರಿಕ ಸಭೆ ಮಾಡಲಾಗುತ್ತಿದೆ. ಶಾಸಕರಾದ ಜಮೀರ್ ಅಹ್ಮದ್, ಎನ್ ಎ ಹ್ಯಾರೀಸ್, ಅಲ್ಪಸಂಖ್ಯಾತ ಸಮುದಾಯದ ಮುಖ್ಯಸ್ಥ ಅಬ್ದುಲ್ ಜಬ್ಬಾರ್, ಇತರ ನಾಯಕರು ಭಾಗಿ. ಹಿಜಾಬ್ ವಿಚಾರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆ ಕೂಡ ಚರ್ಚೆ ಮಾಡಲಿದ್ದು, ತೀರ್ಪು ವಿಚಾರವಾಗಿ ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಾಯಕರು ಮಾತುಕತೆ ಮಾಡಲಿದ್ದಾರೆ. ರಾಜಕೀಯವಾಗಿ ಕೂಡ ಮುಂದಿನ ನಡೆಯ ಬಗ್ಗೆ ಅನೌಪಚಾರಿಕವಾಗಿ ನಾಯಕರು ಮಾತುಕತೆ ನಡೆಸಿದ್ದಾರೆ. ಪಕ್ಷದ ಮೇಲೆ ಆಗುವ ಪರಿಣಾಮ ಹಾಗೂ ಚುನಾವಣಾ ಪ್ರಭಾವದ ಬಗ್ಗೆ ಕೂಡ ಚರ್ಚೆ ನಡೆಯಲಿದೆ. ಮುಂದಿನ ಹಂತದಲ್ಲಿ ಈ ವಿಚಾರ ಕೈಗೆತ್ತಿಕೊಳ್ಳುವ ರೀತಿಯ ಬಗ್ಗೆ ಮುಖಂಡರು ಮಾತುಕತೆ ನಡೆಸಿದ್ದಾರೆ. ಹಿರಿಯ ವಕೀಲರನ್ನು ಸಂಪರ್ಕಿಸಿ ಇನ್ನಿತರ ಕಾನೂನು ಅಭಿಪ್ರಾಯ ಪಡೆಯುವ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದ್ದು, ಸುಪ್ರೀಂ ಕೋರ್ಟ್ ನ ವಕೀಲರ ಸಂಪರ್ಕದ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ.
ಕೋಟ್೯ ಏನ್ ತೀರ್ಮಾನ ಕೊಟ್ಟಿದೆ ಅದಕ್ಕೆ ಗೌರವ ಕೊಡ್ತವಿ. ಆ ಬಗ್ಗೆ ಎರಡು ಮಾತಿಲ್ಲ. ಆದ್ರೆ ಕೋಟ್೯ ತೀರ್ಮಾನ , ಯಾರೊಬ್ಬರ ವೈಯಕ್ತಿಕ ಹಕ್ಕು ತಡೆಯುವಂತೆ ಆಗಬಾರದು. ಇಲ್ಲಿ ಕೋಟ್೯ ಯಾರು? ಹಿಜಾಬ್ ಹಾಕಿಬಾರದು ಅಂತ ಹೇಳಿಲ್ಲ. ಹಿಜಾಬ್ ನಿರ್ಬಂಧ ಇಲ್ಲ ಅನ್ನೋ ತರಲ್ಲ. ಇದನ್ನ ಇಟ್ಕೊಂಡು ನಾವು , ನೀವು ಮಾತಡೊದಲ್ಲ ಮುಂದೆ ಪ್ರಾಕ್ಟೀಕಲ್ ಆಗಿ ಹೇಗೆ ತರಬೇಕು ಅನ್ನೋದನ್ನ ನೋಡಬೇಕು. ಶಾಲೆಯಲ್ಲಿ ಸರ್ಕಾರ ಹೇಳೊದನ್ನೆ ಪಾಲೋ ಮಾಡಬೇಕು. ಸರ್ಕಾರದ ದೊಡ್ಡ ಮನಸ್ಸು ಮಾಡಬೇಕು. ಕೋಟ್೯ ಹಾಕಬೇಡಿ ಅಂತ ಹೇಳಿಲ್ಲ. ಯಾರ ಬೇಕು ಹಾಕೊಳ್ಳಿ ಬೇಡ್ದ ಇರೋರಿ ಇರಿ ಅಂದ್ರೆ ಯಥಾಸ್ಥಿತಿ ಇರುತ್ತೆ. ಮೊದಲು ಕೂಡ ಎಲ್ಲರೂ ಹಾಕ್ತಾಇರಲಿಲ್ಲ. ಕೆಲವರು ಮಾತ್ರ ಹಾಕ ಬರ್ತಾಯಿದ್ರೂ, ಕೆಲವರು ಹಾಕಿಕೊಳ್ದೆ ಬರ್ತಾಯಿದ್ರೂ. ಈಗಲೂ ಅದೇ ತರಹ ಮಾಡಬಹುದು ಅಲ್ವಾ. ಕೋಟ್೯ ತೀರ್ಮಾನ ಕೊಟ್ಟ ನಂತ್ರ ತಕರಾರು ಮಾಡಬೇಕಾಗಿಲ್ಲ. ಶಾಂತಿಯುತವಾಗಿ ಇರಬೇಕು ನಮ್ಮಗೆ ಅದು ಮುಖ್ಯ. ಹೆಣ್ಣು ಮಕ್ಕಳು ಎದೆ ಮೇಲೆ ಹಾಕಿಕೊಳ್ತಾರೆ, ಈಗ ತಲೆ ಹಾಕಿಕೊಳ್ತಾರೆ ಅಷ್ಟೇ. ಆದ್ರೆ ಸಂವಿಧಾನದ ನಮ್ಮಗೆ ಒಂದು ಹಕ್ಕು ನೀಡಿದೆ, ಶರೀಯಾ ಕಾನೂನು ಅಂತ ಒಂದು ಇದೆ. ಇದನ್ನ ಇವರು ಕೋಟ್೯ ನಲ್ಲಿ ಚರ್ಚೆ ಮಾಡಬೇಕಿತ್ತು. ಈಗ ನಮ್ಮ ಧರ್ಮದಲ್ಲಿ ಕೂಡ ಆಚರಣೆ ಇರುತ್ತೆ. ಆ ಬಗ್ಗೆ ಚರ್ಚೆ ಆಗಬೇಕಿತ್ತು ಆದ್ರೆ ಚರ್ಚೆ ಆಗಿಲ್ಲ ವಿಷಾದ ಸಂಗತಿ. ಕೋಟ್೯ ತೀರ್ಮಾನಕ್ಕೆ ಈಗ ನಾವು ಯಾರು ಏನ್ ಹೇಳೊಕ್ಕೆ ಆಗಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರೀಸ್ ಹೇಳಿಕೆ ನೀಡಿದ್ದಾರೆ.
ಸುದೀರ್ಘ ತೀರ್ಪಿನಲ್ಲಿ ಹೈಕೋರ್ಟ್ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ. ಕರ್ನಾಟಕ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ನ್ಯಾಯಪೀಠದಲ್ಲಿದ್ದರು. ತೀರ್ಪಿನಲ್ಲಿ ಉಲ್ಲೇಖವಾಗಿರುವ 10 ಪ್ರಮುಖ ಅಂಶಗಳಿವು.
ಹಲವು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಬಗ್ಗೆಯೂ ಈ ತೀರ್ಪು ಬೆಳಕು ಚೆಲ್ಲಿದೆ. ತೀರ್ಪಿನಲ್ಲಿ ಉಲ್ಲೇಖವಾಗಿರುವ 10 ಪ್ರಮುಖ ಅಂಶಗಳಿವು.
Link: https://t.co/wQ5u2iZxRw#KarnatakaHighCourt #HijabControversy #HijabRow #Islam
— TV9 Kannada (@tv9kannada) March 15, 2022
ಶಾಲಾ ಹಂತದಲ್ಲೇ ಬಗೆಹರಿಯಬಹುದಾದ ಹಿಜಾಬ್ ವಿಚಾರ, ನ್ಯಾಯಾಲಯದವರೆಗೆ ಎಳೆದು ತರುವ ಅಗತ್ಯವಿರಲಿಲ್ಲ. ಸರ್ಕಾರ ಜಾರಿಗೊಳಿಸಿದ ಸಮವಸ್ತ್ರ ನೀತಿಯಲ್ಲಿ ತಪ್ಪಿಲ್ಲ. ಸಮವಸ್ತ್ರ ಮೂಲಭೂತ ಹಕ್ಕುಗಳ ಮೇಲಿನ ಸಮಂಜಸ ನಿರ್ಬಂಧ ಮಾಡಿದೆ. ಸಮಂಜಸ ನಿರ್ಬಂಧ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತೀರ್ಪು ಸ್ವಾಗತಾರ್ಹ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಶಾಲಾ ಹಂತದಲ್ಲೇ ಬಗೆಹರಿಯಬಹುದಾದ ಹಿಜಾಬ್ ವಿಚಾರವನ್ನು ನ್ಯಾಯಾಲಯದವರೆಗೆ ಎಳೆದು ತರುವ ಅಗತ್ಯವಿರಲಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸರ್ಕಾರ ಜಾರಿಗೊಳಿಸಿದ ಸಮವಸ್ತ್ರ ನೀತಿಯಲ್ಲಿ ತಪ್ಪಿಲ್ಲ. ಸಮವಸ್ತ್ರ ಮೂಲಭೂತ ಹಕ್ಕುಗಳ ಮೇಲಿನ ಸಮಂಜಸ ನಿರ್ಬಂಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿರುವುದು ಸ್ವಾಗತಾರ್ಹ.#YesToUniform_NoToHijab
— BJP Karnataka (@BJP4Karnataka) March 15, 2022
ಹಿಜಾಬ್ ಇಲ್ಲದೇ ಕಾಲೇಜ್ಗೆ ಹೋಗುವುದಿಲ್ಲ. ಹಿಜಾಬ್‌ಗೆ ಅವಕಾಶ ನೀಡಿದ್ರೆ ಮಾತ್ರ ನಾನು ಪರೀಕ್ಷೆಗೆ ಹೋಗುತ್ತೇನೆ. ಇಲ್ಲದಿದ್ದರೇ ನಾನು ಪರೀಕ್ಷೆ ಬರೆಯುವುದಿಲ್ಲ. ಇಷ್ಟು ವರ್ಷ ಹಿಜಾಬ್ ಧರಿಸಿಯೇ ಶಾಲೆ ಮತ್ತು ಕಾಲೇಜ್ಗೆ ಹೋಗಿರುವೆ. ಹಿಜಾಬ್‌ಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ. ಹಿಜಾಬ್‌ಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಟಿವಿ9 ಗೆ ಪಿಯುಸಿ ವಿದ್ಯಾರ್ಥಿನಿ ಅಮ್ರೀನ್ ಬಾನು ಹೇಳಿಕೆ ನೀಡಿದ್ದಾಳೆ.
ಹುಬ್ಬಳ್ಳಿ: ಹೈಕೋರ್ಟ್ ಆದೇಶವನ್ನ ನಾವು ಪಾಲನೆ ಮಾಡುವಂತೆ ಹೇಳ್ತವೆ. ನ್ಯಾಯಲಯದ ತೀರ್ಪಿನಿಂದ ನಮ್ಮ ಸಮುದಾಯಕ್ಕೆ ಅಸಮಧಾನವಾಗಿದೆ ಎಂದು ಮುಸ್ಲಿಂ ಪೋಷಕಿ ಶಾಹೀನ್ ಕುರಹಟ್ಟಿ ಹೇಳಿಕೆ ನೀಡಿದ್ದಾರೆ. ನಮ್ಮ ಉಲ್ಮಾಗಳಿದ್ದಾರೆ, ಸುಪ್ರೀಂಗೆ ಹೋಗ್ತಿವಿ ಅಂದಿದ್ದಾರೆ. ಸುಪ್ರೀಂ ಕೋಟ್೯ ಮೇಲೆ ನಮಗೆ ನಂಬಿಕೆ ಇದೆ. ಅಲ್ಲಿಯವರೆಗೂ ಎಲ್ಲರೂ ಶಿಕ್ಷಣ ಪಡೆಯಿರಿ. ಎಲ್ಲಿ ಖಾಸಗಿ ಸಂಸ್ಥೆಯವರೂ ಹಿಜಾಬ್ ಗೆ ಅವಕಾಶ ನೀಡ್ತಾರೋ ಅಲ್ಲಿ ಶಿಕ್ಷಣ ಪಡೆಯಿರಿ. ಹಿಜಾಬ್ ಹಾಕೊಂಡೆ ಹೋಗ್ತಿನಿ ಎನ್ನೋರು ವಿಚಾರ ಮಾಡಿ. ನಮಗೂ ಶಿಕ್ಷಣ ಮುಖ್ಯ. ಸದ್ಯ ಪರೀಕ್ಷಾ ಸಮಯ ಇರೋದ್ರಿಂದ ಹೈಕೋರ್ಟ್ ಆದೇಶ ಪಾಲನೆ ಮಾಡಿ ಎಂದು ಹೇಳಿದ್ದಾರೆ.
ನಾವು ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತೇವೆ. ಹೈಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಬರುತ್ತೆ ಅನ್ನೋ ವಿಶ್ವಾಸವಿತ್ತು. ಹಿರಿಯ ನ್ಯಾಯವಾದಿಗಳು ಮತ್ತಿತರರು ಹಿಜಾಬ್ ಪರವಾಗಿಯೇ ತೀರ್ಪು ಬರುತ್ತೆ ಅನ್ನೋ ಮಾತನ್ನಾಡಿದ್ದರು. ಆದರೆ ಹಿಜಾಬ್ ವಿರುದ್ಧದ ತೀರ್ಪು ಬಂದಿದೆ. ಹಿಜಾಬ್ ಧರಿಸುವ ವಿಚಾರ ಹಿಂದೂ ಮತ್ತು ಮುಸ್ಲಿಮರ ನಡುವಿನ ವಿವಾದವಲ್ಲ. ಮುಸ್ಲಿಮ್ ಮತ್ತು ಸಂಘ ಪರಿವಾರದ ನಡುವಿನ ವಿವಾದ. ನಮಗೆ ಬಿಜೆಪಿ ಸರ್ಕಾರದ ಮೇಲೆ ಎಳ್ಳಷ್ಟೂ ವಿಶ್ವಾಸವಿಲ್ಲ. ನಾವು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿಯವರೆಗೂ ಹಿಜಾಬ್ ಧರಿಸಿಕೊಂಡು ಕ್ಲಾಸ್ ಗೆ ಹಾಜರಾಗಲು ಅವಕಾಶ ನೀಡಬೇಕು. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವು ನೀಡಬೇಕು. ಹೈಕೋರ್ಟ್ ನ ತೀರ್ಪನ್ನು ಪಾಲನೆ ಮಾಡಬೇಕು. ಆದರೆ ತೀರ್ಪು ನಮ್ಮ ವಿರುದ್ಧ ಬಂದಿರುವುದರಿಂದ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದೇವೆ.
ಸುಪ್ರೀಂಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುತ್ತೆ ಅನ್ನೋ ವಿಶ್ವಾಸವಿದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಜಿಲ್ಲಾಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿಕೆ ನೀಡಿದ್ದಾರೆ.
ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಈ ದೇಶದ ಕಾನೂನನ್ನು ಗೌರವಿಸಬೇಕು ಅಂತ ಕುರಾನ್ ಕೂಡ ಹೇಳಿದೆ. ಹೈಕೋರ್ಟ್ ಗೆ ಹೋಗಿ ನ್ಯಾಯವನ್ನು ಪಡೆದುಕೊಳ್ಳಿ. ಆದರೆ ಹಿಜಬ್ ವಿಚಾರದಿಂದಾಗಿ ಶಿಕ್ಷಣದಿಂದ ವಂಚಿತರಾಗಬೇಡಿ. ಹಿಜಬ್ ನಿಷೇಧ ಆಗಿಲ್ಲ. ತರಗತಿವರೆಗೂ ಹಿಜಾಬ್ ಹಾಕಿಕೊಂಡು ಹೋಗಿ ನಂತರ ತೆಗೆದಿಟ್ಟು ಪಾಠ ಕೇಳಬಹುದು ಎಂದು ಸುರಯ್ಯ ಅಂಜುಮ್ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.
ಹಾಸನ: ಹೈಕೋರ್ಟ್ ತೀರ್ಪಿಗೆ ಹಾಸನ ವಿದ್ಯಾರ್ಥಿನಿಯರ ವಿರೋಧ ಮಾಡಿದ್ದು, ನಮಗೆ ಹಿಜಾಬ್ ಬೇಕು, ಶಿಕ್ಷಣವೂ ಬೇಕು. ಹಿಜಾಬ್ ಇಲ್ಲದೆ ಯಾವದೇ ಕಾರಣದಿಂದ ಕಾಲೇಜಿಗೆ ಹೋಗಲ್ಲ. ಮೂರು ವಾರದಿಂದ ಕಾಲೇಜು ಹೊರಗೆ ಕುಳಿತಿದ್ದೇವೆ. ನಮಗೆ ಹಿಜಾಬ್ ಧರಿಸಲು ಅವಕಾಶವನ್ನು ಕೊಡಬೇಕು. ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಕಾಲೇಜಿಗೆ ಬರಲ್ಲ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ.
ಸಂವಿಧಾನ ಧರ್ಮಕ್ಕಿಂತ ದೊಡ್ಡದು ಅನ್ನೋದನ್ನ ಹೈಕೋರ್ಟ್ ಸಾಬೀತುಪಡಿಸಿದೆ. ಹೈಕೋರ್ಟ್ ತೀರ್ಪನ್ನ ಗೌರವಿಸಬೇಕು. ಅನಗತ್ಯವಾಗಿ ವಿವಾದ ಮಾಡದೇ ಎಲ್ಲರೂ ತೀರ್ಪನ್ನ ಗೌರವಿಸಬೇಕು ಅಂತಾ ಮಾಜಿ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಹಲವು ಸಂಘಟನೆಗಳು ಶಾಂತಿ ಕದಡುವ ಕೆಲಸ ಮಾಡಿದ್ದವು. ವಿನಾಕಾರಣ ಶಾಂತಿ ಕದಡುವುದಕ್ಕೆ ಪ್ರಯತ್ನ ನಡೆಸಿದ್ದರು. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರೆ ಬಳಸಿಕೊಳ್ಳಬಹುದೆಂದು. ಭಯೋತ್ಪಾದಕರನ್ನಾಗಿ ಬಳಸಿಕೊಳ್ಳುವ ಚಿಂತನೆ ನಡೆದಿತ್ತು. ಆದರೆ ಈಗ ಸರ್ಕಾರದ ನಿಲುವನ್ನು ಕೋರ್ಟ್ ಎತ್ತಿಹಿಡಿದಿದೆ. ಸಮವಸ್ತ್ರ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಹೈಕೋರ್ಟ್ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಇದರಿಂದ ಕಾಂಗ್ರೆಸ್ ಮುಖಂಡರಿಗೆ ಕಪಾಳಮೋಕ್ಷವಾಗಿದೆ. ಈಗಾಗಲೇ ಕಾಂಗ್ರೆಸ್‌ನಿಂದ SC, STಯವರು ದೂರವಾಗಿದ್ದಾರೆ. ಇನ್ನುಮುಂದೆ ಮುಸ್ಲಿಮರು ಕೂಡ ದೂರವಾಗುತ್ತಾರೆ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ತುಮಕೂರು: ಹಿಜಾಬ್ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು ಹಿನ್ನೆಲೆ. ತುಮಕೂರಿನ ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮಿಜಿ ಹೇಳಿಕೆ ನೀಡಿದ್ದಾರೆ. ಇವತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಹಿಜಾಬ್ ವಿಚಾರದಲ್ಲಿ ಸುದೀರ್ಘವಾಗಿ ಚರ್ಚೆ, ವಾದ ವಿವಾದಗಳನ್ನು ಆಲಿಸಿದೆ. ಪೂರ್ಣ ಪೀಠ ಎಲ್ಲಾವನ್ನ ಕೂಡ ಕೂಲಂಕುಷವಾಗಿ ಅಧ್ಯಯನ ಮಾಡಿ ಇಂದು ತೀರ್ಪು ಪ್ರಕಟ ಮಾಡಿದೆ. ಸರ್ಕಾರ ಏನು ಆದೇಶ ಹೊರಡಿಸುತ್ತೋ ಆ ಕಾನೂನನ್ನ ಪಾಲನೆ ಮಾಡಬೇಕು. ಸಮವಸ್ತ್ರವನ್ನು ಕಡ್ಡಾಯವಾಗಿ ಎಲ್ಲರೂ ಕೂಡ ಧರಿಸಿಕೊಳ್ಳಬೇಕು. ಅದು ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಇಲ್ಲ ಎಂದು ತೀರ್ಪು ಕೊಟ್ಟಿರುವಂತಹದ್ದು. ಪ್ರತಿಯೊಬ್ಬರು ಕೂಡ ಪಾಲನೆ ಮಾಡಬೇಕು. ನ್ಯಾಯಾಲಯದ ತೀರ್ಪು ಏನು ಬರುತ್ತೋ ಯಾರೇ ಆಗಿರಲಿ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಇಂದು ನ್ಯಾಯಾಲಯದ ಮೂರು ಜನ ಪೀಠ ಈ ಆದೇಶ ಮಾಡಿದೆ. ಯಾವುದಕ್ಕೂ ಅವಕಾಶ ನೀಡದೆ ಶಾಂತವಾತವರಣ ಕಾಪಾಡಿಕೊಳ್ಳುವುದು. ಪ್ರತಿಯೊಬ್ಬರು ಶಿಸ್ತು ನಿಯಮವನ್ನ ,ನಮ್ಮ ಕರ್ನಾಟಕದ ಸಂಸ್ಕೃತಿ ಪರಂಪರೆಯನ್ನ ಎತ್ತಿ ಹಿಡಿದಿದೆ. ಶಾಂತಿ ವಾತಾವರಣವನ್ನ ಉಂಟು ಮಾಡುವ ಹಾಗೇ ಎಲ್ಲರೂ ಕೂಡ ನಡೆದುಕೊಳ್ಳಬೇಕು. ಮಕ್ಕಳ ಕಲಿಕೆ ಎಂದೂ ಹಿಂದುಳಿಯಬಾರದು. ಎಲ್ಲರೂ ಕೂಡ ಪ್ರೀತಿ ವಿಶ್ವಾಸ ಸಮಾನದಿಂದ ಬದುಕಬೇಕಾಗಿದೆ. ಇಂದಿನ ತೀರ್ಪು ಎಲ್ಲರೂ ಕೂಡ ಪಾಲನೆ ಮಾಡಿ. ಆ ಮೂಲಕ ಉತ್ತಮ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸುವೆ ಎಂದು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮಿಜಿ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್ ತೀರ್ಪು ನ್ಯಾಯಯುತವಾಗಿದೆ. ಸಮವಸ್ತ್ರ ಅನ್ನೋದು ಶಾಲೆಗಳಲ್ಲಿ ಇರಬೇಕು. ನಮ್ಮ ಧರ್ಮವನ್ನ ಮನೆಯಲ್ಲಿ ಪಾಲನೆ ಮಾಡೋದು ತಪ್ಪಿಲ್ಲ. ಎಲ್ಲ ಜಾತಿ ಧರ್ಮವನ್ನ ಸಮಾನವಾಗಿ ಕಾಣುವ ದೇಶ ಅಂದ್ರೆ ಅದು ಭಾರತ. ಹಲವು ಧರ್ಮೀಯರ ದೇಶಗಳಿವೆ. ಹಿಂದೂ ಧರ್ಮಕ್ಕೆ ಇರೋದು ಭಾರತ ದೇಶ. ಶ್ರೀಮಂತರ, ಬಡವ, ಜಾತಿ, ಮತ ಇಲ್ಲದೇ ಕೂತು ಪಾಠ ಕಲಿಯುವ ದೇವಾಲಯ ಶಾಲೆ. ಆ ದೇವಾಲಯದಲ್ಲಿ ಧರ್ಮ ಪಾಲಿಸದೇ ಸಮನಾಗಿ ಕಾಣಲು ಯುನಿಫಾರ್ಮ್ ಬೇಕು. ಇವತ್ತಿನ ನ್ಯಾಯ ನ್ಯಾಯಯುತವಾಗಿದೆ ಎಂದು ಗದಗದಲ್ಲಿ ಚಿತ್ರನಟಿ, ಪರಿಷತ್ ಮಾಜಿ ಸದಸ್ಯೆ ತಾರಾ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್ ಪೂರ್ಣ ಪೀಠದ ತೀರ್ಪಿನ ಪ್ರತಿ ಟಿವಿ9ಗೆ ಲಭ್ಯವಾಗಿದ್ದು, ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್
ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರವರ ಪೂರ್ಣ ಪೀಠ ಒಳಗೊಂಡಿತ್ತು. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವೆಂಬುದಕ್ಕೆ ಆಧಾರ ನೀಡಿಲ್ಲ. ಹಿಜಾಬ್ ಮುಸ್ಲಿಂ ಮಹಿಳೆ ಧರಿಸಬೇಕಾದ ಬಟ್ಟೆಯೆಂದು ವಾದ ಮಾಡಲಾಗಿದೆ. ಹಿಜಾಬ್ ಧರಿಸದಿದ್ದರೆ ಅದು ಪಾಪ ಎಂದು ಎಲ್ಲೂ ಹೇಳಿಲ್ಲ. ಹಿಜಾಬ್ ಧರಿಸದಿದ್ದರೆ ಇಸ್ಲಾಂನ ವೈಭವ ನಾಶವಾಗುವುದಿಲ್ಲ. ಹಿಜಾಬ್ ಧರಿಸದಿದ್ದರೆ ಧರ್ಮ ಅರ್ಥ ಕಳೆದುಕೊಳ್ಳುವುದಿಲ್ಲ. ಉಲ್ಲಂಘಿಸಬಾರದ ಧಾರ್ಮಿಕ ಆಚರಣೆ ಎಂದು ಸಾಬೀತಾಗಿಲ್ಲ. ಕಾಲೇಜಿಗೆ ಸೇರುವ ಮುನ್ನ ಹಿಜಾಬ್ ಧರಿಸುತ್ತಿದ್ದರೇ ತಿಳಿಸಿಲ್ಲ. ಕಾಲೇಜಿಗೆ ದಾಖಲಾಗುವ ಮುನ್ನ ಬರೆದುಕೊಟ್ಟಿದ್ದಾರೆ. ನಿಯಮಗಳಿಗೆ ಬದ್ಧರಾಗಿರುತ್ತೇವೆಂದು ಬರೆದುಕೊಟ್ಟಿದ್ದಾರೆ. ಹೀಗಾಗಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ ಎಂಬುದಕ್ಕೆ ಆಧಾರ ನೀಡಿಲ್ಲ.
ಚಿಕ್ಕಬಳ್ಳಾಪುರ: ಹಿಜಾಬ್ ವಿಚಾರಕ್ಕೆ ಹೈಕೋರ್ಟ್ ತೀರ್ಪು ನೀಡಿದ ಹಿನ್ನಲೆ. ನಿಷೇದಾಜ್ಞೆ ಆದೇಶವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಾರ್ಪಾಡು ಮಾಡಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್-17 ಮದ್ಯರಾತ್ರಿ 12 ಗಂಟೆಯವರೆಗೆ ಮಾತ್ರ ನಿಷೇದಾಜ್ಞೆ ಜಾರಿಯಲ್ಲಿರಲಿದೆ. ನಿಷೇದಾಜ್ಞೆ ಮಾರ್ಪಡಿಸಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ. ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮೊದಲು 6 ದಿನಗಳ ಕಾಲ ನಿಷೇದಾಜ್ಞೆ ಹೊರಡಿಸಿದ್ದ ಜಿಲ್ಲಾಧಿಕಾರಿ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್-20ರ ಮದ್ಯರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಮಾಡಲಾಗಿತ್ತು.
ಹೈಕೋರ್ಟ್ ತೀರ್ಪಿಗೆ ತಲೆ ಬಾಗಿ, ಶಿಕ್ಷಣಕ್ಕೆ ಒತ್ತು ಕೊಡಬೇಕು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ ಭವಿಷ್ಯ ರೂಪಿಸಿಕೊಳ್ಳಬೇಕು. ಧರ್ಮದ ಚೌಕಟ್ಟಿನಲ್ಲಿ ಹಿಜಬ್ ಬರಲ್ಲ ಅಂತಾ ಹೇಳಿದೆ. ಧರ್ಮಕ್ಕೆ ಮನೆಯಲ್ಲಿ ಗೌರವ ಕೊಟ್ಟು ಶಿಕ್ಷಣಕ್ಕೆ ಆದ್ಯತೆ ನೀಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು
ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಹೈಕೋರ್ಟ್ ಹಿಜಾಬ್ ವಿಚಾರವಾಗಿ ತೀರ್ಪು ನೀಡಿದೆ. ಕೋರ್ಟ್ ತೀರ್ಪನ್ನ ಸ್ವಾಗತ ಮಾಡುತ್ತೇವೆ. ಸರ್ಕಾರದ ನಿಲುವನ್ನೇ ಪುನಃ ಕೋರ್ಟ್ ಹೇಳಿದೆ. ಯಾವುದೇ ತಾರತಮ್ಯವಿಲ್ಲದ ತೀರ್ಪು ಇದಾಗಿದೆ. ಕೆಲ ಸಂಘಟನೆಗಳು,ಪಕ್ಷಗಳು ಬೇರೆ ಬೇರೆ ಬಣ್ಣಗಳು ಕಟ್ಟುವ ಪ್ರಯತ್ನ ನಡೆದಿತ್ತು. ಆದರೆ ಕೋರ್ಟ್ ತೀರ್ಪಿನಿಂದಾಗಿ ಇದು ಎಲ್ಲರಿಗೂ ಸಮಾನ ಎಂದು ಹೇಳಿದೆ. ಸಮವಸ್ತ್ರದಿಂದ ವಿದ್ಯಾಭ್ಯಾಸ ಮಾಡಬೇಕು. ಇಡೀ ವಿಶ್ವಕ್ಕೆ ಮಾದರಿಯಾಗುವ ತೀರ್ಪು ಇದಾಗಿದೆ. ಯಾವುದೇ ಗೊಂದಲ ಆಗಬಾರದು. ಗೊಂದಲ ಸೃಷ್ಟಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಸುಪ್ರೀಂ ಕೋರ್ಟ್ ಗೆ ಹೋಗಲಿ, ಸಂವಿಧಾನನದಲ್ಲಿ ಅವಕಾಶ ಇದೆ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾವಾಗಿದೆ. ಹೈಕೋರ್ಟ್ ತೀರ್ಪುನ್ನು ಖಾಸಗಿ ಶಾಲೆಗಳ ಒಕ್ಕೂಟ ಸ್ವಾಗತಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಕಲಿಕೆಗೆ ಗಮನ ಕೊಡಿ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಹಿಜಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಹಿನ್ನೆಲೆ, ಇದು ಜನರು ಒಪ್ಪುವಂತಹ ತೀರ್ಪಲ್ಲ. ಇದನ್ನು ನಾವು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇವೆ.
ಉತ್ತರ ಭಾಗದಲ್ಲಿ ಸಿಖ್ಖರು ಟರ್ಬಾನ್ ಧರಿಸುತ್ತಾರೆ. ಮಾರ್ವಾಡಿಗಳು ತಲೆಗೆ ವಸ್ತ್ರ ಧರಿಸುತ್ತಾರೆ. ಅದೇ ರೀತಿ ಹಿಜಬ್ ಕೂಡ. ಮುಸ್ಲಿಂ ಮಕ್ಕಳ ಶಿಕ್ಷಣವೂ ಉಳಿಯಬೇಕು, ಧರ್ಮವೂ ಉಳಿಯಬೇಕು. ಈ ನಿಟ್ಟಿನಲ್ಲಿ ಪೋಷಕರು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮಡಿಕೇರಿಯಲ್ಲಿ SDPI ಮುಖಂಡ ಅಮೀನ್ ಮೊಹ್ಸಿನ್ ಹೇಳಿಕೆ ನೀಡಿದ್ದಾರೆ.
ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾವಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ನಿರಾಶಾದಾಯಕವಾಗಿದೆ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದಾರೆ. ಹಿಜಾಬ್ ಧರ್ಮಕ್ಕೆ ಸಂಬಂಧಿಸಿದ ವಿಚಾರವಲ್ಲ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಹಲವು ದಿನಗಳಿಂದ ದೇಶಾದ್ಯಂತ ಕುತೂಹಲ ಮೂಡಿಸಿತ್ತು. ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸರ್ಕಾರ ಹೊರಡಿಸಿದ್ದ ಸಮವಸ್ತ್ರದ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ. ಹಿಜಾಬ್ ಕಡ್ಡಾಯವಲ್ಲ ಎಂದು ತೀರ್ಪು ನೀಡಿದೆ. ಎಲ್ಲರೂ ಸಮಾನರು ಎಂದು ತೀರ್ಪು ಬಂದಿದೆ. ಕೇಸರಿ ಆಗಲೀ ಯಾವುದೇ ಧಾರ್ಮಿಕ ವಸ್ತುಗಳು ಧರಿಸಬಾರದು. ಸಮವಸ್ತ್ರ ಕಡ್ಡಾಯ ಎಂದಾಗ ಏಕಪಕ್ಷೀಯ ಆದೇಶ ಎಂದು ಆರೋಪಿಸಿದ್ದರು. ಆದರೀಗ ಕಾಲೇಜುಗಳಲ್ಲಿ ಎಲ್ಲರೂ ಸಮಾನರು ಎಂದು ತೀರ್ಪು ನೀಡಿದೆ ಎಂದು ವಿಧಾನಸೌಧದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಮಂಡ್ಯ: ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಕಾನ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಂಡ್ಯದ ನಿವಾಸದ ಬಳಿ ಮುಸ್ಕಾನ್ ತಂದೆ ಮಹಮದ್ ಹುಸೇನ್ ಹೇಳಿಕೆ ನೀಡಿದ್ದಾರೆ. ಕೋರ್ಟ್ ತೀರ್ಪು ನೀಡಿದೆ. ಘಟನೆ ನಂತರ ಮುಸ್ಕಾನ್ ಕಾಲೇಜಿಗೆ ಹೋಗಿಲ್ಲ. ಇದೇ 24ಕ್ಕೆ ಆಕೆಗೆ ಪರೀಕ್ಷೆ ಇದೆ. ಮುಂದೆ ಯಾವ ರೀತಿ ಕಾಲೇಜಿಗೆ ಹೋಗಬೇಕು ಅನ್ನುವ ವಿಚಾರ ಎದುರಾಗಿದೆ. ಧರ್ಮದ ದೊಡ್ಡವರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಸದ್ಯ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಹೇಳಿದ್ದಾರೆ. ನೋಡೋಣ ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ ಅನ್ನುವ ವಿಶ್ವಾಸವಿದೆ. ಶಿಕ್ಷಣ ಧರ್ಮ ಎರಡು ಸಹಾ ಎರಡು ಕಣ್ಣುಗಳಿದ್ದಂತೆ. ಎರಡನ್ನು ಕಾಪಾಡಿಕೊಂಡು ಸಾಗಬೇಕಿದೆ. ಮುಂದೆ ನೋಡೋಣ ಯಾವ ರೀತಿ ಆಗುತ್ತದೆ ಎಂದು ಹೇಳಿದ್ದಾರೆ.
ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಅವರು ಕೋರ್ಟ್ ನಲ್ಲಿ ನ್ಯಾಯ ಕೇಳಲಿ. ಆದ್ರೆ ಶಾಲೆ-ಕಾಲೇಜುಗಳಲ್ಲಿ ಬಂದು ಹಿಂದು ಧರ್ಮದ ಆಚರಣೆ ಬಗ್ಗೆ ಪ್ರಶ್ನಿಸಿದ್ರೆ ನಾವು ಸುಮ್ಮನಿರಲ್ಲ. ಅವರಿಗೆ ಕೇಳಿದ್ದನ್ನು 1947 ರಲ್ಲೇ ಕೊಟ್ಟಿದ್ದೇವೆ. ಅವರು ಬೇಕಾದ್ರೆ ಅಲ್ಲಿಗೆ ಹೋಗಲಿ. ಭಾರತದಲ್ಲಿ ಇದ್ರೆ ವಂದೇ ಮಾತರಂ ಹೇಳದೆ ವಿಧಿಯಿಲ್ಲ. ನಮ್ಮ ಜೊತೆ ಹೊಂದಿಕೊಂಡಿದ್ದು ಒಳ್ಳೇ ರೀತಿಯಲ್ಲಿ ಶಿಕ್ಷಣ ಪಡೆಯಲು ನಮ್ಮ ತಕರಾರಿಲ್ಲ ಎಂದು ಟಿವಿ9 ಗೆ ಹಿಂದು ಜಾಗರಣಾ ವೇಧಿಕೆ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್ ತೀರ್ಪು ಐತಿಹಾಸಿಕ ತೀರ್ಪಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಆದೇಶವನ್ನು ಗೌರವದಿಂದ ಪಾಲಿಸಬೇಕು. ಹಿಜಾಬ್ ವಿರುದ್ದದ ಹೋರಾಟದಲ್ಲಿ ಅನೇಕರ ಮೇಲೆ ಕೇಸ್ ಹಾಕಲಾಗಿದೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಗಿದೆ. ಈ ತೀರ್ಪನಿಂದ ಹರ್ಷನ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಹಿಂದು ಮತ್ತು ಮುಸ್ಲಿಂ ರು ಹೈಕೋರ್ಟ್ ಆದೇಶ ಪಾಲಿಸಬೇಕು. ಹೈಕೋರ್ಟ್ ಆದೇಶವನ್ನು ಮುಸ್ಲಿಂರು ಉಲ್ಲಂಘಿಸಿ ಕುಚೇಷ್ಟೆ ಮಾಡಿದ್ರೆ ಅವರನ್ನು ಒದ್ದು ಹೊರಗೆ ಹಾಕಬೇಕು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಹಿಜಾಬ್ ನಮ್ಮ ದೇಹವನ್ನ ಕಾಪಾಡುತ್ತೆ. ನಮ್ಮ ಪೋಷಕರು ನಮ್ಮನ್ನು ಕಾಲೇಜುಗೆ ಕಳುಹಿಸಲು ಕಾರಣ ಹಿಜಾಬ್. ಹೈಕೋರ್ಟ್ ಆದೇಶವನ್ನ ನಾನು ವಿರೋಧ ಮಾಡ್ತೇನೆ ಎಂದು ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾಳೆ.
ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾ ಮಾಡಲಾಗಿದೆ. ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಈಗ ರಾಜ್ಯ ಸರ್ಕಾರದ ಜವಾಬ್ದಾರಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗಳತ್ತ ಹೆಚ್ಚು ಗಮನ ಕೊಡಲಿಎಂದು ವಿಧಾನಸೌಧದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಧರಿಸುವುದು ನಮ್ಮ ಕಟ್ಟಲೆ. ಕುರಾನ್‌ನಲ್ಲಿ ಉಲ್ಲೇಖವಿದೆ. ಷರಿಯತ್ ಸಹ ಇದನ್ನು ಸ್ಪಷ್ಟಪಡಿಸಿದೆ. ಹಿಂದೂ-ಮುಸ್ಲಿಮ್ ಸಮುದಾಯದ ಬಿಕ್ಕಟ್ಟು ಅಲ್ಲ. ಇದು ಸಂವಿಧಾನದ ಬಿಕ್ಕಟ್ಟು. ಇದನ್ನು ನಾವು ಹೇಗೆ ನಿರ್ವಹಿಸಬೇಕೋ ಹಾಗೆ ನಿರ್ವಹಿಸುತ್ತೇವೆ. ರಾಜಕೀಯ ಷಡ್ಯಂತ್ರಗಳಿಗೆ ಯಾರೊಬ್ಬರೂ ಬಲಿಯಾಗಬಾರದು. ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲು ನಮಗೆ ಅವಕಾಶವಿದೆ ಎಂದು ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು. ಇದರಲ್ಲಿ ಯಾವುದೇ ಒಂದು ಪಕ್ಷ ಅಥವಾ ಗುಂಪಿನ ಗೆಲುವು ಇಲ್ಲ. ಆದೇಶವನ್ನು ಆದೇಶದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು, ಅನುಸರಿಸಬೇಕು. ಆದೇಶವನ್ನು ಸಂಪೂರ್ಣ ನೋಡಿ ಪ್ರತಿಕ್ರಿಯಿಸುತ್ತೇನೆ.
ಶಿವಮೊಗ್ಗ: ಕೇವಲ ಶಿವಮೊಗ್ಗ ಮಾತ್ರವೇ ಅಲ್ಲ, ಇಡೀ ಕರ್ನಾಟಕದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸರಿಯಾಗಿದೆ. ಕರ್ನಾಟಕ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಆತಂಕ ಸಲ್ಲದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು. ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ಬಂದು ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಹೈಕೋರ್ಟ್ ತೀರ್ಪನ್ನು ಎಲ್ಲ ಸಮುದಾಯಗಳೂ ಗೌರವಿಸುತ್ತವೆ. ಕರಾವಳಿಯಲ್ಲಿ ಕೋಮು ಸೌಹಾರ್ದಕ್ಕೆ ಯಾವುದೇ ಧಕ್ಕೆಯಿಲ್ಲ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಮುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಖ್ಯ. ಶಾಲಾ ಮಟ್ಟದಲ್ಲಿ ಬಗೆಹರಿಸಬಹುದಾಗಿದ್ದ ಸಮಸ್ಯೆ ಕೋರ್ಟ್ವರೆಗೆ ಬರಬೇಕಾದ ಅಗತ್ಯ ಇರಲಿಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಆದರೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ. ಒಂದು ವೇಳೆ ಸರ್ಕಾರ ಎಲ್ಲ ಸಮುದಾಯಗಳ ಸಭೆ ಕರೆದು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಲು ಮುಂದಾದರೆ ಮುಸ್ಲಿಮ್ ಸಮುದಾಯ ಸಹಕರಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.
ಉಡುಪಿ: ಹಿಜಾಬ್ ವಿಚಾರದಲ್ಲಿ ತ್ರಿಸದಸ್ಯ ಪೀಠ ತೀರ್ಪು ವಿಚಾರ ಹಿನ್ನೆಲೆ ಟಿವಿ 9ಗೆ ಮುಸ್ಲಿಂ ಮುಖಂಡ ಅನ್ಸರ್ ಅಹಮದ್ ಹೇಳಿಕೆ ನೀಡಿದ್ದಾರೆ. ತೀರ್ಪು ಹಿಜಾಬ್ ಪರವಾಗಿ ಬರುತ್ತೆ ಅಂತಾ ಅಂದುಕೊಂಡಿದ್ವಿ. ಹೈಕೋರ್ಟ್ ಗೆ ಮೇಲ್ವನವಿ ಸಲ್ಲಿಸುವ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಚರ್ಚೆ ಮಾಡಲಾಗುವುದು. ಬೇರೆ ಧರ್ಮದವರು ತಮ್ಮ ಆಚರಣೆ ಶಾಲೆಯಲ್ಲಿ ಮಾಡುತ್ತಾರೆ. ಈ ತೀರ್ಪು, ಬೇರೆ ಧರ್ಮದ ಆಚರಣೆಯನ್ನು ಪ್ರಶ್ನಿಸಲು ಬುನಾದಿ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಅದನ್ನು ನಾವು ವಿರೋಧಿಸಬೇಕಾಗುತ್ತೆ ಎಂದು ಹೇಳಿದರು.
ಐತಿಹಾಸಿಕ ತೀರ್ಮಾನವನ್ನು ಹೈಕೋರ್ಟ್ ನೀಡಿದೆ. ಸರ್ಕಾರ ರೂಪಿಸಿದ ನಿಯಮದ ಪರವಾಗಿ ತೀರ್ಪು ಬಂದಿದೆ. ಹೆಣ್ಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ನಮಗೆ ಸಂತೋಷ ಕೊಟ್ಟಿದೆ. ನ್ಯಾಯಾಲಯ ಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ತೀರ್ಪನ್ನು ದೇಶ ವಿದೇಶಗಳು ಗಮನಿಸುತ್ತಿದ್ದವು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಧರ್ಮ ಮತಾಂಧತೆ ಬೆಳೆಸಿಕೊಳ್ಳದೇ ಶಾಲೆಗಳಲ್ಲಿ ನಾವು ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಹಾಗೂ ವಿಶೇಷವಾಗಿ ಭಾರತ ಮಾತೆಯ ಮಕ್ಕಳು ಎಂದು ಸಂಸ್ಕಾರ ದಿಂದಿರಬೇಕು. ದೇಶದ ಪ್ರಜೆಗಳಾಗಿ ಹಾಗೂ ನಾಗರೀಕರಾಗಿ ಬದುಕುವ ಹಾಗೆ ಆದರೆ ದೇಶದ ಏಕತೆ ಹಾಗೂ ಸಮಗ್ರತೆ ಗಟ್ಟಿಗೊಳ್ಳುತ್ತದೆ. ಸಂಸ್ಕಾರ ನೀಡುವಲ್ಲಿ ಶಾಲೆಯ ಸಮವಸ್ತ್ರಗಳು ವಿಧ್ಯಾರ್ಥಿಗಳ ಮನಸ್ಸಿನಲ್ಲಿ ದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಹಿಜಾಬ್ ಕಡ್ಡಾಯ ಅಲ್ಲ ಅಂತ ತೀರ್ಪು ನೀಡಿದೆ. ಅದನ್ನು ಸ್ವಾಗತ ಮಾಡುತ್ತೇನೆ. ಜ್ಯಾತ್ಯಾತೀತ ತತ್ವವನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದು ಬಸನ ಗೌಡ ಪಾಟಿಲ್ ಯತ್ನಾಳ ಹೇಳಿಕೆ ನೀಡಿದ್ದಾರೆ. ಸಾಕಷ್ಟು ಚರ್ಚೆ ಬಳಿಕ ಕೋರ್ಟ್ ತೀರ್ಪು ನೀಡಿದೆ. ತುಷ್ಟಿಗುಣ ವ್ಯವಸ್ಥೆ ಇದೆ. ಮೂಲಭೂತವಾದಿಗಳು ದೇಶ ಒಡೆಯಲು ಇಸ್ಲಾಂ ಹೆಸರಲ್ಲಿ ಆಂತರಿಕ ಭಯೋತ್ಪಾದನೆ ಸೃಷ್ಟಿಸಿದ್ದಾರೆ. ಖಾದರ್, ಜಮೀರ್ ಹೇಳಿಕೆಗಳಿಗೆ ಬೆಲೆ ಇಲ್ಲ, ಅವರು ಎಲ್ಲಿ ಹೋಗ್ತಾರೆ ಹೋಗಲಿ. ನ್ಯಾಯಾಲಯ ಸಂವಿಧಾನಾತ್ಮಕ ವ್ಯವಸ್ಥೆ ಎತ್ತಿ ಹಿಡಿದಿದೆ ಎಂದು ಹೇಳಿದರು.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ಆದೇಶ ಹಿನ್ನಲೆ, ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾದಿ ಹೇಳಿಕೆ ನೀಡಿದ್ದಾರೆ. ಹಿಜಾಬ್ ವಿಚಾರದಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು. ಇಂದು ತೀರ್ಪಿನ ಕುರಿತಂತೆಯೂ ಧರ್ಮದ ಮುಖಂಡರ ಜತೆ ಚರ್ಚೆ ನಡೆಯಲಿದೆ. ಎಲ್ಲರೂ ಶಾಂತ ರೀತಿಯಲ್ಲಿ ಇರುವಂತೆ ಕೋರಿಕೊಳ್ಳಲಾಗಿದೆ. ಹೈ ಕೋರ್ಟ್ ತೀರ್ಪು ನೀಡಿದ್ದು, ಸುಪ್ರೀಂ ಮೊರೆ ಹೋಗಲು ಚಿಂತನೆ ಮಾಡಲಾಗುತ್ತಿದೆ. ಶಾಂತಿ ಸೌಹಾರ್ದಯುತವಾಗಿ ವರ್ತನೆ ಮಾಡುವಂತೆ ಎಲ್ಲರಿಗೂ ಕೋರಿಕೊಳ್ಳಲಾಗಿದೆ. ಕಾನೂನಾತ್ಮಕವಾಗಿ ನಾವು ನಮ್ಮ ಹಕ್ಕನ್ನು ಪಡೆದು ಕೊಳ್ಳುತ್ತೇವೆ.
ಹೈಕೋರ್ಟ್ ತೀರ್ಪು ಬಂದಿದೆ. ಮೂರು ಮಂದಿಯ ಜಡ್ಜ್ ನಲ್ಲಿ ಒಬ್ಬರು ಮುಸ್ಲಿಂ ಜಡ್ಜ್ ಕೂಡ ಇದ್ದರು. ಯಾವ ಆಧಾರದ ಮೇಲೆ ತೀರ್ಪು ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಹಿಜಾಬ್ ಕುರಾನ್ ನಲ್ಲಿ ಕಡ್ಡಾಯ ಅಂತ ಹೇಳಿದೆ. ಕುರಾನ್ನ ಆದೇಶ ಕಡ್ಡಾಯವಲ್ಲ ಎಂದು ಹೇಳಿದ್ದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದರು. ಇಸ್ಲಾಂಮಿನ ಅವಿಭಾಜ್ಯ ಅಂಗ ಅಲ್ಲ ಎಂದು ಹೇಳಿದ್ದು ಸರಿಯಲ್ಲ ತಮ್ಮ ಅಭಿಪ್ರಾಯ ತಿಳಿಸಿದರು. ಹಿಜಾಬ್ ಮಹಿಳೆಯರಿಗೆ ಕಡ್ಡಾಯ ಅಂತ ಸ್ಪಷ್ಟವಾಗಿ ತಿಳಿಸಿದೆ. ಮಾಧ್ಯಮಗಳಿಗೂ ಕಿವಿ ಮಾತು ಹೇಳಿದ್ದು, ಕೋರ್ಟ್ ತೀರ್ಪ ಮಾತನ್ನು ಮಾತ್ರ ಪ್ರಸಾರ ಮಡುವಂತೆಯೂ ಮನವಿ ಮಾಡಿದ್ದಾರೆ.
ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರ ಹಿನ್ನೆಲೆ, ಕರ್ನಾಟಕ ಹೈ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ. ಈ ನೆಲ, ನೆಲದ ಕಾನೂನು ಅಂತಿಮ ಎಂದು ಹೈಕೋರ್ಟ್ ತೀರ್ಪು ಸ್ವಾಗತಿಸಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಟ್ವಿಟ್ ಮಾಡಿದ್ದಾರೆ.
ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ.
ಈ ನೆಲ, ನೆಲದ ಕಾನೂನು ಅಂತಿಮ.I welcome Landmark judgement of Hon’ble Karnataka High Court on School/College uniform Rules.
It reiterated that the law of the land is above everything.— B.C Nagesh (@BCNagesh_bjp) March 15, 2022
ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾ ಮಾಡಲಾಗಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ರಾಜ್ಯದ ಪ್ರತಿಯೊಬ್ಬರೂ ಹೈಕೋರ್ಟ್ ತೀರ್ಪು ಪಾಲಿಸಬೇಕು. ಎಲ್ಲರೂ ಕೋರ್ಟ್ ತೀರ್ಪು ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಜೋಶಿ ಮನವಿ ಮಾಡಿಕೊಂಡಿದ್ದಾರೆ .
ರಾಜ್ಯ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ. ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾ ಮಾಡಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಕೋರ್ಟ್ ತೀರ್ಪಿನ ಪ್ರತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರ್ಜಿದಾರರ ಪರ ವಕೀಲ ಶತಭಿಷ ಶಿವಣ್ಣ ಹೇಳಿಕೆ ನೀಡಿದ್ದಾರೆ.
ಇವತ್ತು ಹೈಕೋರ್ಟ್ ತೀರ್ಪನ್ನ ಸ್ವಾಗತಿಸುತ್ತೇನೆ. ಸಂತೋಷ ವ್ಯಕ್ತಪಡಿಸಯತ್ತೇನೆ. ತ್ರೀ ಸದಸ್ಯ ಪೀಟದ ತೀರ್ಪನ್ನ ಎಲ್ಲರೂ ಪಾಲಿಸಬೇಕು. ಸುದೀರ್ಘ ವಾದ ನಡೆದಿದೆ. ತ್ರಿ ಸದಸ್ಯ ಪೀಠ ವಿಚಾರಣೆ ಮಾಡಿ ತೀರ್ಪು ನೀಡಿದೆ. ತ್ರಿ ಸದಸ್ಯ ಪೀಠದಲ್ಲಿ ಮುಸ್ಲಿಂ ನ್ಯಾಯಾಧೀಶರು ಇದ್ದರು. ಇದು ಐತಿಹಾಸಿಕ ತೀರ್ಪು. ಸುಪ್ರೀಂ ಕೋರ್ಟ್ ಗೆ ಹೋಗಕೆ ಅವಕಾಶ ಇದೆ. ಆದರೆ ದೇಶ ಮಟ್ಟದಲ್ಲಿ ಮತ್ತೆ ಈ ವಿಚಾರ ತೆಗೆದುಕೊಂಡು ಹೋಗಿ ಹಿಂದು ಮುಸ್ಲಿಂರ ಮಧ್ಯೆ ಕಂದಕ ಮೂಡಿಸಬಾರದು. ಆ ಆರು ವಿದ್ಯಾರ್ಥಿನಿಯರು ಹಠ ಮಾಡದೇ ಶಾಲೆಗೆ ಬರಬೇಕು. ಅವರೆಲ್ಲರಿಗೂ ಸಮವಾದ ಶಿಕ್ಷಣ ನೀಡುತ್ತೇವೆ.
ಇಷ್ಟು ದಿನ ಅವರ ಶಿಕ್ಷಣಕ್ಕೆ ಸಮಸ್ಯೆ ಆಗಿದ್ರೆ, ಅವರಿಗೆ ಪ್ರತ್ಯೇಕ ನೋಟ್ಸ್ ನೀಡಲಾಗುತ್ತದೆ ಎಂದು ಶಾಸಕ ರಘುಪತಿಭಟ್ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಎಲ್ಲರೂ ತೀರ್ಪನ್ನು ಪಾಲನೆ ಮಾಡಬೇಕು. ಹೈಕೋರ್ಟ್ ತೀರ್ಪಿಗೆ ಎಲ್ಲರೂ ಗೌರವ ಕೊಡಬೇಕು ಎಂದು ವಿಧಾನಸೌಧದಲ್ಲಿ ಸಚಿವ ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ.
ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾ ಕುರಿತಾಗಿ ಹೈಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಕೋರ್ಟ್ ತೀರ್ಪು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಹೈಕೋರ್ಟ್ ತೀರ್ಪನ್ನು ಪಾಲಿಸಿ. ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖ್ಯ, ಹೀಗಾಗಿ ತೀರ್ಪು ಪಾಲಿಸಿ. ಪರೀಕ್ಷೆಗಳಿಗೆ ಗೈರಾಗದಂತೆ ವಿದ್ಯಾರ್ಥಿಗಳಿಗೆ ಸಿಎಂ ಮನವಿ ಮಾಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಅಗತ್ಯ ಭದ್ರತೆ ಒದಗಿಸಲಾಗುವುದು. ರಾಜ್ಯದಲ್ಲಿ ಗೃಹ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲಎಂದು ಹೈಕೋರ್ಟ್ ಪೂರ್ಣ ಪೀಠದಿಂದ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಲ್ಲ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರವನ್ನು ಒಳಗೊಂಡ ಪೂರ್ಣ ಪೀಠ. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ. ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಉಡುಪಿ ಕಾಲೇಜಿಗೆ ನಿರ್ದೇಶನ ನೀಡುವ ಅಗತ್ಯವಿಲ್ಲ. ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ, ರಿಟ್ ಅರ್ಜಿಗಳನ್ನು ಹೈಕೋರ್ಟ್ ಪೂರ್ಣ ಪೀಠ ವಜಾಗೊಳಿಸಿದೆ.
ಸಮವಸ್ತ್ರ ನಿಗದಿಪಡಿಸುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಖಾಸಗಿತನಕ್ಕೆ ಧಕ್ಕೆಯಾಗಲಿದೆಯೇ? ರಾಜ್ಯ ಸರ್ಕಾರದ ಆದೇಶ ಕಾನೂನುಬಾಹಿರವಾಗಿದೆಯೇ? ಉಡುಪಿ ಕಾಲೇಜಿನ ಮೇಲೆ ಕ್ರಮದ ಅಗತ್ಯವಿದೆಯೇ, ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲವೆಂದು ಹೈಕೋರ್ಟ್ ಮಹತ್ತ್ವದ ತೀರ್ಪು ನೀಡಿದೆ. ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ನಿಗದಿಪಡಿಸುವುದು ಸೂಕ್ತವಾದ ನಿರ್ಬಂಧನೆ. ಸರ್ಕಾರದ ಆದೇಶ ಕಾನೂನುಬದ್ದವಾಗಿದೆ. ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ. ಹಿಜಾಬ್ ಕೋರಿದ್ದ ರಿಟ್ ಅರ್ಜಿಗಳ ವಜಾ ಮಾಡಲಾಗಿದೆ. ಪ್ರತಿ ಪುಟಕ್ಕೂ ಸಿಜೆ ರಿತುರಾಜ್ ಅವಸ್ತಿ ಸಹಿ ಹಾಕಿದರು. ಕೆಲವು ಪ್ರಶ್ನೆಗಳನ್ನು ರಚಿಸಿದ್ದೇವೆ. ಅವುಗಳಿಗೆ ಉತ್ತರವನ್ನೂ ನೀಡಿದ್ದೇವೆ. ಇಸ್ಲಾಂನಲ್ಲಿ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ?
ಗದಗ: ಇಂದು ಹಿಜಾಬ್ ತೀರ್ಪು ಹಿನ್ನೆಲೆ, ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜ್ಗೆ ಗೈರಾಗಿದ್ದಾರೆ. ಬೆರಳೆಣಿಕೆಯಷ್ಟು ವಿದ್ಯಾರ್ಥಿನಿಯರು ಮಾತ್ರ ಕಾಲೇಜ್ಗೆ ಹಾಜರಾಗಿದ್ದಾರೆ. ಗದಗ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಸುತ್ತಲ್ಲೂ ಮುಂಜಾಗ್ರತಾ ಹಿನ್ನೆಲೆ ಕಾಲೇಜ್ ಮುಂದೆ ಪೊಲೀಸರ ನಿಯೋಜನೆ ಮಾಡಲಾಗಿದೆ.
ಹಿಜಾಬ್ ತೀರ್ಪು ಸಹಜವಾಗಿ ಸ್ವೀಕರಿಸಿ. ತೀರ್ಪಿನ ಬಳಿಕ ಉದ್ವಿಗ್ನತೆಯ ಹೇಳಿಕೆಗಳನ್ನು ಕೊಡಬಾರದು. ಸಭೆ, ಸಂಭ್ರಮ ವ್ಯಕ್ತಪಡಿಸುವುದು, ಮೆರವಣಿಗೆ ಏರ್ಪಡಿಸಬಾರದು. ಎಲ್ಲ ಸಂಘ ಸಂಸ್ಥೆಗಳು, ಸಂಘಟನೆಗಳು ಮತ್ತು ಸಮಾಜದ ಗಣ್ಯರು ಹೈಕೋರ್ಟಿನ ತೀರ್ಪನ್ನು ಮನ್ನಿಸುವುದು ನಮ್ಮ ಆದ್ಯ ಕರ್ತವ್ಯ. ಈ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರು: ಇಂದು ಹೈಕೋರ್ಟ್ ನಲ್ಲಿ ಹಿಜಾಬ್ ತೀರ್ಪು ಪ್ರಕಟವಾಗುವ ಹಿನ್ನೆಲೆ, ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬೀಗಿ ಬಂದೊಬಸ್ತ್ ಒದಗಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಪೊಲೀಸ್ ರೂಟ್ ಮಾರ್ಚ್ ಮಾಡಲಾಗಿದೆ. ನಗರದ ಸರ್ಕ್ಯೂಟ್ ಹೌಸ್ ನಿಂದ ಸಾಗಿದ ರೂಟ್ ಮಾರ್ಚ್, ಕೆ,ಎಸ್,ಆರ್,ಪಿ. ಸಿ ಎ ಆರ್,ತುಕಡಿ ಬಂದೋಬಸ್ತಗೆ ನಿಯೋಜನೆ ಮಾಡಲಾಗಿದೆ. ತೀರ್ಪಿನ ಹಿನ್ನೆಲೆ ಜಿಲ್ಲಾಡಳಿತ & ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ಸುಮಾರು 5-6 ಕಿ ಮೀ ನಗರದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಹೈಕೋರ್ಟ್‌ನಿಂದ ಇಂದು ಹಿಜಾಬ್ ತೀರ್ಪು ಹಿನ್ನೆಲೆ, ಹೈಕೋರ್ಟ್ ಸಿಜೆ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ಯಾಲೇಸ್ ರಸ್ತೆಯಲ್ಲಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. ಕೆಲವೇ ಕ್ಷಣದಲ್ಲಿ ನಿವಾಸದಿಂದ ಕೋರ್ಟ್ ನತ್ತ ಹೊರಡಲಿರುವ ಸಿಜೆ.
ಹಿಜಾಬ್ ವಿವಾದ ಕುರಿತಂತೆ ಇಂದು ಹೈಕೋರ್ಟ್‌ನಿಂದ ಅಂತಿಮ ತೀರ್ಪು ಪ್ರಕಟ ಹಿನ್ನಲೆ, ಕಲಬುರಗಿ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಕ್ ಮೂಲಕ ಅನೌನ್ಸ್ ಪೊಲೀಸರು ಮಾಡುತ್ತಿದ್ದಾರೆ. ನಗರದಲ್ಲಿ 144 ನಿಷೇಧಾಜ್ಞೆ ಜಾರಿಯಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲನೆ ಮಾಡಲು ಮನವಿ ಮಾಡಲಾಗಿದೆ. ತೀರ್ಪು ಕುರಿತಂತೆ ಪರ/ವಿರೋಧ, ಸಂಭ್ರಮಾಚರಣೆ/ಪ್ರತಿಭಟನೆ ಮಾಡದಂತೆ ಪೊಲೀಸರು ಮನವಿ ಮಾಡಿದ್ದು, ಸ್ಟೇಷನ್ ಬಜಾರ್ ಠಾಣೆ ಪೊಲೀಸರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಲಾಗಿದೆ.
ಕೆಲವೇ ಕ್ಷಣಗಳಲ್ಲಿ ಹೈಕೋರ್ಟ್ ಪೂರ್ಣ ಪೀಠದಿಂದ ಹಿಜಾಬ್ ಪ್ರಕರಣದ ತೀರ್ಪು ಹೊರ ಬಿಳಲಿದೆ. ಹೈಕೋರ್ಟ್‌ಗೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಆಗಮಿಸಿದ್ದಾರೆ.
ಮಂಡ್ಯ: ಇವತ್ತು ಹೈಕೋರ್ಟ್‌ನಿಂದ ಹಿಜಾಬ್ ತೀರ್ಪು ವಿಚಾರ ಹಿನ್ನೆಲೆ, ನೋಡಿ ನಮ್ಮ ದೇಶದ ಸಂವಿಧಾನ ಮೇಲೆ ಭರವಸೆ ಇದೆ. ತೀರ್ಪು ಬರುವವರೆಗೂ ಕಾಯುತ್ತೇವೆ ಎಂದು ಮಂಡ್ಯದಲ್ಲಿ ವಿದ್ಯಾರ್ಥಿನಿ ಮುಸ್ಕಾನ್ ಹೇಳಿಕೆ ನೀಡಿದ್ದಾರೆ. ನಮಗೆ ನಮ್ಮ ದೇವರ ಮೇಲೆ ಭರವಸೆ ಇದೆ ಆದೇಶ ಬಂದ ಮೇಲೆ ಮಾತನಾಡುತ್ತೇನೆ. ಎಲ್ಲಾ ಶಾಂತಿ ಕಾಪಾಡಿ ನಮ್ಮ ಹಕ್ಕು ನಮಗೆ ಸಿಗುತ್ತದೆ. ಮೊದಲು ನಾವು ಯಾವ ರೀತಿ ಇದ್ದೆವು ಅದೇ ರೀತಿ ಇರೋಣ. ಎಲ್ಲಾ ಭಾರತೀಯರು ಅಣ್ಣ ತಮ್ಮ ಅಕ್ಕ ತಂಗಿಯರು ಅದೇ ರೀತಿ ಈಗಲೂ ಇರೋಣ. ನಾನು ಓದಿರುವ ಶಾಲೆಯಲ್ಲಿ ನನಗೆ ಕಲಿಸಿದ್ದಾರೆ. ಎಲ್ಲಾ ಧರ್ಮಗಳ ಸಮಾನವಾಗಿವೆ. ನಮ್ಮ ಹಕ್ಕಿನ ಜೊತೆ ನಾವು ನಿಲ್ಲಬೇಕು ಎಂಬುದನ್ನು ಕಲಿಸಿದ್ದಾರೆ. ನಮ್ಮ ಕಾಲೇಜಿನಲ್ಲಿ ಒಂದು ದಿನ ಬೈಬಲ್ ಒಂದು ದಿನ ಕುರಾನ್ ಮತ್ತೊಂದು ದಿನ ಭಗವದ್ಗೀತೆ ಓದಿಸುತ್ತಿದ್ದರು. ನಮ್ಮ ಧರ್ಮ ಸರಿಯಾದ ದಾರಿಯಲ್ಲಿ ಹೋಗಲು ಕಲಿಸುತ್ತೇ. ಸ್ವಲ್ಪ ತಪ್ಪು ತಿಳುವಳಿಕೆಯಾಗಿದೆ ಎಲ್ಲಾ ಸರಿಯಾಗುತ್ತದೆ. ಮೊದಲಿಂದಲೂ ಹಿಜಾಬ್ ಹಾಕಿಕೊಂಡು ಹೋಗುತ್ತಿದ್ದೆವು. ಹಿಜಾಬ್ ಇಲ್ಲದೆ ಶಾಲಾ ಕಾಲೇಜುಗೆ ಹೋಗಲು ಸಿದ್ಧನಾ ಎನ್ನುವ ಪ್ರಶ್ನೇಗೆ
ತೀರ್ಪು ಬಂದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಹೈಕೋರ್ಟ್‌ನಿಂದ ಇಂದು ಹಿಜಾಬ್ ಪ್ರಕರಣದ ತೀರ್ಪು ನೀಡಲಿದ್ದು, ಕಾಲೇಜು ಆಡಳಿತ ಮಂಡಳಿ ಪರ ತೀರ್ಪು ಬರಬಹುದು ಎಂದು ಉಡುಪಿಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ. ಮತಾಂಧ ಶಕ್ತಿಗಳ ಕುಮ್ಮಕ್ಕಿನಿಂದ ವಿವಾದ ವ್ಯಾಪಿಸಿತು. ಒಂದು ಕಾಲೇಜಿನ ವಿಚಾರ ದೇಶಮಟ್ಟದಲ್ಲಿ ಚರ್ಚೆ ಆಯಿತು. ಹಿಜಾಬ್ ವಿವಾದದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು.
ಕೋರ್ಟ್ ಆದೇಶ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಕೋರ್ಟ್ ಆದೇಶ ಪಾಲಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ. ಶಿಕ್ಷಣ ಬೇಕಾದವರು ಕೋರ್ಟ್ ತೀರ್ಪು ಪಾಲಿಸಬೇಕು. ಕೋರ್ಟ್ ಏನೇ ತೀರ್ಪು ನೀಡಿದರೂ ನಾವು ಪಾಲಿಸುತ್ತೇವೆ. ಹಿಜಾಬ್‌ಗೆ ಕೋರ್ಟ್ ಅನುಮತಿ ನೀಡಿದರೂ ಪಾಲಿಸುತ್ತೇವೆ. ನಂತರ ಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗ್ತೇವೆ. ಅಲ್ಲಿಯವರೆಗೆ ಹೈಕೋರ್ಟ್ ಆದೇಶವನ್ನು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.
ಹಾಸನ: ರಾಜ್ಯದಲ್ಲಿ ಹಿಜಾಬ್ ವಿವಾದ ಪ್ರಕರಣ ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಜಿಲ್ಲೆಯ ಪ್ರಮುಖ ಶಾಲೆ ಕಾಲೇಜುಗಳ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಹಿಜಾಬ್ ಪರ ವಿರೋಧಿ ಹೋರಾಟ ನಡೆಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜಿಲ್ಲೆಯಾದ್ಯಂತ ನಿಷೇದಾಜ್ಙೆ ಜಾರಿ ಮಾಡಿ. ಜಿಲ್ಲಾದಿಕಾರಿ ಆದೇಶ ಹೊರಡಿಸಿದ್ದರೆ. ಯಾವುದೇ ಸಭೆ ಸಮಾರಂಭ, ಸಂಭ್ರಮಾಚರಣೆ, ಪ್ರತಿಭಟನೆ ಮಾಡದಂತೆ ನಿರ್ಬಂಧಿಸಿಲಾಗಿದೆ.
ಬಳ್ಳಾರಿಯಲ್ಲಿಯೂ ಸಹ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸರಳಾದೇವಿ ಕಾಲೇಜು ಮುಂಭಾಗದಲ್ಲಿ ಡಿಆರ್ ಪೊಲೀಸ್ ನಿಯೋಜನೆ ಮಾಡಲಾಗಿದೆ. ಕಳೆದ ತಿಂಗಳು ಗಲಾಟೆಯಾದ ಸರಳಾದೇವಿ ಕಾಲೇಜು ಮುಂಭಾಗದ ಒಂದು ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ತೀರ್ಪು ಪರ ಅಥವಾ ವಿರೋಧ ಏನೇ ಬರಲಿ ಪ್ರತಿಭಟನೆ ಮತ್ತು ಸಂಭ್ರಮಾಚರಣೆಗೆ ಜಿಲ್ಲಾಡಳಿತದಿಂದ ನಿರ್ಬಂಧ ಹೇರಲಾಗಿದೆ. ಶಾಲಾ ಕಾಲೇಜು ಆವರಣದ ಮುಂಭಾಗದಲ್ಲಿ ಇರೋ ಅಂಗಡಿ ಮುಗ್ಗಟ್ಟು ಬಂದ್ ಮಾಡಿಸಿದ್ದು, ಶಾಲೆ ಕಾಲೇಜು ನಿಂದ 200 ಮೀಟರ್ ನಿಷೇಧ ಜಾರಿ ಮಾಡಲಾಗಿದೆ.
ಇಂದು ಹಿಜಾಬ್ ವಿವಾದ ತೀರ್ಪು ಹಿನ್ನೆಲೆ ಯಾದಗಿರಿ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಎಂದಿನಂತೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ. ತೀರ್ಪಿನ ಬಳಿಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ವಹಿಸಲಾಗಿದೆ. 3 ಡಿವೈಎಸ್ಪಿ ಸೇರಿದಂತೆ 300 ಕ್ಕೂ ಅಧಿಕ ಮಂದಿ ಪೊಲೀಸರಿಂದ ಬಂದೋಬಸ್ತ್ ನಿಯೋಜಿಸಲಾಗಿದೆ. ತೀರ್ಪು ಹಿನ್ನೆಲೆ ಯಾದಗಿರಿ ಜಿಲ್ಲೆಯಾದ್ಯಂತ ನಾಳೆ ಬೆಳಗ್ಗೆ ವರೆಗೆ ನಿಷೇಧಾಜ್ಙೆ ಜಾರಿ ಮಾಡಲಾಗಿದೆ.
ಹೈಕೋರ್ಟ್ನಲ್ಲಿ ಹಿಜಾಬ್ ತೀರ್ಪು ಹಿನ್ನೆಲೆ ಶಾಲಾ, ಕಾಲೇಜುಗಳಲ್ಲಿ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಫ್ರೇಜರ್ ಟೌನ್ ಬಿಬಿಎಂಪಿ ಕಾಲೇಜಿನಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ. ಕಾಲೇಜಿನ ಮುಂಭಾಗ ಹೊಯ್ಸಳ ವಾಹನ ನಿಯೋಜಿಸಲಾಗಿದೆ. ಹಿಜಾಬ್ ತೀರ್ಪು ಹಿನ್ನೆಲೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಎಲ್ಲ ಜಿಲ್ಲೆಯ ಎಸ್ಪಿಗಳಿಗೆ ನಿರ್ದೇಶನ ನೀಡಲಾಗಿದೆ. ಸಣ್ಣ ಇನ್ಸಿಡೆಂಟ್ ಕೂಡ ನಡೆಯಂದತೆ ಎಚ್ಚರಿಕೆ ವಹಿಸಲಾಗಿದೆ. ಯಾವುದೇ ಗಲಾಟೆ ಆಗಲು ಕಾರಣವಿಲ್ಲ. ಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು. ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದೆಲ್ಲೆಡೆ ಪೊಲೀಸರು ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ. ಸಣ್ಣಪುಟ್ಟ ಗಲಾಟೆಯೂ ಆಗದಂತೆ ಎಚ್ಚರಿಕೆ ವಹಿಸಬೇಕು. ರಾಜ್ಯದ ಎಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಲ್ಲವೆಂಬ ವಿಶ್ವಾಸವಿದೆ. ಡಿಸಿಗಳಿಗೇ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಅಧಿಕಾರ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕಾಗಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬಾಗಲಕೋಟೆ: ಇಂದು ಹಿಜಾಬ್ ತೀರ್ಪು ವಿಚಾರ, ಬಾಗಲಕೋಟೆ ಜಿಲ್ಲಾದ್ಯಂತ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದೆ. ಶಾಲಾಕಾಲೇಜುಗಳ ಮೇಲೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಹಿಜಾಬ್ ವಿವಾದ ಪ್ರತಿಭಟನೆ ನಡೆದ ಕಾಲೇಜುಗಳ ಮುಂದೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಗಲಾಟೆ ನಡೆದ ರಬಕವಿ ಬನಹಟ್ಟಿ ಸರಕಾರಿ ಪಿಯು ಕಾಲೇಜು ಮುಂದೆ ಬಿಗಿ ಬಂದೋಬಸ್ತ್ ಡಿ. ಎ. ಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಜಿಲ್ಲಾದ್ಯಂತ ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆ ಒದಗಿಸಲಾಗಿದೆ ಎಂದು ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ 6ರಿಂದ ಒಂದು ವಾರ ಕಾಲ 144ನಿಷೇದಾಜ್ಞೆ ಜಾರಿ ಮಾಡ, ಬಾಗಲಕೋಟೆ ಡಿಸಿ ಕ್ಯಾಪ್ಟನ್ ರಾಜೇಂದ್ರ ಅವರಿಂದ ಆದೇಶ‘ ಮಾಡಲಾಗಿದೆ. ಗುಂಪು ಗುಂಪು ಸಂಚರಿಸುವ ಹಾಗಿಲ್ಲ. ಸಭೆ ಸಮಾರಂಭವಿಲ್ಲ. ತೀರ್ಪು ಬಗ್ಗೆ ವಿಜಯೋತ್ಸವ, ತೀರ್ಪು ವಿರೋಧಿ ಪ್ರತಿಭಟನೆ, ಮೆರವಣಿಗೆ ಯಾವುದಕ್ಕೂ ಅನುಮತಿ ಇಲ್ಲ.
ಮಂಗಳೂರು: ಇಂದು ಹಿಜಾಬ್ ವಿವಾದ ತೀರ್ಪು ಹಿನ್ನಲೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಕೆ.ಎ.ಇ ಕಂಡಕ್ಟ್ ಮಾಡಿರೋ ಅಸಿಸ್ಟೆಂಟ್ ಫ್ರೋಫಸರ್ ಎಕ್ಸಾಮ್ ನಡೆಯಲಿದೆ. ಅದನ್ನ ಹೊರತುಪಡಿಸಿ ಎಲ್ಲಾ ಕಾಲೇಜುಗಳ ಎಕ್ಸಾಮ್ ಕೂಡ ಮುಂದೂಡಿಕೆ ಮಾಡಲಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಮಾ.19 ರವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದೆ. ನಗರ ವ್ಯಾಪ್ತಿಗೆ ಮಂಗಳೂರು ನಗರ ಕಮಿಷನರ್ ಎನ್.ಶಶಿಕುಮಾರ್ ಆದೇಶ ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ಇಂದು ಹೈಕೋರ್ಟನಲ್ಲಿ ಹಿಜಾಬ್ ವಿಚಾರಕ್ಕೆ ತೀರ್ಪು ಪ್ರಕಟವಾಗುವ ಹಿನ್ನಲೆ, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಶಾಲಾ ಕಾಲೇಜು ಬಳಿ ಪೊಲೀಸ್ ಬಂದೊಬಸ್ತ್ ಒದಗಿಸಲಾಗಿದ್ದು, ಇಂದಿನಿಂದ ಒಂದು ವಾರಗಳ ಕಾಲ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲೆಯ ತಾಲೂಕುವಾರ ಸಶಸ್ತ್ರ ಮಿಸಲು ಪೊಲೀಸ್ ತುಕಡಿಗಳ ನೇಮಕ ಮಾಡಲಾಗಿದೆ. ಜಿಲ್ಲೆಯಾದ್ಯಂತ ಪೊಲೀಸರು ಹೈಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ ಎಂದು ಟಿವಿ9 ಗೆ ಚಿಕ್ಕಬಳ್ಳಾಫುರ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹಿಜಾಬ್ ಧರಿಸಲು ಅವಕಾಶ ಕೋರಿ ಜನವರಿ 31ಕ್ಕೆ ಹೈಕೋರ್ಟ್ನಲ್ಲಿ ಉಡುಪಿ ಮೂಲದ ವಿದ್ಯಾರ್ಥಿನಿಯರಿಂದ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಫೆಬ್ರವರಿ 3 ರಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಅರ್ಜಿ ವಿಚಾರಣೆ ನಡೆಯಲಿದೆ. ಮೂರು ದಿನಗಳ ಕಾಲ ಏಕಸದಸ್ಯ ಪೀಠದಿಂದ ವಿಚಾರಣೆ ಬಳಿಕೆ ಫೆ.9 ರಂದು ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು. ಫೆಬ್ರವರಿ 10 ರಂದು ವಿಸ್ತೃತ ಪೀಠದಿಂದ ಯಾವುದೇ ಧಾರ್ಮಿಕ ಗುರುತು ಧರಿಸಿ ಶಾಲೆ, ಕಾಲೇಜುಗಳಿಗೆ ತೆರಳದಂತೆ ಮೌಖಿಕ ಆದೇಶ ಹೊರಡಿಸಲಾಗಿತ್ತು. ಫೆಬ್ರವರಿ 11 ರಂದು ಧಾರ್ಮಿಕ ಗುರುತು ಧರಿಸದಂತೆ ಹೈಕೋರ್ಟ್‌ನಿಂದ ಮಧ್ಯಂತರ ಆದೇಶ ನೀಡಲಾಗಿತ್ತು. ನಂತರ 11 ದಿನಗಳ ಕಾಲ ಅರ್ಜಿದಾರರು, ಮಧ್ಯಂತರ ಅರ್ಜಿದಾರರ ವಾದ ಮಂಡನೆ ಮಾಡಲಾಯಿತು. ಸರ್ಕಾರದ ಪರ ಅಡ್ವೊಕೇಟ್ ಜನರಲ್ ರಿಂದ ಸುಧೀರ್ಘ ವಾದ ಮಾಡಿದ್ದು, ಅರ್ಜಿದಾರರ ಪರ ದೇವದತ್ ಕಾಮತ್, ರವಿವರ್ಮ ಕುಮಾರ್ ಸೇರಿ ಹಿರಿಯ ವಕೀಲರ ವಾದ ಮಂಡನೆ ಮಾಡಲಾಗಿದೆ. ಸರ್ಕಾರದ ಆದೇಶ, ಸಿಡಿಸಿ ನಿಯಮಾವಳಿಗಳ ಬಗ್ಗೆ ಸುಧೀರ್ಘ ವಾದ ಮಂಡನೆ ಮಾಡಲಾಗಿದೆ. ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ವಿಸ್ತೃತ ಪೀಠ ತೀರ್ಪು ಕಾಯ್ದಿರಿಸಿ ಆದೇಶಿಸಿತ್ತು. ಫೆಬ್ರವರಿ 25 ರಂದು ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್, ಮಾರ್ಚ್15ಕ್ಕೆ ಹಿಜಾಬ್ ವಿವಾದದ ಅಂತಿಮ ಆದೇಶಕ್ಕೆ ತಲುಪಿದ್ದು, ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರನ್ನೊಳಗೊಂಡ ವಿಸ್ತ್ರತ ಪೀಠದಿಂದ ಅಂತಿಮ ಆದೇಶ ನೀಡಲಾಗುವುದು.
ರಾಮನಗರ: ಹೈಕೋರ್ಟ್‌ನಿಂದ ಇಂದು ಹಿಜಾಬ್ ತೀರ್ಪು ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ರಾಮನಗರ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇಂದಿಯಿಂದ ಮಾರ್ಚ್ 18ರವರೆಗೂ ನಿಷೇಧಾಜ್ಷೆ ಜಾರಿ ಮಾಡಿ, ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಧರಣಿ, ಪ್ರತಿಭಟನೆಗೆ ನಿಷೇಧವಿದ್ದು, ಕಾನೂನು ಉಲ್ಲಂಘಿಸಿದ್ರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿಯಾಗಿ ಇಂದಿನಿಂದ 19ರ ವರೆಗೆ ದಾವಣಗೆರೆ ಜಿಲ್ಲೆಯಾದ್ಯಾಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದ 19ರ ಬೆಳಗ್ಗೆ 6 ಗಂಟೆವರೆಗೂ 144 ಸೆಕ್ಷನ್ ಜಾರಿ ಮಾಡಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ. ಅವಶ್ಯಕತೆ ಬಿದ್ದರೆ ನಿಷೇಧಾಜ್ಙೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದು, ದಾವಣಗೆರೆ ನಗರ, ಹರಿಹರನಗರ, ಮಲೆಬೆನ್ನೂರು, ನಲ್ಲೂರು ಸೇರಿದಂತೆ ಹಲವೆಡೆ ಹಿಜಾಬ್ ವಿವಾದದ ಹಿನ್ನಲೆ ಪ್ರತಿಭಟನೆ, ಗಲಭೆ ನಡೆದಿದ್ದವು.
ಕೋಲಾರ: ಇಂದು ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತೀರ್ಪು ಹೊರ ಬೀಳುವ ಹಿನ್ನೆಲೆ, ಕೋಲಾರ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿ ಮಾಡಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಬೆಳಿಗ್ಗೆ 6 ಗಂಟೆಯಿಂದ 21ರ ರಾತ್ರಿ 12 ಗಂಟೆವರೆಗೆ 144 ಸೆಕ್ಷೆನ್ ಜಾರಿ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಇಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಬಿಗಿ ಭದ್ರತೆ ಜೊತೆ ನಿಷೇದಾಜ್ಞೆ ಜಾರಿ ಮಾಡಿದ್ದು, ಇಂದಿನಿಂದ 48 ಗಂಟೆಗಳ ಕಾಲ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿಶ್ವವಿದ್ಯಾಲಯದ ಪರೀಕ್ಷೆಗಳು ಯಥಾಸ್ಥಿತಿ ನಡೆಯಲಿದೆ.
ರಾಯಚೂರು ಜಿಲ್ಲೆಯ ಪಟ್ಟಣಗಳಲ್ಲಿ ಮಾತ್ರ ನಿಷೇದಾಜ್ಞೆ ಅನ್ವಯವಾಗಿದ್ದು, ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನಿಷೇದಾಜ್ಞೆ ಇಲ್ಲ. ಹಿಜಾಬ್ ವಿವಾದದ ವೇಳೆ ಅಹಿತಕರ ಘಟನೆ ನಡೆದ ಕಾಲೇಜುಗಳ ಮೇಲೆ ತೀರ್ವ ನಿಗಾವಹಿಸಲಾಗಿದೆ. ಸೆನ್ಸಿಟಿವ್ ಲಿಸ್ಟ್ನಲ್ಲಿರೊ ಕಾಲೇಜುಗಳ ಬಳಿ ಹೆಚ್ಚವರಿ ಭದ್ರತೆ ಒದಗಿಸಲಾಗಿದೆ. ಅಂತಹ ಕಡೆಗಳಲ್ಲಿ ಓರ್ವ ಸಬ್ ಇನ್ಸ್ ಪೆಕ್ಟರ್ ಸೇರಿ 10 ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಮುದಾಯದ ಮುಖಂಡರಲ್ಲಿ ಮನವಿ ಮಾಡಲಾಗಿದೆ. ಸುಮಾರು 200ಕ್ಕೂ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಕೊಪ್ಪಳ: ಇಂದು ಹಿಜಾಜ್ ತೀರ್ಪಿನ ಹಿನ್ನಲೆ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಇಂದ ದಿನಾಂಕ 20ರ ಸಂಜೆ 6ರವರೆಗೂ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕೃಮವಾಗಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ, ಕೊಪ್ಪಳ, ಯಲಬುರ್ಗಾ, ಕುಷ್ಟಗಿ ಗಂಗಾವತಿ, ಕನಕಗಿರಿ, ಕಾರಟಗಿ ಹಾಗೂ ಕನಕ ಗಿರಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ, ಐದಕ್ಕಿಂತ ಹೆಚ್ಚು ಜನ ಸೇರದಂತೆ ಆದೇಶ ಮಾಡಲಾಗಿದೆ. ಜಿಲ್ಲೆಯ ನಗರ ಪ್ರದೇಶದಲ್ಲಿ ವಿಜಯೋತ್ಸವ, ಮೆರವಣಿಗೆ ನಿಷೇಧ ಮಾಡಲಾಗಿದ್ದು, ಕಾಲೇಜ್ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ.
ಮೈಸೂರು: ಹೈಕೋರ್ಟ್‌ನಿಂದ ಇಂದು ಹಿಜಾಬ್ ತೀರ್ಪು ಹಿನ್ನೆಲೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಇಂದಿನಿಂದ 6 ದಿನ ಮೈಸೂರು ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ, ಮೈಸೂರು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಆದೇಶ ಮಾಡಿದ್ದಾರೆ. ನಗರದ ಪ್ರಮುಖ ವೃತ್ತ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮೆರವಣಿಗೆ ಪ್ರತಿಭಟನೆ ಗುಂಪು ಸೇರುವುದಕ್ಕೆ ನಿರ್ಬಂಧ ವಹಿಸಲಾಗಿದೆ. ಎಲ್ಲರೂ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಲು ಸೂಚನೆ ನೀಡಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮಕೈಗೊಳ್ಳಲಾಗಿದೆ.
Published On - 8:09 am, Tue, 15 March 22