ಈಶಾನ್ಯ ದೆಹಲಿ ಗಲಭೆ: ಯುಎಪಿಎ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್​​ಗೆ ಜಾಮೀನು

Ishrat Jahan ಈಶಾನ್ಯ ದೆಹಲಿಯ ಖುರೇಜಿ ಖಾಸ್ ಪ್ರದೇಶದಲ್ಲಿ ಪೌರತ್ವ ವಿರೋಧಿ (ತಿದ್ದುಪಡಿ) ಕಾಯಿದೆ, 2019, (CAA) ಪ್ರತಿಭಟನಾ ಸ್ಥಳದಲ್ಲಿ ಜನಸಮೂಹವನ್ನು ಪ್ರಚೋದಿಸಿದ ಆರೋಪವೂ ಇಶ್ರತ್ ಮೇಲಿದೆ.

ಈಶಾನ್ಯ ದೆಹಲಿ ಗಲಭೆ: ಯುಎಪಿಎ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್​​ಗೆ ಜಾಮೀನು
ಇಶ್ರತ್ ಜಹಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 14, 2022 | 10:16 PM

ದೆಹಲಿ: 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ (Northeast Delhi riots) ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ( UAPA) ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್‌ಗೆ (Ishrat Jahan) ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಫೆಬ್ರವರಿ 2020 ರಿಂದ ಬಂಧನದಲ್ಲಿರುವ ಜಹಾನ್‌ಗೆ ಜಾಮೀನು ಮಂಜೂರು ಮಾಡಿದರು. ಈಶಾನ್ಯ ದೆಹಲಿಯ ಖುರೇಜಿ ಖಾಸ್ ಪ್ರದೇಶದಲ್ಲಿ ಪೌರತ್ವ ವಿರೋಧಿ (ತಿದ್ದುಪಡಿ) ಕಾಯಿದೆ, 2019, (CAA) ಪ್ರತಿಭಟನಾ ಸ್ಥಳದಲ್ಲಿ ಜನಸಮೂಹವನ್ನು ಪ್ರಚೋದಿಸಿದ ಆರೋಪವೂ ಇಶ್ರತ್ ಮೇಲಿದೆ. ಈ ಪ್ರಕರಣದಲ್ಲಿ ಜಹಾನ್‌ಗೆ ಜಾಮೀನು ಸಿಕ್ಕಿತ್ತು. ಆಕೆಯ ವಕೀಲ ಪ್ರದೀಪ್ ತಿಯೋಟಿಯಾ ಅವರು ನ್ಯಾಯಾಂಗ ಬಂಧನದಿಂದ ಬಿಡುಗಡೆಗೆ ದಾರಿಯನ್ನು ತೆರವುಗೊಳಿಸುವುದರ ವಿರುದ್ಧ ಯಾವುದೇ ಬಾಕಿ ಪ್ರಕರಣಗಳಿಲ್ಲ ಎಂದು ಹೇಳಿದರು. ಪೊಲೀಸರು ಆಕೆಯನ್ನು ಹಾರ್ಡ್​​ಲೈನರ್ ಎಂದು ಬಿಂಬಿಸಿದ್ದಾರೆ. ಆದರೆ ವಾಸ್ತವವಾಗಿ ಅವರು ತಮ್ಮ ಜಾತ್ಯತೀತ ನಿಲುವುಗಳಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಜಾಮೀನು ವಾದದ ಸಂದರ್ಭದಲ್ಲಿ ಟಿಯೋಟಿಯಾ ನ್ಯಾಯಾಲಯಕ್ಕೆ ಹೇಳಿದರು.

ಟಿಯೋಟಿಯಾ ಅವರು 2019 ರಲ್ಲಿ ಜಹಾನ್ ಮಾಡಿದ ಹಣಕಾಸಿನ ವಹಿವಾಟಿನ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು.  ಅವರ “ಹಣ ಹಿಂಪಡೆಯುವಿಕೆ ಮತ್ತು ಠೇವಣಿಯ ಮಾದರಿಯು ಒಂದೇ ಆಗಿರುತ್ತದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪೊಲೀಸರು ಆಕೆಯ  ವಿರುದ್ಧ ಯಾವುದೇ ಸಾಕ್ಷ್ಯವನ್ನು ಹೊಂದಿಲ್ಲ.” ಪ್ರಾಸಿಕ್ಯೂಷನ್ ಸಾಕ್ಷ್ಯವನ್ನು ಬಿಡಿಬಿಡಿಯಾಗಿ ತೋರಿಸಿದೆಯೇ ಹೊರತು ಒಟ್ಟಾರೆಯಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

“ಅವಳನ್ನು ತಪ್ಪಾಗಿ ವಿಚಾರಣೆಗೆ ಒಳಪಡಿಸುವ ತಪ್ಪು ಉದ್ದೇಶವಿದೆ” ಎಂದು ಜಹಾನ್ ಅವರ ವಕೀಲರು ನ್ಯಾಯಾಲಯಕ್ಕೆ ಹೇಳಿದರು. ಆಕೆಯ ವಿರುದ್ಧ ಯುಎಪಿಎಯ ಸೆಕ್ಷನ್‌ಗಳನ್ನು ಅನ್ವಯಿಸುವುದು ಸರಿ ಎಂದು ಸಾಬೀತುಪಡಿಸಲು ಸಾಕ್ಷ್ಯವನ್ನು ತೋರಿಸುವಂತೆ ಪ್ರಾಸಿಕ್ಯೂಷನ್‌ಗೆ ಕೇಳಿದರು.

ಪಿತೂರಿಯಲ್ಲಿ ಇತರರ ಕೃತ್ಯಗಳಿಗೆ ಆರೋಪಿ ಜವಾಬ್ದಾರನಾಗಿರುತ್ತಾನೆ ಎಂದು ಹೇಳುವ ಮೂಲಕ ಮಾಜಿ ಕಾಂಗ್ರೆಸ್ ಕೌನ್ಸಿಲರ್ ಜಾಮೀನು ಅರ್ಜಿಯನ್ನು ಪ್ರಾಸಿಕ್ಯೂಷನ್ ವಿರೋಧಿಸಿತ್ತು,

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನ್ಯಾಯಾಲಯದಲ್ಲಿ ವಾದಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು, ಪಿತೂರಿ ಇತ್ತು ಮತ್ತು ಗಲಭೆಗಳು ನಡೆದವು ಎಂಬುದು ಪ್ರಾಸಿಕ್ಯೂಷನ್ ಪ್ರಕರಣ. ಯಾರು ಮಾಡಿದರೂ ಮತ್ತೊಬ್ಬರ ಕೃತ್ಯಕ್ಕೆ ಜವಾಬ್ದಾರರಾಗುತ್ತಾರೆ ಎಂದಿದ್ದರು.

ದೆಹಲಿ ಹೈಕೋರ್ಟ್ ಯುಎಪಿಎ ಪ್ರಕರಣದಲ್ಲಿ ಈವರೆಗೆ ಐವರಿಗೆ ಜಾಮೀನು ನೀಡಿದೆ. ಅವರು ನತಾಶಾ ನರ್ವಾಲ್, ದೇವಾಂಗನಾ ಕಲಿತಾ, ಜಾಮಿಯಾ ಆಸಿಫ್ ಇಕ್ಬಾಲ್ ತನ್ಹಾ, ಸಫೂರ ಜರ್ಗರ್ ಮತ್ತು ಫೈಜಾನ್ ಖಾನ್. ಇವರು ಸಿಮ್ ಕಾರ್ಡ್ ಒದಗಿಸಿದ ಆರೋಪ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ನೀವು ತಮಾಷೆ ಮಾಡುತ್ತಿದ್ದೀರಾ?: ಅಂಬಿಕಾ ಸೋನಿ, ಚರಣ್‌ಜಿತ್ ಸಿಂಗ್​​ ಚನ್ನಿ ವಿರುದ್ಧ ಸುನೀಲ್ ಜಾಖರ್​​ ಗರಂ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್