ದೆಹಲಿಯಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ದುರಂತ; 60 ಗುಡಿಸಲುಗಳು ಸುಟ್ಟು ಭಸ್ಮ, 7 ಮಂದಿ ಸಾವು

ಮಧ್ಯರಾತ್ರಿ 1ಗಂಟೆ ಹೊತ್ತಿಗೆ ಬೆಂಕಿ ಬಿದ್ದ ಬಗ್ಗೆ ಮಾಹಿತಿ ಬಂತು. ಕೂಡಲೇ ಸ್ಥಳಕ್ಕೆ ಧಾವಿಸಿದ್ದೇವೆ. ತಕ್ಷಣವೇ ಅಗ್ನಿಶಾಮಕ ದಳದವರೂ ಕಾರ್ಯಪ್ರವೃತ್ತರಾದರು. ಆದರೆ ಬೆಂಕಿ ಭಯಂಕರವಾಗಿ ಮತ್ತು ವೇಗವಾಗಿ ಹರಡುತ್ತಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ದುರಂತ; 60 ಗುಡಿಸಲುಗಳು ಸುಟ್ಟು ಭಸ್ಮ, 7 ಮಂದಿ ಸಾವು
ಬೆಂಕಿ ದುರಂತ ನಡೆದ ಜಾಗ
TV9kannada Web Team

| Edited By: Lakshmi Hegde

Mar 12, 2022 | 9:50 AM

ದೆಹಲಿಯ ಗೋಕಲ್​ಪುರಿಯಲ್ಲಿ ನಿನ್ನೆ ರಾತ್ರಿ ಬಹುದೊಡ್ಡ ಬೆಂಕಿ ದುರಂತ ನಡೆದಿದ್ದು, ಈ ಘಟನೆಯಲ್ಲಿ ಏಳುಮಂದಿ ಮೃತಪಟ್ಟಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ.  ಶುಕ್ರವಾರ ತಡರಾತ್ರಿ 1 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇಲ್ಲಿರುವ ಸುಮಾರು 60 ಗುಡಿಸಲುಗಳು ಸುಟ್ಟುಕರಕಲಾಗಿವೆ. ಅಗ್ನಿಶಾಮಕ ದಳ ಸುಮಾರು 13 ಟೆಂಡರ್​ಗಳು ಸ್ಥಳಕ್ಕೆ ತೆರಳಿ, ಬೆಂಕಿ ನಂದಿಸಿವೆ ಎಂದು ದೆಹಲಿ ಈಶಾನ್ಯ ವಲಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್​ ಮಾಹಿತಿ ನೀಡಿದ್ದಾರೆ.  

ಮಧ್ಯರಾತ್ರಿ 1ಗಂಟೆ ಹೊತ್ತಿಗೆ ಬೆಂಕಿ ಬಿದ್ದ ಬಗ್ಗೆ ಮಾಹಿತಿ ಬಂತು. ಕೂಡಲೇ ಸ್ಥಳಕ್ಕೆ ಧಾವಿಸಿದ್ದೇವೆ. ತಕ್ಷಣವೇ ಅಗ್ನಿಶಾಮಕ ದಳದವರೂ ಕಾರ್ಯಪ್ರವೃತ್ತರಾದರು. ಆದರೆ ಬೆಂಕಿ ಭಯಂಕರವಾಗಿ ಮತ್ತು ವೇಗವಾಗಿ ಹರಡುತ್ತಿತ್ತು. ಸಂಪೂರ್ಣವಾಗಿ ನಂದಿಸಿ, ನಿಯಂತ್ರಣಕ್ಕೆ ತರುವಷ್ಟರಲ್ಲಿ ಮುಂಜಾನೆ 4ಗಂಟೆಯಾಗಿತ್ತು. ಬೆಂಕಿ ತಗುಲಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ತನಿಖೆ ಶುರು ಮಾಡಿದ್ದೇವೆ. ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ದೇವೇಶ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ಅಪ್ಪು ಹುಟ್ಟಿದಾಗ ಅವನನ್ನು ಮೊದಲು ಎತ್ತಿಕೊಂಡಿದ್ದು ನಾನು’; ಎಸ್​.ಕೆ. ಭಗವಾನ್​ ಭಾವುಕ ನುಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada